Saturday, April 23, 2011

ಸೇಬು ಹಣ್ಣಿನ ಸಾರು ( APPLE SAMBAR)


ಬೇಕಾದ ಸಾಮಗ್ರಿಗಳು : ಸೇಬು ಹಣ್ಣು 2 | ಹಸಿ ಮೆಣಸಿನಕಾಯಿ 4ರಿಂದ 6 | ಉಪ್ಪು | ಬೆಲ್ಲ(ಬೇಕಿದ್ದರೆ)

ಒಗ್ಗರಣೆಗೆ : ಸಾಸಿವೆ, ಅರಿಷಿಣ, ಕರಿಬೇವು, ಇಂಗು, ಜೀರಿಗೆ, ಬೆಳ್ಳುಳ್ಳಿ ಪುಡಿ (ನಿಮ್ಮಿಷ್ಟ)

ತಯಾರಿಸುವ ವಿಧಾನ

ಸೇಬು ಹಣ್ಣನ್ನು ಚೆನ್ನಾಗಿ ತೊಳೆದು ಎಂಟು ಹೋಳಗಳನ್ನು ಮಾಡಿ, ಬೀಜ ತೆಗೆದು ಸ್ವಚ್ಛ ಮಾಡಿ ಮುಳುಗುವಷ್ಟು ನೀರಿನಲ್ಲಿ ಬೇಯಿಸಿರಿ. ಅರೆ ಬೆಂದನಂತರ ಹೊರತೆಗೆದು ಸಿಪ್ಪೆತೆಗೆದು ಒಂದು ಲೀಟರ್ ನೀರಿನಲ್ಲಿ ಹಾಕಿ ಮತ್ತೆ ಬೇಯಿಸಿರಿ.

ಕುದಿ ಬರುತ್ತಿದ್ದಂತೆ ಉಪ್ಪು, ಹಣ್ಣು ಹುಳಿಯಿದ್ದರೆ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ ಒಂದು ಬಾರಿ ಸೌಟಿನಿಂದ ಕದಡಿ.

ಸ್ಟೌವಿನ ಇನ್ನೊಂದು ಬದಿಯಲ್ಲಿ ಒಂದು ಬಾಣಲೆಯಲ್ಲಿ ಎರಡು ಚಮಚದಷ್ಟು ಎಣ್ಣೆ ಹಾಕಿ ಬಿಸಿ ಬಂದ ನಂತರ ಸಾಸಿವೆ ಹಾಕಿ ಚಟಪಟ ಅನಿಸಿ ಅರಿಷಿಣ, ಕರಿಬೇವು, ಹಸಿ ಮೆಣಸಿನಕಾಯಿ, ಇಂಗು, ಜೀರಿಗೆ ಹಾಕಿ ಸ್ವಲ್ಪ ತಾಳಿಸಿದ ನಂತರ ಕುದಿಯುತ್ತಿರುವ ಸೇಬಿನ ಸಾರಿಗೆ ಹಾಕಿ ಮತ್ತು ಹತ್ತು ನಿಮಿಷ ಕುದಿಯಲು ಬಿಡಿ.

ಸೇಬು ಹಣ್ಣಿ ಸಾರನ್ನು ಬಿಸಿಬಿಸಿ ಅನ್ನದೊಡನೆ ಕಲಿಸಿ ತಿನ್ನಬಹುದು. ಇದನ್ನು ಸೂಪಿನಂತೆ ಕುಡಿಯಲೂಬಹುದು. ಒಮ್ಮೆ ಟ್ರೈಮಾಡಿ.

No comments:

Post a Comment