Friday, October 19, 2012

ಕೆಂಪು ಆಹಾರಗಳು (Red Fruits)




ಕೆಂಪು ಆಹಾರಗಳು

ಡಯಟ್ ಬಗ್ಗೆ ಹೇಳುವಾಗ ಹಸಿರು ತರಕಾರಿಗಳ ಬಗ್ಗೆ ಹೆಚ್ಚಾಗಿ ಹೇಳುತ್ತಿರುತ್ತೇವೆ. ಆದರೆ ಕೆಂಪು ತರಕಾರಿಗಳ ಬಗ್ಗೆ, ಆಹಾರ ವಸ್ತುಗಳ ಬಗ್ಗೆ ಡಯಟ್ ಕ್ರಮದಲ್ಲಿ ಹೇಳಿರುವುದೇ ಕಮ್ಮಿ. ಕೆಂಪು ತರಕಾರಿಗಳು, ಹಸಿರು ತರಕಾರಿಗಳಷ್ಟೇ ಪ್ರಯೋಜನಕಾರಿಯಾಗಿದೆ. ಅನೇಕ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಕೆಂಪು ತರಕಾರಿ ಹಾಗೂ ಹಣ್ಣುಗಳು ತುಂಬಾ ಉಪಯುಕ್ತವಾಗಿವೆ.
ಕೆಂಪು ತರಕಾರಿಗಳು ಹಾಗೂ ಹಣ್ಣುಗಳಲ್ಲಿ ಅತ್ಯಧಿಕ ವಿಟಮಿನ್ ಗಳು, antioxidants ಹಾಗೂ ಅಧಿಕ ಪೋಷಕಾಂಶಗಳಿರುತ್ತವೆ. ಅದರಲ್ಲೂ ತುಂಬಾ ಕೆಂಪು ಬಣ್ಣವಿರುವ ಹಣ್ಣುಗಳು ಅತ್ಯಧಿಕ ಪ್ರಯೋಜನಗಳನ್ನು ಹೊಂದಿವೆ.
ಕೆಂಪು ತರಕಾರಿಗಳು ರಕ್ತ ಕಣಗಳ ಉತ್ಪತ್ತಿಗೆ ತುಂಬಾ ಸಹಾಯಕಾರಿಯಾಗಿದೆ. ತಲೆ ಸುತ್ತು, ಸುಸ್ತು ನಿವಾರಿಸಲು ಕೆಂಪು ಹಣ್ಣುಗಳನ್ನು ತಿಂದರೆ ಒಳ್ಳೆಯದು. ಈ ಹಣ್ಣುಗಳಲ್ಲಿ ಪೋಚಕಾಂಶ ಹಾಗೂ ವಿಟಮಿನ್ ಗಳು ಅಧಿಕವಿರುತ್ತದೆ.

ಕೆಂಪು ದ್ರಾಕ್ಷಿ:
ಕೆಂಪು ದ್ರಾಕ್ಷಿ ತಿನ್ನಲು ಸ್ವಲ್ಪ ಹುಳಿ ಅನಿಸಿದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಹಾಗೆಯೇ ತಿನ್ನಲು ಇಷ್ಟ ಪಡದಿದ್ದರೆ ಜ್ಯೂಸ್ ಮಾಡಿ ಕುಡಿಯಿರಿ. ಇದರ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶವಿರುವುದರಿಂದ ಬಿಸಾಡಬೇಡಿ.

ಟೊಮೆಟೊ:
ಟೊಮೆಟೊವನ್ನು ಹಸಿ ತಿನ್ನಬಹುದು, ಜ್ಯೂಸ್ ಮಾಡಿ ಕುಡಿಯಬಹುದು ಅಥವಾ ಖಾದ್ಯಗಳಲ್ಲಿ ಬಳಸಬಹುದು. ಟೊಮೆಟೊ ಕ್ಯಾನ್ಸರ್ ಬರದಂತೆ ತಡೆಯುವುದರ ಜೊತೆಗೆ ಬೊಜ್ಜು ಬರದಂತೆ ತಡೆಯುತ್ತದೆ.

ಕಲ್ಲಂಗಡಿ ಹಣ್ಣು:
ಕಲ್ಲಂಗಡಿ ಹಣ್ಣು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಇದನ್ನು ಪ್ರತಿದಿನ ತಿಂದರೆ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುವುದು.

