Friday, August 23, 2013

Health benefits of "Touch me not"ಮುಟ್ಟಿದರೆ ಮುನಿ "(ನಾಚಿಕೆ ಮುಳ್ಳು)



ಮುಟ್ಟಿದರೆ ಮುನಿ "(ನಾಚಿಕೆ ಮುಳ್ಳು)

ಇದು ಹೆಚ್ಚಾಗಿ ಪಾಳು ಜಾಗದಲ್ಲಿ, ಹೊಲಗದ್ದೆಗಳ ಬದುವಿನಲ್ಲಿ ಮತ್ತು ತೋಟದ ನೀರಾವರಿ ಭೂಮಿಯಲ್ಲಿ ಹುಲುಸಾಗಿ ಬಳ್ಳಿಯಂತೆ ಬೆಳೆಯುತ್ತದೆ. ವಿಶಾಲವಾಗಿ ಹಬ್ಬುವ, ಗಟ್ಟಿಯಾಗಿ ಬೇರು ಬಿಡುವ ಗುಣದ ನಾಚಿಕೆ ಮುಳ್ಳು ಗಿಡವನ್ನು  ಮುಟ್ಟಿದೊಡನೆ ಇದರ ಎಲೆಗಳು ಮುಚ್ಚಿಕೊಳ್ಳುವುದರಿಂದ ಸುಲಭವಾಗಿ ಗುರುತಿಸಬಹುದು.

ಉಪಯೋಗ:
ಮುಟ್ಟಿದರೆ ಮುನಿ ಸಸ್ಯದ ಎಲ್ಲಾ ಭಾಗವೂ ಮನೆ ಔಷಧಿ ತಯಾರಿಕೆಗೆ ಬಹಳ ಉಪಯುಕ್ತವಾದುದು. ಗಂಟಲು ಬಾವು ಮತ್ತು ಇತರೆ ಬಾವುಗಳಿಂದ ತೊಂದರೆ ಅನುಭವಿಸುತ್ತಿರುವವರು ಇದರ ಕಾಂಡ, ಎಲೆಯನ್ನು ಚೆನ್ನಾಗಿ ಅರೆದು ಬಾವು ಆಗಿರುವ ಜಾಗದಲ್ಲಿ ಪಟ್ಟು ಹಾಕಬೇಕು.

ಇದರಿಂದ ನೋವು ಮತ್ತು ಬಾವಿನಿಂದಾದ ಊತದ ಉಪಶಮನ ಸಾಧ್ಯವಾಗುತ್ತದೆ. ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಕುಡಿಸುವುದು ಮಂಡಿನೋವು, ಮಂಡಿ ಊತ, ಮಲಬದ್ಧತೆ, ಮೂತ್ರಪಿಂಡ ಹಾಗೂ ಲಿವರ್‌ನ ತೊಂದರೆಗೆ ಉತ್ತಮ ಔಷಧ.

ಸಾಮಾನ್ಯ ಶೀತ ಆದರೆ ಇದು ಒಳ್ಳೆಯ ಮದ್ದು. ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೆ ಇದರ ಎಲೆಯನ್ನು ಜಜ್ಜಿ ರಸ ಹಚ್ಚಿದರೆ ರಕ್ತ ಸೋರುವುದು ನಿಲ್ಲುತ್ತದೆ. ಗಾಯ ಬೇಗನೆ ವಾಸಿಯಾಗುತ್ತದೆ. ಮೂಲವ್ಯಾಧಿ, ಕಾಲರಾ ಮತ್ತು ಸಾಮಾನ್ಯ ವಾಂತಿಭೇದಿಗೂ ಉತ್ತಮ ಔಷಧಿ. ಚರ್ಮ ವ್ಯಾಧಿಯನ್ನೂ ಕಡಿಮೆ ಮಾಡುತ್ತದೆ. ಕೆಲವೊಂದು ಸ್ತ್ರೀ ರೋಗಕ್ಕೂ ಉತ್ತಮ ಮದ್ದು. ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. 

ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು.
ಬಾಣಂತಿಯರು ನಾಚಿಕೆ ಮುಳ್ಳಿನ ಸೊಪ್ಪಿನ ರಸವನ್ನು ಕೈಗೆ ಲೇಪಿಸಿಕೊಂಡು ಪ್ರತಿನಿತ್ಯ ಹೊಟ್ಟೆಯ ಮೇಲೆ ಲೇಪಿಸುತ್ತಿದ್ದರೆ, ದಪ್ಪಗಿರುವ ಹೊಟ್ಟೆ ಕರಗುತ್ತಾ ಬರುತ್ತದೆ.

No comments:

Post a Comment