ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವರಲ್ಲಿ ಹಾಗೂ ಕುಡಿತ, ಧೂಮಪಾನ, ಡ್ರಗ್ಸ್ ಚಟ, ಡಿಹೈಡ್ರೇಷನ್, ಸುದೀರ್ಘಕಾಲದಿಂದ ರಕ್ತದೊತ್ತಡ ಮುಂತಾದ ಕಾಯಿಲೆಯಿಂದ ನರಳುತ್ತಿದ್ದರೆ, ರಕ್ತದ ಚಲನೆಯಲ್ಲಿ ಏರುಪೇರು ಆಗುತ್ತಿದ್ದರೆ, ದೇಹಕ್ಕೆ ಅಗತ್ಯ ಇರುವಷ್ಟು (8 ರಿಂದ 10 ಲೀಟರ್) ನೀರನ್ನು ಸೇವಿಸದೇ ಇದ್ದರೆ ಮೂತ್ರಪಿಂಡದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಕೆಲವರಲ್ಲಿ ಮೂತ್ರದ ರಾಸಾಯನಿಕಗಳು ಹರಳು ಗಳಂತಾಗಿ ಕಿಡ್ನಿಕಲ್ಲುಗಳಾಗುವುದುಂಟು. ಇದು ಪ್ರಾರಂಭಿಕ ಹಂತದಲ್ಲಿ ಸಣ್ಣ ಗಾತ್ರದಲ್ಲಿದ್ದು (ಮರಳಿಗಿಂತ ಚಿಕ್ಕದು) ಕ್ರಮೇಣ ದೊಡ್ಡದಾಗಿ ಅರ್ಧ ಇಂಚು ಅಥವಾ ಅದಕ್ಕಿಂತಲೂ ದೊಡ್ಡದಾಗಬಹುದು.
ಮೂತ್ರಕೋಶ ಮತ್ತು ಶರೀರದ ಲವಣಾಂಶ ಗಳಲ್ಲಿ ಏರುಪೇರುಗಳಾದಾಗ ಮೂತ್ರದಲ್ಲಿ ಹರಳುಗಳು ಸೃಷ್ಟಿಯಾಗುತ್ತವೆ.
ಕ್ಯಾಲ್ಸಿಯಂ ಮತ್ತು ಯೂರಿಕ್ ಏಸಿಡ್‌ನ ಹರಳುಗಳನ್ನು ಕರಗಿಸುವುದಕ್ಕೆ ದ್ರವ ಕಡಿಮೆಯಿದ್ದಾಗ ಅವುಗಳು ಅಂಟಿಕೊಳ್ಳಲು ಪ್ರಾರಂಭವಾಗಿ ಗಂಟುಗಳು ಸೃಷ್ಟಿಯಾಗುತ್ತವೆ.
ಇದಲ್ಲದೆ ಹಲವಾರು ಔಷಧಿಗಳ ಸೇವನೆ ಯಿಂದಲೂ, ಕೆಲವು ಕಿಡ್ನಿಯ ತೊಂದರೆಗಳಿಂದಲೂ ಕಲ್ಲುಗಳ ಸೃಷ್ಟಿಯಾಗಬಹುದು.
ಕಿಡ್ನಿಯ ಪ್ರಮುಖ ಕೆಲಸ:
ಮೂತ್ರ ವಿಸರ್ಜನೆಯ ವಿಧಾನ:
ಕಿಡ್ನಿಯಿಂದ ಮೂತ್ರಕೋಶದೊಳಗೆ ಯುರಿಟರ್ ಎಂಬ ಕಿರಿದಾದ ಟ್ಯೂಬ್ ಮೂಲಕ ಮೂತ್ರ ಸಾಗುತ್ತದೆ. ಮೂತ್ರಕೋಶವು ತುಂಬಿ ಮೂತ್ರ ಮಾಡಬೇಕೆಂದು ಅನಿಸಿದಂತೆ ಯುರೆತ್ರಾ ಎಂಬ ಸ್ವಲ್ಪ ದೊಡ್ಡ ಟ್ಯೂಬಿನ ಮೂಲಕ ಮೂತ್ರ ವಿಸರ್ಜನೆಯಾಗುತ್ತದೆ.