ದಾಳಿಂಬೆ:
ದಾಳಿಂಬೆಯಲ್ಲಿ ಮ್ಯಾಗ್ನಿಷಿಯಂ, ಪೊಟಾಷ್ಯಿಯಂ ಹಾಗೂ antioxidants ಅಧಿಕವಿರುವುದರಿಂದ ದೇಹದ ಹಾಗೂ ತ್ವಚೆಯ ಆರೋಗ್ಯ ಹೆಚ್ಚು ಮಾಡುತ್ತದೆ. ದಾಳಿಂಬೆಯ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶವಿರುವುದರಿಂದ ಅದನ್ನು ಬಿಸಾಡಬೇಡಿ. ಅದನ್ನು ಒಣಗಿಸಿ ಎಣ್ಣೆಯಲ್ಲಿ ಹುರಿದು ಚಟ್ನಿ ಮಾಡಿ ತಿನ್ನಿ.

ಕೆಂಪು ನೇರಳೆ ಹಣ್ಣು (Cranberries):
ಇದು ಮಾರ್ಕೆಟ್ ನಲ್ಲಿ ಸಿಗುವುದು ತುಂಬಾ ವಿರಳ. ಆದರೆ ತೋಟಗಳಲ್ಲಿ ಹಾಗೂ ಕಾಡುಗಳಲ್ಲಿ ನೇರಳೆ ಹಣ್ಣು ಹೆಚ್ಚಾಗಿ ದೊರೆಯುವ ಸೀಸನ್ ನಲ್ಲಿ ಈ ಹಣ್ಣು ಕಂಡು ಬರುತ್ತದೆ. ಇದರಲ್ಲಿ ವಿಟಮಿನ್ ಎ ಹಾಗೂ ಕೆ ಅಧಿಕವಾಗಿ ಇರುತ್ತದೆ.

ಸೇಬು:
ಸೇಬು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿರುವ ಅಂಶ. ಸೇಬಿನ ಆರೋಗ್ಯಕರ ಗುಣಕ್ಕೆ ಅದರ ಕೆಂಪು ಬಣ್ಣ ಕೂಡ ಒಂದು ಕಾರಣವಾಗಿದೆ.

ರಾಸ್ ಬೆರಿ:
ರಾಸ್ ಬೆರಿ ಹಣ್ಣುಗಳು ದೇಹದ ತೂಕನ್ನು ಸಮತೋಲನದಲ್ಲಿಡುವುದರ ಜೊತೆಗೆ ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಕಾಪಾಡುವ ಸಾಮರ್ಥ್ಯವನ್ನು ಹೊಂದಿದೆ.

ಹಣ್ಣಾದ ಮೆಣಸಿನಕಾಯಿ
ಒಣ ಮೆಣಸಿನ ಕಾಯಿ ಅಥವಾ ಹಸಿ ಮೆಣಸಿನ ಕಾಯಿಕ್ಕಿಂತ ಹಣ್ಣಾದ ಮೆಣಸಿನಲ್ಲಿ ಅಧಿಕ ಪೋಷಕಾಂಶವಿರುತ್ತದೆ. ಇದು ಹೃದಯದ ಸ್ವಾಸ್ಥ್ಯಕ್ಕೆ ತುಂಬಾ ಒಳ್ಳೆಯದು.

ಸ್ಟ್ರಾಬರಿ ಹಣ್ಣು:
ಸ್ಟ್ರಾಬರಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ತುಂಬಾ ಸಹಾಯಕಾರಿ. ಮೂಳೆ ಹಾಗೂ ಹೃದಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೀಟ್ ರೂಟ್:
ಬೀಟ್ ರೂಟ್ ನಲ್ಲಿ ಕಬ್ಬಿಣದಂಶ, ನಾರಿನಂಶ, ಕ್ಯಾಲ್ಸಿಯಂ, ವಿಟಮಿನ್ ಸಿ ಅಧಿಕವಾಗಿ ಇದ್ದು, ಪ್ರತಿದಿನ ಇದರ ಜ್ಯೂಸ್ ಕುಡಿದರೆ ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಚೆರಿ ಹಣ್ಣು:
ಮೈಕೈ ನೋವು ನಿವಾರಿಸುವಲ್ಲಿ ಚೆರಿ ಹಣ್ಣು ತುಂಬಾ ಸಹಾಯಕಾರಿಯಾಗಿದೆ. ನಿದ್ರಾಹೀನತೆ ಸಮಸ್ಯೆ ಇರುವವರು ಇದನ್ನು ತಿಂದರೆ ಬೇಗನೆ ನಿದ್ದೆ ಬರುತ್ತದೆ. ಇದರಲ್ಲಿರುವ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಆರೋಗ್ಯವನ್ನು ಹೆಚ್ಚಿಸುತ್ತದೆ.



