Saturday, February 26, 2011

Healt benifits of menthya (ಮೆಂತ್ಯೆ)


ಮೆಂತ್ಯೆ ಇದರಲ್ಲಿನ ಪೋಷಕಾಂಶ, ವಿಟಮಿನ್ ಸಿ, ಪೊಟಾಶಿಯಂ, ಲೈಸಿನ್ ಇನ್ನಿತರ ಅಂಶಗಳು ಇದರ ಗುಣಕ್ಕೆ ಸಾಕ್ಷಿ. ಇದರಿಂದಾಗುವ ಉಪಯೋಗ ತಿಳಿಯಲು ಹೋದರೆ ಅಕ್ಷಯ ಪಾತ್ರೆ.ಇದನ್ನು ದಿನನಿತ್ಯ ಬಳಸಿದರೆ ಉತ್ತಮ ಆರೋಗ್ಯ ಗ್ಯಾರಂಟಿ.

ಇದರ ಇನ್ನಷ್ಟು ಉಪಯೋಗ

1. ಬೊಜ್ಜಿನ ಸಮತೋಲನ: ಮೆಂತ್ಯೆಯನ್ನು ಯಾವುದಾದರೂ ರೂಪದಲ್ಲಿ ನಿತ್ಯ ಸೇವಿಸುತ್ತ ಬಂದರೆ ಅದು ದೇಹದ ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ ಅಷ್ಟೇ ಅಲ್ಲ, ಇದರಿಂದ ಹೃದಯ ಸ್ಥಂಭನವಾಗುವ ಅವಕಾಶಗಳನ್ನು ಕಡಿಮೆ ಗೊಳಿಸುತ್ತದೆ. ಇದೀಗ ಮಾತ್ರೆ ರೂಪದಲ್ಲಿ ಕೂಡ ಮೆಂತ್ಯೆ ಲಭ್ಯವಿದೆ.
...

2. ಸಕ್ಕರೆ ಅಂಶದ ನಿಯಂತ್ರಣ: ಮೆಂತ್ಯೆ ಕಾಳನ್ನು ಮಧುಮೇಹಿಗಳಿಗೆ ಸೇವಿಸಲು ಸಲಹೆ ನೀಡುವುದನ್ನು ಕೇಳಿದ್ದೇವೆ. ಏಕೆಂದರೆ ಮೆಂತ್ಯೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಗೊಳಿಸಲು ಹೆಚ್ಚು ಸಹಾಯ ಮಾಡುತ್ತದೆ. ದಿನವೂ 6- 7 ಮೆಂತ್ಯೆ ಕಾಳನ್ನು ಅಥವಾ ಮೆಂತ್ಯೆ ಸೊಪ್ಪನ್ನು ಸೇವಿಸುವುದು ಉತ್ತಮ.
3.ಚರ್ಮ ರೋಗ ನಿಗ್ರಹ: ಮೆಂತ್ಯೆ ಕಾಳನ್ನು ಸೇವಿಸುವುದರಿಂದ ತ್ವಚೆ ಆರೋಗ್ಯವಾಗಿರುವುದಲ್ಲದೆ, ಗುಳ್ಳೆ, ತುರಿಕೆ, ಮೊಡವೆ ಇಂತಹ ಅನೇಕ ಚರ್ಮ ಸಂಬಂಧಿ ರೋಗಗಳಿಗೆ ಮನೆ ಮದ್ದಾಗಿದೆ. ಅದು ಕೂದಲಿನ ಸತ್ವ ಕಾಪಾಡಿಕೊಳ್ಳಲೂ ಉಪಯೋಗಿಸಲಾಗುತ್ತದೆ.

4.ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ: ಜೀರ್ಣಕ್ರಿಯೆಯನ್ನು ಸಮತೋಲನವಾಗಿ ನಡೆಸಿಕೊಂಡು ಹೋಗುವಲ್ಲಿ ಮೆಂತ್ಯೆಯದು ಬಹು ಮುಖ್ಯ ಪಾತ್ರ. ಇದು ಪಚನ ಕ್ರಿಯೆಯನ್ನು ಸರಿದೂಗಿಸಿಕೊಂಡು ಹೋಗುತ್ತದೆ. ಅಲ್ಸರ್ ಮತ್ತು ಆಸಡಿಟಿ ಯಾಗಿದ್ದರೆ ಮೆಂತ್ಯೆಯನ್ನು ಮಜ್ಜಿಗೆಗೆ ಬೆರೆಸಿ ಕುಡಿದರೆ ಅದು ನಿಯಂತ್ರಣಕ್ಕೆ ಬರುತ್ತದೆ. ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳನ್ನು ಸೇವಿಸಿದರೆ ಹೊಟ್ಟೆಯಲ್ಲಿನ ಕೀಟಾಣುಗಳನ್ನು ಮೆಂತ್ಯೆ ಕೊಂದು ಹಾಕುತ್ತದೆ.

5. ಜ್ವರಕ್ಕೆ ಮೆಂತ್ಯೆ ಮದ್ದು: ಜ್ವರವಿದ್ದರೆ ಮತ್ತು ಸುಸ್ತಿನಿಂದ ಬಳಲುತ್ತಿದ್ದಾಗ ಮೆಂತ್ಯೆ ರಸವನ್ನು ಸೇವನೆ ಮಾಡಿದರೆ ಕಡಿಮೆಯಾಗುತ್ತದೆ.

6. ಮೆದುಳನ್ನು ಚುರುಕುಗೊಳಿಸುತ್ತದೆ: ಮೆಂತ್ಯೆ ಸೊಪ್ಪಿನಿಂದ ಟೀ ಮಾಡಿ ಕುಡಿದರೆ ಮೆದುಳನ್ನು ಚುರುಕುಗೊಳಿಸಿ ಚೈತನ್ಯ ತುಂಬುತ್ತದೆ.
 
7.ಒಂದು ಟೀ ಚಮಚ ಮೆಂತ್ಯವನ್ನು ಗಟ್ಟಿ ಮೊಸರಿನಲ್ಲಿ ಬೆರೆಸಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ಅಮಶಂಕೆ ಮತ್ತು ರಕ್ತಭೇದಿ ಕಡಿಮೆಯಾಗುವುದು.

8.ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಲ್ಯದೊ೦ದಿಗೆ ತಿನ್ನುವುದರಿ೦ದ ಅ೦ಗಾ೦ಗಗಳ ನೋವು ನಿವಾರಣೆಯಾಗುವುದು.
 

No comments:

Post a Comment