Saturday, October 01, 2011

Home remedies for Snoring "ಗೊರಕೆ"







ifestyle changes to stop snoring
1Lose weight. Losing even a little bit of weight can reduce fatty tissue in the back of the throat and decrease or even stop snoring.
2 Exercise can also help to stop snoring. Working out to tone your arms,...
legs, and abs, for example, also leads to toning the muscles in your throat, which in turn can lead to less snoring.
3 Quit smoking. If you smoke, your chances of snoring are high. Smoking causes airways to be blocked by irritating the membranes in the nose and throat.
4. Avoid alcohol, sleeping pills, and sedatives, especially before bedtime, because they relax the muscles in the throat and interfere with breathing. Talk to your doctor about any prescription medications you’re taking, as some encourage a deeper level of sleep which can make snoring worse.
5 Establish regular sleep patterns. Create a bedtime ritual with your partner and stick to it. Hitting the sack in a routine way together can help you sleep better and often minimize snoring.
Bedtime remedies to help you stop snoring
6 Clear nasal passages. Having a stuffy nose makes inhalation difficult and creates a vacuum in your throat, which in turn leads to snoring. You can do it naturally with a neti pot or try nasal decongestants or nasal strips to help you breathe more easily while sleeping.
7 Keep bedroom air moist with a humidifier. Dry air can irritate membranes in the nose and throat.
8 Reposition. Elevating your head four inches may ease breathing and encourage your tongue and jaw to move forward. There are specially designed pillows available to help prevent snoring by making sure your neck muscles are not crimped.
9 Avoid caffeine and heavy meals within two hours of going to bed, especially dairy products and soymilk.
10 Sleep on your side. Avoid sleeping on your back, as gravity makes it more likely for your tongue and soft tissues to drop and obstruct your airway.

HEALTH BENEFITS OF GUAVA ಸೀಬೆ




3 ದಿನ ಸೀಬೆ ಎಲೆ ಕಷಾಯ ಕುಡಿದರೆ ಕಾಮಾಲೆ ಮಾಯ
 
 ಸೀಬೆ ಮರದ ಎಲೆ ಕಾಮಾಲೆಗೆ ಅತ್ಯಂತ ಪರಿಣಾಮಕಾರಿ ಹಾಗೂ ಮಿತವ್ಯಯಕಾರಿ ಮದ್ದು ಎಂಬುದನ್ನು ವೈದ್ಯಕೀಯ ರಂಗ ಪತ್ತೆ ಹಚ್ಚಿದೆ.

ಕೃಪಾನಿಧಿ ವೈದ್ಯಕೀಯ ಕಾಲೇಜಿನ ಮೊಹಮ್ಮದ್‌ ಆಝಾದ್‌ ಹಾಗೂ ಅವರ ಸಹೋದ್ಯೋಗಿಗಳಾದ ಚಂಚಲ್‌ ರಾಯ್‌ ಮತ್ತು ಜಗದೀಶ್‌ ಕಾಮತ್‌ ತಮ್ಮ ಶೋಧನೆ ಮೂಲಕ, ಸೀಬೆ ಎಲೆಯ ಔಷಧೀಯ ಗುಣವನ್ನು ಬಹಿರಂಗಪಡಿಸಿದ್ದಾರೆ.

ಸೀಬೆ ಮರದ ಎಲೆಯಿಂದ ತಯಾರಿಸುವ ಔಷಧಿ ಯಕೃತ್ತು ಹಾನಿ ತಡೆಯುತ್ತದೆ. ಇದು ಕಾಮಾಲೆ ರೋಗಕ್ಕೆ ಅತ್ಯಂತ ಕಡಿಮೆ ಖರ್ಚಿನ ಔಷಧಿಯೂ ಆಗಲಿದೆ ಎನ್ನುವ ಮೊಹಮ್ಮದ್‌ ಆಝಾದ್‌, ಇಲಿಗಳ ಮೇಲೆ ಪ್ರಯೋಗ ನಡೆಸಿ ಸಕಾರಾತ್ಮಕ ಫಲಿತಾಂಶವನ್ನು ಪಡೆದಿದ್ದಾರೆ.

ಮೂರು ದಿನಗಳ ಕಾಲ ಸೀಬೆ ಎಲೆ ಕಷಾಯ ಕುಡಿದರೆ ಕಾಮಾಲೆ ಮಾಯವಾಗುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆ ಮಂಗಳೂರಿನ ಜನರಲ್ಲಿದೆ. ಈ ನಂಬಿಕೆಯನ್ನು ನಮ್ಮ ಸಂಶೋಧನೆ ಖಾತ್ರಿಪಡಿಸಿದೆ ಅಷ್ಟೆ ಎಂದು ಹೇಳಿದ್ದಾರೆ.


HOME REMEDIES ಹಿತ್ತಲ ಮದ್ದು


ತುಪ್ಪದ ಹೀರೆಕಾಯಿ:
*ತುಪ್ಪದ ಹೀರೆಕಾಯಿ ಪಲ್ಯ ತಿಂದರೆ ಮೂಗು, ಬಾಯಿ ಮತ್ತು ಗುಧದ್ವಾರದಿಂದ ಹೊರಬೀಳುವ ರಕ್ತ ತಟ್ಟನೆ ನಿಂತು ಹೋಗಿ ದೇಹಕ್ಕೆ ತಂಪು ನೀಡುತ್ತದೆ.
*ತುಪ್ಪದ ಹೀರೆಕಾಯಿ ಸೇವನೆಯಿಂದ ಮೂತ್ರ ವಿಷರ್ಜನೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಲವಣಗಳ ಕೊರತೆಯನ್ನು ಇದು ನೀಡುತ್ತದೆ.

