ಕರಿಬೇವಿನ ಎಲೆಯನ್ನು ಅಡುಗೆಯಲ್ಲಿ ಬಳಸಿದರೆ ಅಡುಗೆ ಘಮ್ಮೆನ್ನುವುದು. ಕೂದಲಿನ ಆರೈಕೆಯಲ್ಲಿ ಕೂಡ ಕರಿಬೇವಿನ ಎಲೆಯನ್ನು ಬಳಸಲಾಗುವದು. ರುಚಿ, ಸೌಂದರ್ಯ, ಆರೋಗ್ಯಕ್ಕೆ ಹೀಗೆ ಅನೇಕ ಗುಣಗಳನ್ನು ಈ ಕರಿಬೇವು ಹೊಂದಿದೆ. ಬನ್ನಿ ಕರಿಬೇವಿನ ನಾನಾ ರೀತಿಯ ಉಪಕಾರಗಳ ಬಗ್ಗೆ ತಿಳಿಯೋಣ:
1. ಹೊಟ್ಟೆ ಸಮಸ್ಯೆ ಮತ್ತು ಅಜೀರ್ಣ ನಿವಾರಿಸಲು ಕರಿಬೇವು ಒಳ್ಳೆಯದು. ಕರಿಬೇವಿನ ಎಲೆಯಿಂದ ರಸ ಹಿಂಡಿ ಸ್ವಲ್ಪ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ತಿಂದರೆ ಹೊಟ್ಟೆ ಮತ್ತು ಅಜೀರ್ಣ ಸಮಸ್ಯೆ ನಿವಾರಣೆಯಾಗುವುದು.
2. ದಿನವೂ ಕರಿಬೇವಿನ ಎಲೆ ತಿಂದರೆ ದೇಹದ ತೂಕ ಕಡಿಮೆಯಾಗುವುದು.
3. ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.
4. ತಲೆಗೆ ಹಚ್ಚುವ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ತಲೆಗೆ ಹಚ್ಚುವುದು ಒಳ್ಳೆಯದು.
5. ಜ್ವರದಿಂದ ಬಳಲುವಾಗ ಕರಿಬೇವಿನ ಕಷಾಯ ಸೇವಿಸಿದರೆ ದಾಹ, ಉಷ್ಣತೆ ಕಡಿಮೆಯಾಗುತ್ತದೆ.
6.ಬೊಜ್ಜು ಕರಗಿಸಬೇಕೆನ್ನುವವರಿಗೆ ಸುಲಭೋಪಾಯ- ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕರಿಬೇವಿನ ಎಲೆ(10ರಿಂದ 20) ತಿನ್ನಬೇಕು.
7. ಮಧುಮೇಹದಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ 10 ಎಲೆ ತಿನ್ನಬೇಕು.
8. ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನಬೇಕು.
9. ಆಮ್ಲಪಿತ್ತದಿಂದ ('ಎಸಿಡಿಟಿ"ಯಿಂದ) ಬಳಲುವವರು ಕರಿಬೇವಿನ ಮರದ ತೊಗಟೆಯ ಒಂದು ಚಮಚೆ ಪುಡಿಯನ್ನು ನೀರಲ್ಲಿ ಬೆರೆಸಿ ಸೇವಿಸಬೇಕು.
10. ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆಬರುವುದನ್ನು ತಡೆಯಬಹುದು.(ರಸ ತಯಾರಿಸುವಾಗ ಎಚ್ಚರ ಅವಶ್ಯ, ಸ್ವಚ್ಛತೆ ಬಹುಮುಖ್ಯ.)
11. ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ. * ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು.
12. ಕರಿಬೇವಿನ ಎಣ್ಣೆ ಬಳಸಿದರೆ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.
No comments:
Post a Comment