ಮೂತ್ರಪಿಂಡ ಕಾಯಿಲೆಗೆ ವಯೋಮಿತಿ ಇಲ್ಲ. ಮೂತ್ರಪಿಂಡ ವೈಫಲ್ಯತೆಗೆ ಅನುವಂಶೀಕತೆ, ಜನನ ಸಂದರ್ಭದ ನ್ಯೂನತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಅಂಶಗಳು ಕಾರಣವಾಗುತ್ತವೆ. ಹಾಗಾಗಿ ಮಧುಮೇಹ, ರಕ್ತದೊತ್ತಡ, ಅನುವಂಶೀಯ ಕಾಯಿಲೆಗಳಿಂದ ನರಳುತ್ತಿರುವರು ಆದಷ್ಟು ಜಾಗರೂಕರಾಗಿರಬೇಕು.
* ಬೀಡಿ, ಸಿಗರೇಟು, ಮದ್ಯದಿಂದ ದೂರವಿರಿ,
* ಸೋಡಾ ಮತ್ತು ತಂಪು ಪಾನೀಯದ ಅತಿಯಾದ ಸೇವನೆ ಕಿಡ್ನಿಗೆ ಮಾರಕ. ಗಾಢವಾದ ಸೋಡಾದಲ್ಲಿನ ಆಸಿಡ್ ಮತ್ತು ಮಿನರಲ್ ಗಳು ಕಿಡ್ನಿಗೆ ತೊಂದರೆ ನೀಡುತ್ತದೆ. ಪಾನೀಯದಲ್ಲಿರುವ ಫಾಸ್ಫಾರಿಕ್ ಆಸಿಡ್, ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಹೀರಿಕೊಂಡು, ಕಿಡ್ನಿಯಲ್ಲಿ ಕಲ್ಲುಗಳಾಗಿ ಮಾರ್ಪಾಡಾಗುತ್ತದೆ.
* ದಿನಂಪ್ರತಿ 7 ರಿಂದ 8 ಲೀಟರ್‌ನಷ್ಟು ನೀರು ಕುಡಿಯಿರಿ.
* ಸಾತ್ವಿಕ ಆಹಾರವನ್ನೇ ಸೇವಿಸಿ, ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.
* ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಿ, ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಸೇವನೆ ಕಡಿಮೆ ಮಾಡಿ, ಕರಿದ ಹಾಗೂ ಮಸಾಲೆ ಪದಾರ್ಥಗಳನ್ನು ವರ್ಜಿಸಿ.
* ನಿಯಮಿತ ವ್ಯಾಯಾಮ ಜೀವನದ ಅಂಗವಾಗಲಿ, ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಪೀಡಿತರು ಆಗಾಗ್ಗೆ ರಕ್ತ, ಮೂತ್ರದಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಶೀಲಿಸಿಕೊಳ್ಳಿ.
* ಮಜ್ಜಿಗೆ, ತಾಜಾ ಮೊಸರು, ಆಕಳ ಹಾಲು, ಪಪ್ಪಾಯಿ, ಸೇಬು, ಸಿಹಿ ಮಾವಿನಹಣ್ಣು, ಬಾಳೆಹಣ್ಣು, ನುಗ್ಗೆಕಾಯಿ, ಹುರುಳಿಕಾಯಿ, ಪರಂಗಿ ಕಾಯಿ, ಕ್ಯಾರೆಟ್, ಎಳನೀರು, ಬಾರ‌್ಲಿ ನೀರು ಹೆಚ್ಚು ಬಳಸಿ.