ತೊಂಡೆಕಾಯಿ :
*ತೊಂಡೆಕಾಯಿ ಪಲ್ಯ ತಿಂದರೆ ರಕ್ತ ವೃದ್ದಿಯಾಗುತ್ತದೆ. ಇದನ್ನು ಹಸಿಯಾಗಿ ತಿಂದರೆ "ಎ" ಮತ್ತು "ಸಿ' ವಿಟಮಿನ್ ಹೇರಳವಾಗಿ ಸಿಗುತ್ತದೆ.

ಬಸಳೆ ಸೊಪ್ಪು :
*ಬಸಳೆ ಸೊಪ್ಪನ್ನು ಸೇವಿಸಿದರೆ ದೇಹಕ್ಕೆ ತಂಪು. ಸಾರು ಮಾಡಿ ಅದಕ್ಕೆ ನಿಂಬೆ ಹಣ್ಣಿನ ರಸ ಹಾಕಿ ಸೇವಿಸಿದರೆ ಅರೋಗ್ಯ ವೃದ್ದಿಯಾಗುತ್ತದೆ.
*ಕಬ್ಬಿಣಾ೦ಷ ಕೊರತೆಯಿರುವ ಗರ್ಭಿಣಿಯರು ಮತ್ತು ಮಕ್ಕಳು ಸೇವಿಸಿದರೆ ಅವರ ಕೊರತೆ ದೂರವಾಗುವುದು.

ಅನಾನಸ್ ಹಣ್ಣಿನ ಗುಣಗಳು:
*ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೊಳುಗಳಿಗೆ ಸ್ವಲ್ಪ ಉಪ್ಪು ಹಾಗು ಕಾಳು ಮೆಣಸಿನ ಪುಡಿಯನ ಹಾಕಿ ತಿನ್ನೋದ್ರಿಂದ ಅಜೀರ್ಣ, ಅಮ್ಲಪಿತ, ಗಂಟಲು ಬೇನೆ, ದಿಪ್ಥಿರಿಯ ಹಾಗು ಹೃದಯ ದುರ್ಬಲತೆ ಶಮನವಗುತದೆ.

ಬಾರ್ಲಿ :
*ಬಾರ್ಲಿ ಗಂಜಿಯನ್ನು ಕುಡಿಯುವುದರಿಂದ ಕರಳು ಬೇನೆ , ಹೊಟ್ಟೆಹುಣ್ಣು , ಆಮಶಂಕೆ ಮತ್ತು ಅತಿಯಾದ ಉಷ್ಣ ನಿವಾರಣೆಯಾಗುತ್ತದೆ .
*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವ್ವು ಗುಣವಾಗುತ್ತದೆ.

ಬೇಲದ ಹಣ್ಣು :
*ಬೆಲ್ಲ ಹಾಕಿ ಬೇಲದ ಹಣ್ಣಿನ ಪಾನಕ ತಯಾರಿಸಿ ಏಲಕ್ಕಿ ಪುದಿಯನ್ನು ಹಾಕಿ ಸೇವಿಸುವುದರಿಂದ ಬಾಯಾರಿಕೆ ಕಡಿಮೆ ಆಗುವುದು. ಬಾಯಿಂದ ಹೊರಡುವ ದುರ್ನಾತ ಕಡಿಮೆಯಾಗುವುದು.
* ಬೇಲದ ಹಣ್ಣಿನ ಬೀಜವಿಲ್ಲದ ತಿರುಳಿಗೆ ಬೆಲ್ಲ ಹಾಕಿಕೊಂಡು ತಿಂದರೆ ಕಫಾ ನಿವಾರಣೆಯಾಗುವುದು.
*ಬೇಲದ ಹಣ್ಣನ್ನು ಕ್ರಮವಾಗಿ ತಿನ್ನುತ್ತಿದ್ದರೆ ಸಂತಾನ ಶಕ್ತಿಯ ಅಭಾವವಿರುವವರಿಗೆ ಫಲ ಪ್ರಾಪ್ತಿಯಾಗುವುದು.
* ಜೋತು ಬೀಳುವ ಸ್ತನಗಳು ಸ್ವಾಭಾವಿಕ ರೂಪಕ್ಕೆ ಬರಲು ಬೇಲದ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು.

ಮೆಣಸಿನ ಕಾಯಿ :
* ಮೆಣಸಿನ ಕಾಯಿ ಹಸಿರಾಗಿರುವಾಗಲೇ ಉಪಯೋಗಿಸಿದರೆ ಜೀರ್ಣಶಕ್ತಿ ಅಧಿಕವಾಗುವುದು. ಸಂಭೋಗದ ಆಸಕ್ತಿ ಹೆಚ್ಚುವುದು.
* ಮೆಣಸಿನ ಕಾಯಿಯ ಖಾರ ನಾಲಿಗೆಗೆ ಸೋಕಿದಾಗ ಲಾಲಾರಸ ಚನ್ನಾಗಿ ಸ್ರವಿಸುವುದು. ಮಲಬದ್ಧತೆ ಉಂಟಾಗುವ ಸಂಭವವಿರುವುದಿಲ್ಲ.

