- ಅನ್ನದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ದೇಹದ ತೂಕ ಕೂಡ ಹೆಚ್ಚಾಗುವುದು. ಆರೋಗ್ಯದ ದೃಷ್ಟಿಯಿಂದ ಕೆಂಪಕ್ಕಿ ಅನ್ನ ತಿಂದರೆ ಮತ್ತಷ್ಟು ಒಳ್ಳೆಯದು.
- ಅಕ್ಕಿ ಬಳಸಿ ಮಾಡುವ ಇಡ್ಲಿ ಆರೋಗ್ಯಕರವಾಗಿದೆ. ಇದನ್ನು ಮಾಡುವಾಗ ತರಕಾರಿ ಹಾಕಿ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ.
- ಪನ್ನೀರ್, ಚೀಸ್ , ಚಿಕನ್ , ಮೀನು, ಹಾಲಿನ ಉತ್ಪನ್ನಗಳು, ತುಪ್ಪ ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
- ದಪ್ಪಗಾಗಲು ಪ್ರಯತ್ನಿಸುವವರು ಪ್ರತೀದಿನ ಚೀಸ್ ತಿಂದರೆ ಬೇಗನೆ ಫಲಿತಾಂಶ ದೊರೆಯುತ್ತದೆ.
- ಕೊಬ್ಬಿನಂಶವಿರುವ ಮೊಸರು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಮೊಸರನ್ನ ತಿನ್ನುತ್ತಾ ಬಂದರೆ ದೇಹಕ್ಕೂ ಒಳ್ಳೆಯದು, ತೂಕವೂ ಹೆಚ್ಚುವುದು.
- ಸಣ್ಣಗಾಗಲು ಪ್ರಯತ್ನಿಸುವವರು ಗೋಧಿ ಬ್ರೆಡ್ ತಿನ್ನಬೇಕು. ದಪ್ಪಗಾಗಲು ಪ್ರಯತ್ನಿಸುವವರು ಬಿಳಿ ಬ್ರೆಡ್ ತಿನ್ನುವುದು ಒಳ್ಳೆಯದು.
- ಬಾಳೆ ಹಣ್ಣಿನಲ್ಲಿ ಅಧಿಕ ಕ್ಯಾಲೋರಿ ಅಧಿಕವಿರುವುದರಿಂದ ದೇಹದ ತೂಕ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
- ಪ್ರತೀದಿನ ಸ್ವಲ್ಪ ದ್ರಾಕ್ಷಿಯನ್ನು ನೆನೆ ಹಾಕಿ. ನಂತರ ಬೆಳಗ್ಗೆ ತಿನ್ನಿ. ಹೀಗೆ ಮಾಡಿದರೆ ತೂಕ ಹೆಚ್ಚಾಗುವಿರಿ. ದ್ರಾಕ್ಷಿ ಜೊತೆ ಸ್ವಲ್ಪ ಬಾದಾಮಿ ಕೂಡ ನೆನೆ ಹಾಕಿದರೆ ಒಳ್ಳೆಯದು.
- ದಿನಕ್ಕೆ ಎರಡು ಬಾಳೆಹಣ್ಣು ಅವಶ್ಯ. ಇದನ್ನು ನೇರವಾಗಿ ಅಥವಾ ಹಾಲಿನಲ್ಲಿ ಬೆರೆಸಿ ಸೇವಿಸಿರಿ.
- ತಿಂಡಿಗಾಗಿ ಹಣ್ಣುರಸ ಮಿಶ್ರಿತ ಹಾಲು, ಮೊಸರು ಹಾಗೂ ಕೆನೆ ಉತ್ತಮ.
- ತಾಜಾ ಹಣ್ಣಿನ ರಸ, ಒಣಗಿದ ಹಣ್ಣು(ಗೋಡಂಬಿ) ಹೆಚ್ಚು ಸೇವಿಸಿರಿ.
- ಶಕ್ತಿ ನೀಡುವ ಆಹಾರ(ಆಲೂಗಡ್ಡೆ, ಗೆಣಸು, ಅನ್ನ. ಬೆಣ್ಣೆ, ತುಪ್ಪ , ಮೊಟ್ಟೆ, ಸಿಹಿಪದಾರ್ಥ).ಮತ್ತು ತರಕಾರಿ(ಎಲೆಕೋಸು, ಹೂಕೋಸು, ಬೆಂಡೆ, ಹುರುಳಿ, ಬದನೆಕಾಯಿ,ಬೀಟ್‌ರೂಟ್)ಗಳ ಪ್ರಮಾಣ ಹೆಚ್ಚಿಸಿರಿ.
- ಮೀನು, ಮಾಂಸ, ಅವರೆ, ಬೇಳೆಕಾಳು, ಮೊಳಕೆಕಾಳು, ಆಹಾರದಲ್ಲಿರಲಿ. ದಿನನಿತ್ಯ ಬೆಳಿಗ್ಗೆ ಮೊಟ್ಟೆ ಸೇವಿಸಿರಿ.
- ರಾಗಿ, ನವಣೆಯಲ್ಲಿ ಕಬ್ಬಿಣಾಂಶ ಹೆಚ್ಚು. ಇವುಗಳನ್ನು ಸೇವಿಸಲು ಮರೆಯದಿರಿ.