* ಬಟಾಣಿ, ಉದ್ದಿನ ಬೇಳೆ, ಆಲೂಗಡ್ಡೆ, ಎಲೆಕೋಸು, ಬಸಲೆ, ಲವಣ, ಬದನೆಕಾಯಿ, ಹುಳಿ ಮೊಸರು, ಕೆಂಪು ಮತ್ತು ಹಸಿರು ಮೆಣಸಿನಕಾಯಿ, ಹುಳಿ ಪದಾರ್ಥಗಳು, ಮಾಂಸ ಮತ್ತು ಮದ್ಯದಿಂದ ಸಾಧ್ಯವಾದಷ್ಟು ದೂರವಿರಿ.
* ಬ್ಲ್ಯಾಕ್ ಬೀನ್ಸ್ ಕಿಡ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾರದಲ್ಲಿ ಎರಡು ಬಾರಿಯಾದರೂ ಬ್ಲ್ಯಾಕ್ ಬೀನ್ಸ್ ತಿನ್ನಬೇಕು. ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಬ್ಲ್ಯಾಕ್ ಬೀನ್ಸ್ ಹೆಚ್ಚಾಗಿ ತಿನ್ನುವುದು ಒಳ್ಳೆಯದು.
* ಮೂತ್ರ ವಿಸರ್ಜನೆಗೆ 2-3 ಗಂಟೆಗಳಗೊಮ್ಮೆ ಹೋಗಿ. ಮೂತ್ರ ಬಂದರೆ ತಡೆ ಹಿಡಿಯುವ ಪ್ರಯತ್ನ ಮಾಡಬೇಡಿ. ಮೂತ್ರವನ್ನು ತಡೆ ಹಿಡಿಯುವುದರಿಂದ ಕಿಡ್ನಿ ಸ್ಟೋನ್ಸ್ ಬರಬಹುದು.
* Antioxidants ಅಧಿಕವಿರುವ ಹಣ್ಣು-ತರಕಾರಿಗಳನ್ನು ತಿನ್ನಿ. ಸಿಟ್ರಸ್ ಮತ್ತು ಬೆರ್ರಿ ಹಣ್ಣುಗಳಲ್ಲಿ ಈ ಅಂಶ ಅಧಿಕವಿರುತ್ತದೆ.
* ಕೊತ್ತಂಬರಿ ಸೊಪ್ಪು ಕಣ್ಣಿಗೆ ಮತ್ತು ಕಿಡ್ನಿಗೆ ತುಂಬಾ ಒಳ್ಳೆಯದು. ಇದು ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಿಡ್ನಿಯನ್ನು ಶುದ್ಧ ಮಾಡುತ್ತದೆ.
* ಬಾಳೆಹೂ ಅಥವಾ ಬಾಳೆದಿಂಡಿನ ಪಲ್ಯ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ.
* ಪ್ರತಿದಿನ ಎರಡು ಲೀಟರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ಹೋಗುವಂತೆ ದ್ರವ ಪದಾರ್ಥಗಳ ಸೇವನೆ.
* ಮೂತ್ರವು ಕುಡಿಯುವ ನೀರಿನ ಬಣ್ಣದಂತೆಯೇ ಇರಬೇಕು.
*ಸಾಮಾನ್ಯವಾಗಿ ಕೆಲವು ರೋಗಿಗಳು 5ರಿಂದ 6 ಲೀಟರ್ ದ್ರವ ಪದಾರ್ಥಗಳನ್ನು ಸೇವಿಸುವುದುಂಟು. ಇದು ಕ್ರಮವಲ್ಲ.
*ಕೆಲವರು ಯೂರಿನ್ ಸ್ಟೋನ್ ಆಗುವುದನ್ನು ನಿಯಂತ್ರಿಸಲು ಬಿಯರ್ ಕುಡಿಯುತ್ತಾರೆ. ಇದರಿಂದ ಕಿಡ್ನಿ ಸ್ಟೋನ್ ಕಡಿಮೆಯಾಗುವ ಬದಲಾಗಿ ಹೆಚ್ಚಾಗುತ್ತದೆ.
