3 ದಿನ ಸೀಬೆ ಎಲೆ ಕಷಾಯ ಕುಡಿದರೆ ಕಾಮಾಲೆ ಮಾಯ
ಸೀಬೆ ಮರದ ಎಲೆ ಕಾಮಾಲೆಗೆ ಅತ್ಯಂತ ಪರಿಣಾಮಕಾರಿ ಹಾಗೂ ಮಿತವ್ಯಯಕಾರಿ ಮದ್ದು ಎಂಬುದನ್ನು ವೈದ್ಯಕೀಯ ರಂಗ ಪತ್ತೆ ಹಚ್ಚಿದೆ.
ಕೃಪಾನಿಧಿ ವೈದ್ಯಕೀಯ ಕಾಲೇಜಿನ ಮೊಹಮ್ಮದ್ ಆಝಾದ್ ಹಾಗೂ ಅವರ ಸಹೋದ್ಯೋಗಿಗಳಾದ ಚಂಚಲ್ ರಾಯ್ ಮತ್ತು ಜಗದೀಶ್ ಕಾಮತ್ ತಮ್ಮ ಶೋಧನೆ ಮೂಲಕ, ಸೀಬೆ ಎಲೆಯ ಔಷಧೀಯ ಗುಣವನ್ನು ಬಹಿರಂಗಪಡಿಸಿದ್ದಾರೆ.
ಸೀಬೆ ಮರದ ಎಲೆಯಿಂದ ತಯಾರಿಸುವ ಔಷಧಿ ಯಕೃತ್ತು ಹಾನಿ ತಡೆಯುತ್ತದೆ. ಇದು ಕಾಮಾಲೆ ರೋಗಕ್ಕೆ ಅತ್ಯಂತ ಕಡಿಮೆ ಖರ್ಚಿನ ಔಷಧಿಯೂ ಆಗಲಿದೆ ಎನ್ನುವ ಮೊಹಮ್ಮದ್ ಆಝಾದ್, ಇಲಿಗಳ ಮೇಲೆ ಪ್ರಯೋಗ ನಡೆಸಿ ಸಕಾರಾತ್ಮಕ ಫಲಿತಾಂಶವನ್ನು ಪಡೆದಿದ್ದಾರೆ.
ಮೂರು ದಿನಗಳ ಕಾಲ ಸೀಬೆ ಎಲೆ ಕಷಾಯ ಕುಡಿದರೆ ಕಾಮಾಲೆ ಮಾಯವಾಗುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆ ಮಂಗಳೂರಿನ ಜನರಲ್ಲಿದೆ. ಈ ನಂಬಿಕೆಯನ್ನು ನಮ್ಮ ಸಂಶೋಧನೆ ಖಾತ್ರಿಪಡಿಸಿದೆ ಅಷ್ಟೆ ಎಂದು ಹೇಳಿದ್ದಾರೆ.

No comments:
Post a Comment