ಹಕ್ಕರಿಕೆ ಸೊಪ್ಪು :
*ಹಕ್ಕರಿಕೆ ಸೊಪ್ಪನ್ನು ಸವತೆಕಾಯಿಯೊಂದಿಗೆ ತಿನ್ನುತ್ತಿದ್ದರೆ ಲೈಂಗಿಕ ಆಶಕ್ತಿ ಅಧಿಕವಾಗುತ್ತದೆ. ಸರಾಗವಾಗಿ ಮಲ ವಿಸರ್ಜನೆಯಾಗುತ್ತದೆ.
* ಹಕ್ಕರಿಕೆ ಸೊಪ್ಪನ್ನು ನಿರಂತರವಾಗಿ ಬಳಸುವುದರಿಂದ ನಾಲಿಗೆಯ ರುಚಿ ಹೆಚ್ಚುವುದು. ದಂತ ಕ್ಷಯ ನಿವಾರಣೆಯಾಗುವುದು.

ಸಪೋಟ ಹಣ್ಣು:
* ಸಪೋಟ ಹಣ್ಣುಗಳನ್ನು ಸೇವಿಸುವುದರಿಂದ ವೀರ್ಯ ವೃದ್ದಿಯಾಗುತ್ತದೆ.
* ಸಪೋಟ ಹಣ್ಣನ್ನು ಜೇನುತುಪ್ಪದಲ್ಲಿ ಅದ್ದಿ ತಿಂದರೆ ಸಂಭೋಗ ಕ್ರಿಯೆ ವ್ರುದ್ದಿಯಗುವುದು. ಶೀಘ್ರ ವೀರ್ಯ ಸ್ಖಲನವಾಗುವುದಿಲ್ಲ.

ಸೀತಾಫಲ :
*ಸಿತಾಫಲವನ್ನು ತಿಂದರೆ ಮೊದಲು ಸ್ವಲ್ಪ ಉಷ್ಣ ವನ್ನುಂಟುಮಾಡಿ ಮಾಡಿ ಕೊನೆಗೆ ಅತ್ಯಂತ ತಮ್ಪನ್ನುಂಟು ಮಾಡುತ್ತದೆ.
*ಸೀತಾಫಲ ಶರೀರದ ಮಾಂಸವನ್ನು ಹೆಚ್ಚಿಸುತ್ತದೆ. ಸೀತಾಫಲದ ಒಣಗಿದ ಎಲೆಗಳ ಚೂರ್ಣ ಚರಮರೋಗಕ್ಕೆ ಉತ್ತಮ ಔಷದಿ.

ಗೋದಿಹಿಟ್ಟನ್ನು ಮೊಸರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಹೋದ್ರಿಂದ  ಬೇಸಿಗೆ ಹಾಗೂ ಚಳಿಗಾಲದಲ್ಲಿ ಒಡೆದ ತ್ವಚೆ ಸರಿಹೋಗುತ್ತದೆ .
ಜೇನುತುಪ್ಪ ಅತವಾ ಗ್ಲಿಸರಿನ್ ಅನ್ನು  ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ೧೫ ನಿಮಿಷ ಬಿಟ್ಟು ತೊಳೆದುಕೊಂಡು ಮಲಗಿದರೆ ತ್ವಚೆ ಸುಂದರವಾಗುತ್ತದೆ .
ಜೇನುತುಪ್ಪ
ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಮನವಾಗಿ ಗಾಯ ಶೀಘ್ರ ಮಾಗುತ್ತದೆ. ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುವುದು.
೧. ನುಣ್ಣಗೆ ಅರೆದಿರುವ ಅರಿಶಿನದ ಪುಡಿಯನ್ನು ಜೇನುತುಪ್ಪದಲ್ಲಿ ರಂಗಳಿಸಿ ವ್ಯಾದಿ ಪೀಡಿತ ಚರ್ಮದ ಮೇಲೆ ಹಚ್ಚುವುದರಿಂದ ಸಕಲ ಚರ್ಮವ್ಯಾದಿಗಳು ಗುಣವಾಗುವುವು.
೨. ಮಾವಿನಕಾಯಿ ತೊಟ್ಟು ಮುರಿದಾಗ ಸ್ರವಿಸುವ ದ್ರವ ಹಚ್ಚುವುದರಿಂದ ಹುಳುಕಡ್ಡಿ, ಇಸುಬು ಮೊದಲಾದ ರೋಗಗಳು ಗುಣವಾಗುವವು.
೩. ಜೇನುತುಪ್ಪವನ್ನು ಗಾಯದ ಕಲೆಗಳ ಮೇಲೆ ಹಚ್ಚುತ್ತಿದ್ದರೆ ಕಲೆಗಳು ನಿವಾರಣೆಯಾಗುತ್ತವೆ.
ಸೌತೆಕಾಯಿ:
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.


ಹೊಟ್ಟೆನೋವಿಗೆ: ಬೆಲ್ಲದಲ್ಲಿ ಕಾಳುಮೆಣಸಿನಪುಡಿ ಬೆರೆಸಿ ಸೇವಿಸಿದರೆ ನೋವು ಶಮನವಾಗುತ್ತದೆ
ಒಣಕೆಮ್ಮು: ಬೆಲ್ಲದಲ್ಲಿ ಅರಿಶಿಣಪುಡಿ ಸೇರಿಸಿ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗಿ ಗಂಟಲಿಗೆ ಹಿತವಾಗಿರುತ್ತದೆ
.


ಕಡಲೇಕಾಯಿ.
ಒಂದು ಚಮಚ ಕಡಲೇಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರೆಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಗೋಧಿ ಹಿಟ್ಟು ಹಾಗೂ ಶೇಂಗಾ ಹಿಟ್ಟು ಬೆರೆಸಿದ ರೊಟ್ಟಿಯು ಮಧುಮೇಹಿಗಳಿಗೆ ಹಿತ. ಶೇಂಗಾ ಹಿಂಡಿಯಲ್ಲಿ ಉತ್ತಮ ಸಸಾರಜನಕವಿದ್ದು, ದನಕರುಗಳಿಗೆ ಉತ್ತಮ.