*ಬೀಜಗಳಿರುವ ತರಕಾರಿಗಳನ್ನು ಸೇವಿಸಬಾರ ದೆಂಬ ನಂಬಿಕೆ ತಪ್ಪು. ಯಾಕೆಂದರೆ ಆಹಾರದಲ್ಲಿರುವ ಬೀಜಗಳು ಮೂತ್ರನಾಳದವರೆಗೆ ಹೋಗುವುದಕ್ಕೆ ಸಾಧ್ಯವಿಲ್ಲ.
*ಎಳನೀರು, ಬಾರ್ಲಿ, ಅನಾನಸ್ ಜ್ಯೂಸ್, ಬಾಳೆಹಣ್ಣು, ನಿಂಬೆಹಣ್ಣು, ಹುರುಳಿ, ಕ್ಯಾರೆಟ್, ಹಾಗಲಕಾಯಿ ಮುಂತಾದವುಗಳನ್ನು ಸೇವಿಸಬೇಕು.
*ಟೊಮಾಟೋ, ಹೂಕೋಸು, ಕಪ್ಪು ದ್ರಾಕ್ಷಿ, ಬೂದುಗುಂಬಳಕಾಯಿ, ಮಷ್ರೂಮ್, ಪಾಲಕ್, ಜವಳಿಕಾಯಿ, ಬದನೆಕಾಯಿ, ಅತಿಯಾದ ಮಾಂಸ ಇವುಗಳ ಸೇವನೆಯಿಂದ ದೂರವಿರಬೇಕು.
ಕಿಡ್ನಿಯಲ್ಲಿ ಕಲ್ಲಿದ್ದಾಗ ಕಂಡು ಬರುವ ಲಕ್ಷಣಗಳು:
ಕಿಡ್ನಿಯಲ್ಲಿ ಕಲ್ಲಿದ್ದಾಗ ಈ ಕೆಳಕಂಡ ಲಕ್ಷಣಗಳು ಕಂಡು ಬರುತ್ತವೆ.
*ಆಗಾಗ ಮೂತ್ರ ಮಾಡಬೇಕೆನಿಸುವುದು.
* ವಾಕರಿಕೆ ಮತ್ತು ವಾಂತಿ ಬರುವಂತಾಗುವುದು. ಕೆಲವೊಮ್ಮೆ ವಾಂತಿ ಆಗುವ ಸಾಧ್ಯತೆಗಳೂ ಇರುತ್ತವೆ.
* ಮೂತ್ರ ವಿಸರ್ಜನೆಯ ಸಮಯದಲ್ಲಿ ವಿಪರೀತ ನೋವು ಕಾಣಿಸುವುದು.
* ರಕ್ತಸಿಕ್ತ, ಮಂದವಾದ ಮೂತ್ರ ವಿಸರ್ಜನೆ
* ಕೆಲವು ಬಾರಿ ಮೂತ್ರವು ದುರ್ವಾಸನೆಯಿಂದ ಕೂಡಿರುವುದು
*ನೋವಿನಲ್ಲಿ ಏರುಪೇರುಗಳಾಗುವುದು. ಕೆಲವೊಮ್ಮೆ ನೋವು 20 ನಿಮಿಷದಿಂದ ಒಂದು ಗಂಟೆಯವರೆಗೂ ಕಾಡಬಹುದು.
* ಸೋಂಕಿದ್ದಾಗ ಆಗಾಗ ಜ್ವರ ಮತ್ತು ಕೈ-ಕಾಲುಗಳಲ್ಲಿ ನಡುಕ ಉಂಟಾಗುವುದು.
