Monday, January 09, 2012

HEALTH BENEFITS OF WATER MELON ಕಲ್ಲಂಗಡಿ ಹಣ್ಣು:



ಕಲ್ಲಂಗಡಿ ಹಣ್ಣು:

ಕಲ್ಲಂಗಡಿ ಹಣ್ಣಿನ ರಸ ದೇಹಕ್ಕೆ ತಂಪು ನೀಡುತ್ತದೆ . ಬಾಯಾರಿಕೆಯನ್ನು ಹೋಗಲಾಡಿಸುತ್ತದೆ, ಕಾಮಾಲೆಯಲ್ಲೂ ಲಾಭಕಾರಿ  ಆಗಿದೆ. ಕಣ್ಣುರಿ, ಕಜ್ಜಿ, ತುರಿಕೆಗಳ ಶಮನಕ್ಕೂ ಇದನ್ನು ಉಪಯೋಗಿಸಬುದು. ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನೂ ಕೂಡಾ ಔಷದಿಯಾಗಿ ಬಳಸುತ್ತಾರೆ. ಮಲಬದ್ಧತೆಯಲ್ಲಿ ಇದರ ಸಿಪ್ಪೆ ಉಪಯೋಗಕ್ಕೆ ಬರುತ್ತದೆ. ಕಲ್ಲಂಗಡಿ ಹಣ್ಣಿನ ಬಳ್ಳಿಯ ಎಲೆಗಳು ಕಹಿಯಾಗಿದ್ದು ರಕ್ತವರ್ಧಕವಾಗಿರುತ್ತವೆ.ಕಾಲಿನ ಊತಕ್ಕೆ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬಳಸುತ್ತಾರೆ. ಇದು ಕ್ಯಾಲ್ಸಿಯಂ, ಮ್ಯಾಂಗನೀಸ್, ಸಸಾರಜನಕ, ಕಬ್ಬಿಣ,ಮೇದಸ್ಸು ಹಾಗೂ ವಿಟಮಿನ್ ‘ಸಿ’ ಮೊದಲಾದ ಜೀವಸತ್ವಗಳಿಂದ ಸಮೃದ್ಧವಾಗಿದೆ.
*ಆಹಾರ ಸೇವಿಸಿದ ನಂತರ ಹೊಟ್ಟೆ ಉರಿಯುವುದು ಮತ್ತು ಹಳದಿಯಾಗಿ ವಾಂತಿ ಆಗುತ್ತಿದ್ದರೆ ಬೆಳಗ್ಗೆ ಬರಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದಿಷ್ಟು ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು.

*ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಶರೀರದಲ್ಲಿಯ ಅತಿ ಉಷ್ಣ ಸಮಸ್ಥಿತಿಗೆ ಬರುತ್ತದೆ. ಅಂಗೈಗಳಲ್ಲಿ, ಅಂಗಾಲುಗಳಲ್ಲಿ  ಉರಿ ಮತ್ತು ಕಣ್ಣುರಿ  ಇದ್ದವರು ದಿನಾ ೨ ಲೋಟ ಕಲ್ಲಂಗಡಿಯ ರಸವನ್ನು ೧೦-೧೫ ದಿನಗಳವರೆಗೆ ಸೇವಿಸಬೇಕು.

*ಕಾಮಾಲೆ ರೋಗದಿಂದ ಪೀಡಿತರಾದವರು ನಿಯಮಿತವಾಗಿ ಕಲ್ಲಂಗಡಿ ರಸವನ್ನು ೧೦-೧೫ ದಿನ ಸೇವಿಸುವುದರಿಂದ ಗುಣವಾಗುತ್ತದೆ. ಕಲ್ಲಂಗಡಿಹಣ್ಣಿನ ರಸ  ಮತ್ತು  ಮಜ್ಜಿಗೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕುಡಿದರೆ ಉರಿಮೂತ್ರ ಕಡಿಮೆ ಆಗುತ್ತದೆ.
*ಮಲಬದ್ದತೆಯಿರುವವರು ರಾತ್ರಿ ಊಟದ ನಂತರ ಕಲ್ಲಂಗಡಿಯ ರಸವನ್ನು ಸೇವಿಸುವುದರಿಂದ ಮಲವಿಸರ್ಜನೆ ಸುಲಭವಾಗಿ ಆಗುವುದು.
*ಯಾವುದಾದರೂ ಭ್ರಮೆಗೆ ಒಳಗಾಗಿ ಹುಚ್ಚನಂತೆ (ಹುಚ್ಚಿಯಂತೆ) ವರ್ತಿಸುತ್ತಿದ್ದರೆ ಒಂದು ಲೋಟ ಕಲ್ಲಂಗಡಿಯ ರಸ, ಒಂದು ಲೋಟ ಹಾಲು, ೩೦ ಗ್ರಾಂ ಕಲ್ಲುಸಕ್ಕರೆ ಎಲ್ಲವನ್ನೂ ಬೆರೆಸಿ ಬಿಳಿ ಬಾಟಲ್ ಒಂದರಲ್ಲಿ ಹಾಕಿ ರಾತ್ರಿ ಮುಕ್ತ ವಾತಾವರಣದಲ್ಲಿ ಒಂದು ಗೂಟಕ್ಕೆ ನೇತುಹಾಕಿ. ಬೆಳಗ್ಗೆ  ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ರೋಗಿಗೆ ಕುಡಿಸಬೇಕು. ಕೆಲವು ದಿನ ಹೀಗೆ ಮಾಡುವುದರಿಂದ ಮತಿಭ್ರಾಂತಿ ಕಡಿಮೆಯಾಗುತ್ತದೆ.
*ಉಷ್ಣದಿಂದ ತಲೆನೋವು ಉಂಟಾದರೆ ಕಲ್ಲಂಗಡಿಯ ರಸವನ್ನು ತೆಗೆದು ಸ್ವಲ್ಪ ಕಲ್ಲುಸಕ್ಕರೆ ಹಾಕಿ ಕುಡಿದರೆ ಗುಣವಾಗುತ್ತದೆ.
*ಉರಿಮೂತ್ರದಿಂದ ಬಳಲುತ್ತಿರುವವರು ಕಲ್ಲಂಗಡಿ ರಸಕ್ಕೆ ಮಜ್ಜಿಗೆ, ಎಳನೀರು, ಜೀರಿಗೆ, ಉಪ್ಪು ಹಾಕಿ ಕುಡಿದಲ್ಲಿ ಶೀಘ್ರವಾಗಿ ಬಾಧೆಯಿಂದ ಗುಣಮುಖರಾಗಬಹುದು.