ಗೋರಂಟಿ ಗಿಡದ ಚಿಗುರೆಲೆಗಳನ್ನು ಚೆನ್ನಾಗಿ ಜಗಿದು ಉಗುಳಿದರೆ ಬಾಯಿಯ ದುರ್ವಾಸನೆ ಹೋಗುತ್ತದೆ.


ಕಾಳುಮೆಣಸಿನ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ಶೀತದ ನೆಗಡಿ ನಿವಾರಣೆಯಾಗುವುದು.


ಶ್ರೀಗಂಧದ ಚಕ್ಕೆಯನ್ನು ನೀರಿನಲ್ಲಿ ತೇದು ಗಂಧ ತೆಗೆದು ಊತವಿರುವ ಭಾಗಕ್ಕೆ ಲೇಪಿಸುವುದರಿಂದ ಊತ ಇಳಿಯುತ್ತದೆ.


ನಿಂಬೆಹಣ್ಣಿನ ರಸವನ್ನು ಕೊಬ್ಬರಿ ಎಣ್ಣೆದೂಂದಿಗೆ ಮಿಶ್ರಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುವದು.


ನೆಲ್ಲಿ ಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ದಿನಾಗಲು ಅಂಗೈ, ಅಂಗಾಲಿಗೆ ಲೇಪಿಸಿದರೆ ಬೆವರುವದು ನಿಲ್ಲುತ್ತದೆ.


ಪ್ರತಿದಿನವು ತಣ್ಣಿರು ಸ್ನಾನ ಮಾಡುತ್ತಿದ್ದರೆ ಮೈಮೇಲೆ ಬೆವರು ಗುಳ್ಳೆಗಳು ಏಳುವದಿಲ್ಲ.


ಆಲೂಗಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆದು ಚರ್ಮದ ಮೇಲೆ ಲೇಪಿಸಿದರೆ ತುರಿ ಕಜ್ಜಿ ನಿವಾರಣೆಯಗುವದು.


ನುಣ್ಣಗೆ ಅರೆದಿರುವ ಅರಿಶಿನದ ಪುಡಿಯನ್ನು ಜೇನುತುಪ್ಪದಲ್ಲಿ ಸೇರಿಸಿ ಲೇಪಿಸಿದರೆ ಚರ್ಮರೋಗ ನಿವಾರಿಸಬಹುದು.


ಜ್ವರ ಆರಂಭವಾದ ಕೂಡಲೇ, 60 ಮಿ.ಲೀ ನೀರಿಗೆ ಒಂದು ನಿಂಬೆಹಣ್ಣಿನ ರಸ, ಮೂರು ಚಮಚ ಮೂಸಂಬಿ ರಸ ಬೆರೆಸಿ ನಿತ್ಯ ಕುಡಿದರೆ ಮಲೇರಿಯಾ ಬೇಗ ನಿಯಂತ್ರಣಕ್ಕೆ ಬರುತ್ತದೆ.


ಒಂದು ಚಮಚ ಉಪ್ಪನ್ನು ಬಿಸಿಮಾಡಿ ಒಂದು ಲೋಟ ನೀರಿಗೆ ಸೇರಿಸಿ ಇದನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಇದು ಕುಡಿದ ಬಳಿಕ ಬಾಯಾರಿಕೆ ಉಂಟಾದರೂ ಒಂದು ಗಂಟೆಯಕಾಲ ನೀರು ಕುಡಿಯಬಾರದು. ಬಳಿಕ ಸ್ವಲ್ಪಸ್ವಲ್ಪವೇ ನೀರನ್ನು ಕುಡಿಯಬಹುದು. ಇದು ಟೈಫಾಯ್ಡ್ ಜ್ವರವನ್ನು ಅವಧಿಗೆ ಮುಂಚೆ ಶಮನ ಮಾಡುತ್ತದೆ.


ದಿನಕ್ಕೆ-ಎರಡು ಮೂರು ಬಾರಿ ಒಂದು ಲೋಟದಂತೆ ಸೇಬುಹಣ್ಣಿನ ಜ್ಯೂಸ್ ಕುಡಿಯಬೇಕು. ಇದನ್ನು ದಿನನಿತ್ಯದಂತೆ ಎರಡು ತಿಂಗಳು ಕುಡಿದರೆ ಟೈಫಾಯ್ಡ್ ವಾಸಿಯಾಗುವುದಲ್ಲದೆ ರೋಗಿಯ ಶಕ್ತಿ ಹೆಚ್ಚುತ್ತದೆ.


ಗರ್ಗ ಹಾಗೂ ತುಳಸೀ ಎಲೆಗಳನ್ನು ಜಜ್ಜಿ ತೆಗದ ರಸವನ್ನು ಸಮಪ್ರಮಾಣದಲ್ಲಿ ಜೇನಿನೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಕ್ರಮೇಣ ಕೆಮ್ಮು ಉಪಶಮನವಾಗುತ್ತದೆ.


ಜ್ವರದ ತಾಪವಿದ್ದಾಗ ಮೂರು ಚಮಚ ಕೃಷ್ಣ (ಕಪ್ಪು)ತುಳಸಿ ರಸವನ್ನು ಎರಡು ಚಮಚ ಜೇನಿನೊಂದಿಗೆ ದಿನಕ್ಕೆ ಎರಡು-ಮೂರು ಬಾರಿ ಸೇವಿಸಬೇಕು.


