Saturday, April 23, 2011

ಕರಿ ಬೇವು KARI BEVU( Limda, Limdo, Limbda, Kari Patta, Karapincha)


ಬೇವಿನಷ್ಟು ಕಹಿಯಿಲ್ಲದಿದ್ದರೂ, ಬೇವಿನಂತೆ ವಿಶೇಷ ಗುಣವುಳ್ಳದ್ದರಿಂದ ಕರಿಬೇವಿಗೆ ಆ ಹೆಸರು ಬಂದಿದೆ. ಕರಿಬೇವು ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವ ಒಂದು ಬಗೆಯ ಸೊಪ್ಪು. ಸ್ವಾದ್ವಿಷ್ಟವಿಲ್ಲದಿದ್ದರೂ, ಸುವಾಸನೆ ಭರಿತವಾದ ಸಸ್ಯ. ಸಂಸ್ಕೃತದಲ್ಲಿ ಇದಕ್ಕೆ ಕಾಲಶಾಕ ಎನ್ನುತ್ತಾರೆ.

ಕಫ, ಪಿತ್ತ, ಜಠರದ ರೋಗ, ರಕ್ತದೊತ್ತಡ, ಮಧುಮೇಹ, ಉದರ ಸಂಬಂಧ ಸಮಸ್ಯೆ, ಆಮಶಂಕೆ, ಮಲಬದ್ಧತೆ, ಭೇದಿ ನಿವಾರಣೆಗೆ ಕರಿಬೇವು ಸಹಕಾರಿ. ಟಿಬಿ, ಜಾಂಡೀಸ್ ಹಾಗೂ ಸರ್ಜರಿ ನಂತರ ದೇಹದ ಆರೋಗ್ಯ ಸಮತೋಲನ ಕಾಪಾಡಲು ಕರಿಬೇವು ಸೇವನೆ ಒಳ್ಳೆಯದು.

ಉಪಯೋಗಗಳು:
* 1-2 ಟೀ ಚಮಚದಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.

* ಭೇದಿ, ಆಮಶಂಕೆ ನಿವಾರಣೆಗೆ ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡಬಹುದು. ಅಥವಾ ಚೆನ್ನಾಗಿ ಅರೆದ ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಬೆರೆಸಿ ನೀಡಿದರೆ ಉಪಯುಕ್ತ.

* ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.

* ಕುರು, ಗಾಯವಾದಾಗ ಕರಿಬೇವಿನ ಎಲೆಗಳನ್ನು ಅರೆದು ಸ್ವಲ್ಪ ಅರಿಶಿನದೊಂದಿಗೆ ಬೆರೆಸಿ ಅರೆದು ಹಚ್ಚಬಹುದು.

* ಕಾಮಾಲೆ ರೋಗವಿದ್ದಾಗ 10-12 ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅರೆದುಕೊಂಡು ಸುಮಾರು 60-100ಮಿ.ಲೀ ಎಳನೀರಿನೊಂದಿಗೆ ನೀಡಬಹುದು.

* ಸೊಳ್ಳೆ, ಇರುವೆ, ನೊಣ ಮುಂತಾದ ಕೀಟಗಳ ತೊಂದರೆ ತಪ್ಪಿಸಲು ಕರಿಬೇವಿನ ಸುವಾಸನೆ ಸಾಕು.

* ಕರಿಬೇವಿನ ಎಲೆಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವ ಕಾರಣ, ಹಸಿ ಎಲೆಯನ್ನು ಅಗಿದು ತಿಂದರೆ ಒಳ್ಳೆಯದು.


*ಕಹಿ ಬೇವಿನ ಎಲೆ ಮತ್ತು ಕಸ್ತೂರಿ ಅರಿಶಿಣ 
ಕಹಿ ಬೇವಿನ ಎಲೆಯನ್ನು ಅರಿಶಿಣದ ಜೊತೆ ಹಾಕಿ ರುಬ್ಬಿ ಮುಖಕ್ಕೆ ಹಚ್ಚಿದರೆ ಅರಿಶಿಣ ಮುಖದಲ್ಲಿರುವ ನಂಜನ್ನು ಜೀರಿಕೊಳ್ಳುವುದರಿಂದ ಮೊಡವೆ ದೊಡ್ಡದಾಗುವುದಿಲ್ಲ, ಕಹಿ ಬೇವಿನ ಎಲೆ ಮೊಡವೆ ಏಳುವುದನ್ನು ತಡೆಯುತ್ತದೆ.

*ಕಹಿ ಬೇವಿನ ಎಲೆ ಮತ್ತು ನಿಂಬೆ ರಸ 

ಮೊಡವೆ ಕಡಿಮೆಯಾಗುತ್ತಾ ಬರುವಾಗ ಕಹಿ ಬೇವಿನ ಎಲೆಯ ಪೇಸ್ಟ್ ಗೆ ನಿಂಬೆ ರಸ ಹಿಂಡಿ ಮುಖಕ್ಕೆ ಹಚ್ಚಿದರೆ ಕಲೆಯೂ ಕಡಿಮೆಯಾಗುವುದು.

*ಕಹಿ ಬೇವಿನ ಎಲೆ, ಗಂಧ, ರೋಸ್ ವಾಟರ್ 

ಈ ಮೂರು ವಸ್ತುಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುತ್ತಾ ಬಂದರೆ ಮುಖದಲ್ಲಿ ಮೊಡವೆ, ಅಲರ್ಜಿ ಯಾವುದೂ ಕಾಣಿಸಿಕೊಳ್ಳುವುದಿಲ್ಲ.

*ಕಹಿ ಬೇವಿನ ಸ್ಪ್ರೇ 

ಕಹಿ ಬೇವನ್ನು ರೊಸ್ ವಾಟರ್ ಹಾಕಿಟ್ಟ ನೀರಿಗೆ ಹಾಕಿ ಒಂದು ರಾತ್ರಿ ಇಟ್ಟು ಈ ನೀರನ್ನು ಮುಖಕ್ಕೆ ಚಿಮುಕಿಸಿ, ನಂತರ ಮೇಕಪ್ ಮಾಡುವುದರಿಂದ ಮೇಕಪ್ ನಿಂದ ತ್ವಚೆ ರಕ್ಷಣೆಯನ್ನು ಮಾಡಬಹುದು.

*ಕಡಲೆ ಹಿಟ್ಟು, ಮೊಸರು, ಕಹಿ ಬೇವಿನ ಎಲೆ 

ಈ ಮೂರನ್ನು ಮಿಶ್ರ ಮಾಡಿ ಇಡೀ ಮೈಗೆ ಹಚ್ಚುವುದರಿಂದ ಮೈ ಹೊಳಪು ಹೆಚ್ಚುವುದು.

* ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿ, ಆ ನೀರನ್ನು ಬಳಸುವುದು ಕೂಡ ಒಳ್ಳೆಯದು.


* ಅಕ್ಕಿಯನ್ನು ಇಡುವ ಜಾಗದಲ್ಲಿ ಬೇವಿನ ಎಲೆ ಇಟ್ಟರೆ ಅಲ್ಲಿ ಅಕ್ಕಿಯೂ ಹುಳ ಬರುವುದಿಲ್ಲ.


*ಬೇವಿನ ಎಲೆಗಳನ್ನು ಸುಟ್ಟು ಮನೆಗೆ ಹೋಗೆ ಆಡಿಸಿದರೆ ಸೊಳ್ಳೆಗಳು ಬರುವುದಿಲ್ಲ.

No comments:

Post a Comment