Wednesday, March 09, 2011

ಬೆಲ್ಲ (JAGGARI)

ಹೆಚ್ಚಾಗಿ ಪಾನಕಗಳಿಗೆ ಸಕ್ಕರೆಯನ್ನು ಬಳಸಿ ಮಾಡುತ್ತಾರೆ, ಆದರೆ ಸಕ್ಕರೆಗಿಂತ ಬೆಲ್ಲ ಎಲ್ಲಾ ರೀತಿಯಲ್ಲೂ ಸೂಕ್ತ . ಸಕ್ಕರೆಯು ನಾಲಿಗೆಯನ್ನು ಸಿಹಿ ಮಾಡುತ್ತದೆ, ಅದು ದೇಹದ ತೂಕ ಹೆಚ್ಚಿಸುವ ಕೆಲಸದಲ್ಲಿ ಸದಾ ಮುಂದು. ಆದರೆ ಬೆಲ್ಲ ದೇಹದ ಆರೋಗ್ಯ ಕಾಪಾಡುವ ಸಿಹಿ. ಬೇಸಿಗೆಗೆ ಮಾಡುವ ಪಾನಕಗಳಲ್ಲಿ ಸಕ್ಕರೆ ಬದಲು ಬೆಲ್ಲ ಉಪಯೋಗಿಸಿ. ಕಬ್ಬಿನ ಹಾಳು ಕುಡಿದ ಭಾವ ಉಂಟಾಗುತ್ತದೆ ಮನಕ್ಕೆ, ನಾಲಿಗೆಗೆ ರುಚಿ , ದೇಹಕ್ಕೆ ಆರಾಮ .ಬೆಲ್ಲದಿಂದ ದೇಹಕ್ಕೆ ಮೆಗ್ನಿಶಿಯಂ ಸಿಗುತ್ತದೆ ಅದು ನರಗಳ ಆರೋಗ್ಯ ಕಾಪಾಡುತ್ತದೆ, ನಮ್ಮ ಸ್ನಾಯುಗಳನ್ನು ಆರಾಮ ಗೊಳಿಸುತ್ತದೆ.ಅಷ್ಟೆ ಅಲ್ಲದೆ ಇದರಲ್ಲಿರುವ ಪೊಟಾಷಿಯಂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಕಬ್ಬಿಣದ ಅಂಶ ಹೇರಳವಾಗಿ ಇರುವುದರಿಂದ ರಕ್ತ್ ಹೀನತೆಯಿಂದ ದೂರಾಗ ಬಹುದು.ಹೀಗೆ ಪ್ರಯೋಜನಗಳ ಪಟ್ಟಿ ತುಂಬಾ ದೊಡ್ಡದು. ಬೆಲ್ಲ ತಿನ್ನಿ ಆರೋಗ್ಯವಂತರಾಗಿ.


