ಬೇವು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂದು ತಿಳಿದಿರುವ ವಿಷಯ. ಸಣ್ಣ ಪುಟ್ಟ ಕಾಯಿಲೆಗಳಿಗೆ ವೈದ್ಯರನ್ನು ಸಂಪರ್ಕಿಸುವ ಮೊದಲು ಮನೆ ಮದ್ದಿನಿಂದಲೇ ಕಾಯಿಲೆಗಳನ್ನು ನಿವಾರಿಸಬಹುದು. ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಜಂತುಹುಳು ಸಮಸ್ಯೆ, ಪಿತ್ತ ಮುಂತಾದ ಸಮಸ್ಯೆಗಳ ಕಹಿಬೇವನ್ನು ಈ ಕೆಳಗಿನ ವಿಧಾನದಲ್ಲಿ ಬಳಸಿ.
1. ಬೀವಿನ ಸೊಪ್ಪು, ಕೊತ್ತಂಬರಿ, ಶುಂಠಿ, ಮೆಣಸಿನ ಕಾಯಿ, ಉಪ್ಪು ಮತ್ತು ಹುಣಸೇ ಹಣ್ಣನ್ನು ಬೆರೆಸಿ, ಅರೆದು ವಾರಕ್ಕೊಮ್ಮೆ ಅದನ್ನು ಬಿಸಿ ಅನ್ನಕ್ಕೆ ಕಲೆಸಿ ತಿನ್ನುತ್ತಾ ಬಂದರೆ ಹೊಟ್ಟೆಯಲ್ಲಿರುವ ಜಂತು ಹುಳು ನಾಶವಾಗುತ್ತದೆ.
2. ಬೇವಿನ ಸೊಪ್ಪು ಮತ್ತು ಈರುಳ್ಳಿಯನ್ನು ಅರೆದು ಅದರಿಂದ ಚಿಕ್ಕ ಉಂಡೆಗಳನ್ನು ಮಾಡಿ ಒಣಗಿಸಿ ಅದನ್ನು ತಿನ್ನುತ್ತಾ ಬಂದರೆ ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಕಾಣಿಸಿಕೊಳ್ಳುವುದಿಲ್ಲ.
3. ಬೇವಿನ ಹಣ್ಣನ್ನು ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚಾಗುವುದು, ಅಲ್ಲದೆ ದೇಹದಲ್ಲಿರುವ ಬೇಡದ ಕಷ್ಮಲಗಳನ್ನು ತೆಗೆದು ಹಾಕಲು ಸಹಕಾರಿಯಾಗಿದೆ.
4. ಪ್ರತಿದಿನ ಸ್ವಲ್ಪ ಬೇವಿನ ಸೊಪ್ಪು ತಿಂದು ನೀರು ಕುಡಿಯುತ್ತಾ ಬಂದರೆ ಪಿತ್ತ ಬರುವುದಿಲ್ಲ.
5. ಮೊಡವೆ ಸಮಸ್ಯೆ ಇರುವವರು ದಿನವೂ ಒಂದು ಚಮಚದಷ್ಟು ಬೇವಿನ ರಸ ಸೇವಿಸುವುದರಿಂದ ಮೊಡವೆ ಮತ್ತು ಕಲೆಗಳು ನಿವಾರಣೆಯಾಗಿ ತ್ವಚೆ ಕಾಂತಿ ಹೆಚ್ಚುವುದು.
6.ಕಹಿ ಬೇವಿನ ಏಳೆಂಟು ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತುಸು ಉಗುರು ಬೆಚ್ಚಗಿರುವಾಗಲೇ ಮುಖ ತೊಳೆದುಕೊಳ್ಳುತ್ತಿದ್ದರೆ ಸಿಡುಬಿನ ಕಲೆಗಳು ಮಾಯವಾಗುತ್ತವೆ.
7.ಸಣ್ಣ ಮಕ್ಕಳಿಗೆ ಹೊಟ್ಟೆಯಲ್ಲಿ ಹುಳು ತುಂಬಿ ವಾಂತಿಯಾಗುತ್ತಿದ್ದರೆ ಕಹಿಬೇವನ್ನು ಜೇನಿನೊಂದಿಗೆ ಅರೆದು 1/4 ಚಮಚ ಕುಡಿಸಿದರೆ ವಾಂತಿ ನಿಲ್ಲುತ್ತದೆ.
8.ಬೇವು ತಿನ್ನುವುದರಿಂದ ತ್ವಚೆ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಬಹುದು. ಹಬ್ಬದ ಸಮಯದಲ್ಲಿ ಬೇವಿನ ಎಲೆ ಹಾಕಿದ ನೀರಿನಿಂದ ಸ್ನಾನ ಮಾಡಿದರೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಇದರಿಂದ ತ್ವಚೆ ಸಂರಕ್ಷಣೆಗೆ ಸಹಕಾರಿಯಾಗಿದೆ.
9.ಬೇವು ತಿಂದರೆ ಸೊಂಟ ನೋವು, ಕೈಕಾಲುಗಳ ಗಂಟು ನೋವು, ಸ್ನಾಯುಗಳ ಸೆಳೆತ ಮುಂತಾದ ಸಮಸ್ಯೆಯನ್ನು ನಿವಾರಿಸಬಹುದು.
10.ಹೊಟ್ಟೆಯಲ್ಲಿರುವ ಜಂತು ಹುಳಗಳನ್ನು ಹೋಗಲಾಡಿಸಲು, ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಲು, ಮಲಬದ್ಧತೆ ಸಮಸ್ಯೆ ನಿವಾರಿಸಲು, ರಕ್ತದ ಶುದ್ಧೀಕರಣಕ್ಕೆ, ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ತುಂಬಾ ಪರಿಣಾಮಕಾರಿಯಾದ ಔಷಧಿಯಾಗಿದೆ.
No comments:
Post a Comment