Wednesday, January 02, 2013

Home Remedies for Indigestion (ಅಜೀರ್ಣ)




ಅಜೀರ್ಣ  ರೋಗ  ಮತ್ತು  ಸಂಧಿವಾತದವರಿಗೆ  ಟೊಮೇಟೊ  ಸೇವನೆ  ತುಂಬಾ  ಹಿತಕರ. ದಿನ  ನಿತ್ಯ  ಟೊಮೇಟೊ  ಸೇವಿಸುವುದರಿಂದ  ರೋಗ  ನಿರೋಧಕ  ಶಕ್ತಿ  ಹೆಚ್ಚಿಸಿಕೊಳ್ಳಬಹುದು.

ಬಿಳಿ  ದ್ರಾಕ್ಷಿ  ಹಣ್ಣು  ದೇಹಕ್ಕೆ  ತಂಪು . ಇದನ್ನು  ನಿತ್ಯವೂ  ಸೇವಿಸಿದರೆ   ಹೊಟ್ಟೆ ಉರಿ  , ಕಣ್ಣು ಉರಿ  ಕಡಿಮೆ  ಆಗುತ್ತದೆ. ಹುಳಿ  ದ್ರಾಕ್ಷಿ  ಹಣ್ಣನ್ನು  ಸೇವಿಸಿದರೆ  ಅಜೀರ್ಣ  ಗುಣವಾಗುತ್ತದೆ .

ನೇರಳೆ  ಹಣ್ಣು  ದೇಹಕ್ಕೆ  ತಂಪು . ಇದರ  ರಸ  ಕುಡಿದರೆ  ಹೊಟ್ಟೆಯ ಉರಿ , ಅಜೀರ್ಣ  ಕಡಿಮೆ  ಆಗುತ್ತದೆ . 

ಸೀಬೆ  ಗಿಡದ  ಚಿಗುರೆಲೆಗಳನ್ನು  ಜಗಿದು  ತಿನ್ನುವುದರಿಂದ  ಅಜೀರ್ಣ  ಧೋಷವಿದ್ದರೆ    ಗುಣವಾಗುವುದು.  

ಸೀಬೆ  ಗಿಡದ  ಎಳೆ  ಎಲೆಗಳ  ಕಷಾಯ  ಉದರದ  ತೊಂದರೆಗಳನ್ನು  ನಿವಾರಿಸುತ್ತದೆ . ಅಜೀರ್ಣ , ವಾಂತಿ  , ಭೇದಿ  ಮುಂತಾದ  ತೊಂದರೆಗಳು  ನಿವಾರಣೆಯಾಗುತ್ತವೆ.

ಹುಣಿಸೆ  ಹಣ್ಣಿಗೆ  ಮೆಣಸಿನ  ಪುಡಿ , ಉಪ್ಪು  ಸೇರಿಸಿ  ಸೇವಿಸಿದರೆ  ಅಜೀರ್ಣ , ಅರುಚಿ  ಗುಣವಾಗುತ್ತದೆ.

ದಿನಾ  ಊಟದ  ನಂತರ  ಅನಾನಸ್  ಹಣ್ಣಿನ  ಹೋಳುಗಳಿಗೆ  ಸ್ವಲ್ಪ  ಉಪ್ಪು - ಕರಿಮೆಣಸಿನ  ಪುಡಿ  ಹಾಕಿ   ತಿನ್ನುವುದರಿಂದ  ಅಜೀರ್ಣ  ರೋಗ  ದೂರವಾಗುತ್ತದೆ.

ದಾಳಿಂಬೆ  ಹಣ್ಣಿನ  ರಸದ  ಸೇವನೆಹಿಂದ  ಶರೀರದ  ತೂಕ  ಹೆಚ್ಚುತ್ತದೆ  & ಜೀರ್ಣ  ಶಕ್ತಿಯು  ಹೆಚ್ಚುತ್ತದೆ.  

ಪರಂಗಿ  ಕಾಯಿಗೆ  ಚಾಕುವಿನಿಂದ  ಇರಿದಾಗ  ಬರುವ  ಹಾಲಿಗೆ  ಸ್ವಲ್ಪ  ಪ್ರಮಾಣದಲ್ಲಿ  ಅಡುಗೆ  ಸೋಡಾ   ಒಮ್ಕಾಳು   ಪುಡಿ  ಹಾಗು  ಶುಂಟಿ   ರಸವನ್ನು  ಬೆರೆಸಿ, ಒಣಗಿಸಿ  ಚುರ್ನಮದಿಕೊಂಡು  ಮಿತ  ಪ್ರಮಾಣದಲ್ಲಿ   ದಿನವು  ಸೇವಿಸುವುದರಿಂದ  ಜೀರ್ಣಕ್ರಿಯೆ  ಹೆಚ್ಚುತ್ತದೆ. 

ಬಾಳೆಕಾಯಿ , ದಿಂಡಿನ   ಪಲ್ಯದ  ಸೇವನೆಹಿಂದ  ಜೀರ್ಣಶಕ್ತಿ  ವೃದ್ಧಿಸುವುದಲ್ಲದೆ  ಶರೀರದ  ಧಾರ್ದ್ಯತೆಯು    ಸುಧಾರಿಸುತ್ತದೆ. 

ಮಾವಿನ  ಹಣ್ಣನ್ನು  ದಿನ  ನಿತ್ಯವೂ  ಊಟದ  ನಂತರ  ಸೇವಿಸಿದರೆ  ಜೀರ್ಣಶಕ್ತಿ  ವೃದ್ಧಿಸುತ್ತದೆ.