* ಇದಕ್ಕಿದ್ದಂತೆ ಬೆನ್ನಿನಿಂದ ಪ್ರಾರಂಭವಾಗಿ ಮುಂಭಾಗಕ್ಕೆ ಬರುವ ನೋವು ಅಂದರೆ ಪಕ್ಕೆಲುಬುಗಳು, ಬೆನ್ನಿನ, ಎದೆ ಮೂಳೆಗಳ ಕೆಳಭಾಗದಲ್ಲಿ ನೋವು ಉಂಟಾಗುವುದು.
*ಕೆಲವೊಮ್ಮೆ ಯಾವುದೇ ರೋಗ ಲಕ್ಷಣಗಳನ್ನು ತೋರ್ಪಡಿಸದೆಯೇ ಕಿಡ್ನಿ ಸ್ಟೋನ್‌ಗಳು ರಹಸ್ಯವಾಗಿಯೇ ಅಡಗಿರಬಹುದು.
* ಮೂತ್ರದಲ್ಲಿ ರಕ್ತ ಅಥವಾ ಇತರೆ ಯಾವುದೇ ರೀತಿಯ ತೊಂದರೆಗಳು ಕಂಡಾಗ ಎಕ್ಸ್‌ರೇ ಮಾಡಿಸಿದಾಗ ಇವು ಕಾಣಿಸುತ್ತವೆ.
ದೇಹದಲ್ಲಿ ಕಿಡ್ನಿ ಫಿಲ್ಟರ್ ನಂತೆ ಕೆಲಸ ಮಾಡುತ್ತೆ. ಆದರೆ ಕಿಡ್ನಿಗಳಿಗಾಗಿ ನೀವ ಕಾಡುವ ಕಿಡ್ನಿ ಸಮಸ್ಯೆ ನಿಮ್ಮನ್ನು ಒತ್ತಡಕ್ಕೀಡುಮಾಡಬಹುದು.
ಆದ್ದರಿಂದ ಕಿಡ್ನಿಯ ಆರೋಗ್ಯಕ್ಕೆ ಸಹಕರಿಸುವ ಐದು ಆಹಾರವನ್ನು ಇಲ್ಲಿ ನೀಡಲಾಗಿದೆ. ಕಿಡ್ನಿಯ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದವರೂ ಈ ಐದು ಆಹಾರವನ್ನು ತಮ್ಮ ದಿನನಿತ್ಯದಲ್ಲಿ ಬಳಸಿಕೊಂಡರೆ ಸಮಸ್ಯೆಗೆ ಕಡಿವಾಣಹಾಕಬಹುದು.
ಆರೋಗ್ಯಕರ ಕಿಡ್ನಿ ಹೊಂದಲು 5 ಆಹಾರ:
* ಕೆಂಪು ದುಂಡು ಮೆಣಸಿನ ಕಾಯಿ: ಕ್ಯಾನ್ಸರ್ ನಿವಾರಣೆಗೆ ಸಹಕರಿಸುವ ಕೆಂಪು ದುಂಡು ಮೆಣಸಿನಕಾಯಿ ಸೇವನೆ ಕಿಡ್ನಿಗೂ ಒಳ್ಳೆಯದು. ಇದರಲ್ಲಿನ ನಾರಿನಂಶ, ವಿಟಮಿನ್ ಬಿ6, ವಿಟಮಿನ್ ಎ, ಫೋಲಿಕ್ ಆಸಿಡ್ ಮತ್ತು ಲೈಪೊಸೀನ್ ಎಂಬ ಆಂಟಿಆಕ್ಸಿಡೆಂಟ್ ಕಿಡ್ನಿಯನ್ನು ಶುದ್ಧಗೊಳಿಸುತ್ತದೆ. ಪೂರ್ತಿ ಬೇಯಿಸಿ ತಿನ್ನುವ ಬದಲು ಹಸಿ ಅಥವಾ ಅರ್ಧ ಬೇಯಿಸಿರುವುದನ್ನು ತಿಂದರೆ ಒಳ್ಳೆಯದು.