ಇಲಿ ಜ್ವರದ ಆರಂಭದಲ್ಲಿ ಕಫ, ಎದೆನೋವು ಕೆಮ್ಮು ಇರುತ್ತದೆ. ಇಂತಹ ಸಂದರ್ಭದಲ್ಲಿ ಆಡುಸೋಗೆಯ ಎಲೆಗಳನ್ನು ಹಬೆಯಲ್ಲಿ ಬಾಡಿಸಿ, ಹಿಂಡಿ ರಸತೆಗೆದು ಎರಡು-ನಾಲ್ಕು ಚಮಚ ಜೇನಿನ ಹನಿಗಳೊಂದಿಗೆ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.


ಲೋಳೆಸರದ ರಸವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸಿ. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು.


ಒಂದು ಟೀ ಚಮಚ ಲೋಳೆರಸದೊಂದಿಗೆ ಎರಡು ಚಿಟಿಕೆ ಕರಿಮೆಣಸನ್ನು ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಕಾಲಿನ ಸ್ನಾಯು ಸೆಳೆತವಿದ್ದರೆ ಶುಂಠಿಯ ಪೇಸ್ಟ್ ಅನ್ನು ಅರಶಿನದೊಂದಿಗೆ ಬೆರೆಸಿ ಹಚ್ಚಿ


ಎರಡು ಟೀ ಚಮಚ ಶುಂಠಿ ಹುಡಿ ಮತ್ತು ಒಂದು ಟೀ ಚಮಚ ಅರಶಿನ ಹುಡಿಯನ್ನು ನೀರಿನಲ್ಲಿ ಬೆರೆಸಿ ಪೇಸ್ಟ್‌ನಂತೆ ಮಾಡಿ. ಅದನ್ನು ಸ್ವಲ್ಪ ಬಿಸಿಮಾಡಿ ಹತ್ತಿಬಟ್ಟೆಯ ತುಂಡಿನ ಮೇಲೆ ಸವರಿ, ಅನಂತರ ನೋವಿರುವ ಭಾಗಕ್ಕೆ ಅದನ್ನು ಒತ್ತಿದರೆ ನೋವು ಶಮನವಾಗುವುದು.





ನೋವಿರುವ ಹಲ್ಲಿನ ಭಾಗಕ್ಕೆ ಅಥವಾ ಹಲ್ಲಿಗೆ ಮೂರು ಹನಿ ಲವಂಗ ಎಣ್ಣೆಯನ್ನು ಹಚ್ಚಿದರೆ ನೋವು ಕಡಿಮೆಯಾಗುವುದು


ಮಾವಿನ ತೊಗಟಿಯ ಕಷಾಯಕ್ಕೆ ಉಪ್ಪು ಬೆಲಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುವುದು.


ಕಿವಿಯೊಳಗೆ ಸಣ್ಣ ಕ್ರಿಮಿ ಹೊಕ್ಕಾಗ ಉಪ್ಪಿನ ದ್ರಾವಣವನ್ನು ಕಿವಿಯೊಳಗೆ ಬಿಟ್ಟರೆ ಕ್ರಿಮಿಗಳು ಸತ್ತು ಕಡಿತದ ಬಾಧೆ ಇಲ್ಲವಾಗುವುದು.


ಲವಂಗದ ಎಣ್ಣೆಯನ್ನು ಹಲ್ಲಿನ ಸಂದಿಯಲ್ಲಿ ಹಾಕಿದರೆ ಹಲ್ಲು ನೋವು ಶಮನವಾಗುವುದು.


ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುವುದು.


ಬಾಳೆ ಹಣ್ಣು ಸೇವಿಸುವುದರಿಂದ ಜೀರ್ಣ ಶಕ್ತಿ ಅಧಿಕವಾಗುವುದು ಮತ್ತು ದೇಹದ ತೂಕವೂ ಸಹ ಹೆಚ್ಚಾಗುವುದು.


ತಲೆನೋವನ್ನು ತಪ್ಪಿಸಲು ತೀಕ್ಷ್ಣ ಬೆಳಕಿನಿಂದ ಹಾಗೂ ಹೆಚ್ಚು ಶಬ್ದವಿರುವ ಜಾಗದಿಂದ ದೂರವಿರಿ.


ಉಷ್ಣದಿಂದ ನೆಗಡಿ ಉಂಟಾಗಿದ್ದರೆ ಎಳೆನೀರನ್ನು ಕುಡಿದರೆ ಗುಣಮುಖವಾಗುವುದು.


ಕಫ ಬಹಳವಾಗಿದ್ದರೆ, ಬಿಸೀನೀರಿನೊಂದಿಗೆ ಸ್ವಲ್ಪ ಉಪ್ಪನ್ನು ಬೆರಸಿ ಕುಡಿಯುತ್ತಿದ್ದರೆ ಕಫ ಬರುವುದು ನಿಲ್ಲುತ್ತದೆ.


ಬಾಯಲ್ಲಿ ಹುಣ್ಣುಗಳಾಗಿದ್ದರೆ, ಜೀರಿಗೆಯನ್ನು ರಾತ್ರಿ ಮಲಗುವ ಮುನ್ನ ಅಗಿದು ತಿಂದು ಹಾಗೆ ಮಲಗಿದರೆ ಬೆಳಿಗ್ಗೆ ಹುಣ್ಣುಗಳು ಮಾಯವಾಗುತ್ತವೆ.




ನಿಮ್ಮ ಕಿವಿಗಳಿಗೆ ತುಳಸಿ ಎಲೆಗಳ ರಸವನ್ನು ಹಿಂಡಿದರೆ ಕಿವಿನೋವು ಮಾಯವಾಗುತ್ತದೆ.