  • ಎಲ್ಲಾ ವಯಸ್ಸಿನವರೂ ಇದನ್ನು ತಿನ್ನಬಹುದು.ಮುಖ್ಯವಾಗಿ ಮಕ್ಕಳಿಗೆ,ಪ್ರಾಪ್ತವಯಸ್ಸಿನವರಿಗೆ,ಗರ್ಭಿಣಿಯರಿಗೆ, ಅಥ್ಲೀಟಿಕ್‌ಗಳಿಗೆ ಒಳ್ಳೆಯದು. ಡಯಾಬಿಟಿಸ್ ಇರುವವರು ತಿನ್ನುವ ಹಾಗಿಲ್ಲ. ಸ್ಥೂಲಕಾಯರೂ ಇದನ್ನು ಬಳಸುವ ಹಾಗಿಲ್ಲ ಎಚ್ಚರ.
  • ಬೆಲ್ಲದಲ್ಲಿ ಸಮರ್ಥವಾದ ಕಬ್ಬಿಣಾಂಶ(ಐರನ್) ಇರುತ್ತದೆ. ಬಿಸಿಲು ಬಣ್ಣ ಇರುವ ಬೆಲ್ಲದಲ್ಲಿ ಇನ್ನೂ ಹೆಚ್ಚು ಕಬ್ಬಿಣಾಂಶ ಲಭ್ಯವಾಗುತ್ತದೆ. ಕ್ರಮ ತಪ್ಪದೆ ಇದನ್ನು ತೆಗೆದುಕೊಳ್ಳುತ್ತಿದ್ದರೆ ಐರನ್ ಕೊರತೆ ಎಂಬ ಸಮಸ್ಯೆ ಇರುವುದೇ ಇಲ್ಲ.
  • ಮೆಗ್ನೆಷಿಯಂ ಮಾಂಸಖಂಡಗಳ ನೋವನ್ನು, ಉಳುಕನ್ನು, ಹಿಡಿದಂತಾಗುವುದನ್ನು ಕಡಿಮೆಗೊಳಿಸುತ್ತದೆ. ಮಂಡಿ, ಮೊಣಕೈಗಳನ್ನು ಸದೃಢ ಮಾಡುತ್ತದೆ.
  • ಬೆಲ್ಲದಲ್ಲಿ ಇರುವ ಜಿಂಕ್ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ಸದೃಢಪಡಿಸುತ್ತದೆ. ಇದರಲ್ಲಿರುವ ಆ್ಯಂಟಿಬಾಯಟಿಕ್ ಗುಣವು ದೇಹವನ್ನು ರೋಗ ನಿರೋಧಕವಾಗಿ ಗಟ್ಟಿಯಾಗಿ ಮಾಡುತ್ತದೆ.
  • ಬೆಲ್ಲದಲ್ಲಿರುವ ಕ್ಯಾಲ್ಸಿಯ ರಕ್ತದೊತ್ತಡದ ಮೇಲೆ ಸದಾ ಒಂದು ಕಣ್ಣಿರಿಸುತ್ತದೆ.
  • ಬೆಲ್ಲವು ಜೀರ್ಣಕಾರಿ ಎಂಜೈಮ್‌ಗಳನ್ನು ಚುರುಕಾಗಿರಿಸಿ, ಶೀಘ್ರವಾಗಿ ಆಹಾರವನ್ನು ಜೀರ್ಣ ಮಾಡಲು ಸಹಕರಿಸುತ್ತದೆ. ಈ ಕಾರಣದಿಂದಾಗಿ ಹೊಟ್ಟೆ ಉಬ್ಬರ, ಅಸಿಡಿಟಿ, ತೇಗು ಇಂಥವುಗಳನ್ನು ತಡೆಗಟ್ಟುತ್ತದೆ. ಆದ್ದರಿಂದಲೇ ಕೆಲವರು ಊಟವಾದ ತಕ್ಷಣವೇ ಒಂದು ಸಣ್ಣ ಹೆಂಟೆ ಬೆಲ್ಲವನ್ನು ಬಾಯಲ್ಲಿ ಹಾಕಿ ಚೀಪುತ್ತಾರೆ.
  • ಗಂಟಲಿನಲ್ಲಿ ಕಟ್ಟಿರುವ ಕಫವನ್ನು ಬೆಲ್ಲ ಕರಗಿಸಿ ತೊಲಗಿಸುತ್ತದೆ. ನೆಗಡಿ, ಕೆಮ್ಮಿನಿಂದ ಉಪಶಮನ ನೀಡುತ್ತದೆ.
  • ರಕ್ತವನ್ನು ಪುಷ್ಟಿ ಮಾಡಿ, ರಕ್ತವನ್ನು ವೃದ್ಧಿಯಾಗುವಂತೆ ಮಾಡುವ ಗುಣ ಬೆಲ್ಲಕ್ಕಿದೆ. ಇದರ ಬಳಕೆ ಮಾಡುವುದರಿಂದ ಶಕ್ತಿವಂತರಾಗಿ ದೃಢಕಾಯರಾಗಿ ಬೆಳೆಯುವಂತೆ ಮಾಡುತ್ತದೆ. ನಿಶ್ಯಕ್ತಿಯಾದಾಗ ಸ್ವಲ್ಪ ಬೆಲ್ಲವನ್ನು ಸೇವಿಸಿದರೆ ಕೂಡಲೇ ಶಕ್ತಿ ಬರುತ್ತದೆ.
  • ಇದು ಬಂದಾಗ ಸಣ್ಣ ಬೆಲ್ಲದ ಹೆಂಟೆಯನ್ನು ಬಾಯಲ್ಲಿ ಹಾಕಿ ಚೀಪಿ ರಸವನ್ನು ಕುಡಿಯುತ್ತಾ ಇದ್ದರೆ, ಕೂಡಲೇ ಬಿಕ್ಕಳಿಕೆ ನಿಂತು ಹೋಗುತ್ತದೆ.
  • ಕೆಮ್ಮು, ಅಸ್ತಮಾ, ಅಜೀರ್ಣ, ತಲೆನೋವು ನಿವಾರಣೆಗೆ ಬೆಲ್ಲ ತಿನ್ನುವುದು ಒಳ್ಳೆಯದು.
  • ಬೆಲ್ಲವನ್ನು ಔಷಧೀಯ ಗುಣವಿರುವ ಸಕ್ಕರೆ ಎಂದು ಕರೆಯಲಾಗುತ್ತದೆ. ಬೆಲ್ಲದಲ್ಲಿ ಸತು ಮತ್ತು ವಿಟಮಿನ್ ಗಳ ಅಂಶ ಅಧಿಕವಾಗಿದೆ.
  • ಬೆಲ್ಲದಲ್ಲಿ ಕಬ್ಬಿಣದಂಶ ಅಧಿಕವಾಗಿದ್ದು ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.



1 comment: