ಬಾದಾಮಿ, ಕಡಲೆ, ಗೋಡಂಬಿ ಇವುಗಳಲ್ಲಿ ಅಧಿಕ ಪ್ರೊಟೀನ್ ಅಂಶವಿದ್ದು ಒಂದು ಕಪ್ ಬಾದಾಮಿಯಲ್ಲಿ 32 ಗ್ರಾಂ ಪ್ರೊಟೀನ್, ಒಂದು ಕಪ್ ಗೋಡಂಬಿಯಲ್ಲಿ 20 ಗ್ರಾಂ, ಕಡಲೆಯಲ್ಲಿ 36 ಗ್ರಾಂ ಪ್ರೊಟೀನ್ ಇದ್ದು ಇದನ್ನು ದಿನನಿತ್ಯ ಸ್ನ್ಯಾಕ್ಸ್ ರೀತಿ ಅಥವಾ ಅಡುಗೆಯಲ್ಲಿ ಬಳಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿನಿತ್ಯ ನಟ್ಸ್ ತಿಂದರೆ ಸುಸ್ತು, ನಿಶ್ಯಕ್ತಿ ಮುಂತಾದ ಸಮಸ್ಯೆ ಕಂಡುಬರುವುದಿಲ್ಲ.
ನಟ್ಸ್ ನಿಂದ ದೊರೆಯುವ ಪ್ರಯೋಜನಗಳು:
1. ಬಾದಾಮಿ: ಬಾದಾಮಿಯನ್ನು ದಿನವೂ ಸೇವಿಸುವುದರಿಂದ ಹೃದಯ ಸ
್ವಾಸ್ಥ್ಯವಾಗಿರುತ್ತೆ. ಇದು ಹೃದಯಕ್ಕೆ ರಕ್ತಸಂಚಲನ ಮಾಡುವ ನಾಳಗಳಲ್ಲಿನ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
2. ಗೋಡಂಬಿ: ದಿನವೂ ಒಂದೆರಡು ಗೋಡಂಬಿ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು. ಇದರಲ್ಲಿರುವ ಒಲಿಯಿಕ್ ಆಸಿಡ್ ಹೃದಯಕ್ಕೆ ಉತ್ತಮ.ಇದರಲ್ಲಿ ಬಯಾಟಿನ್ ಎಂಬ ಅಂಶ, ತಾಮ್ರಾಂಶ, ಮ್ಯಾಗ್ನೀಶಿಯಂ ಮತ್ತು ಕಬ್ಬಿಣಾಂಶ ಎಲ್ಲವೂ ರಕ್ತಕಣಗಳನ್ನು ಸರಿದೂಗಿಸಿಕೊಂಡು ಹೋಗುತ್ತದೆ. ಹೃದಯದ ಸ್ನಾಯುಗಳಿಗೂ ಬಲ ನೀಡುತ್ತದೆ.
3. ಪಿಸ್ತಾ: ಪಿಸ್ತಾದಲ್ಲಿರುವ ಫೈಬರ್ ಹೃದಯಕ್ಕೆ ಆರೋಗ್ಯಕರ. ಪಿಸ್ತಾ ತಿನ್ನುವುದರಿಂದ ರಕ್ತನಾಳದಲ್ಲಿ ತುಂಬಿಕೊಂಡ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್ ನಂತರ ಕಾಯಿಲೆಯನ್ನೂ ತಡೆಗಟ್ಟುತ್ತದೆ.
4. ಅಕ್ರೋಡ: ವಾಲ್ ನಟ್ ಪೌಷ್ಟಿಕಾಂಶಗಳ ಗೂಡು ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿ ವಿಟಮಿನ್ ಬಿ 1,2,3,6 ಮತ್ತು ಇ ಇದ್ದು, ತಾಮ್ರಾಂಶ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಕಬ್ಬಿಣಾಂಶ ತುಂಬಿಕೊಂಡಿದೆ. ವಾಲ್ ನಟ್ ರಕ್ತದ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಹೃದಯದ ಆರೋಗ್ಯಕ್ಕೆ ಅತಿ ಅವಶ್ಯಕವಾಗಿರುವ ಒಮೆಗಾ 3 ಆಸಿಡ್ ಅನ್ನು ಸಹ ದೇಹಕ್ಕೆ ಒದಗಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.
5. ಪೆಕಾನ್ ನಟ್ಸ್: ಪೆಕಾನ್ ನಟ್ಸ್ ನಲ್ಲಿ 15 ಕ್ಕೂ ಹೆಚ್ಚು ರೀತಿಯ ವಿಟಮಿನ್ ಗಳು ಲಭ್ಯವಿರುವುದರಿಂದ ಹೃದಯವನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ. ಇದನ್ನು ತಿಂದರೆ ಮೂಳೆ ಮತ್ತು ಸ್ನಾಯುಗಳೂ ಗಟ್ಟಿಗೊಳ್ಳುತ್ತದೆ.
No comments:
Post a Comment