ಬಾದಾಮಿ ಬೀಜಗಳನ್ನು ಶುದ್ದವಾದ ಹಸುವಿನ ಹಾಲಿನೊಂದಿಗೆ ಅರೆದು ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡರೆ ಆಕರ್ಷಣೆ ಬರುತ್ತದೆ.


ಎಳೆನೀರಿನಲ್ಲಿ ಸಕ್ಕರೆ ಫೈಬರ್ ಮತ್ತು ಪ್ರೋಟಿನ್ಸ್‌, ವಿಟಾಮಿನ್ಸ್ ಮತ್ತು ಮಿನರಲ್ಸ್‌ಗಳು ಲಭ್ಯವಿರುವುದರಿಂದ ಬೇಸಿಗೆ ಸೇರಿದಂತೆ ಎಲ್ಲ ಕಾಲದಲ್ಲಿ ಕುಡಿಯುವುದು ಸೂಕ್ತ.


ನೆಗಡಿಯಿಂದಾಗಿ ಮೂಗುಕಟ್ಟಿ ಉಸಿರಾಟಕ್ಕೆ ತೊಂದರೆ ಅನುಭವಿಸುತ್ತಿದ್ದರೆ ಒಂದು ಹನಿ ನೀಲಗಿರಿ ಎಣ್ಣೆಯನ್ನು ಮೂಗಿನ ಸೊಳ್ಳೆಗೆ ಬಿಡುವುದರ ಮೂಲಕ ಮೂಗುಕಟ್ಟುವುದು ಉಪಶಮನವಾಗುತ್ತದೆ. ಅಥವಾ ಕರ್ಪೂರದ ಹೊಗೆಯನ್ನು ಹಿತವಾಗಿ ಸೇವಿಸಿ.


ಬೆನ್ನು ನೋವಿಗೆ ಬೆಳ್ಳುಳ್ಳಿ ಉತ್ತಮ ಮನೆ ಔಷಧಿ. ಎರಡು ಅಥವಾ ಮೂರು ಕಾಳು ಲವಂಗವನ್ನು ಬೆಳಗ್ಗೆ ಸೇವಿಸಿದರೆ ಉತ್ತಮ. ಬೆಳ್ಳುಳ್ಳಿ ಎಣ್ಣೆಯನ್ನು ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.


ಮೆಂತ್ಯದ ಕಷಾಯದೊಂದಿಗೆ ಒಂದು ಟೀ ಚಮಚ ತಾಜಾ ಶುಂಠಿ ರಸ ಮತ್ತು ಸ್ಪಲ್ಪ ಜೇನನ್ನು ಮಿಶ್ರಮಾಡಿ ಸೇವಿಸಿದರೆ ಅಸ್ತಮಾ ಕಡಿಮೆಯಾಗುವುದು. ಇದು ಅಸ್ತಮಾದ ಚಿಕಿತ್ಸೆಯಲ್ಲಿ ಉತ್ತಮ ಕಫ ಶಮನಕಾರಿಯಾಗಿ ಸಹಾಯ ಮಾಡುತ್ತದೆ.


ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆಗೆ ಎರಡು ಮೂರು ದಿನ ಹಚ್ಚಿ ಸ್ನಾನ ಮಾಡಿದರೆ ತಲೆಯ ಕೂದಲು ಉದುರುವುದು ನಿಂತು ಹೋಗುತ್ತದೆ.


ಚರ್ಮದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಬಟಾಣಿಯ ಹಿಟ್ಟನ್ನು ಬಳಸಬೇಕು. ಆ ಹಿಟ್ಟನ್ನು ಹಾಲಿನಲ್ಲಿ ಕಲೆಸಿ ತಿಕ್ಕುವುದರಿಂದ ಕಲೆಗಳು ಮಾಯವಾಗುವವು.


ಟೊಮೆಟೋ ಹಣ್ಣಿನ ತಿರುಳನ್ನು ಮೊಡವೆಗಳಿಗೆ ಹಚ್ಚಿಕೊಂಡರೆ ಒಂದು ವಾರದಲ್ಲಿ ಮೊಡವೆ ಮಾಯವಾಗುತ್ತವೆ.


ಅರಿಶಿನ ಪುಡಿಯನ್ನು ಶರೀರಕ್ಕೆ ತಿಕ್ಕಿಕೊಂಡು ಸ್ನಾನ ಮಾಡಿದರೆ ಮೈ ಕಾಂತಿಯುಕ್ತ ವಾಗುವುದು ಮತ್ತು ಬೇಡವಾದ ಕೂದಲುಗಳು ಉದುರಿಹೋಗಿ ಮತ್ತೆ ಬೆಳೆಯದಂತಾಗುವುದು.


ಹಸಿ ಈರುಳ್ಳಿಯನ್ನು ಆಗಾಗ ಜಗಿಯುವುದರಿಂದ ಹಲ್ಲುಗಳ ಸವೆತಯು ಕಡಿಮೆಯಾಗುವುದು.


ಒಂದು ವಾರ ಬಿಟ್ರೋಟ್ ರಸವನ್ನು ದಿನಕ್ಕೊಂದು ಬಾರಿಯಂತೆ ಕುಡಿಯುತ್ತಿದ್ದರೆ ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರಬಹುದು.


ಸ್ವ ಮ‌ೂತ್ರ ಔಷಧಿ ಗುಣವನ್ನು ಹೊಂದಿದೆ. ಗಾಯವನ್ನು ಸ್ವ ಮ‌ೂತ್ರದಿಂದ ದಿನಕ್ಕೆ ಎರಡು ಬಾರಿ ತೊಳೆಯುತ್ತಿದ್ದರೆ ಗಾಯ ಗುಣವಾಗುತ್ತದೆ.