* ಹೂಕೋಸು ಮತ್ತು ಎಲೆಕೋಸು: ಒಂದೇ ತಳಿಯಿಂದ ಬಂದ ಈ ಎರಡೂ ತರಕಾರಿಗಳು ಕಿಡ್ನಿಗೆ ತುಂಬಾ ಆರೋಗ್ಯಕರ. ಎಲೆಕೋಸಿನಲ್ಲಿರುವ ವಿಟಮಿನ್ ಕೆ ಮತ್ತು ಹೂಕೋಸಿನಲ್ಲಿರುವ ವಿಟಮಿನ್ ಸಿ ಕಿಡ್ನಿಗೆ ಆರೋಗ್ಯ ನೀಡುತ್ತದೆ. ಕಿಡ್ನಿಗೆ ಹೆಚ್ಚು ಪೊಟಾಶಿಯಂ ಒಳ್ಳೆಯದಲ್ಲ. ಅದಕ್ಕಾಗಿ ಕಡಿಮೆ ಪೊಟಾಶಿಯಂ ಇರುವ ಆಹಾರವನ್ನು ಕಿಡ್ನಿ ಡಯಟ್ ನಲ್ಲಿ ಸೇರಿಸಿಕೊಳ್ಳಬೇಕು.
* ಮೊಟ್ಟೆ ಬಿಳಿ ಭಾಗ: ಆಲ್ಬುಮಿನ್ ಅಥವಾ ಮೊಟ್ಟೆ ಬಿಳಿ ಭಾಗ ಮೂಳೆಗೆ ಉತ್ತಮ ಪ್ರೊಟೀನ್ ಒದಗಿಸುತ್ತದೆ ಮತ್ತು ಇದರಲ್ಲಿನ ಅಮಿನೊ ಆಸಿಡ್ ಕಿಡ್ನಿಗೆ ಶಕ್ತಿ ನೀಡುತ್ತೆ. ಕಿಡ್ನಿಯ ಆರೋಗ್ಯಕ್ಕೆ ಕೇವಲ ಮೊಟ್ಟೆಯ ಬಿಳಿ ಭಾಗ ಮಾತ್ರ ತಿನ್ನಬೇಕು. ಮೊಟ್ಟೆಯ ಹಳದಿ ಭಾಗದಲ್ಲಿನ ಫಾಸ್ಪರಸ್ ಮತ್ತು ಪೊಟಾಶಿಯಂ ಕಿಡ್ನಿಗೆ ಸಮಸ್ಯೆ ಉಂಟುಮಾಡುತ್ತದೆ.
* ಸ್ಟ್ರಾಬೆರಿ, ದ್ರಾಕ್ಷಿ: ಎರಡೂ ತರಹದ ದ್ರಾಕ್ಷಿ ಹಣ್ಣು ಕಿಡ್ನಿಗೆ ನಿಜಕ್ಕೂ ಅವಶ್ಯಕ ಆಹಾರ. ಉರಿ ನಿವಾರಕ ಮತ್ತು ಅಶುದ್ದತೆಯನ್ನು ತೊಲಗಿಸುವ ಗುಣ ಈ ಹಣ್ಣುಗಳಲ್ಲಿರುವುದರಿಂದ ಇದರ ಸೇವನೆ ತುಂಬಾ ಮುಖ್ಯ.
* ಆಲಿವ್ ಎಣ್ಣೆ: ಯಾವುದೇ ತರಹದ ಎಣ್ಣೆಗಿಂತ ಆಲಿವ್ ಎಣ್ಣೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ವೈಜ್ಞಾನಿಕವಾಗಿ ಸಾಬೀತುಗೊಂಡಿದೆ. ಇದು ಕಿಡ್ನಿಗೆ ಮಾತ್ರವಲ್ಲ, ಇಡೀ ದೇಹಕ್ಕೂ ಒಳಿತನ್ನು ಉಂಟುಮಾಡುತ್ತದೆ. ಆಲಿವ್ ನಲ್ಲಿರುವ ಓಲಿಕ್ ಫ್ಯಾಟಿ ಆಸಿಡ್ ಕಿಡ್ನಿಯಲ್ಲಿ ಆಕ್ಸಿಡೇಶನ್ ತಗ್ಗಿಸಿ ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ.