*ಸೂರ್ಯನ ಝಳದಿಂದಾಗಿ ತಲೆನೋವು ಬಂದಿದ್ದರೆ ಈ ಹಣ್ಣಿನ ರಸಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆ ಬೆರೆಸಿ ಸೇವಿಸಿದರೆ ಉಪಶಮನವಾಗುತ್ತದೆ.

*ಸಿಪ್ಪೆಯನ್ನು ಅಂಗಾಲಿಗೆ ಉಜ್ಜಿದಲ್ಲಿ ಅಂಗಾಲಿನ ಉರಿಯು ಕಡಿಮೆಯಾಗಿ ದೇಹವು ತಂಪಾಗುತ್ತದೆ.

*ಕಲ್ಲಂಗಡಿ ರಸವನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಅರಶಿನ ಕಾಮಾಲೆಯು ವಾಸಿಯಾಗುತ್ತದೆ
*ಕಾಲಿನ ಗಂಟು, ಗುಲ್ಮ  ಮುಂತಾದ ಕಡೆ  ಊತವಿದ್ದರೆ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿಕೊಂಡು  1 ಲೋಟ ಬಿಸಿ ನೀರಿನಲ್ಲಿ ಹಾಕಿ ಆರಲು ಬಿಡಿ. ಆರಿದ ನಂತರ ಕುಡಿಯಬೇಕು. ದಿನಕ್ಕೆ ೪ ಸಲ ಮಾಡಿ. ಹೀಗೆ ಕುಡಿಯುವುದರಿಂದ ಕೆಲವು ದಿನಗಳಲ್ಲಿ ಊತ  ಮಾಯವಾಗುತ್ತದೆ.
ಸೌಂದರ್ಯವರ್ಧಕವಾಗಿ:
*ಮುಖದಲ್ಲಿ ಕಪ್ಪನೆಯ ಕಲೆಗಳಿದ್ದರೆ - ಹಣ್ಣನ್ನು ತೂತು ಮಾಡಿ ಸ್ವಲ್ಪ ತಿರುಳನ್ನು ಹೊರತೆಗೆದು ಬಟಾಣಿ ಮತ್ತು ಅಕ್ಕಿಯನ್ನು 1;2ರ ಅನುಪಾತದಲ್ಲಿ ಒಳಗೆ ತುಂಬಿ ವಾರದವರೆಗೆ ಹಾಗೇ ಇಟ್ಟು ಬಳಿಕ ಹೊರ ತೆಗೆದು ಕಾಳುಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿ. ಬಂದ ಹಿಟ್ಟನ್ನು ಹಾಲಿನೊಂದಿಗೆ ಕಲಸಿ ಕಲೆ ಇರುವ ಜಾಗದಲ್ಲಿ ಕೆಲವು ದಿನಗಳವರೆಗೆ ಹಚ್ಚುತ್ತಾ ಬಂದಲ್ಲಿ ಮೊಡವೆ ಕಲೆಗಳು ಇಲ್ಲವಾಗಿ ಚರ್ಮವು ಕಾಂತಿಯುತವಾಗುತ್ತದೆ. ಅಲ್ಲದೆ ಒಣ ಚರ್ಮದಿಂದಾಗಿ ಬೇಸತ್ತಿರುವವರು ಇದರ ರಸವನ್ನು ಸ್ವಲ್ಪ ಹೊತ್ತು ಹಚ್ಚಿ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಬೇಕು.








No comments:

Post a Comment