ಗಂಟಲು ನೋವಿದ್ದರೆ ಮಾವಿನ ಮರದ ತೊಗಟೆಯ ಕಷಾಯಕ್ಕೆ ಉಪ್ಪು ಹಾಕಿ ಎರಡು ಬಾರಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ವಾಸಿಯಾಗುತ್ತದೆ.


ದಾಳಿಂಬೆ ಹಣ್ಣು ಸೇವಿಸುತ್ತಿದ್ದರೆ ಕೆಮ್ಮು ಸಹಿತವಾದ ಎದೆನೋವು ಗುಣವಾಗುವುದು.


ಬೆಳ್ಳುಳ್ಳಿ ಸಿಪ್ಪೆ ಸಮೇತ ಕೆಂಡದ ಮೇಲೆ ಸುಟ್ಟು, ಬಿಸಿಯಲ್ಲಿ ಸಿಪ್ಪೆ ಬಿಡಿಸಿ ತಿಂದರೆ ಕಫ ಮಾಯವಾಗುತ್ತದೆ.


ಬಾಯಿಯಿಂದ ಸಹಿಸಲಸಾಧ್ಯ ಹೊಲಸು ವಾಸನೆ ಬರುತ್ತಿದ್ದರೆ, ಏಲಕ್ಕಿ ಬೀಜ ಅಥವಾ ಜೀರಿಗೆ ಕಾಳುಗಳನ್ನು ಜಗಿಯುತ್ತಾ ಬಾಯಲ್ಲಿರಿಸಬೇಕು.


ಆರೋಗ್ಯವು ಉತ್ತಮವಾಗಿರಲು ಪ್ರತಿದಿನ ಮುಂಜಾನೆ 7-8 ತುಳಸಿ ಎಲೆಗಳನ್ನು ತಿನ್ನಿರಿ


ಹೊಟ್ಟೆಹುಣ್ಣು ಅಥವಾ ಅಲ್ಸರ್‌ನ ತೊಂದರೆ ಇರುವವರು ಹಸಿದಿರಬಾರದು. ಏನಾದರೂ ತಿಂಡಿಗಳನ್ನು ತಿನ್ನುತ್ತಲೇ ಇರಬೇಕು, ಬರಿ ಹೊಟ್ಟೆಯಲ್ಲಿರದಂತೆ ಎಚ್ಚರಿಕೆ ವಹಿಸಬೇಕು.

ಕಿವಿಯೊಳಗೆ ಸಣ್ಣ ಕ್ರಿಮಿ ಹೊಕ್ಕಾಗ ಉಪ್ಪಿನ ದ್ರಾವಣವನ್ನು ಕಿವಿಯೊಳಗೆ ಬಿಟ್ಟರೆ ಕ್ರಿಮಿಗಳು ಸತ್ತು ಕಡಿತದ ಬಾಧೆ ಇಲ್ಲವಾಗುವುದು.

ಲವಂಗದ ಎಣ್ಣೆಯನ್ನು ಹಲ್ಲಿನ ಸಂದಿಯಲ್ಲಿ ಹಾಕಿದರೆ ಹಲ್ಲು ನೋವು ಶಮನವಾಗುವುದು.

ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುವುದು.

ಕಫ ಬಹಳವಾಗಿದ್ದರೆ, ಬಿಸೀನೀರಿನೊಂದಿಗೆ ಸ್ವಲ್ಪ ಉಪ್ಪನ್ನು ಬೆರಸಿ ಕುಡಿಯುತ್ತಿದ್ದರೆ ಕಫ ಬರುವುದು ನಿಲ್ಲುತ್ತದೆ.

ಮಾವಿನ ತೊಗಟಿಯ ಕಷಾಯಕ್ಕೆ ಉಪ್ಪು ಬೆಲಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುವುದು.

ಎರಡು ಟೀ ಚಮಚ ಶುಂಠಿ ಹುಡಿ ಮತ್ತು ಒಂದು ಟೀ ಚಮಚ ಅರಶಿನ ಹುಡಿಯನ್ನು ನೀರಿನಲ್ಲಿ ಬೆರೆಸಿ ಪೇಸ್ಟ್‌ನಂತೆ ಮಾಡಿ. ಅದನ್ನು ಸ್ವಲ್ಪ ಬಿಸಿಮಾಡಿ ಹತ್ತಿಬಟ್ಟೆಯ ತುಂಡಿನ ಮೇಲೆ ಸವರಿ, ಅನಂತರ ನೋವಿರುವ ಭಾಗಕ್ಕೆ ಅದನ್ನು ಒತ್ತಿದರೆ ನೋವು ಶಮನವಾಗುವುದು

ಒಂದು ಟೀ ಚಮಚ ಲೋಳೆರಸದೊಂದಿಗೆ ಎರಡು ಚಿಟಿಕೆ ಕರಿಮೆಣಸನ್ನು ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಕಾಲಿನ ಸ್ನಾಯು ಸೆಳೆತವಿದ್ದರೆ ಶುಂಠಿಯ ಪೇಸ್ಟ್ ಅನ್ನು ಅರಶಿನದೊಂದಿಗೆ ಬೆರೆಸಿ ಹಚ್ಚಿ.

ಜ್ವರದ ತಾಪವಿದ್ದಾಗ ಮೂರು ಚಮಚ ಕೃಷ್ಣ (ಕಪ್ಪು)ತುಳಸಿ ರಸವನ್ನು ಎರಡು ಚಮಚ ಜೇನಿನೊಂದಿಗೆ ದಿನಕ್ಕೆ ಎರಡು-ಮೂರು ಬಾರಿ ಸೇವಿಸಬೇಕು.


ವಾಯು ಪ್ರಕೃತಿಯವರು ಊಟವಾದ ಮೇಲೆ ಹುರಿದ ಸೋ೦ಪನ್ನು ಒ೦ದು ಚಮಚೆ ಬಾಯಿಗೆ ಹಾಕಿ ಚೆನ್ನಾಗಿ ಅಗಿದು ತಿ೦ದರೆ ಹೊಟ್ಟೆ ನಿರಾಳವಾಗುವದು.


ಒ೦ದು ಕಾಲು ಲೀಟರ್ ನೀರಿಗೆ ಕಟು ಸಿಹಿಯಾಗುವಷ್ಟು ಬೆಲ್ಲ,ಅರ್ಧ ಸ್ಪೂನ್ ಅರಿಶಿಣ,ತಲಾ ಒ೦ದು ಸ್ಪೂನ್ ಕೊತ್ತ೦ಬರಿ,ಅಜವಾನ(ಒ೦ಕಾಳು),ಜೀರಿಗೆ,ಎರಡು ಮೂರು ಕಾಳು ಮೆಣಸು(ಖಾರ ಖಾರ ಇರಬೇಕು ಎನ್ನುವವರು ಜಾಸ್ತಿ ಹಾಕಿಕೊಳ್ಳಬಹುದು),ಏಳು ಎ೦ಟು ಕುಡಿ ಕೃಷ್ಣ ತುಳಸಿ(ಕಪ್ಪು ತುಳಸಿ,ದ೦ಟು ಸ್ವಲ್ಪ ಪರ್ಪಲ್ ಇರೋದು),ಅರ್ಧ ಇ೦ಚು ಶು೦ಠಿ ಇಷ್ಟನ್ನು ಹಾಕಿ ಅದು ಅರ್ಧ ಬತ್ತುವವರೆಗೆ ಕುದಿಸಿ ಸೋಸಿ ಬಿಸಿ ಬಿಸಿ ಇರುವಾಗಲೆ ಅಗಾಗ ಕುಡಿಬೇಕು.ತಾವು ನೀರನ್ನ ಎಷ್ಟು ಪ್ರಮಾಣದಲ್ಲಿ ತೆಗೆದುಕೊ೦ಡಿರುತ್ತೀರೊ ಆ ಪ್ರಮಾಣಕ್ಕೆ ತಕ್ಕ೦ತೆ ಈ ಪರಿಕರಗಳನ್ನ ಹಾಕಬೇಕು.ಒ೦ದು ದಿವಸಕ್ಕೆ ಎಷ್ಟು ಬೇಕೊ ಅಷ್ಟು ಮಾಡಿಕೊ೦ಡು ಆಗಾಗ ಬಿಸಿ ಮಾಡಿ ಕುಡಿಯಬಹುದು.ಈ ಔಷಧ ನೆಗಡಿಯಿ೦ದ ಮೈ ಕೈ ನೊವಿನ ಜ್ವರಕ್ಕೆ ಹಾಗೆ ಕೆಮ್ಮು ಶೀತದ ಬಾಧೆಯಿರುವವರಿಗು, ಸಹಜ ಒಳ ಜ್ವರಕ್ಕೂ ಇದು ದಿವ್ಯೌಷಧ.


೪-೫ ಲಿ೦ಬೆ ಹಣ್ಣುಗಳ ರಸ ತೆಗೆದು ಅದಕ್ಕೆ ಸಿಹಿಯಾಗುವಷ್ಟು ಸಕ್ಕರೆ ಹಾಗು ಒ೦ದು ಚಮಚೆ ಅರಿಶಿಣ ಹಾಕಿ ದಪ್ಪ ಪಾಕ ಬರುವವರೆಗೆ ಕುದಿಸಿ,ಅದನ್ನ ಲೋಲಿ ಪಪ್ ತರ ಊಟವಾದ ಮೇಲೆ ದಿನಕ್ಕೆ ಎರಡು ಮೂರುಸಾರಿ ಚೀಪುತ್ತಿದ್ದರೆ ಗ೦ಟಲಲ್ಲಿ ಕಫ ಕಟ್ಟಿಕೊ೦ಡಿದ್ದರೆ,ಕೆಮ್ಮಿದ್ದರೆ ಕಡಿಮೆಯಾಗುವದು.

ಹಸಿಶುಂಟಿ,ಲವಂಗೆ,ಏಲಕ್ಕಿ,ದನಿಯ,ಮಂತ್ಯ,ಜೀರಿಗೆ,ಮೆಣಸು,ಎಲ್ಲ ಸ್ವಲ್ಪ ಹುರಿದು ಪುಡಿಮಾಡಿ ಮೆಣಸು ಸ್ವಲ್ಪ ಕಡಿಮೆ ಇರ್ಲಿ...ಚಳಿ ಮಳೆ ದಿನಗಳಲ್ಲಿ.ಬೆಳಗ್ಗೆ ಚೂರು ಬೆಲ್ಲದೊಂದಿಗೆ ಕಷಾಯ ಮಾಡಿ ಬಿಸಿ ಬಿಸಿ ಕುಡಿದರೆ....ಶೀತ,ನೆಗಡಿ,ಕೆಮ್ಮುಜ್ವರ,ಇವುಗಳನ್ನು ತಡೆಯಬಹುದು....ಮೆಂತ್ಯ ಕೀಲು,ಹಿಡಿತ,ಮಂಡಿ ನೋವಿಗೆ ಬಹಳ ಒಳ್ಳೆಯದು...