1. ಸಾಕಷ್ಟು ನೀರು ಕುಡಿಯಿರಿ:-
ಎರಡು ಲೀಟರ್ ಬಾಟಲಿ ನೀರನ್ನು ಜತೆಯಲ್ಲಿ ಇಟ್ಟುಕೊಂಡು ಅದು ದಿನದಲ್ಲಿ ಮುಗಿಯುವಂತೆ ನೋಡಿಕೊಳ್ಳಿ. ಸರಾಸರಿ ತೂಕವನ್ನು ಹೊಂದಿರುವ ವ್ಯಕ್ತಿ ಎರಡು ಲೀಟರ್ ನೀರನ್ನು ಸೇವಿಸಲೇ ಬೇಕು.
2. ಹಣ್ಣುಗಳು ಮತ್ತು ತರಕಾರಿ:-
ಇವುಗಳಲ್ಲಿ ಹೇರಳವಾಗಿ ನೀರಿನಾಂಶವಿರುತ್ತದೆ. ಈ ಆಹಾರಗಳನ್ನು ನೀವು ಹೆಚ್ಚಾಗಿ ಸೇವಿಸಬೇಕು. ಆರೋಗ್ಯ ತಜ್ಞರು ಕೇವಲ ತರಕಾರಿ ಮತ್ತು ಹಣ್ಣಿನ ಜ್ಯೂಸ್‌ನ್ನು ನೀಡಿ ಬೇರೆ ಆಹಾರ ಸೇವಿಸದೆ ಕಿಡ್ನಿ ಕ್ಲೆನ್ಸೆ ಎನ್ನುವುದನ್ನು ನಿರ್ವಿಷಕಾರಿ ನಡೆಸುತ್ತಾರೆ. ಇದು ಸುಮಾರು 3ರಿಂದ 5 ದಿನಗಳ ಕಾಲ ನಡೆಯುತ್ತದೆ. ಇದು ವ್ಯಕ್ತಿಯ ತಾಳ್ಮೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ವಿಧಾನದಲ್ಲಿ ದ್ರಾಕ್ಷಿ, ಕಿವಿ, ನಿಂಬೆಹಣ್ಣು ಮತ್ತು ಕ್ರಾನ್‌ಬೆರ್ರಿ ಹಣ್ಣುಗಳ ಜ್ಯೂಸ್‌ನ್ನು ಸೇರಿಸಲಾಗುತ್ತದೆ.
3. ದೇಹದ ತೂಕ ಮತ್ತು ರಕ್ತದ ಒತ್ತಡದ ಬಗ್ಗೆ ಎಚ್ಚರವಿರಲಿ:-
ನಿಮ್ಮ ದೇಹದ ತೂಕ ಮತ್ತು ರಕ್ತದ ಒತ್ತಡವನ್ನು ಸರಿಯಾಗಿಟ್ಟುಕೊಂಡರೆ ಆಗ ನಿಮ್ಮ ಕಿಡ್ನಿಗೆ ತುಂಬಾ ನೆರವಾಗುತ್ತದೆ. ಬೊಜ್ಜು ಮತ್ತು ಅತಿಯಾದ ರಕ್ತದ ಒತ್ತಡದಿಂದ ಕಿಡ್ನಿಯ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಇದರಿಂದ ಕಿಡ್ನಿಯು ಸರಿಪಡಿಸಲಾರದಷ್ಟು ತೊಂದರೆಗೀಡಾಗಬಹುದು.
