Thursday, January 19, 2012

HOME REMEDIES FOR PILES ಮೂಲವ್ಯಾಧಿ (bleeding haemorrhoids)


ಮೂಲವ್ಯಾಧಿ ಮುಜುಗರವನ್ನು ಉಂಟು ಮಾಡುವಂತಹ ಕಾಯಿಲೆ. ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ಮೂಲವ್ಯಾಧಿ ಮನುಷ್ಯಕುಲದಲ್ಲಿ ಮಾತ್ರ ಕಂಡುಬರುವ ಕಾಯಿಲೆ. ಯಾವುದೇ ಪ್ರಾಣಿಗಳಲ್ಲಿ ಈ ಕಾಯಿಲೆ ಕಂಡುಬರುವುದಿಲ್ಲ. ಇದು ಮನುಷ್ಯನ ನೆಟ್ಟಗೆ ನಿಲ್ಲುವ ಸಾಮರ್ಥ್ಯಕ್ಕೆ ತೆರುವ ಬೆಲೆ ಎಂದು ಹೇಳಬಹುದು.

ಚಕ್ರವರ್ತಿ ನೆಪೋಲಿಯ್ ಬೊನಾಪಾರ್ಟ್ ಮೂಲವ್ಯಾಧಿಯಿಂದ ಬಳಲುತ್ತಿದ್ದು ಆತ ಈ ಕಾರಣಕ್ಕಾಗಿಯೇ ವಾಟರ್ಲೂ ಯುದ್ಧದಲ್ಲಿ ಸೋಲನ್ನು ಅನುಭವಿಸಬೇಕಾಗಿ ಬಂದದ್ದು ಆಶ್ಚರ್ಯವೆನಿಸುತ್ತದಲ್ಲವೇ ?

ಅನೇಕರು ಮೂಲವ್ಯಾಧಿ (Piles) ಫಿಶ್ (ಚರ್ಮದ ಸೀಳಿಕೆ) ಒಂದೇ ಎಂದು ಭಾವಿಸುತ್ತಾರೆ. ಗುದದ್ವಾರದಲ್ಲಿ ರಕ್ತನಾಳಗಳು ಉಬ್ಬಿಕೊಳ್ಳುವುದರಿಂದ ಮೂಲವ್ಯಾಧಿ ಉಂಟಾಗುತ್ತದೆ. ಗುದದ ಅಂಚಿನಲ್ಲಿನ ಚರ್ಮ ಸೀಳಿ ಹೋಗುವುದರಿಂದ ಫಿಶ್ ಉಂಟಾಗುತ್ತದೆ. ನಮ್ಮ ಆಹಾರ ಪದ್ಧತಿ, ಜೀವನ ಶೈಲಿಗಳ ಬದಲಾವಣೆಗಳಿಂದಲೇ ಈ ಎರಡೂ ಹೆಚ್ಚಾಗುತ್ತಿವೆ. ಎರಡರಲ್ಲಿಯೂ ಪ್ರಮುಖ ಕಾರಣ ಮಲಬದ್ಧತೆಯೇ ಅನ್ನುವುದು ಸ್ಪಷ್ಟ.

ಮೂಲವ್ಯಾಧಿಯಲ್ಲಿ ರಕ್ತನಾಳಗಳು ಉಬ್ಬಿರುತ್ತವೆ. ಅವು ಚರ್ಮದ ಹೊದಿಕೆಯಡಿ ಇರುತ್ತವೆ. ಮಲವಿಸರ್ಜನೆಯ ಕಾಲದಲ್ಲಿ ಸ್ನಾಯುಗಳ ಸಂಕುಚನದಲ್ಲಿ ರಕ್ತನಾಳಗಳು ಸಿಕ್ಕಿಬೀಳುತ್ತವೆ. ಗುರುತ್ವಾಕರ್ಷಣೆಯ ಫಲವಾಗಿ ರಕ್ತವು ರಕ್ತನಾಳಗಳಲ್ಲಿ ಸಂಚಯಿಸಲ್ಪಡುತ್ತವೆ. ರಕ್ತನಾಳಗಳ ಈ ಗುಂಪು ಮೂಲವ್ಯಾಧಿಯಾಗುತ್ತದೆ. ಈ ಸಂದರ್ಭದಲ್ಲಿ ರಕ್ತಸ್ರಾವ ಮುಖ್ಯ ಲಕ್ಷಣವಾಗಿ ಕಂಡುಬರುತ್ತದೆ. ಆರಂಭದಲ್ಲಿ ರಕ್ತಸ್ರಾವ ಸ್ವಲ್ಪ. ಅದು ಮಲವಿಸರ್ಜನೆಯ ಸಮಯದಲ್ಲಿ ಮಾತ್ರ ಗೋಚರಿಸುತ್ತದೆ. ಕೆಂಪಗೆ ಹೊಳೆಯುವ ರಕ್ತ ಮಲದ ಹೊರಮೈಗೆ ಅಂಟಿಕೊಂಡಿರುತ್ತದೆ. ಈ ತರಹದ ಸ್ಥಿತಿ ಬಹುಕಾಲ ಹಾಗೆಯೇ ಮುಂದುವರಿಯಬಹುದು. ಕೆಲಕಾಲದ ನಂತರ ಉಬ್ಬಿದ ರಕ್ತನಾಳಗಳು ಮಲವಿಸರ್ಜನೆಯ ಕಾಲದಲ್ಲಿ ಹೊರಚಾಚಲ್ಪಡುತ್ತವೆ. ಅನಂತರ ಒಳಸೇರಿಕೊಳ್ಳುತ್ತವೆ. ಕಾಯಿಲೆ ಮುಂದುವರೆದಂತೆ ರಕ್ತನಾಳಗಳು ಗುಂಪಿನ ಗಾತ್ರ ಕುಗ್ಗುವುದಿಲ್ಲ ಮತ್ತು ಅವು ತಂತಾನೇ ಒಳಸೇರಿಕೊಳ್ಳುವುದಿಲ್ಲ.

ಗುದದ ಸೀಳಿಕೆ ಹೇಗೆ ಉಂಟಾಗುತ್ತದೆಂದು ನೋಡೋಣ. ಬಹುಕಾಲದಿಂದ ಮಲಬದ್ಧತೆಯಿಂದ ನರಳುವವರಲ್ಲಿ ಗಟ್ಟಿಯಾದ ಮಲ ಗುದದ್ವಾರದ ಮೂಲಕ ಹೊರಬರುವಾಗ ಅದು ಯಾವ ಸ್ನಾಯುವಿನ ಆಧಾರವನ್ನು ಪಡೆಯದೇ ಗುದನಾಳದ ಅಂತ್ಯ ಭಾಗವನ್ನು ಗೀಚುವಂತೆ ಅಂದರೆ ಸೀಳುವಂತೆ ಮಾಡುತ್ತದೆ. ಆಗ ಅಲ್ಲಿನ ಚರ್ಮ ಬಿರುಕುಗೊಳ್ಳುವುದು. ಚರ್ಮ ಮತ್ತು ಮ್ಯುಕಸ್‌ಮೆಂಬ್ರೇನ್ ತಾಗುವ ಸ್ಥಳದಲ್ಲಿ ಈ ಸೀಳುವಿಕೆ ಉಂಟಾಗುತ್ತದೆ. ಫಿಶ್ ಇರುವವರಿಗೆಲ್ಲ ನಮ್ಮ ಜೀವನವನ್ನು ಚಿಕ್ಕದೊಂದು ಸೀಳು ಅದೆಷ್ಟು ದುರ್ಭರ ಮಾಡುತ್ತವೆಂಬ ಅನುಭವವಿದ್ದೇ ಇರುತ್ತದೆ. ಫಿಶ್ನಲ್ಲಿ ನೋವು ಪ್ರಮುಖ ಲಕ್ಷಣವಾಗಿರುತ್ತದೆ. ತೀವ್ರತರವಾದ ವೇದನೆಯನ್ನು ವ್ಯಕ್ತಿ ಅನುಭವಿಸುತ್ತಾನೆ. ಮಲವಿಸರ್ಜನೆಗೆ ಹೋದಾಗಲೆಲ್ಲ ನೋವು ಹಾಗೆಯೇ ಉಳಿಯಬಹುದು. ಅದ್ದರಿಂದ ನೋವಿನ ಬಾಧೆ ತಪ್ಪಿಸಿಕೊಳ್ಳಲು ವ್ಯಕ್ತಿ ಮಲವಿಸರ್ಜನೆಯನ್ನು ಹತ್ತಿಕ್ಕಲಾರಂಭಿಸುತ್ತಾನೆ. ಇದರಿಂದ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚುತ್ತದೆ ಮತ್ತು ಮತ್ತೊಂದು ಫಿಶ್ ಉಂಟಾಗಬಹುದು.

ಮೂಲವ್ಯಾಧಿ ಮತ್ತು ಫಿಶ್‌ಗೆ ಪ್ರಮುಖ ಕಾರಣ ಮಲಬದ್ಧತೆ. ಮಲಬದ್ಧತೆಯನ್ನು ಸರಿಪಡಿಸಿಕೊಂಡಲ್ಲಿ ಅರ್ಧ ಚಿಕಿತ್ಸೆ ಮುಗಿದಂತೆಯೇ ಸೈ. ಮಲಬದ್ಧತೆಯ ಬಗ್ಗೆ ಕೆಲವರು ಇದೇನು ಮಹಾ ಎಂದುಬಿಡಬಹುದು. ಅದನ್ನು ಅಲಕ್ಷಿಸುವುದರಿಂದಲೇ ಇತರ ಕಾಯಿಲೆಗಳು ಉಂಟಾಗುತ್ತವೆ. ಕರುಳಿನ ಚಲನೆ (bowel movements) ಸರಿಯಾಗಿದ್ದಲ್ಲಿ ಮಲವಿಸರ್ಜನೆ ಸರಿಯಾಗಿ ಆಗುತ್ತದೆ.

ನಾವು ಆಹಾರದಲ್ಲಿ ಈಗ ಹೆಚ್ಚು ಮೃದು (Soft Food) ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತೇವೆ. ನಾರಿನಂಶ ಹೆಚ್ಚು ಇರುವುದಿಲ್ಲ. ಈಗ ನಾವು ಮಾಡುವ ಕೆಲಸದಲ್ಲಿ ನಮಗೆ ದೈಹಿಕ ಶ್ರಮ ಅತ್ಯಂತ ಕಡಿಮೆ. ಮಾನಸಿಕವಾಗಿ ಒತ್ತಡ ಹೆಚ್ಚು. ನಮ್ಮ ದೈಹಿಕ ಶ್ರಮಕ್ಕೆ ನಾವು ತೆಗೆದುಕೊಳ್ಳುತ್ತಿರುವ ಆಹಾರವೇ ಹೆಚ್ಚು. 8 ಗಂಟೆ ಒಂದೇ ಕಡೆ ಕುಳಿತು ಕೆಲಸ ಮಾಡುತ್ತೇವೆ. ಎರಡು ಗಂಟೆಗೊಮ್ಮೆ 5-10 ನಿಮಿಷ ಓಡಾಡಿ ಕುಳಿತುಕೊಳ್ಳುವುದು ಒಳ್ಳೆಯದು. ಪ್ರತಿದಿನ ನಿಯಮಿತವಾಗಿ ಅರ್ಧಗಂಟೆ ವ್ಯಾಯಾಮ ಇಲ್ಲವೇ ಒಂದು ಗಂಟೆ ನಡಿಗೆ ರೂಢಿಸಿಕೊಳ್ಳಬೇಕು. ಇದರಿಂದ ಉದರದ ಮಾಂಸಖಂಡಗಳಿಗೆ ವ್ಯಾಯಾಮ ಆಗುತ್ತದೆ. ಕರುಳಿನ ಚಲನೆ ಹೆಚ್ಚುತ್ತದೆ.

ಆಹಾರದಲ್ಲಿ ಅಧಿಕ ನಾರಿನಂಶವಿರುವ ಆಹಾರ ಸೇವಿಸಬೇಕು. ಪ್ರತಿದಿನ 30 ಗ್ರಾಂ ನಾರಿನ ಆಹಾರ ಮಲಬದ್ಧತೆಯ ತೊಂದರೆಯಿರುವವರಿಗೆ ಬೇಕೇ ಬೇಕು. ಎಲ್ಲ ಬಗೆಯ ಸೊಪ್ಪುಗಳು, ತರಕಾರಿ, ಹಣ್ಣುಗಳು, ಸೌತೆಕಾಯಿ, ಮೂಲಂಗಿ, ಕ್ಯಾರೆಟ್ ಹೆಚ್ಚು ತಿನ್ನಬೇಕು. ಗೋಧಿ, ರಾಗಿ, ಜೋಳದ ಹಿಟ್ಟನ್ನು ಜರಡಿಯಾಡದೆ ಬಳಸಬೇಕು. ಮೊದಲೇ ತೊಳೆದು ಒಣಗಿಸಬೇಕು. ಪಾಲಿಶ್ ಮಾಡದಿರುವ ಅಕ್ಕಿಯನ್ನು ಬಳಸುವುದು ಉತ್ತಮ.

ಉಪ್ಪಿನ ಸೇವನೆಯಲ್ಲಿ ಮಿತಿ – ಅತಿಯಾಗಿ ಉಪ್ಪು ತಿನ್ನುವುದರಿಂದ ದೇಹದ ರಕ್ತಪರಿಚಲನೆಯಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಇದರಿಂದ ಗುದದ್ವಾರದಲ್ಲಿ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ.

ಅತಿಯಾದ ಕಾಫಿ ಸೇವನೆ, ಅತಿಯಾದ ಮಸಾಲೆ ಪದಾರ್ಥಗಳು, ಆಲ್ಕೊಹಾಲ್, ತಂಪು ಪಾನೀಯಗಳು, ಸಿಗರೇಟು ಸೇವನೆ, ಪಾನ್ ಪರಾಗ್, ತಂಬಾಕು ಜಗಿಯುವುದು ಇವೆಲ್ಲವು ಕೂಡ ಮೂಲವ್ಯಾಧಿಯನ್ನು ಹೆಚ್ಚು ಮಾಡುತ್ತವೆ.

ತೂಕ ತಗ್ಗಿಸಿಕೊಳ್ಳಿ – ದೇಹದ ಭಾರ ಸೊಂಟ ಮತ್ತು ಕಾಲುಗಳ ಮೇಲೆ ಬೀಳುವುದರಿಂದ ತೊಂದರೆ ಹೆಚ್ಚಾಗುತ್ತದೆಯಾದ್ದರಿಂದ ಆಹಾರ ಸೇವನೆಯಲ್ಲಿ ಮಿತಿ ಹಾಗೂ ವ್ಯಾಯಾಮ ಮಾಡಿ ತೂಕ ತಗ್ಗಿಸಿಕೊಳ್ಳಬೇಕು.

ಮಲಮೂತ್ರಗಳನ್ನು ತಡೆಯುವುದು – ಮಲಮೂತ್ರಗಳನ್ನು ತಡೆಯ ಬಾರದು. ತಡೆಯುವುದರಿಂದ ಮೂಲವ್ಯಾಧಿ ಉಂಟಾಗುತ್ತದೆ. ಅನೇಕ ಮಹಿಳೆಯರು ಬೆಳಗಿನ ಸಮಯ ಮಲವಿಸರ್ಜನೆ ಮಾಡಬೇಕೆನಿಸಿದಾಗ ಮಾಡದೇ ಮನೆಗೆಲಸದ ಮಧ್ಯೆ ತಡೆದು ನಂತರ ವಿಸರ್ಜಿಸಲು ಹೋಗುವುದರಿಂದ ಮೂಲವ್ಯಾಧಿ ಉಂಟಾಗುತ್ತದೆ.

ಗರ್ಭಿಣಿಯರಲ್ಲಿ – ಗರ್ಭಿಣಿಯರು ಮೂಲವ್ಯಾಧಿ ತೊಂದರೆಗೊಳಗಾಗು ವುದು ಅತ್ಯಂತ ಸಾಮಾನ್ಯ ಸಂಗತಿ. ಗರ್ಭ ಧರಿಸಿದಾಗ ಉದರದ ಮಾಂಸಖಂಡಗಳು ಹಿಗ್ಗುವುದರಿಂದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆಯಾದ್ದರಿಂದ ಮಲಬದ್ಧತೆ ಉಂಟಾಗುತ್ತದೆ. ಆಗ ಸೇವನೆ ಮಾಡುವ ಕಬ್ಬಿಣಾಂಶದ ಮಾತ್ರೆಗಳೂ ಮಲಬದ್ಧತೆ ಯನ್ನುಂಟುಮಾಡುತ್ತವೆ.
ಪದೇ ಪದೇ ಗರ್ಭಪಾತವಾಗುತ್ತಿದ್ದರೂ ಮೂಲವ್ಯಾಧಿಯ ತೊಂದರೆ ಕಾಣಿಸಿಕೊಳ್ಳಬಹುದು.

ಹೆರಿಗೆಯ ಸಮಯದಲ್ಲಿ – ಹೆರಿಗೆ ನೋವು ಬರುವಾಗ ಗುದದ್ವಾರದ ಮೇಲೆ ಒತ್ತಡ ಬೀಳುವುದರಿಂದ ಫಿಶ್ ಉಂಟಾಗಬಹುದು.
ಅತಿಯಾದ ಶ್ರಮ – ಅತಿಯಾದ ಭಾರ ಹೊರುವವರಲ್ಲಿಯೂ ಇದು ಸಾಮಾನ್ಯ.

ಮಾನಸಿಕ ಒತ್ತಡ – ಅಧಿಕವಾಗಿದ್ದಲ್ಲಿಯೂ ಮಲಬದ್ಧತೆಯ ಸಮಸ್ಯೆ ಕಾಡಬಹುದು. ನಾವು ಟೆನ್ಶನ್ ಮಾಡಿಕೊಂಡಾಗ ಮತ್ತು ಹೆದರಿಕೊಂಡಾಗ ನಮ್ಮ ಬಾಯಿ ಒಣಗುತ್ತದೆ ಮತ್ತು ಎದೆಬಡಿತ ಹೆಚ್ಚುತ್ತದೆ. ಆಗ ಮಲವಿಸರ್ಜನೆ ಕಷ್ಟವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯೋಗ, ಪ್ರಾಣಾಯಾಮ ಸಹಾಯ ಮಾಡುತ್ತದೆ.

ನಗುವಿನಿಂದ ಮಲಬದ್ಧತೆ ದೂರವಾಗುತ್ತದೆ – ಇದು ಆಶ್ಚರ್ಯವೆನಿಸಿದರೂ ಸತ್ಯ. ನಾವು ನಗುವುದರಿಂದ ಉದರದ ಮಾಂಸಖಂಡಗಳು ಚಲನಶೀಲವಾಗುತ್ತವೆ. ಹೆಚ್ಚು ಹೊತ್ತು ನಕ್ಕಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕುಬಿಟ್ಟೆವು ಅನ್ನುತ್ತೇವೆ. ಅದು ಒಂದು ಕಡೆ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತೊಂದು ಬಗೆಯಲ್ಲಿ ಆಹಾರ ಜೀರ್ಣಿಸಲು ಸಹಾಯ ಮಾಡುತ್ತದೆ. ಕರುಳಿಗೆ ಒಂದು ರೀತಿಯ ಮಸಾಜ್ ಆದ ಹಾಗಾಗುತ್ತದೆ.

ಕುಡಿಯುವ ನೀರು – ದಿನಕ್ಕೆ 2 ರಿಂದ 3 ಲೀಟ್ ನೀರು ಕುಡಿಯಬೇಕು. ಆಹಾರ ಸುಲಭವಾಗಿ ಜೀರ್ಣವಾಗುವುದು. ಕಾಯಿಸಿ ಆರಿಸಿದ ನೀರು ಕುಡಿಯುವುದು ಒಳ್ಳೆಯದು. ಮಲಗುವ ಮುಂಚೆ ಒಂದು ಲೋಟ ಬಿಸಿ ನೀರು ಕುಡಿಯಬೇಕು.

ಮೂಲವ್ಯಾಧಿ ಮತ್ತು ಫಿಶ್ ಇರುವವರಲ್ಲಿ ಆಗಾಗ ನವೆ ಆಗುತ್ತಿರುತ್ತದೆ. ನವೆಯಾಗುತ್ತದೆಯೆಂದು ಕೆರೆದುಕೊಳ್ಳಬಾರದು. ಉಗುರು ತಾಗುವುದರಿಂದ ಅಲ್ಲಿನ ಮೃದು ಚರ್ಮ ಬಿರುಕುಬಿಡಬಹುದು. ಗುದದ್ವಾರದ ಸ್ವಚ್ಛತೆ ಬಹಳ ಮುಖ್ಯ. ನವೆಯೆನಿಸಿದಾಗ ಬಿಸಿನೀರನ್ನು ಹಾಕಿಕೊಳ್ಳುವುದರಿಂದ ನವೆ ಕಡಿಮೆಯಾಗುತ್ತದೆ.

ಮೂಲವ್ಯಾಧಿ ಮತ್ತು ಫಿಶ್ ಇರುವವರಿಗೆಲ್ಲ ಸಿಟ್ಜಬಾತ್ ತುಂಬ ಒಳ್ಳೆಯದು. ಒಂದು ಅಗಲವಾದ ಟಬ್‌ನಲ್ಲಿ ಬಿಸಿನೀರು ಹಾಕಿ ಕುಳಿತುಕೊಳ್ಳಬೇಕು. ಹೀಗೆ ಕುಳಿತುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ. ರಕ್ತನಾಳಗಳಲ್ಲಿ ರಕ್ತ ಹರಿಯುವಿಕೆ ಹೆಚ್ಚಾಗಿ ಸಲೀಸಾಗುತ್ತದೆ.

ಮಹಿಳೆಯರು ಗಮನಿಸಬೇಕಾದ ಅಂಶ – ಮಹಿಳೆಯರಲ್ಲಿ ಮೂತ್ರದ್ವಾರ, ಜನನಾಂಗ ಮತ್ತು ಗುದದ್ವಾರ ಮೂರು ಒಂದೇ ಕಡೆ ಇರುವುದರಿಂದ ಸ್ವಚ್ಛತೆ ಮತ್ತು ಎಚ್ಚರಿಕೆ ಬಹಳ ಮುಖ್ಯ. ಪ್ರತಿಬಾರಿ ಮೂತ್ರ ಮತ್ತು ಮಲವಿಸರ್ಜನೆ ಸಮಯದಲ್ಲಿ ಮೂತ್ರದ್ವಾರ, ಜನನಾಂಗ ಸ್ವಚ್ಛಗೊಳಿಸಿಕೊಂಡು ನಂತರ ಗುದದ್ವಾರ ಸ್ವಚ್ಛಗೊಳಿಸಿಕೊಳ್ಳಬೇಕು. ಚಿಕ್ಕಮಕ್ಕಳಿರುವಾಗಲೇ ತಾಯಂದಿರು ಈ ರೂಢಿ ಕಲಿಸಬೇಕು. ಅನೇಕರು ತಪ್ಪು ಮಾಡುತ್ತಾರೆ. ಗುದದ್ವಾರ ಸ್ವಚ್ಛಗೊಳಿಸಿಕೊಂಡ ನಂತರವೇ ಜನನಾಂಗ, ಮೂತ್ರದ್ವಾರ ಸ್ವಚ್ಛಗೊಳಿಸುತ್ತಾರೆ. ಒಳ ಉಡುಪುಗಳನ್ನು ಬಿಸಿ ನೀರಿನಲ್ಲಿ ತೊಳೆದು ಬಿಸಿಲಿಗೆ ಒಣಗಿಸಬೇಕು. ಬಿಸಿಲಿಲ್ಲದಿದ್ದಾಗ ಇಸ್ತ್ರಿ ಮಾಡಬೇಕು.

ಮನೆ ಮದ್ದು :

* ಲೋಳೆರಸದ ತಿರುಳನ್ನು ಒಂದು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು.

* ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಇಡೀ ಸಸ್ಯವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚೆ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು.

* ಹಾಲಿನಲ್ಲಿ ಒಣ ಖರ್ಜೂರ / ಉತ್ತುತ್ತಿ ರಾತ್ರಿ ಹೊತ್ತು ನೆನೆಯಿಸಿಟ್ಟು ಬೆಳಿಗ್ಗೆ ತಿನ್ನಬೇಕು ಮತ್ತು ಆ ಹಾಲನ್ನು ಕುಡಿಯಬೇಕು.

* 50 ಮಿಲಿ ಈರುಳ್ಳಿ ರಸವನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.

* ಹೊನಗೊನೆ ಸೊಪ್ಪಿನ ರಸ 20 ಮಿಲಿ, ಮೂಲಂಗಿ ಸೊಪ್ಪಿನ ರಸ 20 ಮಿಲಿ ಮತ್ತು ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಹೊತ್ತು ಎರಡು- ಮೂರು ವಾರ ಕುಡಿಯಬೇಕು.

* ಸುವರ್ಣ ಗೆಡ್ಡೆಯನ್ನು ಹೋಳು ಮಾಡಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಈ ಪುಡಿಯನ್ನು 5 ಗ್ರಾಂನಷ್ಟನ್ನು ತುಪ್ಪ, ಜೇನುತುಪ್ಪ, ಬೆಲ್ಲ ಯಾವುದಾದರೊಂದರಲ್ಲಿ ಬೆರೆಸಿ ತಿನ್ನಬೇಕು.

* ತುಳಸೀ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

* ಅಳಲೆಕಾಯಿ ಪುಡಿಯನ್ನು ಬೆಲ್ಲ ಸೇರಿಸಿ ತಿನ್ನಬೇಕು.

* 25 ಮಿಲಿ ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.

* ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.

* ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು.

* ಸೌತೆಕಾಯಿ ರಸ ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.

* 20 ಗ್ರಾಂ ಕೊತ್ತಂಬರಿ ಬೀಜ (ಧನಿಯ)ವನ್ನು ಪುಡಿ ಮಾಡಿ 4 ಲೋಟ ನೀರು ಹಾಕಿ ಕಷಾಯಕ್ಕಿಟ್ಟು ಒಂದು ಲೋಟಕ್ಕಿಳಿಸಿ ಶೋಧಿಸಿ ಹಾಲು, ಸಕ್ಕರೆ ಸೇರಿಸಿ ಪ್ರತಿದಿನ ಎರಡು ಹೊತ್ತು ಸೇವಿಸಬೇಕು.

*ಆಗ ತಾನೇ ಕರೆದ ಹಾಲಿಗೆ ಒಂದು ನಿಂಬೆ ಹಣ್ಣಿನ ರಸ ಸೇರಿಸಿ ದಿನವೂ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.

* ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ.


*ಲೋಳೆಸರದ ರಸವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸಿ. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. 

*ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪೌಡರ ದಿನಕ್ಕೆ ಎರಡು ಚಮಚೆ ಮುಂಜಾನೆ ಸಂಜೆ ಜೇನಿನೊಡನೆ ಸೇವಿಸಿ.


*ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೀರಲ ಹಣ್ಣು ಬಹಳ ಒಳ್ಳೆಯದು.


* ಮೂಲಂಗಿಯನ್ನು ಹೆರೆದು ಮೊಸರಲ್ಲಿ ಕಲಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟರೆ ಬಹಳ ರುಚಿಕರವಾಗಿರುತ್ತದೆ. ಅದು ಮೂಲವ್ಯಾಧಿಗೆ ಬಹಳ ಒಳ್ಳೆಯದು.


*ಹಾಲಿನಲ್ಲಿ ಬೆರಸಿ ಮೂಲಂಗಿಯನ್ನು ಅರೆದು ಪೇಸ್ಟ ಮಾಡಿ ಗುದದ್ವಾರದ ಸುತ್ತಲೂ ಹಚ್ಚಿದರೆ ಬಾವು ಕಡಿಮೆ ಆಗುತ್ತದೆ.


*ಎಂಟು ಗ್ಲಾಸು ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ.


*ಎರಡು ತೊಲೆಯಷ್ಟು ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು.


*ಪ್ರತಿದಿನ ಬೆಳಗ್ಗೆ ಎರಡೂವರೆ ತೊಲೆಯಷ್ಟು ಮೂಲಂಗಿ ರಸವನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದು. ರಕ್ತಸ್ರಾವ ಬರಿಸುವ ಮೊಳಕೆಗಳ ನಿವಾರಣೆಗೆ  ಡೋಣಿ ಸ್ನಾನ (ಟಬ್-ಬಾಥ್), ಖರ್ಜೂರದ ಬೀಜಗಳನ್ನು ಕುಟ್ಟಿ ಒಣಗಿಸಿ ಕೆಂಡದ ಮೇಲೆಹಾಕಿ ಅದರ ಹೊಗೆಯನ್ನು ಮೂಲವ್ಯಾಧಿಯ ಮೊಳಕೆಗಳಿಗೆ ತಾಗುವಂತೆ ಮಾಡಬೇಕು.

*ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು. 


*ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು.


*ಸುವರ್ಣ ಗೆಡ್ಡೆಯನ್ನು ಸಣ್ಣದಾಗಿ ಕತ್ತರಿಸಿ ಒಣಗಿಸಿ ಪುಡಿಮಾಡಬೇಕು . ಎರಡು ಚಮಚ ಪುಡಿಗೆ ಎರಡು ಚಮಚ ಸಕ್ಕರೆ ಬೆರೆಸಿ ಬೆಳಗ್ಗೆ - ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

*ಬಿಲ್ವ ಪತ್ರೆಯ ರಸವನ್ನು ನಿತ್ಯ ಬೆಳಗ್ಗೆ ೫-೬ ಚಮಚ ಸೇವಿಸಬೇಕು.

*ಚನ್ನಾಗಿ ಹಣ್ಣಾದ ಬಾಳೆಹಣ್ಣಿಗೆ ಏಲಕ್ಕಿಯನ್ನು ಹುದುಗಿಸಿಟ್ಟು ತಿನ್ನಬೇಕು.


*ಎಳೆ ಮೂಲಂಗಿಯನ್ನು ನಿತ್ಯ ಸೇವಿಸಿದರೆ ಒಳ್ಳೆಯದು. ೬ ಚಮಚ ಮೂಲಂಗಿ ರಸವನ್ನು ೬ ಚಮಚ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.

*೨ ಚಮಚ ಬಿಳಿ ಎಳ್ಳು , ೨ ಚಮಚ ಕಲ್ಲು ಸಕ್ಕರೆ , ೨ ಚಮಚ ಹಸುವಿನ ಬೆಣ್ಣೆಯನ್ನು ಅರೆದು ನಿತ್ಯ ಬೆಳಗ್ಗೆ ಸೇವಿಸಬೇಕು.

*ರಾತ್ರಿ ೧ ಲೋಟ ನೀರಿಗೆ ೬ ಚಮಚ ಗರಿಕೆಯ ರಸ ಹಾಕಿ ಇಡಬೇಕು. ಮರುದಿನ ಬೆಳಗ್ಗೆ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ರಕ್ತ ಬೀಳುವುದು ನಿಲ್ಲುತ್ತದೆ. ಇದನ್ನು ೧೫ ರಿಂದ ೩೦ ದಿನಗಳ ಕಾಲ ಕುಡಿಯಬೇಕು. ಹೀಗೆ ಮಾಡಿದರೆ ದೇಹ ತಂಪಾಗುತ್ತದೆ.

*ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ಶಮನವಾಗುತ್ತದೆ.

*ಎಕ್ಕದ ಎಲೆ ಹಾಗೂ ನುಗ್ಗೆ ಸೊಪ್ಪನ್ನು ಅರೆದು ಮೊಳಕೆಗೆ ಹಚ್ಚಿದರೆ ಗುಣವಾಗುತ್ತದೆ.

*ನುಗ್ಗೆ ಸೊಪ್ಪು ಮತ್ತು ಮೂಲಂಗಿ ಸೊಪ್ಪನ್ನು ಅರೆದು ಹಚ್ಚಿದರೆ ಮೊಳಕೆಯ ನೋವ್ವು ಗುಣವಾಗುತ್ತದೆ.

*೪-೫ ಚಮಚ ಈಸಬ್ಗೋಲನ್ನು (ತಂಪಿನ ಬೀಜ) ಹುಡಿಮಾಡಬೇಕು. ಇದನ್ನು ತಣ್ಣೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಸಿಟ್ಟು ಊಟದ ೧ ಗಂಟೆ ಮೊದಲು ಕುಡಿದರೆ ಮೊಳಕೆ ಯುಳ್ಳ  ಮೂಲವ್ಯಾಧಿ ಹಾಗೂ ರಕ್ತ ಮೂಲವ್ಯಾದಿ ಎರಡೂ ಶಮನವಾಗುತ್ತವೆ. 

* ಲೋಳೆರಸದ ತಿರುಳನ್ನು ಒಂದು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. ನಂತರ ಮಲುಗುವ ಮುನ್ನ ಒಂದು ಚಮಚ ಏಲಕ್ಕಿ ಮತ್ತು ಬಾಳೆ ಹಣ್ಣು ತಿನ್ನಬೇಕು. ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಹಚ್ಚಿದರೆ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ. ಇದರಿಂದ ನೋವು ಉಂಟಾಗುವುದಿಲ್ಲ.

* ಹಾಲಿನಲ್ಲಿ ಒಣ ಖರ್ಜೂರ ಅಥವಾ ಉತ್ತುತ್ತೆಯನ್ನು ರಾತ್ರಿಯಲ್ಲಿ ನೆನೆಯಿಟ್ಟು ಬೆಳಗ್ಗೆ ತಿನ್ನಬೇಕು.

* ಒಂದು ಈರುಳ್ಳಿಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.

* ಮೂಲಂಗಿ ಸೊಪ್ಪಿನ ರಸಕ್ಕೆ ಚಿಟಿಕೆಯಷ್ಟು ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಬಾರಿಯಂತೆ ಎರಡರಿಂದ ಮೂರು ವಾರ ಕುಡಿದರೆ ಮೂಲವ್ಯಾಧಿ ಗುಣವಾಗುವುದು. ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು ಕೂಡ ಒಳ್ಳೆಯದು.

* ಸುವರ್ಣ ಗೆಡ್ಡೆಯನ್ನು ಸಿಪ್ಪೆ ತೆಗೆದು ಒಣಗಿಸಿ ಕುಟ್ಟಿ ಪುಡಿ ಮಾಡಿ, ಆ ಪುಡಿಯನ್ನು ಪ್ರತಿ ದಿನ ಒಂದು ಚಮಚದಂತೆ ಜೇನುತುಪ್ಪಬೆರೆಸಿ ತಿನ್ನುವುದು ಒಳ್ಳೆಯದು. 

* ಹುಣಸೆ ಹಣ್ಣಿನ ಮರದ ಚಿಗುರು ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು.

* ತುಳಸಿ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

* ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.

* ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು. 

* ಸೌತೆಕಾಯಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು. 

* 4 ಚಮಚ ಕೊತ್ತಂಬರಿಯನ್ನು 4 ಲೋಟ ನೀರು ಹಾಕಿ ಕುದಿಸಿ ಹಾಲು ಮತ್ತು ಸಕ್ಕರೆ ಹಾಕಿ ಟೀ ಬದಲು ಕುಡಿಯುವುದು ಒಳ್ಳೆಯದು. ಆಗ ತಾನೇ ಕರೆದ ಹಾಲಿಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿ ಕುಡಿದರೆ ಮೂಲವ್ಯಾಧಿ ಗುಣಮುಖವಾಗುವುದು. 

* ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ. 

* ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪುಡಿಯನ್ನು ದಿನಕ್ಕೆ ಎರಡು ಚಮಚದಂತೆ ಮುಂಜಾನೆ ಮತ್ತು ಸಂಜೆ ಜೇನಿನೊಡನೆ ಸೇವಿಸಿ. 

* ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೇರಳೆ ಹಣ್ಣು ಬಹಳ ಒಳ್ಳೆಯದು. ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಮೂಲವ್ಯಾಧಿ ಗುಣವಾಗುವುದು. 

* ಮೂಲಂಗಿಯನ್ನು ತುರಿದು ಮೊಸರಿನಲ್ಲಿ ಕಲೆಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟು, ಈ ಪದಾರ್ಥವನ್ನು ಅನ್ನದ ಜೊತೆ ತಿನ್ನುವುದು ಒಳ್ಳೆಯದು. ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಅದನ್ನು ಗುದದ್ವಾರದ ಸುತ್ತಲೂ ಹಚ್ಚಿದರೆ ಊತ ಕಡಿಮೆ ಆಗುತ್ತದೆ. 

* ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು. 

* ತ್ರಿಫಲಾ ಕಷಾಯ ಮೂಲವ್ಯಾಧಿ ಗುಣಪಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ. 

* ಎಂಟು ಲೋಟ ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ. 

* ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು ಕೂಡ ಮೂಲವ್ಯಾಧಿಗೆ ಪರಿಣಾಮಕಾರಿಯಾದ ಔಷಧಿಯಾಗಿದೆ.





ಲೇಪನ – ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಲೇಪಿಸಬೇಕು. ತ್ರಿಫಲಾ ಕಷಾಯದಿಂದ ತೊಳೆದುಕೊಳ್ಳಬೇಕು.
ಕ್ಷಾರಸೂತ್ರ – ಔಷಧೀಯ ದ್ರವ್ಯದಲ್ಲಿ ದಾರಗಳನ್ನು ಅದ್ದಿ ತೆಗೆದು ಒಣಗಿಸಿರುತ್ತಾರೆ. ಅದನ್ನು ಕಟ್ಟಿ ನಂತರ ಕತ್ತರಿಸಿ ತೆಗೆಯುತ್ತಾರೆ. ಪರಿಣಿತ ತಜ್ಞ ವೈದ್ಯರ ಬಳಿ ಈ ಚಿಕಿತ್ಸೆ ತೆಗೆದುಕೊಳ್ಳಬೇಕು. ಔಷಧಿ ಚಿಕಿತ್ಸೆಯಿಂದ ಕಡಿಮೆಯಾಗದಿದ್ದಲ್ಲಿ ಕ್ಷಾರಸೂತ್ರ ಚಿಕಿತ್ಸೆ ಉತ್ತಮವಾದುದು.

ಯಾವ ಬಗೆಯ ಆಹಾರ ಒಳ್ಳೆಯದು ?
ಪಥ್ಯ – ಹಳೆಯ ಅಕ್ಕಿಯ ಅನ್ನ, ಹೆಸರು ಬೇಳೆ, ತೊಗರಿಬೇಳೆ ಕಟ್ಟು, ಮಜ್ಜಿಗೆ, ಹಾಲು, ತುಪ್ಪ, ಬೆಣ್ಣೆ ಸೇವಿಸಬಹುದು. ಮೂಲಂಗಿ, ಪಡವಲಕಾಯಿ, ಬಸಳೆ, ಹೊನಗೊನ್ನೆ ಸೊಪ್ಪು, ಜೀರಿಗೆ, ಹಿಂಗು, ಬಾಳೆಹಣ್ಣು ಸೇವನೆ ಒಳ್ಳೆಯದು. ಬಾಳೆಹಣ್ಣನ್ನು ಬೆಲ್ಲ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು. ಬಾಳೆಯ ಹೂವನ್ನು ಅರೆದು ರಸ ತೆಗೆದು ಮಜ್ಜಿಗೆ ಬೆರೆಸಿ ಕುಡಿಯಬೇಕು. ಬಾಳೆದಿಂಡನ್ನು ರಸ ತೆಗೆದು ಕುಡಿಯಬೇಕು.

ನೆಲ್ಲಿಕಾಯಿ ಸಂಡಿಗೆ – ನೆಲ್ಲಿಕಾಯಿ ಸಿಗುವ ಕಾಲದಲ್ಲಿ ಸಂಗ್ರಹಿಸಿಟ್ಟು ಕೊಳ್ಳಬೇಕು. ನೆಲ್ಲಿಕಾಯಿಗಳನ್ನು ಕುಟ್ಟಿ ಅದರ ಬೀಜ ತೆಗೆಯಬೇಕು. ಇದನ್ನು ನೆನೆಸಿದ ಉದ್ದಿನಬೇಳೆಯೊಂದಿಗೆ ತರಿತರಿಯಾಗಿ ರುಬ್ಬಿ ಉಪ್ಪು, ಖಾರ, ಶುಂಠಿ ಬೆರೆಸಿ ಬಟ್ಟೆಯ ಮೇಲೆ ಸಂಡಿಗೆ ಹಾಕಬೇಕು. ಪ್ರತಿದಿನ ಇದನ್ನು ಊಟದೊಂದಿಗೆ ಎಣ್ಣೆಯಲ್ಲಿ ಕರಿಯದೇ ಒಣಸಂಡಿಗೆಯನ್ನೇ ಸೇವಿಸಬೇಕು. ಊಟದಲ್ಲಿ ನಂಚಿಕೊಂಡು ತಿಂದರೆ ಚೆನ್ನಾಗಿರುತ್ತದೆ.
ಇದನ್ನು ಪ್ರತಿದಿನ ತಿನ್ನುವುದರಿಂದ ಮಲವಿಸರ್ಜನೆ ಸಲೀಸಾಗಿ ಆಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತಸ್ರಾವ ನಿಂತು ಮೂಲವ್ಯಾಧಿಯ ತೊಂದರೆಯೂ ಕಡಿಮೆಯಾಗುತ್ತದೆ. ಉಷ್ಣತೆ ತಗ್ಗುತ್ತದೆ. ಹೊಟ್ಟೆಯಲ್ಲಿ ಉರಿ, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.

ಕರಿಬೇವಿನ ಚಟ್ನಿಪುಡಿ – 500 ಗ್ರಾಂ ಕರಿಬೇವು, 250 ಗ್ರಾಂ ಹುರಿಗಡಲೆ, 10 ಒಣ ಮೆಣಸಿನಕಾಯಿ, ಚಿಟಿಕೆ ಹಿಂಗು.
ನೆರಳಿನಲ್ಲಿ ಒಣಗಿಸಿದ ಕರಿಬೇವನ್ನು, ಸ್ವಲ್ಪ ಎಣ್ಣೆಯಲ್ಲಿ ಮೆಣಸಿನಕಾಯಿ ಮತ್ತು ಹಿಂಗಿನೊಂದಿಗೆ ಹುರಿದು ಹುರಿಗಡಲೆಯೊಂದಿಗೆ ಸೇರಿಸಿ ಪುಡಿ ಮಾಡಿ ಇಟ್ಟುಕೊಂಡು ಅನ್ನ, ಚಪಾತಿ, ರೊಟ್ಟಿ, ದೋಸೆ ಎಲ್ಲದಕ್ಕೂ ಬಳಸಬಹುದು.

ಕರಿಬೇವಿನ ಚಿತ್ರಾನ್ನ – ಅಕ್ಕಿ 2 ಕ್, ಕರಿಬೇವು 20 ಎಲೆ, ಒಂದು ಚಮಚೆ ಕಾಳು ಮೆಣಸು, ಜೀರಿಗೆ ಒಂದು ಚಮಚೆ, ಒಣಕೊಬ್ಬರಿ ತುರಿ ಒಂದು ಹಿಡಿ, ತುಪ್ಪ 5 ಚಮಚೆ, ಉಪ್ಪು ರುಚಿಕೆ ತಕ್ಕಷ್ಟು.
ಉದುರಾಗಿ ಅನ್ನ ತಯಾರಿಸಿಟ್ಟುಕೊಳ್ಳಬೇಕು. ಕರಿಬೇವನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳಬೇಕು. ಜೀರಿಗೆ, ಮೆಣಸನ್ನು ಹುರಿದು ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ಕರಿಬೇವನ್ನು ಬಾಣಲೆಯಲ್ಲಿ ಬಾಡಿಸಬೇಕು. ಕೈಯಿಂದ ಪುಡಿ ಮಾಡಿಕೊಳ್ಳಬೇಕು. ತುಪ್ಪದ ಒಗ್ಗರಣೆ ಹಾಕಿ ಜೀರಿಗೆ, ಮೆಣಸಿನ ತರಿ, ಕರಿಬೇವಿನ ಪುಡಿ ಹಾಕಿ ಸೌಟಿನಿಂದ ಕೈಯಾಡಿಸಬೇಕು. ನಂತರ ಇದಕ್ಕೆ ಅನ್ನ ಹಾಕಿ ಕೊಬ್ಬರಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹದವಾಗಿ ಕಲೆಸಿ ಮುಚ್ಚಿಡಬೇಕು. ಮೂಲವ್ಯಾಧಿಯವರಿಗೆ ಮಾತ್ರವಲ್ಲ ಅಜೀರ್ಣ ಮತ್ತು ಜ್ವರ ಬಿಟ್ಟ ನಂತರವೂ ಇದು ಉತ್ತಮ ಆಹಾರ.

ಕೊತ್ತಂಬರಿ ಚಟ್ನಿ – ಕೊತ್ತಂಬರಿ ಸೊಪ್ಪು 2 ಕಟ್ಟು, ಒಣ ಮೆಣಸಿನಕಾಯಿ-2, ಕಡಲೆಬೇಳೆ 2 ಚಮಚೆ, ಉದ್ದಿನಬೇಳೆ 2 ಚಮಚೆ, ಜೀರಿಗೆ 2 ಚಮಚೆ, ಹುಣಸೆ ರಸ ಸ್ವಲ್ಪ, ಒಣ ಕೊಬ್ಬರಿ ತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಬೇಕೆನಿಸಿದಲ್ಲಿ ಬೆಲ್ಲ, ಎಣ್ಣೆ ಸ್ವಲ್ಪ.
ಕೊತ್ತಂಬರಿ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಬಿಡಿಸಿಟ್ಟುಕೊಳ್ಳಬೇಕು. ನಂತರ ಬಾಣಲಿಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಳ್ಳಬೇಕು. ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಒಣ ಮೆಣಸಿನಕಾಯಿ ಒಗ್ಗರಣೆಗೆ ಹಾಕಿಕೊಳ್ಳಬೇಕು. ಅದಕ್ಕೆ ಹುಣಸೆ ರಸ, ಉಪ್ಪು, ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ಚಟ್ನಿ ತಯಾರಿಸಿಕೊಳ್ಳಬೇಕು. ಅದಕ್ಕೆ ನೀರು ಹಾಕದೇ ರುಬ್ಬಿಕೊಳ್ಳಬೇಕು. ಈ ಚಟ್ನಿಯನ್ನು ಒಂದು ವಾರ ಕಾಲ ಇಟ್ಟರೂ ಹಾಳಾಗುವುದಿಲ್ಲ. ಅನ್ನ, ರೊಟ್ಟಿ, ಚಪಾತಿ ಜೊತೆಗೆ ತಿನ್ನಲು ರುಚಿ.

ಗುಲ್ಕಂದ್ – ಗುಲಾಬಿ ದಳಗಳು 1 ಭಾಗ, ಜೇನುತುಪ್ಪ ಅರ್ಧ ಭಾಗ, ಕಲ್ಲುಸಕ್ಕರೆ ಪುಡಿ ಅರ್ಧ ಭಾಗ ಅಥವಾ ಜೇನುತುಪ್ಪ, ಗುಲಾಬಿ ಸಮಭಾಗ ತೆಗೆದುಕೊಳ್ಳಬೇಕು. ಉತ್ತಮ ಗುಣಮಟ್ಟದ ಗುಲಾಬಿದಳಗಳನ್ನು ಆಯ್ದು ದಳಗಳನ್ನು ಬಿಡಿಸಿಟ್ಟುಕೊಳ್ಳಬೇಕು. ನಂತರ ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತೊಳೆದ ನಂತರ ಆರಲು ಬಿಡಬೇಕು. ತೇವಾಂಶ ಇಲ್ಲದಂತೆ ಒಣಗಿರಬೇಕು. ಒಂದು ಪಿಂಗಾಣಿ ಜಾಡಿಯಲ್ಲಿ ಕಲ್ಲು ಸಕ್ಕರೆ ಪುಡಿ ಉದುರಿಸಿ ಗುಲಾಬಿ ಹರಡಬೇಕು. ನಂತರ ಜೇನುತುಪ್ಪ ಹಾಕಬೇಕು. ಮತ್ತೆ ಕಲ್ಲು ಸಕ್ಕರೆ ಪುಡಿ, ಗುಲಾಬಿ, ಜೇನುತುಪ್ಪ ಹಾಕಬೇಕು. ಇದೇ ರೀತಿ ಹತ್ತು ಪದರ ಹರಡಬೇಕು. ನಂತರ ಜಾಡಿಯನ್ನು ಸ್ವಚ್ಛವಾದ ಬಿಳಿಯ ಬಟ್ಟೆಯಲ್ಲಿ ಮುಚ್ಚಬೇಕು. ತೇವಾಂಶ ಒಳಹೋಗದಂತೆ ಗಟ್ಟಿಯಾಗಿ ಮುಚ್ಚಬೇಕು. ನಂತರ ಈ ಜಾಡಿಯನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಗಲು ಹೊತ್ತು ಬಿಸಿಲಿನಲ್ಲಿ ಇಟ್ಟು ಸೂರ್ಯಾಸ್ತದ ನಂತರ ಮನೆಯೊಳಗಡೆ ತೆಗೆದಿಡಬೇಕು. ಇದೇ ರೀತಿ 3 ವಾರ ಅಂದರೆ 21 ದಿನಗಳು ಮಾಡಬೇಕು. ನಂತರ ಮೇಲಿನ ಬಟ್ಟೆ ತೆಗೆಯಬೇಕು. ರುಚಿಕರವಾದ ಗುಲ್ಕಂದ್‌ ಸಿದ್ಧವಾಗುತ್ತದೆ. ಗುಲಾಬಿದಳಗಳು ಜೇನು ಮತ್ತು ಕಲ್ಲು ಸಕ್ಕರೆಯಲ್ಲಿ ಬೆರೆತು, ಕಲೆತು ಮೃದುವಾಗಿರುತ್ತವೆ. ಏಲಕ್ಕಿ ಪುಡಿ ಬೆರೆಸಿದಲ್ಲಿ ಘಮ ಘಮ ಪರಿಮಳ ಬರುತ್ತದೆ. ಮೂಲವ್ಯಾಧಿಯಲ್ಲಿ ರಕ್ತ ಬೀಳುತ್ತಿದ್ದಲ್ಲಿ ಇದು ಅತ್ಯುತ್ತಮ ಆಹಾರ ಮತ್ತು ಔಷಧಿಯಾಗಿ ಕೆಲಸ ಮಾಡುತ್ತವೆ. ಒಂದು ಚಮಚೆ ಗುಲ್ಕಂ್ ತಿಂದು ಹಾಲು ಕುಡಿಯಬೇಕು. ಬಾಳೆಹಣ್ಣಿನೊಂದಿಗೆ ಬೆರೆಸಿ ತಿನ್ನಬಹುದು.
ಪಪ್ಪಾಯ ಹಣ್ಣಿನ ಸಲಾಡ್- ಪಪ್ಪಾಯ ಹಣ್ಣನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಹಾಲು, ಜೇನು ಬೆರೆಸಿ ತಿಂದಲ್ಲಿ ಒಳ್ಳೆಯದು. ಪಪ್ಪಾಯದೊಂದಿಗೆ ಬಾಳೆಹಣ್ಣು, ಕರಬೂಜ ಹಣ್ಣುಗಳನ್ನು ಬೆರೆಸಿಕೊಳ್ಳಬಹುದು.

ಪುಂಡಿ ಸೊಪ್ಪಿನ ಚಟ್ನಿ – 2 ರಿಂದ 3 ಕಟ್ಟು ಪುಂಡಿ ಸೊಪ್ಪು, ಒಣಮೆಣಸಿನಕಾಯಿ 6, ಉದ್ದಿನ ಬೇಳೆ 4 ಚಮಚೆ, ಮೆಂತ್ಯ 2 ಚಮಚೆ, ಜೀರಿಗೆ ಒಂದು ಚಮಚೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಸ್ವಲ್ಪ.
ಪುಂಡಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಚೆನ್ನಾಗಿ ಒಣಗಿಸಿದ ಮೇಲೆ ಎಣ್ಣೆ ಹಾಕಿ ಹುರಿಯಬೇಕು. ನಂತರ ಕಾಯಿ, ಉದ್ದಿನಬೇಳೆ ಪುಡಿ, ಮೆಂತ್ಯ, ಜೀರಿಗೆ, ಉಪ್ಪು ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ಕೆಲದಿನಗಳ ಕಾಲ ತೆಗೆದಿಟ್ಟಲ್ಲಿ ಕೆಡುವುದಿಲ್ಲ.

7 comments:

  1. ಮಹನೀಯರೇ
    ತುಂಬಾ ಸಂತೋಷವಾಯಿತು ಓದಿ. ಸಾಕಷ್ಟು ವಿವರ ಇದೆ. ನಾನು ಮನೆ ಮದ್ದು ಆಯುರ್ವೇದ ಉಪಾಸಕ. ನಿಮ್ಮ ಈ ಬರಹ ಚೆನ್ನಾಗಿದೆ. ಇನ್ನೂ ಬರೆಯುತ್ತಾ ಇರಿ .ಶುಭಾಶಯಗಳು

    ReplyDelete
    Replies
    1. ಖಂಡಿತ ನಿಮಗೆ ಗೊತ್ತಿರುವ ಸಲಹೆಗಳನ್ನು ಕೊಡುತ್ತಿರಿ . ಹಿತ್ತಲಮದ್ದು ಗಳನ್ನು ಸಂಗ್ರಹಿಸಿ ಬೆಳೆಸಿ ಬಳಸೋಣ

      Delete
    2. join this fb group
      https://www.facebook.com/groups/malnadanand/

      Delete
  2. Thank you so much. Very usefull information. God bless you all.

    ReplyDelete
  3. Nimagu idara bagge maddu gottiddare dayavittu tilisi idakke serisalaguvudu

    ReplyDelete
  4. good its helps me alot...


    nange itching tumba aguthde aga nanu keredu kollutene... e reethi dinakke ondu illave 2 baari matra aguthide..

    ega nanu enu madebeku.. itching kadime aglu..
    mansikavagi idrinda nange tumba himse aguthide

    ReplyDelete
  5. skin alergy ge antane 1 post ide check madi @vastradatha

    ReplyDelete