- ನಿದ್ರೆ ಹೋಗುವ ವೇಳೆ ಮತ್ತು ಎದ್ದೇಳುವ ಸಮಯ ನಿಗದಿಯಾಗಿರಲಿ. ಕನಿಷ್ಠ ಆರು ಗಂಟೆ ನಿದ್ರೆ ಅವಶ್ಯ. ನಿದ್ರೆಗೆಟ್ಟು ಅಭ್ಯಾಸ ಅಥವಾ ಕೆಲಸ ಬೇಡ.
- ಐಸ್‌ಕ್ರೀಮ್ ಸೇವಿಸಿರಿ. ಏಕೆಂದರೆ ಇದೊಂದು ಪುಷ್ಟಿದಾಯಕ ಹಾಗೂ ಸುಲಭವಾಗಿ ಜೀರ್ಣವಾಗುವ ಸಂಪೂರ್ಣ ಆಹಾರ. ನೂರು ಗ್ರಾಂ ಐಸ್ ಕ್ರೀಮ್ 200 ಗ್ರಾಂ ಕ್ಯಾಲೊರಿ ಶಕ್ತಿ ನೀಡುತ್ತದೆ. ದುಬಾರಿಯಾದರೂ ಚಿಂತೆಯಿಲ್ಲ ಉತ್ತಮ ಗುಣಮಟ್ಟದ, ಒಳ್ಳೆ ತಯಾರಕರ ಮತ್ತು ಪ್ಯಾಕಿಂಗ್ ಹೊಂದಿರುವುದನ್ನು ಸೇವಿಸಿರಿ. ಬೀದಿ ಬಳಿಯಲ್ಲಿನ ಐಸ್ ಕ್ರೀಮ್ ಅಥವಾ ಸಾಫ್ಟಿ ಬೇಡ. ಇವು ಅನಾರೋಗ್ಯಕರ.
- ವ್ಯಾಯಾಮ: ತೂಕ ಹೆಚ್ಚಿಸುವ ಮತ್ತು ಮಾಂಸಖಂಡ ಗಾತ್ರ ಹೆಚ್ಚಿಸುವ ವ್ಯಾಯಾಮ ಹೆಚ್ಚು ಮಾಡಿರಿ. ಉದಾ: ಈಜುವುದು, ಡೆಮ್ ಬೆಲ್ಟ್, ಪೂಲ್ ಅಪ್ಸ್, ಬಾರ್ ಡಿಷ್, ಬಾಲ್ ಬೆಲ್. ವಾರದಲ್ಲಿ 4 ಗಂಟೆಯಂತೆ, 12 ವಾರ ನಿಯಮಿತ ವ್ಯಾಯಾಮ ಅವಶ್ಯ. ಭಾರ ಎತ್ತುವ ಮತ್ತು ಯಂತ್ರ ಆಧಾರಿತ ವ್ಯಾಯಾಮ ಬೇಡ.
"ನಿಮಗೆ ಗೊತ್ತಿರುವ ಖಾಯಿಲೆಗಳು ಮತ್ತು ಅವುಗಳಿಗೆ ಪರಿಹಾರ " ನಿಮ್ಮಿ೦ದ.. ನಿಮಗಾಗಿ.. ನಿಮಗೋಸ್ಕರ ನೀವೇ ಕೊಡುವ ಪರಿಹಾರ. ನಿಮ್ಮಲ್ಲು ನಿಮಗೆ ಗೊತ್ತಿರುವ ಹಿತ್ತಲ ಮದ್ದು ಇದ್ದರೆ ತಿಳಿಸಿ ಆರೋಗ್ಯ ಗಳಿಸಿ " "ಸಮಸ್ಯೆ ನಿಮ್ಮದು ಸಲಹೆ ನಮ್ಮದು ಸಮಸ್ಯೆ ನಮ್ಮದು ಸಲಹೆ ನಿಮ್ಮದು" ಅಕ್ಕಿಯನು ಉಂಬುವನು ಹಕ್ಕಿಯಂತಾಗುವನು ಸಿಕ್ಕು ರೋಗದಲಿ ವೈದ್ಯನಿಗೆ ರೋಕ್ಕವನಿಕ್ಕುತಲಿರುವನು ಸರ್ವಜ್ಞ!!!
Friday, December 23, 2011
Home Remedy For Gaining Weight:
Subscribe to:
Post Comments (Atom)
Blog Archive
-
▼
2011
(72)
-
▼
December
(12)
- Home Remedy for High Cholesterol
- Home Remedy For Gaining Weight:
- HEALTH BENEFITS OF PINEAPPLE ಅನಾನಸ್
- Home remedies for Sugar (Diabetes) ಮಧುಮೇಹಿ
- HEALTH BENEFITS OF STAR FRUIT
- Home Remedies for Kidney stone (ಕಿಡ್ನಿ ಕಲ್ಲು)
- HEALTH BENEFITS OF FIGS ಅಂಜೂರ
- Home Remedy For Vomiting
- Cow urine
- how to improve pregnents weight and wat are the pr...
- Home Remedy For Rheumatism
- HEALTH BENEFITS OF SPINACH ಬಸಳೆಸೊಪ್ಪು:
-
▼
December
(12)
No comments:
Post a Comment