1. ಜೀರ್ಣಕ್ರಿಯೆ ಹೆಚ್ಚು ಮಾಡುತ್ತದೆ: ಜೋಳದಲ್ಲಿ ಅಧಿಕ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಲ್ಲದೆ ಜೋಳ ದೇಹಕ್ಕೆ ಸೇರಿದಾಗ ಅದು ಕರುಳಿನ ಕ್ಯಾನ್ಸರ್ ಕಾಯಿಲೆ ತಡೆಕಟ್ಟುವ ಸಾಮರ್ಥ್ಯ ಹೊಂದಿದೆ.
2. ಖನಿಜಾಂಶಗಳನ್ನು ಹೊಂದಿದೆ: ಜೋಳದಲ್ಲಿ ಅಧಿಕ ಮ್ಯಾಗ್ನಿಷಿಯಂ, ಕಬ್ಬಿಣ, ಸತು, ರಂಜಕ ಇರುವುದರಿಂದ ಮೂಳೆಗೆ ಒಳ್ಳೆಯದು. ಇದು ಮೂಳೆಯನ್ನು ಬಲಪಡಿಸುವುದು ಮಾತ್ರವಲ್ಲ, ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ.
3. ಯೌವನಭರಿತ ತ್ವಚೆ: ಜೋಳದಲ್ಲಿ antioxidants ಪ್ರಮಾಣ ಹೆಚ್ಚಾಗಿರುವುದರಿಂದ ತ್ವಚೆ ಬೇಗನೆ ಮುಪ್ಪಾಗದಂತೆ ಕಾಪಾಡುತ್ತದೆ. ಅಲ್ಲದೆ ಜೋಳದ ಎಣ್ಣೆಯನ್ನು ಹಚ್ಚಿಕೊಂಡರೆ ತ್ವಚೆ ಅಲರ್ಜಿ, ತ್ವಚೆಯಲ್ಲಿ ಕೆಂಪು ಗುಳ್ಳೆಗಳಾಗುವುದನ್ನು ತಡೆಯಬಹುದು.
4. ರಕ್ತಹೀನತೆಯನ್ನು ತಡೆಗಟ್ಟುತ್ತದೆ: ಜೋಳದಲ್ಲಿ ವಿಟಮಿನ್ ಬಿ ಮತ್ತು ಫಾಲಿಕ್ ಆಸಿಡ್ ಅಂಶವಿರುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗಲು ಸಹಕಾರಿಯಾಗಿದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಉಂಟಾಗುವುದಿಲ್ಲ.
5. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ: ಕೊಲೆಸ್ಟ್ರಾಲ್ ನಲ್ಲಿ 2 ವಿಧ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ ದೇಹದ ತೂಕ ಹೆಚ್ಚಾಗುವುದು, ಒಬೆಸಿಟಿ ಸಮಸ್ಯೆ ಪ್ರಾರಂಭವಾಗುತ್ತದೆ. ಆದರೆ ಜೋಳದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು ದೇಹದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ಸ್ವೀಟ್ ಕಾರ್ನ್ ನಲ್ಲಿ ವಿಟಮಿನ್ ಸಿ, carotenoids ಮತ್ತು bioflavinoids ಅಂಶವಿರುವುದರಿಂದ ಹೃದ್ರೋಗ ಸಮಸ್ಯೆ ಇರುವವರಿಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
6. ಗರ್ಭೀಣಿಯರ ಆರೋಗ್ಯಕ್ಕೆ: ಗರ್ಭಿಣಿಯರ ಆರೋಗ್ಯಕ್ಕೆ ಜೋಳ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಫಾಲಿಕ್ ಆಸಿಡ್ ಕೊರತೆಯನ್ನು ನೀಗಿಸಬಹುದು. ಫಾಲಿಕ್ ಆಸಿಡ್ ಕೊರತೆ ಉಂಟಾದರೆ ಗರ್ಭಿಣಿಯರಲ್ಲಿ ಕೈ ಕಾಲುಗಳಲ್ಲಿ ಊತ, ಅಧಿಕ ರಕ್ತದೊತ್ತಡ ಕಂಡು ಬರುತ್ತದೆ. ಕಡಿಮೆ ಫಾಲಿಕ್ ಆಸಿಡ್ ಇದ್ದರೆ ಕಡಿಮೆ ತೂಕದ ಮಗು ಹುಟ್ಟುತ್ತದೆ. ಆದ್ದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಜೋಳ ತಿನ್ನುವುದು ಒಳ್ಳೆಯದು. ಕುರುಕಲು ತಿಂಡಿ ತಿನ್ನುವ ಬದಲು ಜೋಳದ ಸ್ನ್ಯಾಕ್ಸ್ ತಿನ್ನುವುದು ಒಳ್ಳೆಯದು. ಜೋಳದ ಅಡುಗೆ ಪ್ರತಿನಿತ್ಯ ತಿಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ.
ಸಲಹೆ: * ಪಾಪ್ ಕಾರ್ನ್ ನಲ್ಲಿ ಹೆಚ್ಚು ಉಪ್ಪು ಹಾಕಿರುವುದರಿಂದ ಅದನ್ನು ತುಂಬಾ ತಿಂದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಬೇಯಿಸಿದ ಜೋಳ ಅಥವಾ ಇತರ ಜೋಳದ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು.
* ಮಿತಿಮೀರಿ ಪಾಪ್ ಕಾರ್ನ್ ಗಳನ್ನು ತಿನ್ನುವುದರಿಂದ ದಪ್ಪಗಾಗುವುದು. ಅದರ ಬದಲು ಜೋಳದ ರೊಟ್ಟಿ ಅಥವಾ ಉಪ್ಪಿಟ್ಟು ತಿಂದರೆ ಶರೀರದ ತೂಕವನ್ನು ಸಮತೋಲನದಲ್ಲಿಡಬಹುದು.
No comments:
Post a Comment