4. ಧೂಮಪಾನ ಮಾಡುವುದನ್ನು ಬಿಟ್ಟುಬಿಡಿ:-
ನೀವು ಆರೋಗ್ಯಕರವಾಗಿರಬೇಕೆಂದರೆ ಧೂಮಪಾನ ಮಾಡುವುದನ್ನು ಬಿಟ್ಟುಬಿಡಿ. ಇದು ಹೃದಯರಕ್ತನಾಳ ಮತ್ತು ಕಿಡ್ನಿ ಆರೋಗ್ಯಕ್ಕೆ ಉತ್ತಮ.
5. ದೈನಂದಿನ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಿ:-
ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಿ. ವ್ಯಾಯಾಮವು ಕೇವಲ ನಿಮ್ಮ ಕಿಡ್ನಿಯ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ನಿಮ್ಮ ರಕ್ತದ ಸಕ್ಕರೆ ಮಟ್ಟ ಮತ್ತು ರಕ್ತದ ಒತ್ತಡವನ್ನು ನಿರ್ವಹಿಸುತ್ತದೆ.
6. ಉತ್ತಮವಾಗಿರುವ ಮತ್ತೊಂದು ಆಹಾರವೆಂದರೆ ಶತಾವರಿ:-
ಕಿಡ್ನಿಯನ್ನು ಆರೋಗ್ಯವಾಗಿಡಲು ಮತ್ತೊಂದು ವಿಧಾನವೆಂದರೆ ಉಪ್ಪು ಸೇವನೆ ಬಗ್ಗೆ ಗಮನಹರಿಸುವುದು. ಇದರಿಂದ ಕಿಡ್ನಿಯಲ್ಲಿ ಕಲ್ಲು ಆಗುವುದು ತಪ್ಪುತ್ತದೆ. ಕಡಿಮೆ ಉಪ್ಪು ತಿಂದರೆ ಅದು ಹೃದಯದ ಆರೋಗ್ಯಕ್ಕೂ ಉತ್ತಮ ಮತ್ತು ಕೈಕಾಲುಗಳಲ್ಲಿ ನೀರು ಶೇಖರಣೆಯಾಗುವುದು ತಪ್ಪುತ್ತದೆ.
7. ಸೂರ್ಯನ ಬೆಳಕು:-
ಹತ್ತು ನಿಮಿಷಗಳ ಸೂರ್ಯನ ಬೆಳಕು ನಿಮ್ಮ ಕಿಡ್ನಿಗೆ ನೇರವಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಹೌದು, ಸೂರ್ಯನ ಕಿರಣಗಳಲ್ಲಿರುವ ವಿಟಮಿನ್ ಡಿಯಿಂದ ಕ್ಯಾಲ್ಸಿಯಂ ಮತ್ತು ರಂಜಕದ ಮಟ್ಟವನ್ನು ನಿರ್ವಹಿಸಿ ಕಿಡ್ನಿಯ ಆರೋಗ್ಯಕ್ಕೆ ನೆರವಾಗುತ್ತದೆ. ಒತ್ತಡವು ನಮ್ಮ ಕಿಡ್ನಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಕಿಡ್ನಿಯನ್ನು ಆರೋಗ್ಯವಾಗಿಡಲು ನೀವು ಒತ್ತಡದಿಂದ ಮುಕ್ತವಾಗಿ ಉಲ್ಲಾಸದಿಂದ ಇರಬೇಕು.
ಮಾಹಿತಿಗಾಗಿ ತುಂಬಾ ಧನ್ಯವಾದಗಳು...
ReplyDeleteತುಂಬಾ ಉಪಯೋಗಕರ ಲೇಖನ , ಮಾಹಿತಿಗಾಗಿ ಧನ್ಯವಾದಗಳು ...
ReplyDeleteDhanyaavadgalu........
ReplyDelete