ಥೈರಾಯ್ಡ್ ಕಾಯಿಲೆಗೆ ನೈಸರ್ಗಿಕವಾದ ಚಿಕಿತ್ಸೆ Home remedies for Thairaid

Anirudha Kulkarni


ಥೈರಾಯ್ಡ್ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಈ ರೀತಿಯ ತೊಂದರೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಥೈರಾಯ್ಡ್ ಅನ್ನು ಹೈಪರ್ ಥೈರಾಯ್ಡ್ ಮತ್ತು ಹೈಪೋ ಥೈರಾಯ್ಡ್ ಎಂದು ಎರಡು ರೀತಿಯಲ್ಲಿ ವಿಂಗಡಿಸಬಹುದು. ಹೈಪರ್ ಥೈರಾಯ್ಡ್ ಬಂದರೆ ತೆಳ್ಳಗಾದರೆ ಹೈಪೋ ಥೈರಾಯ್ಡ್ ನಲ್ಲಿ ವಿಪರೀತ ದಪ್ಪಗಾಗುತ್ತಾರೆ. ಥೈರಾಯ್ಡ್ ಸಮಸ್ಯೆಗೆ ಪ್ರತಿದಿನ ಮಾತ್ರೆ ತೆಗೆದುಕೊಂಡರೆ ಕಡಿಮೆಯಾಗುವುದು. ಅದರ ಜೊತೆಗೆ ಈ ಕೆಳಗಿನ ಆಹಾರಸಾಮಾಗ್ರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ದೇಹ ತೂಕದಲ್ಲಿ ವ್ಯತ್ಯಾಸವಾಗುವುದನ್ನು ತಡೆಯಬಹುದು.



ಸೋಯಾ ಪದಾರ್ಥಗಳನ್ನು ತಿನ್ನಬಾರದು: ಹೈಪೋ ಅಥವ ಹೈಪರ್ ಥೈರಾಯ್ಡ್ ಕಾಯಿಲೆ ಇರುವವರು ಸೋಯಾ ಪದಾರ್ಥಗಳನ್ನು ತಿನ್ನಬಾರದು. ಸೋಯಾ ಸಾಸ್ ಮತ್ತಿತರ ಸೋಯಾ ಪದಾರ್ಥಗಳ್ನು ಸೇವಿಸಿದರೆ ಹಾರ್ಮೋನ್ ನಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಐಯೋಡಿನ್ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು: ಸಮುದ್ರ ಆಹಾರಗಳು, ಮೊಸರು, ಆಲೂಗೆಡ್ಡೆ, ಸ್ಟ್ರಾಬರಿ ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು.
ಆರೋಗ್ಯಕರ ಕೊಬ್ಬಿನ ಆಹಾರ: ಒಮೆಗಾ 3 ಕೊಬ್ಬಿನಂಶವಿರುವ ಆಹಾರಗಳನ್ನು ತಿನ್ನಬೇಕು.
ಎಣ್ಣೆಯಂಶ: ಒಳ್ಳೆಯ ಕೊಬ್ಬಿನಂಶ ಇರುವ ಎಣ್ಣೆ ಬಳಸುವುದು ಒಳ್ಳೆಯದು. ಅಧಿಕ ಕ್ಯಾಲೋರಿ ಇರುವ ಎಣ್ಣೆ ಬಳಸಿ ತಯಾರಿಸಿದ ಅಡುಗೆಯನ್ನು ತಿನ್ನಬಾರದು.
ಕ್ಯಾಲ್ಸಿಯಂ ಇರುವ ಆಹಾರಗಳು: ಕ್ಯಾಲ್ಸಿಯಂ ಅಧಿಕ ಇರುವ ಆಹಾರಗಳನ್ನು ಸೇವಿಸಬೇಕು. ಬಾದಾಮಿ, ಮೊಸರು, ಹಾಲು ಇವುಗಳಲ್ಲಿ  ಕ್ಯಾಲ್ಸಿಯಂ ಅಂಶವಿರುತ್ತದೆ.
ಕೆಫೀನ್ ಇರುವ ಅಂಶ ಸೇವಿಸಬಾರದು: ಡಾರ್ಕ್ ಚಾಕಲೇಟ್, ಕಾಫಿ ಇವುಗಳನ್ನುಲ್ಲಿ ಕೆಫೀನ್ ಇರುತ್ತದೆ. ಆದ್ದರಿದ ಇಂತಹ ವಸ್ತುಗಳನ್ನು ಮುಟ್ಟಬಾರದು.
ನಿಂಬೆಹಣ್ಣು: ಥೈರಾಯ್ಡ್ ಕಾಯಿಲೆ ಇದ್ದರೆ ತಲೆಸುತ್ತು, ಒತ್ತಡ ಮುಂತಾದ ತೊಂದರೆಗಳು ಕಾಣಸಿಗುತ್ತದೆ. ನಿಂಬೆ ಹಣ್ಣಿನ ರಸ ದೇಹಕ್ಕೆ ಸೇರಿದರೆ ಈ ರೀತಿಯ ಸಮಸ್ಯೆಗಳು ಕಡಿಮೆಯಾಗುವುದು.