Monday, February 28, 2011

NATURAL TOOTH PASTE

ನೀವು ನಕ್ಕಾಗ ಹೊಳೆಯುವ ದಂತಪಂಕ್ತಿಗಳು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತವೆ. ಸುಂದರ ನಗುವಿಗೆ ಕಾರಣವಾಗುತ್ತದೆ. ಕ್ಷಮಿಸಿ, ಇದು ಯಾವುದೇ ಟೂಥ್ ಪೇಸ್ಟ್ ಜಾಹೀರಾತಲ್ಲ. ಮಾರುಕಟ್ಟೆಯಲ್ಲಿಂದು ಸಾವಿರಾರು ಕೃತಕ ಡೆಂಟಲ್ ಕೇರ್ ಉತ್ಪನ್ನಗಳು ಬರುತ್ತಿವೆ. ಆದರೆ ನಾವು ಹೇಳಹೊರಟದ್ದು ನೀವು ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಡೆಂಟಲ್ ಕೇರ್ ಬಗ್ಗೆ. ಹಲ್ಲು, ಒಸಡು, ಬಾಯಿಯ ಆರೈಕೆಗೆ ಇದಕ್ಕಿಂತ ಬೆಸ್ಟ್ ಉಪಾಯ ಯಾವುದಿದೆ?

ಚಂದದ ನಗುವಿಗೆ ಇಲ್ಲಿದೆ ಟಿಪ್ಸ್

1. ಲವಂಗ : ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟಿರಿಯಾ ಹೊಡೆದೊಡಿಸಿ ಹಲ್ಲನ್ನು ಸುರಕ್ಷಿತವಾಗಿಡಲು ಲವಂಗ ಬಳಸಿ. ಇದು ಆಂಟಿ-ಬ್ಯಾಕ್ಟಿರಿಯಾ ಗುಣಹೊಂದಿದ್ದು ಬಾಯಿಯ ಕೆಟ್ಟ ವಾಸನೆಯನ್ನೂ ಹೋಗಲಾಡಿಸುತ್ತದೆ. ಪ್ರತಿ ಬಾರಿ ಊಟ ಮಾಡಿದ ನಂತರ ಒಂದು ಲವಂಗವನ್ನು ಬಾಯಿಯೊಳಗೆ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಹಲ್ಲು ನೋವಿಗೆ ಲವಂಗದ ಎಣ್ಣೆ ಉತ್ತಮ ಔಷಧಿ.

2. ಟೂಥ್ ಪೇಸ್ಟ್ : ಮನೆಯಲ್ಲಿಯೇ ಟೂಥ್ ಪೇಸ್ಟ್ ತಯಾರಿಸಿ. ಹೇಗೆ ಮಾಡುವುದೆಂದು ಕೇಳುತ್ತಿದ್ದೀರಾ? ಅಡುಗೆ ಸೋಡಾ 6 ಚಮಚ, 1/3 ಚಮಚ ಉಪ್ಪು, 4 ಚಮಚ ಗ್ಲಿಸರಿನ್ ಮತ್ತು 15 ಹನಿ ಪೆಪ್ಪರ್ ಮಿಂಟ್ ಎಣ್ಣೆಯನ್ನು ಸರಿಯಾಗಿ ಪೇಸ್ಟ್ ಆಗುವರೆಗೆ ಮಿಕ್ಸ್ ಮಾಡಿಟ್ಟುಕೊಳ್ಳಿ. ಪೇಸ್ಟ್ ರೆಡಿ. ಇದನ್ನು ದಿನಾ ಬಳಸುತ್ತಿದ್ದರೆ ನಿಮಗೆ ಆಶ್ಚರ್ಯವಾಗುವಂತೆ ಹಲ್ಲು ಶುಭ್ರವಾಗುತ್ತದೆ. ಇದು ಬಾಯಿಯೊಳಗಿನ ಕ್ರಿಮಿಗಳನ್ನೂ ನಾಶಪಡಿಸುತ್ತದೆ. ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದನ್ನು ಮಾತ್ರ ಮರೆಯಬೇಡಿ.

3. ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ : ದಿನಕ್ಕೊಮ್ಮೆ ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆ. ಹಲ್ಲು ಕೂಡ ಬಲಿಷ್ಠವಾಗುತ್ತವೆ.

4. ಬೇವಿನ ಕಡ್ಡಿ : ಬಾಯಿಯೊಳಗಿನ ಬ್ಯಾಕ್ಟಿರಿಯಾ ಹೋಗಲಾಡಿಸಲು ಬೇವಿನ ಕಡ್ಡಿಯಿಂದ ಹಲ್ಲುಜ್ಜಿ. ಬೇವಿನ ಕಡ್ಡಿ ಜಗಿಯುವುದರಿಂದ ಹಲ್ಲು ಸದೃಢವಾಗುತ್ತವೆ. ಇದರಿಂದ ಹಲ್ಲು ಹುಳುಕಾಗುವುದು ಕೂಡ ತಪ್ಪುತ್ತದೆ. ಆರಂಭದಲ್ಲಿ ಕಹಿಎನಿಸಬಹುದು. ಆದರೆ ರೂಢಿಯಾಗುವವರೆಗೆ, ಅಷ್ಟೆ.

5. ಮೂಲಂಗಿ ಎಲೆ : ಮೂಲಂಗಿ ಎಲೆ ಕೂಡ ಹಲ್ಲಿನ ಆರೋಗ್ಯಕ್ಕೆ ಸಹಕಾರಿ. ಮೂಲಂಗಿ ಎಲೆ ಜಗಿಯುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದು ಹಲ್ಲಿಗೆ ಒಳ್ಳೆಯದು. ಮಾರುಕಟ್ಟೆಗೆ ಹೋದಾಗ ಮೂಲಂಗಿ ಜೊತೆಗಿರುವ ಎಲೆಯನ್ನು ಎಸೆಯಬೇಡಿ. ಎಲೆಯನ್ನು ಹಸಿ ಈರುಳ್ಳಿ ಜೊತೆ ಸಣ್ಣಗೆ ಹೆಚ್ಚಿ ಉಪ್ಪು, ನಿಂಬೆರಸ ಬೆರೆಸಿ ಪಚಡಿ ಮಾಡಿ ತಿನ್ನಬಹುದು. ಹೊಟ್ಟೆಗೂ ಇದು ಒಳ್ಳೆಯದು.

6. ಕ್ಯಾಲ್ಸಿಯಂ : ಕ್ಯಾಲ್ಸಿಯಂ ಜಾಸ್ತಿಯಿರುವ ಆಹಾರದಿಂದ ಹಲ್ಲು ಮತ್ತು ಒಸಡು ಹೆಚ್ಚು ಆರೋಗ್ಯಪೂರ್ಣವಾಗುತ್ತದೆ. ಅದಕ್ಕಾಗಿ ಕಾಳು, ಹಣ್ಣು ತರಕಾರಿಗಳು, ಕೋಳಿ ಮೊಟ್ಟೆ ಮತ್ತು ಡೈರಿ ಉತ್ಪನ್ನಳು ಇತ್ಯಾದಿ ಕ್ಯಾಲ್ಸಿಯಂ ಅತ್ಯಧಿಕವಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಈ ಆರು ಟಿಪ್ಸ್ ಮೂಲಕ ನೀವು ಮನೆಯಲ್ಲಿಯೇ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮಗೆ ನೀವೇ ಡೆಂಟಿಸ್ಟ್ ಆಗಿ. ಇನ್ನೊಂದು ಮಾತು ನೆನಪಿಡಿ. ಆರೋಗ್ಯಕರ ಹಲ್ಲುಗಳು ಹೃದಯಬೇನೆ ಮುಂತಾದ ಅನಾರೋಗ್ಯದಿಂದಲೂ ಕಾಪಾಡುತ್ತವೆ.

ಪುನರ್ಪುಳಿ ಸಾರುದಕ್ಷಿಣ ಕನ್ನಡದಲ್ಲಿ ಬಹಳ ಜನಪ್ರಿಯವಾದ ಸಾರು ಇದು.ಪುನರ್ಪುಳಿಯನ್ನು ಸಾಮಾನ್ಯವಾಗಿ ಪಿತ್ತ ಹೆಚ್ಚಾದಾಗ, ಕರಿದ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಟ್ಟರೆ, ತಲೆ ತಿರುಗುವಿಕೆ, ಅಲರ್ಜಿಯಂತಹ ತೊಂದರೆಗಳುಂಟಾದಾಗ ಹೆಚ್ಚಾಗಿ ಬಳಸುತ್ತಾರೆ.

ಬೇಕಾಗುವ ಸಾಮಗ್ರಿಗಳು

ಪುನರ್ಪುಳಿ (ಕೋಕಮ್) : ೮ ರಿಂದ ಹತ್ತು
ನೀರು :ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ:ಅರ್ಧ ಚಮಚ
ಕಾಳುಮೆಣಸಿನ ಪುಡಿ:ಕಾಲು ಚಮಚ

ಕೆಂಪು ಮೆಣಸು : ೪
ಎಣ್ಣೆ:ಒಂದು ಚಮಚ
ಸಾಸಿವೆ, ಜೀರಿಗೆ:ತಲಾ ಒಂದು ಚಮಚ
ಅರಸಿನ :ಕಾಲು ಚಮಚ
ಉದ್ದು:ಕಾಲು ಚಮಚ
ಬೇವಿನೆಲೆ : ೬ ಎಸಳು

ವಿಧಾನ :

೧.ಪುನರ್ಪುಳಿಯನ್ನು ನೀರಿನಲ್ಲಿ ಹದಿನೈದು ನಿಮಿಷಗಳ ಕಾಲ ನೆನೆಸಿ ಇಡಿ
೨.ಉಪ್ಪು,ಬೆಲ್ಲದ ಪುಡಿ, ಕಾಳು ಮೆಣಸಿನ ಪುಡಿ ಇವುಗಳನ್ನು ಈ ನೀರಿಗೆ ಹಾಕಿ,ಕುದಿಯಲು ಬಿಡಿ.

೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ,ಅದಕ್ಕೆ ಸಾಸಿವೆ, ಜೀರಿಗೆ,ಉದ್ದು,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ ಹಾಕಿ.ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಒಲೆ ಆರಿಸಿ.

ಅತ್ಯಂತ ಸರಳವೂ ರುಚಿಕರವೂ ಆದ ಸಾರು ಇದು.

ನಿಂಬೆ ( LEMON )ನಿಂಬೆ ರಸ ವಿಟಮಿನ್ ಸಿ ಯನ್ನು ಹೊಂದಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಿಂಬೆ ರಸ ಬಳಸುವುದು ಅತೀ ಉತ್ತಮ.

ಸಾಮಗ್ರಿಗಳು

ನಿಂಬೆ ರಸ:ಎರಡು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ:ಅರ್ಧ ಚಮಚ
ನೀರು :ಎರಡು ಲೋಟ

ಕೆಂಪು ಮೆಣಸು : ೪
ಎಣ್ಣೆ:ಒಂದು ಚಮಚ
ಸಾಸಿವೆ, ಜೀರಿಗೆ:ತಲಾ ಒಂದು ಚಮಚ
ಅರಸಿನ :ಕಾಲು ಚಮಚ
ಉದ್ದು:ಕಾಲು ಚಮಚ
ಬೇವಿನೆಲೆ : ೬ ಎಸಳು

------------------
ವಿಧಾನ
-------------------

೧.ನೀರನ್ನು ಕುದಿಸಿ, ಅದಕ್ಕೆ ಉಪ್ಪು,ಬೆಲ್ಲದ ಪುಡಿ ಹಾಕಿ.
೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ,ಅದಕ್ಕೆ ಸಾಸಿವೆ, ಜೀರಿಗೆ,ಉದ್ದು,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ ಹಾಕಿ.ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಒಲೆ ಆರಿಸಿ.ಸಾರಿಗೆ ನಿಂಬೆ ರಸ ಹಿಂಡಿ,
೩.ಬೇಕಿದ್ದರೆ ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಹಾಕಬಹುದು.


‎8 Amazing Health Benefits of Lemon Essential Oil

1. Stress Relief

One of the most important health benefits of lemon essential oil is stress relief. Lemon essential oil has been used to alleviate stress because of its calming nature. It is a cure for mental fatigue, anxiety, dizziness and exhaustion. This oil refreshes and invigorates the mind by replacing negative emotions with positive mind frame. Inhalation of lemon essential oil also increases concentration of the mind.

2. Better Sleep

Another great health benefit of lemon essential oil is that it can be used to treat insomniac people. This is due to its ability to induce sleep when used.

3. Improved Immunity

Consistent use of lemon essential oil can greatly improve your body immunity due to its high vitamin content. It also stimulates the white blood cells, increasing the white blood cells’ ability to fight off diseases. It also improves the circulation of blood in your body.

4. Cure for Stomach Ailments

These lemon essential oils have been used to cure stomach ailments, such as amoeba and stomachache. In addition, it treats cramps, reduces acidity in the stomach, and cures indigestion.

5. Improved Hair Health

If you have problems with your hair, such as constant dandruff, these lemon essential oils will be good for you. For women who treasure shining and healthy hair, you just need to use these lemon essential oils and have a wonderful hair.

6. Relief from Different Diseases

Continued use of these oils increases the ability of the body to fend off attacks from diseases such as malaria and typhoid. These essential oils also relieve you from fever, throat infections and asthmatic conditions.

7. Better Skin

If you have a bad skin, you can improve its luster by just applying these oils. It detoxifies and gives dull skins a new lease of life, so that they look delicate and vibrant. Due to its antiseptic properties, it readily treats skin conditions such as pimples. Its fresh lemon scent reduces sebum production by your skin, which makes it extremely beneficial to aging skins.

8. Weight Loss

The use of lemon essential oil reduces weight and can be a perfect remedy for you if you have weight problems.


ಶುಂಠಿ ತಂಬುಳಿ ( GINGER )


                                                                                                Archana Hebbar
ಬೇಕಾಗುವ ಸಾಮಗ್ರಿಗಳು
ಶುಂಠಿ :ಒಂದು ಇಂಚು
ಜೀರಿಗೆ:ಒಂದು ಚಮಚ
ಹಸಿ ಮೆಣಸು :ಒಂದು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಇಂಗು :ಚಿಟಿಕೆ

ವಿಧಾನ :
೧. ಶುಂಠಿ,ಜೀರಿಗೆ,ಹಸಿ ಮೆಣಸು,ತೆಂಗಿನ ಕಾಯಿ ತುರಿ ಇವುಗಳನ್ನು ನುಣ್ಣಗೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು,ಇಂಗು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಕಲಸಿ.

ಅಜೀರ್ಣವಾಗಿದ್ದರೆ,ಬಾಯಿ ರುಚಿ ಕೆಟ್ಟಿದ್ದರೆ ಈ ತಂಬುಳಿ ಅತ್ಯುತ್ತಮ ಔಷಧಿ.ಮಜ್ಜಿಗೆ ಹಾಕದೆ ಗಟ್ಟಿಯಾಗಿ ಮಾಡಿದರೆ ಇದು ಶುಂಠಿ ಚಟ್ನಿ ಯಾಗುತ್ತದೆ.

ನೆಲ್ಲಿಕಾಯಿ ತಂಬುಳಿ (AMLA )ಬೇಕಾಗುವ ಸಾಮಗ್ರಿಗಳು

ನೆಲ್ಲಿಕಾಯಿ :ಹತ್ತು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಹಸಿ ಮೆಣಸು :ಒಂದು

ವಿಧಾನ :
೧.ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜವನ್ನು ಬೇರ್ಪಡಿಸಿ.
೨.ಬೀಜರಹಿತ ನೆಲ್ಲಿಕಾಯಿ,ತೆಂಗಿನ ತುರಿ , ಹಸಿ ಮೆಣಸು, ಜೀರಿಗೆ ಇವುಗಳನ್ನು ನುಣ್ಣಗೆ ರುಬ್ಬಿ.
೩.ಇದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಕಲಕಿ.

ವಿ.ಸೂ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ತಂಬುಳಿ ಸಹಕಾರಿ.
ಒಣ ನೆಲ್ಲಿಕಾಯಿಯನ್ನು ಬಳಸುವುದಾದರೆ, ಆದನ್ನು ನೀರಿನಲ್ಲಿ ೨ ಗಂಟೆಗಳ ಕಾಲ ನೆನೆಸಿ, ಬಳಿಕ ತೆಂಗಿನ ತುರಿ ಜತೆ ರುಬ್ಬಬೇಕು

ಬ್ರಾಹ್ಮಿ ತಂಬುಳಿ ( ಒಂದೆಲಗ )ತೆಂಗಿನ ತುರಿ :ಅರ್ಧ ಲೋಟ
ಬ್ರಾಹ್ಮಿ ಎಲೆ : ಅರ್ಧ ಲೋಟ
ಮೊಸರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಒಂದು ಚಮಚ
ಜೀರಿಗೆ :ಒಂದು ಚಮಚ
ಮಜ್ಜಿಗೆ ಮೆಣಸು :೪

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ.
ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ.
ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ.

ಈಗ ರುಚಿಯಾದ ತಂಬುಳಿ ಸಿದ್ಧ.

ಸ್ಮರಣ ಶಕ್ತಿಯ ವೃದ್ಧಿಗೆ ಈ ತಂಬುಳಿ ಅತ್ಯುತ್ತಮ. ಬ್ರಾಹ್ಮಿ ಅಥವಾ ಒಂದೆಲಗ ಎಂದು ಕರೆಯಲ್ಪಡುವ ಈ ಎಲೆಗಳನ್ನು ಬೆಳಗ್ಗೆ ಹಸಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಅತೀ ಉತ್ತಮ.

ಕಾಳು ಮೆಣಸು-ಜೀರಿಗೆ ಸಾರು


ಕಾಳು ಮೆಣಸು : ಅರ್ಧ ಚಮಚ
ಜೀರಿಗೆ:ಒಂದು ಚಮಚ
ಬೆಲ್ಲದ ಪುಡಿ : ಒಂದು ಚಮಚ
ಬೆಳ್ಳುಳ್ಳಿ ಎಸಳು :೪
ಅರಸಿನ :ಕಾಲು ಚಮಚ
ಸಾಸಿವೆ :ಒಂದು ಚಮಚ
ತುಪ್ಪ :ಒಂದು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಹುಣಸೆ ಹುಳಿ: ನಿಂಬೆ ಗಾತ್ರದಷ್ಟು
ಬೇವಿನೆಲೆ :ಹತ್ತು ಎಸಳು
ಇಂಗು:ಚಿಟಿಕೆ

ವಿಧಾನ :

ಮೊದಲಿಗೆ ಜೀರಿಗೆ ಮತ್ತು ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಹುಣಸೆ ಹಣ್ಣನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಇಟ್ಟು, ಬಳಿಕ ಅದನ್ನು ಹಿಂಡಿ ರಸ ಬೇರ್ಪಡಿಸಿ ಇಟ್ಟುಕೊಳ್ಳಿ.

ನಾಲ್ಕು ಲೋಟ ನೀರು ಬಿಸಿ ಮಾಡಿ ಅದರಲ್ಲಿ ಜೀರಿಗೆ,ಕಾಳು ಮೆಣಸಿನ ಪುಡಿ,ಹುಣಸೆ ರಸ ,ಬೆಲ್ಲ ಹಾಕಿ ಕುದಿಸಿ.

ಒಗ್ಗರಣೆ ಸೌಟಿನಲ್ಲಿ ತುಪ್ಪ, ಸಾಸಿವೆ,ಅರಸಿನ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಇಂಗು, ಬೇವಿನೆಲೆ ಹಾಕಿ ಕಲಕಿ, ಕುದಿಯುತ್ತಿರುವ ಕಾಳು ಮೆಣಸು, ಜೀರಿಗೆ ನೀರಿಗೆ ಹಾಕಿ.

ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲಕಿ.ಇನ್ನೂ ಎರಡು ನಿಮಿಷ ಕುದಿಸಿ,ಒಲೆ ಆರಿಸಿ.

ಇದೀಗ ನೋಡಿ ,ನಾಲಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸು-ಜೀರಿಗೆ ಸಾರು ತಯಾರಾಯಿತು. ಇನ್ನೇಕೆ ತಡ, ಬಿಸಿ ಬಿಸಿ ಅನ್ನಕ್ಕೆ ಕಲಕಿ ತಿನ್ನುವುದೊಂದೇ ಬಾಕಿ!!ಕಾಳು ಮೆಣಸು,ಜೀರಿಗೆ ಕೆಮ್ಮು,ಕಫಕ್ಕೆ ಅತ್ಯುತ್ತಮ ಔಷಧಿ

"ಹಿತ್ತಲ ಮದ್ದು ಗ್ರೂಪ್ ನಲ್ಲಿ ಅರ್ಚನಾ ಹೆಬ್ಬಾರ್ ರವರು ಹಾಕಿದ್ದು "

ಚರ್ಮ ರೋಗಗಳಿಗೆ "ಹಿತ್ತಲ ಮದ್ದು" : (Home remedies for SKIN ALERGY)ಕಹಿಬೇವಿನ ಸೊಪ್ಪು ತಂದು ಅದನ್ನು ಅರೆದು ಸ್ವಲ್ಪ ಅರಸಿನ ಹುಡಿ ಬೆರೆಸಿ ಚೆನಾಗಿ ಮೈಗೆ ಉಜ್ಜಬೇಕು. ಹತ್ತು ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಇದರಿಂದ ಮೈಯಲ್ಲಿರುವ ಕಜ್ಜಿಯ ಕ್ರಿಮಿಗಳು ನಾಶವಾಗಿ ಕಜ್ಜಿ ಯಾ ತುರಿಕೆ ನಿಲ್ಲುತ್ತದೆ. ತುರಿಕೆ, ಕಜ್ಜಿ ಇಲ್ಲದವರು ಕೂದ ಸ್ನಾನದ ನೀರಿನಲ್ಲಿ ಸ್ವಲ್ಪ ಕಹಿಬೇವಿನ ಸೊಪ್ಪು ಹಾಕಿ ನೀರು ಬಿಸಿಆದ ಮೇಲೆ ಸ್ನಾನ ಮಡಿದಲ್ಲಿ ಚರ್ಮ ರೋಗಗಳು ಬರುವುದಿಲ್ಲ. ಚರ್ಮ ರೋಗ ಇಲ್ಲದವರೂ ಆಗಾಗ ಈರೀತಿ ಮಾಡಬೆಕು. ಕಹಿಬೇವಿನರಸಕ್ಕೆ ಒನ್ದು ಯಾ ಎರಡು ಹನಿ ತೆನ್ಗಿನೆಣ್ಣೆ ಬೆರೆಸಿ ಮುಖಕ್ಕೆ ಚೆನ್ನಾಗಿ ತಿಕ್ಕುವುದರಿಂದ ಮೊಡವೆಯ ಬಾಧೆ ಇರುವುದಿಲ್ಲ..

ಸ್ಕಿನ್ ಅಳರ್ಜೆ ಇದ್ದರೆ ಲೋಳೆಸರದ ಒಂದು ಕಡ್ಡಿ ಉಪ್ಪು ಅರಿಶಿನದೊಂದಿಗೆ ಕುದಿಸಿ ..ನಂತರ ಬರುವ ಲೋಳೆಯೆನ್ನು ಚೆನ್ನಾಗಿ ತಿಕ್ಕಿ ಹದಿನೈದು ನಿಮಿಷ ಬಿಟ್ಟು ಸ್ನಾನ ಮಾಡಿ ..4 ದಿನ ಮಾಡಿನೋಡಿ ಪೂರ್ಣ ಗುಣಹೊಂದಬಹುದು...

ಚರ್ಮರೋಗ ಇರುವವರು ಮೈಯಿಗೆ ಸಾಬೂನು ಹಚ್ಚಬಾರದು. ಕಡಲೆ ಹಿಟ್ಟು ಅಥವಾ ಹೆಸರುಕಾಳಿನ ಹಿಟ್ಟು ಹಚ್ಚಿ ಸ್ನಾನ ಮಾಡಬೇಕು.

ಬಿಸಿ ನೀರಿನ ಸ್ನಾನ ಉತ್ತಮ. ಋತುಮಾನಗಳಿಗೆ ತಕ್ಕಂತೆ ಉಡುಪನ್ನು ಧರಿಸಿದರೆ, ಚರ್ಮದ ಆರೋಗ್ಯ ಕಾಪಾಡಲು ಉತ್ತಮ. ಅಹಾರ ವಿಹಾರಗಳು ನಿಮ್ಮ ಚರ್ಮದ ಮೇಲೆ ಪ್ರಭಾವ ಬೀರದಿರಲಿ.
ಆಲೂಗಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆದು ಚರ್ಮದ ಮೇಲೆ ಲೇಪಿಸಿದರೆ ತುರಿ ಕಜ್ಜಿ ನಿವಾರಣೆಯಗುವದು.
ಮೆಂತೆಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. 45 ದಿನಗಳಿಂದ 3 ತಿಂಗಳೊಳಗೆ ತೊನ್ನು ಸೇರಿದಂತೆ ಚರ್ಮರೋಗಗಳೆಲ್ಲವೂ ಮಾಯವಾಗುತ್ತದೆ. ಸಂದರ್ಭ ಟೊಮೆಯೋ, ಬದನೆ ಸೇವಿಸಬಾರದು. ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.

ಒಣ ಚರ್ಮವಿದ್ದರೆ, ಅರಿಶಿನ ಪುಡಿಯನ್ನು ಸ್ವಲ್ಪ ಹಾಲು ಹಾಗೂ ಎಳ್ಳೆಣ್ಣೆಯೊಂದಿಗೆ ಬೆರೆಸಿ ಮೈಗೆ ಲೇಪಿಸಿ 15 ನಿಮಿಷದ ಬಳಿಕ ಸ್ನಾನ ಮಾಡಿದರೆ, ಚರ್ಮ ಮೃದುವಾಗಿ ಹೊಳಪು ಪಡೆಯುತ್ತದೆ.ತ್ವಚೆ ಅಲರ್ಜಿಗೆ ಮನೆ ಮದ್ದು.

* ಎಣ್ಣೆ ಹಚ್ಚುವುದು: ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಮೇಗೆ ಹಚ್ಚಿ ಒಂದು ರಾತ್ರಿ ಬಿಡಬೇಕು.ನಂತರ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಈ ರೀತಿ ಎಣ್ಣೆ ಹಚ್ಚಿದಾಗ ಕಾಟನ್ ಬಟ್ಟೆ...
ಧರಿಸುವುದು ಒಳ್ಳೆಯದು.

* ನಿಂಬೆ ರಸ ಮತ್ತು ತೆಂಗಿನೆಣ್ಣೆ: ನಿಂಬೆ ರಸ ಮತ್ತು ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ ರಾತ್ರಿಯಲ್ಲಿ ಮೈಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಿದ್ದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು

* ಕಹಿ ಬೇವಿನ ಪೇಸ್ಟ್: ಕಹಿ ಬೇವಿನ ಎಲೆಯನ್ನು ಅರೆದು ಮೈಗೆ ಹಚ್ಚಿ ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಅಲರ್ಜಿ ಇದ್ದರೂ, ಇಲ್ಲದಿದ್ದರೂ ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕುವುದು ಒಳ್ಳೆಯದು.

* ಗಸೆಗಸೆ ಮತ್ತು ನಿಂಬೆ ರಸ: ಅಲರ್ಜಿಯಿಂದ ಉಂಟಾಗಿರುವ ಗಾಯವನ್ನು ಒಣಗಿಸಲು ಗಸೆಗಸೆಯನ್ನು ಅರೆದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ಅಲರ್ಜಿಯಿಂದ ಉಂಟಾದ ಗಾಯಕ್ಕೆ ಹಚ್ಚುವುದು ಒಳ್ಳೆಯದು.

*ತಣ್ಣೀರು ಸ್ನಾನ: ತ್ವಚೆ ಅಲರ್ಜಿ ಉಂಟಾಗಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡದಿರುವುದು ಒಳ್ಳೆಯದು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ.
ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.ಚರ್ಮ ರೋಗಗಳಿಗೆ "ಹಿತ್ತಲ ಮದ್ದು" :
> ಟೊಮೇಟೊ  ಅರೆದು  ಮುಖಕ್ಕೆ  ಹಚ್ಚಿ  ಮೃದುವಾಗಿ  ಮಾಲಿಷು  ಮಾಡಬೇಕು. ಸ್ವಲ್ಪ  ಹೊತ್ತು  ಬಿಟ್ಟು  ತೊಳೆಯಬೇಕು . ಇದರಿಂದ  ಮುಖದ  ಮೇಲಿರುವ  ಕಪ್ಪು  ಕಲೆಗಳು  ಮಾಯವಾಗಿ  ಚರ್ಮ  ನುಣುಪಾಗಿ  ಕಾಂತಿಯುತವಾಗುತ್ತದೆ.

> ಟೊಮೇಟೊ  ಹಣ್ಣಿನ  ಶುದ್ಧ  ರಸವನ್ನು  ಸೇವಿಸುವುದರಿಂದ  ರಕ್ತ  ಶುದ್ಧಿಯಾಗಿ  ಚರ್ಮ  ರೋಗಗಳು   ಗುಣವಾಗುತ್ತವೆ.

> ತೆಂಗಿನ  ಎಣ್ಣೆ, ಹರಳೆಣ್ಣೆ  & ಹಾಲು  ಮಿಶ್ರಣ  ಮಾಡಿ  ಚಳಿಗಾಲದಲ್ಲಿ  ಮೈಗೆ  ಹಚ್ಚಿದರೆ  ಚರ್ಮವು   ಒಣಗುವುದಿಲ್ಲ  ಮತ್ತು  ಒಡೆಯುವುದಿಲ್ಲ.

> ಒಣದ್ರಾಕ್ಷಿಗಳನ್ನು   ರಾತ್ರಿ  ನೀರಿನಲ್ಲಿ  ನೆನೆಸಿಟ್ಟು  ಮರುದಿನ  ಬೆಳಗ್ಗೆ  ಅವುಗಳನ್ನ್ನು  ಕಿವುಚಿ  ರಸ  ತೆಗೆದು  ಆ ರಸವನ್ನು  40 ದಿನಗಳವರೆಗೆ  ಸೇವಿಸಿದರೆ   ದೀರ್ಘಕಾಲದಿಂದ  ಇದ್ದ  ಚರ್ಮರೋಗ  ಗುಣವಾಗುವುದು.

> ನಿಂಬೆ ಹಣ್ಣಿನ   ರಸದ  ಜೊತೆ  ಗುಲಾಬಿ  ನೀರು, ಜೇನುತುಪ್ಪಗ್ಲಿಸೆರಿನ್  ಸಮ  ಪ್ರಮಾಣದಲ್ಲಿ  ಬೆರೆಸಿ  ಮುಖಕ್ಕೆ  ಪ್ರತಿದಿನ  ಹಚ್ಚಿಕೊಂಡು  ಅರ್ಧ  ಗಂಟೆ  ಬಿಟ್ಟು  ತೊಳೆದು ಕೊಳ್ಳುವುದರಿಂದ  ಮುಖದ  ಮೇಲಿನ  ಕಪ್ಪು  ಚುಕ್ಕಿಗಳು  ಮೊಡವೆಗಳು, ಗೆರೆಗಳು, ಸುಕ್ಕುಗಳು  ಮಾಯವಾಗಿ  ಚರ್ಮ  ಕಾಂತಿಯುಕ್ತವಾಗುತ್ತದೆ .

> ಮೈಲಿಬೇನೆ , ಸಿಡುಬು  ಪ್ರಾರಂಭವಾದ  ಕ್ಷಣದಲ್ಲಿ  ನಿಂಬೆ ರಸದಲ್ಲಿ   ಬೆಲ್ಲ  ಸೇರಿಸಿ  ಸೇವಿಸುವುದರಿಂದ  ಬೇಗ   ಗುಣವಾಗುತ್ತದೆ  & ಜ್ವರದ  ತಾಪವು  ಇಳಿಯುತ್ತದೆ.

> ನಿಂಬೆ ರಸವನ್ನು  ತೆಂಗಿನ  ಎಣ್ಣೆಯಲ್ಲಿ  ಸೇರಿಸಿ  ಮಾಲಿಶ್  ಮಾಡುವುದರಿಂದ  ಚರ್ಮದ  ತುರಿಕೆ  ಕಡಿಮೆ  ಆಗುತ್ತದೆ.

> ದಿನ  ನಿತ್ಯ  ಮದ್ಯಾನ್ನ 250gm  ನಷ್ಟು   ಸೀಬೆ ಹಣ್ಣನ್ನು   ಸೇವಿಸುವುದರಿಂದ  ಹುಣ್ಣು , ಕಜ್ಜಿ , ತುರಿಕೆಗಳು  ಕಡಿಮೆಯಾಗುತ್ತವೆ. ಹೊಟ್ಟೆಯ   ಉಷ್ಣ  ಕಡಿಮೆ  ಆಗುತ್ತದೆ. ರಕ್ತ  ಶುದ್ಧವಾಗುತ್ತದೆ.

> ಹಲಸಿನ  ಎಲೆಯನ್ನು  ಬಿಸಿಮಾಡಿ  ಕುರು, ಗಡ್ಡೆ  ಮುಂತಾದುವುಗಳ  ಮೇಲೆ  ಕಟ್ಟಿದರೆ  ಅವು  ಬೇಗ  ಒಡೆಯುತ್ತವೆ.

> ಹುಣಿಸೆಯ  ಬೀಜವನ್ನು  ನಿಂಬೆ  ರಸದಲ್ಲಿ  ಅರೆದು  ತುರಿಕೆ, ಕಜ್ಜಿಗೆ  ಹಚ್ಚಿದರೆ  ಗುಣವಾಗುತ್ತವೆ.

> ಕಿತ್ತಳೆ  ಹಣ್ಣಿನ  ಸಿಪ್ಪೆಯನ್ನು  ಒಣಗಿಸಿ  ಪುಡಿಮಾಡಿ  ಅದನ್ನು   ನೀರಿನಲ್ಲಿ   ಕಲೆಸಿ  ಮೊಡವೆಗಳಿಗೆ  ಹಚ್ಚಿದರೆ  ಮೊಡವೆಗಳು  ಕಡಿಮೆ  ಆಗುತ್ತವೆ.

> ಕಿತ್ತಳೆ  ಹಣ್ಣಿನ  ಒಣಸಿಪ್ಪೆಯನ್ನು  ಚೂರ್ಣ ಮಾಡಿ ಇಟ್ಟುಕೊಂಡು  ಬೇಕಾದಾಗ  ಎಣ್ಣೆಯಲ್ಲಿ  ಕಲೆಸಿ  ದಿನಾ  ಹಚ್ಚುವುದರಿಂದ   ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ  ಮುಂತಾದ  ಚರ್ಮರೋಗಗಳು  ಗುಣವಾಗುತ್ತವೆ.

> ಕಿತ್ತಳೆ  ಹಣ್ಣಿನ  ಹಸಿ  ಸಿಪ್ಪೆಹಿಂದ  ಮುಖವನ್ನು  ಚನ್ನಾಗಿ ಉಜ್ಜಿಕೊಂಡು  ತೊಳೆಯುವುದರಿಂದ  ಕಪ್ಪು  ಕಲೆಗಳು  ನಿವಾರಣೆಯಾಗಿ  ಕಾಂತಿಯುತವಾಗುತ್ತದೆ.

> ಅನಾನಸ್  ಹಣ್ಣಿನ  ರಸವನ್ನು  ಕಜ್ಜಿ, ತುರಿಕೆ  ಇದ್ದಲ್ಲಿ   ಹಚ್ಚಿ  ತಿಕ್ಕಿದರೆ  ವಾಸಿಯಾಗುತ್ತವೆ.

> ಖರ್ಬೂಜ  ಹಣ್ಣನ್ನು  ಕ್ರಮವಾಗಿ  ಸೇವಿಸುತ್ತ  ಬಂದರೆ  ಚರ್ಮರೋಗದಿಂದ  ಮುಕ್ತಿ  ಪಡೆಯಬಹುದು.

> ಖರ್ಬೂಜ  ಹಣ್ಣಿನ  ರಸವನ್ನು  ಪ್ರತಿದಿನ  2 ಲೋಟಗಳಷ್ಟು  ಸೇವಿಸಿದರೆ  ಕಜ್ಜಿ, ಗಜಕರ್ಣ ಮೊದಲಾದ  ಚರ್ಮರೋಗಗಳು  ಗುಣವಾಗುತವೆ.

> ಖರ್ಬೂಜ  ಹಣ್ಣಿನ  ಬೀಜದ  ಚೂರ್ಣ  or ಕಶಾಯವು  ಚರ್ಮರೋಗಕ್ಕೆ  ಒಳ್ಳೆಯದು.

> ಬಾಳೆಹಣ್ಣಿನ  ಸಿಪ್ಪೆಯನ್ನು  ನಿಂಬೆ ಹಣ್ಣಿನ  ರಸದಲ್ಲಿ  ಅರೆದು  ಹಚ್ಚುವುದರಿಂದ  ಕಜ್ಜಿ, ತುರಿಕೆ  ಗುಣವಾಗುತ್ತವೆ.

> ನೆನೆಸಿದ  ಬಾಧಮಿಯನ್ನು ಸಿಪ್ಪೆ  ತೆಗೆದು  ಹಾಲಲ್ಲಿ  ತೇದು  ಮುಖಕ್ಕೆ  ಹಚ್ಚಿದರೆ  ಚರ್ಮ ಕಾಂತಿಯುತವಗುತ್ತದೆ.  & ಕಣ್ಣಿನ  ಕೆಳಗಿನ  ಕಪ್ಪು  ವರ್ತುಲಗಳು  (Dark circles) ಮಾಯವಾಗುತ್ತವೆ.

> ಬಾಧಾಮಿ  ತೈಲವನ್ನು  ತುಟಿಗೆ  ಹಚ್ಚಿದರೆ  ತುಟಿ  ಒಡೆಯುವುದಿಲ್ಲ.

> ಪ್ರತಿದಿನ  4-5 ಬಾಧಮಿ  ತಿನ್ನುವುದರಿಂದ  ತುಟಿಗಳು  ಒಡೆಯುವುದಿಲ್ಲ.

> ಭೋರೆ ಹಣ್ಣುಗಳನ್ನು   ಒಣಗಿಸಿ  ಸುತ್ತು  ಭೂದಿಮಾದಿ . ಆ  ಭೂದಿಯನ್ನು  ಸ್ವಲ್ಪ  ನೀರಿನಲ್ಲಿ  ಬೆರೆಸಿ   ಮೊಡವೆಗಳಿಗೆ  (Pimples) ಹಚ್ಚುತ್ತಾ  ಬಂದರೆ  ಮೊಡವೆಗಳು  ಗುಣವಾಗುವುವು.

> ಮಾವಿನ  ಹಣ್ಣನ್ನು  ದಿನ  ನಿತ್ಯವೂ  ಊಟದ  ನಂತರ  ಸೇವಿಸಿದರೆ  ದೇಹದ  ಬಣ್ಣ  ಉತ್ತಮಗೊಳ್ಳುತ್ತದೆ.

> ಮಾವಿನ  ಹಣ್ಣಿನ  ರಸವನ್ನು  ಹಾಲಿನೊಂದಿಗೆ  ಬೆರೆಸಿ  ಕುಡಿಯುವುದರಿಂದ  ಚರ್ಮಕ್ಕೆ  ಹೊಳಪು  ಮೂಡುತ್ತದೆ.

> ಮೋಸಂಬಿ  ರಸವನ್ನು  ಮುಖಕ್ಕೆ  ತಿಕ್ಕಿ  ೩೦ ನಿಮಿಷ  ಬಳಿಕ  ತೊಳೆದರೆ  ಮುಖದ  ಚರ್ಮ  ಕಾಂತಿಯುತವಾಗುತ್ತದೆ.

> ಸೇಬಿನ  ತಿರುಳನ್ನು  ಮುಖಕ್ಕೆ  ಲೇಪಿಸಿದರೆ  ಮೊಡವೆ  ಕಲೆಗಳು  ಮಾಯವಾಗಿ  ಚರ್ಮ  ಹೊಳೆಯುತ್ತದೆ. 


> ಹುಳಿ  ಸೇಬಿನ  ರಸವನ್ನು  ಚರ್ಮದ  ಮೇಲೆ  ಬೋಕ್ಕೆಗಳಿದ್ದರೆ ಹಚ್ಚಿದರೆ  ಬೊಕ್ಕೆಗಳು  ಒಣಗಿ  ಬೀಳುತ್ತವೆ.

> ಬೇವಿನ  ಎಣ್ಣೆಯನ್ನು  ರೋಗಗ್ರಸ್ತ  ಚರ್ಮದಮೇಲೆ  ಹಚ್ಚಿ  ಮಾಲಿಸು  ಮಾಡುವುದರಿಂದ  ಚರ್ಮ  ರೋಗಗಳು  ನಿವಾರಣೆಯಾಗುತ್ತದೆ.

> ಆಲುಗೆಡ್ಡೆಯನ್ನು  ನಿಂಬೆ  ರಸದಲ್ಲಿ  ನುಣ್ಣಗೆ  ಆರೆದು  ಚರ್ಮದ  ಮೇಲೆ  ಲೇಪಿಸಿದರೆ  ತುರಿ  ಕಜ್ಜಿ  ನಿವಾರಣೆಯಾಗುವುದು.


> ಅರಿಶಿನದ  ಪುಡಿಯನ್ನು  ಜೆನುತುಪ್ಪದ್ದಲ್ಲಿ  ರಂಗಳಿಸಿ ವ್ಯಾದಿ ಪೀಡಿತ  ಚರ್ಮದ  ಮೇಲೆ  ಹಚ್ಚುವುದರಿಂದ  ಸಕಲ  ಚರ್ಮ  ವ್ಯಾದಿಗಳು ಗುಣವಾಗುತ್ತದೆ.

>  ಚರ್ಮದ ಸಮಸ್ಯೆಗಳಿಗೆ ಟೊಮೆಟೊ ರಾಮಬಾಣ. ಇದನ್ನು ನುಣ್ಣಗೆ ಮಿಕ್ಸಿಯಲ್ಲಿ ಅರೆದು, ರಸವನ್ನು  ಮುಖಕ್ಕೆ  ಹಚ್ಚಿ  ಮೃದುವಾಗಿ  ಮಾಲಿಷ್‌ ಮಾಡಿ. ಅದು ಸ್ವಲ್ಪ ಒಣ­ಗು­ತ್ತಿದ್ದಂತೆ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಇದು ನಿಮ್ಮ ತ್ವಚೆ­ಯನ್ನು ಚಳಿಗಾಲದಿಂದ ರಕ್ಷಿಸುವುದು ಮಾತ್ರವಲ್ಲದೆ, ಮುಖದ  ಮೇಲಿರುವ  ಕಪ್ಪು  ಕಲೆಗಳು  ಮಾಯವಾಗಿ  ಚರ್ಮ ನುಣುಪಾಗಿ  ಕಾಂತಿಯುತ ಆಗುವಂತೆ ಮಾಡುತ್ತದೆ.

> ತೊನ್ನು ಸೇರಿದಂತೆ ಚರ್ಮ ರೋಗ ಇರುವವರು ಮೆಂತ್ಯದ ಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಸಂದರ್ಭದಲ್ಲಿ ಟೊಮೆಟೊ, ಬದನೆಕಾಯಿ ತ್ಯಜಿಸಿ, ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.


> ಲೋಳೆಸರದ ಒಂದು ಕಡ್ಡಿಯನ್ನು ಉಪ್ಪು ಮತ್ತು ಅರಿಶಿನದೊಂದಿಗೆ ಕುದಿಸಿ. ಲೋಳೆಯನ್ನು ಚೆನ್ನಾಗಿ ತಿಕ್ಕಿ 15 ನಿಮಿಷ ಬಿಟ್ಟು ಸ್ನಾನ ಮಾಡಿ. ಇದರಿಂದ ಚರ್ಮ ವ್ಯಾಧಿ ಹತೋಟಿಗೆ ಬರುತ್ತದೆ.


ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ :

* ಕಿತ್ತಳೆ ಹಣ್ಣಿನ ಒಣಸಿಪ್ಪೆಯನ್ನು ಚೂರ್ಣ ಮಾಡಿ ಇಟ್ಟುಕೊಂಡು ಬೇಕಾದಾಗ ಎಣ್ಣೆಯಲ್ಲಿ ಕಲೆಸಿ ದಿನಾ ಹಚ್ಚುವುದರಿಂದ ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ.

* ತುಳಸಿರಸ, ನಿಂಬೆರಸವನ್ನು ಕಲೆಸಿ ಲೇಪಿಸಿದರೆ ಹುಳುಕಡ್ಡಿ ಕಡಿಮೆಯಾಗುತ್ತದೆ.

ಚರ್ಮರೋಗಕ್ಕೆ (ಇಸಬು,ಗಜಕರ್ಣಕ್ಕೆ) ತುಳಸಿಯ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಅರೆದು ಲೇಪಿಸಬೇಕು, ತುಳಸಿ ಕಷಾಯ ಕುಡಿಯಬೇಕು.


* ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು, ಅನಂತರ ತುಳಸಿ ಸೊಪ್ಪಿನ ಕಷಾಯದಿಂದ ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಇದಾದ ಮೇಲೆ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದು ಹುಳುಕಡ್ಡಿಯ ಮೇಲೆ ಲೇಪಿಸಿ.

* ತೊನ್ನು ಸೇರಿದಂತೆ ಚರ್ಮ ರೋಗ ಇರುವವರು ಮೆಂತ್ಯದ ಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಸಂದರ್ಭದಲ್ಲಿ ಟೊಮೆಟೊ, ಬದನೆಕಾಯಿ ತ್ಯಜಿಸಿ, ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.

 * ಖರ್ಬೂಜ  ಹಣ್ಣಿನ  ರಸವನ್ನು  ಪ್ರತಿದಿನ  2 ಲೋಟಗಳಷ್ಟು  ಸೇವಿಸಿದರೆ  ಕಜ್ಜಿಗಜಕರ್ಣ ಮೊದಲಾದ  ಚರ್ಮರೋಗಗಳು  ಗುಣವಾಗುತವೆ.

*  ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುವುದು. 

* ಇಸುಬು ರೋಗದಿಂದ ಬಳಲುತ್ತಿರುವವರು ಬೇವಿನ ಎಲೆಮತ್ತು ಗೋರಂಟಿ ಎಲೆಗಳನ್ನು ಸ್ವಲ್ಪ ನೀರಿನಲ್ಲಿ ಸೇರಿಸಿ, ಕುದಿಸಿ,ನೀರಿನಂಶವೆಲ್ಲ ಹೋದ ನಂತರ ಸ್ವಲ್ಪ ಅರೆದು ಹೋಂಗೆ ಎಣ್ಣೆ ಸೇರಿಸಿ ಲೇಪಿಸಬೇಕು. 

* ಎರಡು ಚಮಚ ಅರಿಶಿನಪುಡಿ, ಎರಡು ಚಮಚ ಬೇವಿನ ಎಳೆಯ ರಸವನ್ನು ಒಂದು ಚಮಚ ಒಳ್ಳೆಣ್ಣೆ ಯಲ್ಲಿ  ಕಲಸಿ ಹಚ್ಚಿದರೆ ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ.

* ಆಗ  ತಾನೆ  ಕಿತ್ತು  ತಂದ  ಬೇವಿನ  ಎಲೆಗಳನ್ನು  ಮೊಸರಿನಲ್ಲಿ  ಆರೆದು  ಹುಳುಕಡ್ಡಿಯ ಮೇಲೆ  ಲೇಪಿಸುವುದರಿಂದ  ಕೆಲವೆ  ದಿನಗಳಲ್ಲಿ  ಗುಣ  ಕಂಡುಬರುವುದು. 


ಬಂಗು  (Pigmentation)

ಈ ಸಮಸ್ಯೆಯು ವಿಟಮಿನ್ ಸಿ ಕೊರತೆಯಿಂದ ಉಂಟಾಗುತ್ತದೆ. 

- ಕಬ್ಬಿನ ರಸವನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ಸ್ವಚ್ಛ ಗೊಳಿಸಿ ಕೊಳ್ಳಿ 

-ಕಿತ್ತಳೆ ಹಣ್ಣಿನ ರಸವನ್ನು ಅರ್ಧ ಗಂಟೆ ಲೇಪಿಸಿ. 

-ಕಿತ್ತಳೆ ಸಿಪ್ಪೆಯ ಪುಡಿ ಅಂಗಡಿಗಳಲ್ಲಿ ದೊರಕುತ್ತದೆ. ಆ ಪುಡಿಗೆ ಮೊಸರು ಸೇರಿಸಿ, ಆ ಪ್ಯಾಕ್ ಅರ್ಧ ಗಂಟೆ ಅಗತ್ಯ ಇರುವ ಸ್ಥಳಕ್ಕೆ ಲೇಪಿಸಿ. ಅದನ್ನು ಉಗುರು ಬೆಚ್ಚಗಿರುವ ನೀರನ್ನು ಬಳಸಿ ಸ್ವಚ್ಚಗೊಳಿಸಿ. 

-ಆದಷ್ಟು ಹೊರಗೆ ಹೋಗುವಾಗ ಸೂರ್ಯನ ಕಿರಣಗಳು ಪಿಗ್ಮೆಂಟೇಷನ್ ಇರುವ ಜಾಗದಲ್ಲಿ ಬೀಳದಂತೆ ಎಚ್ಚರ ವಹಿಸಿ.

- ಎಕ್ಕದ ಬೇರನ್ನು ನಿಂಬೇರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.

-ಮದರಂಗಿ ರಸಕ್ಕೆ ಸ್ವಲ್ಪ ಅರಿಶಿನ ಪುಡಿ ಮತ್ತು ನಿಂಬೆರಸ ಸೇರಿಸಿ ಹಚ್ಚಬೇಕು;

-ದಿಕ್ಕೆರದು ಬಾರಿ ತಪ್ಪದೆ ಮುಖವನ್ನು ತೊಳೆದು ಕೊಂಡು ಉತ್ತಮ ಕಂಪನಿಯ ಮಾಯಿಶ್ಚರೈಸರ್ ಲೇಪಿಸಿ .Saturday, February 26, 2011

Apamarga (Achyranthes Aspera)ಉತ್ತರಾಣಿಇದರ ಎಲೆಗಳನ್ನು ಜಜ್ಜಿ ಗಾಯದ ಮೇಲೆ ಲೇಪಿಸಿದರೆ ಬಾವು ,ನೋವು ,ಕಿವು,ತ್ವರಿತಗತಿಯಲ್ಲಿ ಕಡಿಮೆ ಆಗುವುದು.
ಇದರ ಕಷಾಯದಿಂದ ನಿಯಮಿತವಾಗಿ ಸ್ನಾನ ಮಾಡುತ್ತ ಬಂದರೆ ಹುರುಪು ಅಥವಾ ತುರಿಕೆಯಿಂದ ಕೂಡಿದ ಚರ್ಮ ರೋಗಗಳು ಗುಣ ಹೊಂದುವವು..
ಇದು ಒಂದು ಒಳ್ಳೆಯ ದಂತ ಮಂಜನ,
ಇದರ ಬೀಜದ ಪುಡಿಯನ್ನು ನಸ್ಯದಂತೆ ಬಳಸಿದರೆ ಅರೆತಲೆಶೂಲೆ ಗುಣ ಹೊಂದುತ್ತದೆ.
ಕೀಟ.ಹುಳುಗಳ ಕಡಿತದಿಂದ ಅಗಿರಿವ ಗಾಯ ಅಥವಾ ಉರಿಯ ಶಮನಕ್ಕು ಇದರ ಕಲ್ಕವನ್ನು ಬಳಸುತ್ತಾರೆ.
ಆದರೆ ಇದನ್ನು ಬೇಲಿ ಬದಿಯ ಸಸ್ಯ ಎಂದು ಕಿತ್ತೊಗೆಯುವುದೇ ಹೆಚ್ಹು ..ಈ ಹಿತ್ತಲ ಮದ್ದನ್ನು ಗುರುತಿಸಿ ನಿಮ್ಮ ಮನೆಯಲ್ಲಿ ಬೆಳೆಸಿ ಮತ್ತು ಉಳಿಸಿ.


Healt benifits of menthya (ಮೆಂತ್ಯೆ)


ಮೆಂತ್ಯೆ ಇದರಲ್ಲಿನ ಪೋಷಕಾಂಶ, ವಿಟಮಿನ್ ಸಿ, ಪೊಟಾಶಿಯಂ, ಲೈಸಿನ್ ಇನ್ನಿತರ ಅಂಶಗಳು ಇದರ ಗುಣಕ್ಕೆ ಸಾಕ್ಷಿ. ಇದರಿಂದಾಗುವ ಉಪಯೋಗ ತಿಳಿಯಲು ಹೋದರೆ ಅಕ್ಷಯ ಪಾತ್ರೆ.ಇದನ್ನು ದಿನನಿತ್ಯ ಬಳಸಿದರೆ ಉತ್ತಮ ಆರೋಗ್ಯ ಗ್ಯಾರಂಟಿ.

ಇದರ ಇನ್ನಷ್ಟು ಉಪಯೋಗ

1. ಬೊಜ್ಜಿನ ಸಮತೋಲನ: ಮೆಂತ್ಯೆಯನ್ನು ಯಾವುದಾದರೂ ರೂಪದಲ್ಲಿ ನಿತ್ಯ ಸೇವಿಸುತ್ತ ಬಂದರೆ ಅದು ದೇಹದ ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ ಅಷ್ಟೇ ಅಲ್ಲ, ಇದರಿಂದ ಹೃದಯ ಸ್ಥಂಭನವಾಗುವ ಅವಕಾಶಗಳನ್ನು ಕಡಿಮೆ ಗೊಳಿಸುತ್ತದೆ. ಇದೀಗ ಮಾತ್ರೆ ರೂಪದಲ್ಲಿ ಕೂಡ ಮೆಂತ್ಯೆ ಲಭ್ಯವಿದೆ.
...

2. ಸಕ್ಕರೆ ಅಂಶದ ನಿಯಂತ್ರಣ: ಮೆಂತ್ಯೆ ಕಾಳನ್ನು ಮಧುಮೇಹಿಗಳಿಗೆ ಸೇವಿಸಲು ಸಲಹೆ ನೀಡುವುದನ್ನು ಕೇಳಿದ್ದೇವೆ. ಏಕೆಂದರೆ ಮೆಂತ್ಯೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಗೊಳಿಸಲು ಹೆಚ್ಚು ಸಹಾಯ ಮಾಡುತ್ತದೆ. ದಿನವೂ 6- 7 ಮೆಂತ್ಯೆ ಕಾಳನ್ನು ಅಥವಾ ಮೆಂತ್ಯೆ ಸೊಪ್ಪನ್ನು ಸೇವಿಸುವುದು ಉತ್ತಮ.
3.ಚರ್ಮ ರೋಗ ನಿಗ್ರಹ: ಮೆಂತ್ಯೆ ಕಾಳನ್ನು ಸೇವಿಸುವುದರಿಂದ ತ್ವಚೆ ಆರೋಗ್ಯವಾಗಿರುವುದಲ್ಲದೆ, ಗುಳ್ಳೆ, ತುರಿಕೆ, ಮೊಡವೆ ಇಂತಹ ಅನೇಕ ಚರ್ಮ ಸಂಬಂಧಿ ರೋಗಗಳಿಗೆ ಮನೆ ಮದ್ದಾಗಿದೆ. ಅದು ಕೂದಲಿನ ಸತ್ವ ಕಾಪಾಡಿಕೊಳ್ಳಲೂ ಉಪಯೋಗಿಸಲಾಗುತ್ತದೆ.

4.ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ: ಜೀರ್ಣಕ್ರಿಯೆಯನ್ನು ಸಮತೋಲನವಾಗಿ ನಡೆಸಿಕೊಂಡು ಹೋಗುವಲ್ಲಿ ಮೆಂತ್ಯೆಯದು ಬಹು ಮುಖ್ಯ ಪಾತ್ರ. ಇದು ಪಚನ ಕ್ರಿಯೆಯನ್ನು ಸರಿದೂಗಿಸಿಕೊಂಡು ಹೋಗುತ್ತದೆ. ಅಲ್ಸರ್ ಮತ್ತು ಆಸಡಿಟಿ ಯಾಗಿದ್ದರೆ ಮೆಂತ್ಯೆಯನ್ನು ಮಜ್ಜಿಗೆಗೆ ಬೆರೆಸಿ ಕುಡಿದರೆ ಅದು ನಿಯಂತ್ರಣಕ್ಕೆ ಬರುತ್ತದೆ. ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳನ್ನು ಸೇವಿಸಿದರೆ ಹೊಟ್ಟೆಯಲ್ಲಿನ ಕೀಟಾಣುಗಳನ್ನು ಮೆಂತ್ಯೆ ಕೊಂದು ಹಾಕುತ್ತದೆ.

5. ಜ್ವರಕ್ಕೆ ಮೆಂತ್ಯೆ ಮದ್ದು: ಜ್ವರವಿದ್ದರೆ ಮತ್ತು ಸುಸ್ತಿನಿಂದ ಬಳಲುತ್ತಿದ್ದಾಗ ಮೆಂತ್ಯೆ ರಸವನ್ನು ಸೇವನೆ ಮಾಡಿದರೆ ಕಡಿಮೆಯಾಗುತ್ತದೆ.

6. ಮೆದುಳನ್ನು ಚುರುಕುಗೊಳಿಸುತ್ತದೆ: ಮೆಂತ್ಯೆ ಸೊಪ್ಪಿನಿಂದ ಟೀ ಮಾಡಿ ಕುಡಿದರೆ ಮೆದುಳನ್ನು ಚುರುಕುಗೊಳಿಸಿ ಚೈತನ್ಯ ತುಂಬುತ್ತದೆ.
 
7.ಒಂದು ಟೀ ಚಮಚ ಮೆಂತ್ಯವನ್ನು ಗಟ್ಟಿ ಮೊಸರಿನಲ್ಲಿ ಬೆರೆಸಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ಅಮಶಂಕೆ ಮತ್ತು ರಕ್ತಭೇದಿ ಕಡಿಮೆಯಾಗುವುದು.

8.ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಲ್ಯದೊ೦ದಿಗೆ ತಿನ್ನುವುದರಿ೦ದ ಅ೦ಗಾ೦ಗಗಳ ನೋವು ನಿವಾರಣೆಯಾಗುವುದು.
 

Thursday, February 10, 2011

ಜುಮ್ಮನಕಾಯಿ

ಇದು ಜುಮ್ಮನಕಾಯಿ ....ಬಾಯಲ್ಲಿತ್ತುಕೊಂಡರೆ ಜುಮ್ ಜುಮ್ ಅನ್ನುತ್ತ್ತದ್ದರಿಂದ ಈ ಹೆಸರು ಬಂದಿರಬಹುದು ಇದು ಪಶ್ಚಿಮಘಟ್ಟಗಳಲ್ಲಿ ದೊರೆಯುತ್ತದೆ..ಉತ್ತರ ಕನ್ನಡ ಮತ್ತು ಕರಾವಳಿ ಗಳಲ್ಲಿ ಇದನ್ನು ಅಡಿಗೆಗೆ ಬಳಸುತ್ತಾರೆ ಇದರ ಔಷದೀಯ ಉಪಯೋಗಗಳು ಇಂತಿವೆ
ಹಲ್ಲು ನೋವು ವಸಡುಗಳಲ್ಲಿ ಸೆಳೆತ ವಿದ್ದಾಗ ಜುಮ್ಮನಕಯಿಯನ್ನು ನೋವಿದ್ದ ಹಲ್ಲಿನ ಮೇಲೆ ಇಟ್ಟುಕೊಂಡು ಮೆತ್ತಗೆ ಜಗಿಯುತ್ತಿದ್ದರೆ ನೋವು ಕಡಿಮೆ ಆಗುತ್ತದೆ..
ಅಜೀರ್ಣ ಸಂಭಂಧಿತ ಹೊಟ್ಟೆನೋವು ಬಂದಾಗ ಜುಮ್ಮನಕಾಯಿ ಜಜ್ಜಿ ಮಜ್ಜಿಗೆಯಲ್ಲಿ ಹಾಕಿ ಕೊಂಡು ಕುಡಿದರೆ ನೋವು ಗಾಯಬ್..
ಬಾಯಿ ವಾಸನೆ ಬರುತ್ತಿದ್ದರೆ ಜುಮ್ಮನಕಾಯಿ ಬಯಲ್ಲಿತ್ತುಕೊಂಡು ಜಗಿಯುತ್ತಿದ್ದರೆ ಪರಿಹಾರ

HEALTH BENEFITS OF CLOVES (ಲವಂಗ)

TOMATO

Chennagi magida tomoto hannannu thinnuvudarinda bai hunnu gunavaguvudu


Thursday, February 03, 2011

world cancer day (ಇ೦ದು ವಿಶ್ವ ಕ್ಯಾನ್ಸರ್ ದಿನ )

Home Remedies for Acidity (ಎದೆ ಉರಿ )


1. ಲವ೦ಗವನ್ನು ನಿಧಾನವಾಗಿ ಚೀಪಿ ಅದರ ರಸ ಕುಡಿಯಬೇಕು.(Lavanga)

2. ಊಟದ ನ೦ತರ ವೆನಿಲ್ಲಾ ಐಸ್ ಕ್ರೀ೦ ತಿನ್ನುವುದರಿ೦ದ ಅಥವಾ ೧ ಲೋಟ ತ೦ಪಾದ ಹಾಲು ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.(Venila)

3. ಬಾಧಾಮಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ತಿನ್ನಬೇಕು.(Almonds)

4. ನಿ೦ಬೆ ಹಣ್ಣನ್ನು ಸಣ್ಣದಾಗಿ ಕತ್ತರಿಸಿ ಅದನ್ನು ಉಪ್ಪಿನ ಜೊತೆ ಊಟಕ್ಕೆ ಮು೦ಚೆ ತಿನ್ನಬೇಕು.(Lemon & Salt)

5. ಊಟದ ನ೦ತರ ಮಜ್ಜಿಗೆಯನ್ನು ಕುಡಿಯಬೇಕು.(Butter milk)

6. ಎಲೆಕೋಸಿನ ಪಾನೀಯ ಮಾಡಿ ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.(Cabbage juice)

7. ೧೦ ಗ್ರಾ೦ ಬೆಲ್ಲವನ್ನು ಊಟದ ನ೦ತರ ಚೀಪಿ ರಸ ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.(Jagree)

8. ೧-೨ ಚಮಚ ಬಿಳಿ ವಿನಿಗರ್ ಊಟದ ನ೦ತರ ಕುಡಿಯಬೇಕು.(White Vinegar)

9. ದಿನಕ್ಕೆ ೨-೩ ಎಳನೀರು ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.(Tender coconut)

10. ದಿನಕ್ಕೆ ಕನಿಷ್ಟ ೩-೪ ಲೀ. ನೀರು ಕುಡಿಯಬೇಕು ಮತ್ತು ದಿನಾ ೧ ತಾಸು ವ್ಯಾಯಾಮ (3-4 lts water 1 hr excercise))ಮಾಡುವುದು ಒಳ್ಳೆಯದು.

11. ಮಲಗುವ ೨ ಗ೦ಟೆ ಮು೦ಚೆ ಊಟ ಮಾಡಬೇಕು. ( dinner 2hrs before sleep)

12. ದಿನಾ ೭-೮ ತಾಸು ನಿದ್ರೆ ಮಾಡಬೇಕು.(8 -9 hrs sleep)

13. ಲೋಟ ತ೦ಪಾದ ಹಾಲು ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.ಗ್ಯಾಸ್ ಟ್ರಬಲ್ ನಿವಾರಿಸುವ ಕರಿಬೇವು ಪುಡಿ:

ಬೇಕಾಗುವ ಪದಾರ್ಥಗಳು : ಕರಿಬೇವು ಒಂದು ಬಟ್ಟಲು | ಜೀರಿಗೆ ಅರ್ಧ ಮುಟಿಗೆಯಷ್ಟು | ಮೆಣಸಿನ ಕಾಳು ಏಳೆಂಟು ಹತ್ತು | ರುಚಿಗೆ ಉಪ್ಪು.
ತಯಾರಿಸುವ ವಿಧಾನ:
ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಇಷ್ಟೇ. ಆದರೆ, ಅದು ಆರೋಗ್ಯದ ಮೇಲೆ ಮಾಡುವ ಪರಿಣಾಮ ಮಾತ್ರ ಅಗಾಧ. ಸೋ, ಮೊದಲು ಕರಿಬೇವನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಗರಿಗರಿಯಾದ ನಂತರ ಅದಕ್ಕೆ ಹುರಿದ ಜೀರಿಗೆ ಮತ್ತು ಮೆಣಸಿನ ಕಾಳುಗಳನ್ನು ಉಪ್ಪಿನೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಚಟ್ನಿಪುಡಿಗಿಂದ ಸ್ವಲ್ಪ ನುಣ್ಣಗಾಗಿರಲಿ. ಇದೇ ಕರಿಬೇವು ಪುಡಿ.

ಕರಿಬೇವು ಪುಡಿಯನ್ನು ಬಿಸಿಬಿಸಿ ಅನ್ನ ಮತ್ತು ತುಪ್ಪದೊಡನೆ ಸೇರಿಸಿ ಸವಿಯಬಹುದು. ಗ್ಯಾಸ್ ಟ್ರಬಲ್ ನಿಂದ ಬಳಲುತ್ತಿರುವವರು ಜೆಲ್ಯುಸಿಲ್ ಅಥವಾ ಇನ್ನಾವುದೇ ಆಂಟ್ಯಾಸಿಡ್ ಔಷಧಿಯನ್ನು ಸೇವಿಸುವ ಬದಲು ಅನ್ನದ ಜೊತೆ ಕರಿಬೇವು ಪುಡಿಯನ್ನು ತಿನ್ನಬಹುದು. ಇದನ್ನು ಚಟ್ನಿಪುಡಿಯಂತೆ ಕೂಡ ಮೊಸರಿನೊಂದಿಗೆ ಕಲಿಸಿ ