Gv Jayashree
ಕಬ್ಬಿನ ರಸವನ್ನು ಹೇರಳವಾಗಿ ಬಳಸ್ತಾರೆ ಭಾರತದಲ್ಲಿ. ಕಬ್ಬು ಸಾವಿರಾರು ವರ್ಷಗಳಿಂದ ಭಾರತೀಯರಿಗೆ ಪರಿಚಿತ.ಆಯುರ್ವೇದದಲ್ಲಿ ಕಬ್ಬಿನ ರಸ ತನ್ನದೇ ಆದ ಪ್ರಾಮುಖ್ಯತೆ ಪಡೆದು ಕೊಂಡಿದೆ. ಬೆಲ್ಲವನ್ನು ಸಹ ಅನೇಕ ಗಿಡಮೂಲಿಕೆಗಳನ್ನು ಬಳಸಿ ಉಪಯೋಗ ಮಾಡಲಾಗುತ್ತದೆ.ಇದರಲ್ಲಿ ಫಾಸ್ಫರಸ್ ,ಕ್ಯಾಲ್ಸಿಯಂ,ಕಬ್ಬಿಣಾಂಶ,ಮೆಗ್ನೀಷಿಯಂ,ಪೊಟಾಷಿಯಂ ಇದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇದಕ್ಕಿದೆ.ಇದು ಪ್ರೊಸ್ಟೆಟ್ ಹಾಗೂ ಸ್ತನ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ.ಮೂತ್ರಕೋಶ, ಹೃದಯ, ಮೆದುಳು ಅಲ್ಲದ ಲೈಂಗಿಕ ಅವಯವಗಳು ಸುಗಮ ರೀತಿಯಲ್ಲಿ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಮೈಯಲ್ಲಿ ಉರಿ ಉರಿ ಅನ್ನಿಸುತ್ತಿದ್ದರೆ,ಮೂತ್ರ ಮಾಡುವಾಗ ಉರಿ ಅನ್ನಿಸಿದರೆ, ಬೇಸಿಗೆಯ ಬಿಸಿಲ ಬೇಗೆಯಿಂದ ಬಳಲಿದ್ದರೆ ,ವಾತ-ಪಿತ್ತದ ದೇಹ ಪ್ರಕೃತಿ ಹೊಂದಿದ್ದರೆ ಈ ರಸವನ್ನು ಧಾರಾಳವಾಗಿ ಸೇವಿಸ ಬಹುದು.ಕಫ ದೋಷ ಹೊಂದಿರುವವರು ಸೇವಿಸದೆ ಇರುವುದು ಒಳಿತು .ವೈದ್ಯರುಉತ್ತಮ ಫಲಿತಾಂಶಕ್ಕಾಗಿ ಕಬ್ಬಿನ ರಸವನ್ನು ಮಧ್ಯಾನ ಕುಡಿಯಿರಿ ಎನ್ನುತ್ತಾರೆ .
No comments:
Post a Comment