"ಚೆಕ್ಕೆ" (CINNAMON)
1. 1/2 ಚಮಚ ಚೆಕ್ಕೆ ಪುಡಿ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕರಗಿಸುವಲ್ಲಿ ಹೆಚ್ಚು ಸಹಕಾರಿ.
2. ಟೈಪ್ 2 ಡಯಾಬಿಟಿಸ್ ಇರುವ ವ್ಯಕ್ತಿಗಳಿಗೆ ಚಕ್ಕೆ ತುಂಬಾ ಆರೋಗ್ಯಕರ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
3. ಗಾಯ, ಇನ್ನಿತರ ಸೋಂಕುಗಳ ನಿವಾರಣೆಯಲ್ಲೂ ಚೆಕ್ಕೆ ತುಂಬಾ ಉಪಯೋಗಕ್ಕೆ ಬರುತ್ತದೆ.
4. ಕ್ಯಾನ್ಸರ್ ಹರಡಲು ಕಾರಣವಾಗುವ ಲ್ಯುಕೆಮಿಯ ಮತ್ತು ಲಿಂಫೋಮ ಎಂಬ ಜೀವಕಣಗಳು ದ್ವಿಗುಣಗೊಳ್ಳುವುದನ್ನು ಚಕ್ಕೆಯಲ್ಲಿನ ಅಂಶ ಕಡಿಮೆ ಮಾಡುತ್ತದೆ.
5. ಚೆಕ್ಕೆಯಲ್ಲಿ ಮ್ಯಾಂಗನೀಸ್, ಫೈಬರ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಹೆಚ್ಚಿರುವುದರಿಂದ ರಕ್ತ ಸರಾಗವಾಗಿರುವಂತೆ ನೋಡಿಕೊಳ್ಳುತ್ತದೆ.
6. ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಜೇನಿನೊಂದಿಗೆ 1 ಚಮಚ ಚೆಕ್ಕೆ ಪುಡಿ ಬೆರೆಸಿ ಕುಡಿದರೆ ಸಂಧಿವಾತ ಕಡಿಮೆ ಮಾಡುವುದಲ್ಲದೆ ಜ್ಞಾಪಕ ಶಕ್ತಿಯನ್ನೂ ವೃದ್ಧಿಸುತ್ತದೆ.
7. ಇದು ವಿವಿಧ ರೀತಿಯ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಆದ್ದರಿಂದ ಆಹಾರ ಕೆಡದಂತಿರಲು ಚಕ್ಕೆಯನ್ನು ಬಳಸಲಾಗುತ್ತದೆ.
No comments:
Post a Comment