ಅಜೀರ್ಣ ರೋಗ ಮತ್ತು ಸಂಧಿವಾತದವರಿಗೆ ಟೊಮೇಟೊ ಸೇವನೆ ತುಂಬಾ ಹಿತಕರ. ದಿನ ನಿತ್ಯ ಟೊಮೇಟೊ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.
ಬಿಳಿ ದ್ರಾಕ್ಷಿ ಹಣ್ಣು ದೇಹಕ್ಕೆ ತಂಪು . ಇದನ್ನು ನಿತ್ಯವೂ ಸೇವಿಸಿದರೆ ಹೊಟ್ಟೆ ಉರಿ , ಕಣ್ಣು ಉರಿ ಕಡಿಮೆ ಆಗುತ್ತದೆ. ಹುಳಿ ದ್ರಾಕ್ಷಿ ಹಣ್ಣನ್ನು ಸೇವಿಸಿದರೆ ಅಜೀರ್ಣ ಗುಣವಾಗುತ್ತದೆ .
ನೇರಳೆ ಹಣ್ಣು ದೇಹಕ್ಕೆ ತಂಪು . ಇದರ ರಸ ಕುಡಿದರೆ ಹೊಟ್ಟೆಯ ಉರಿ , ಅಜೀರ್ಣ ಕಡಿಮೆ ಆಗುತ್ತದೆ .
ಸೀಬೆ ಗಿಡದ ಚಿಗುರೆಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣ ಧೋಷವಿದ್ದರೆ ಗುಣವಾಗುವುದು.
ಸೀಬೆ ಗಿಡದ ಎಳೆ ಎಲೆಗಳ ಕಷಾಯ ಉದರದ ತೊಂದರೆಗಳನ್ನು ನಿವಾರಿಸುತ್ತದೆ . ಅಜೀರ್ಣ , ವಾಂತಿ , ಭೇದಿ ಮುಂತಾದ ತೊಂದರೆಗಳು ನಿವಾರಣೆಯಾಗುತ್ತವೆ.
ಹುಣಿಸೆ ಹಣ್ಣಿಗೆ ಮೆಣಸಿನ ಪುಡಿ , ಉಪ್ಪು ಸೇರಿಸಿ ಸೇವಿಸಿದರೆ ಅಜೀರ್ಣ , ಅರುಚಿ ಗುಣವಾಗುತ್ತದೆ.
ದಿನಾ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು - ಕರಿಮೆಣಸಿನ ಪುಡಿ ಹಾಕಿ ತಿನ್ನುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ.
ದಾಳಿಂಬೆ ಹಣ್ಣಿನ ರಸದ ಸೇವನೆಹಿಂದ ಶರೀರದ ತೂಕ ಹೆಚ್ಚುತ್ತದೆ & ಜೀರ್ಣ ಶಕ್ತಿಯು ಹೆಚ್ಚುತ್ತದೆ.
ಪರಂಗಿ ಕಾಯಿಗೆ ಚಾಕುವಿನಿಂದ ಇರಿದಾಗ ಬರುವ ಹಾಲಿಗೆ ಸ್ವಲ್ಪ ಪ್ರಮಾಣದಲ್ಲಿ ಅಡುಗೆ ಸೋಡಾ ಒಮ್ಕಾಳು ಪುಡಿ ಹಾಗು ಶುಂಟಿ ರಸವನ್ನು ಬೆರೆಸಿ, ಒಣಗಿಸಿ ಚುರ್ನಮದಿಕೊಂಡು ಮಿತ ಪ್ರಮಾಣದಲ್ಲಿ ದಿನವು ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.
ಬಾಳೆಕಾಯಿ , ದಿಂಡಿನ ಪಲ್ಯದ ಸೇವನೆಹಿಂದ ಜೀರ್ಣಶಕ್ತಿ ವೃದ್ಧಿಸುವುದಲ್ಲದೆ ಶರೀರದ ಧಾರ್ದ್ಯತೆಯು ಸುಧಾರಿಸುತ್ತದೆ.
ಮಾವಿನ ಹಣ್ಣನ್ನು ದಿನ ನಿತ್ಯವೂ ಊಟದ ನಂತರ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ.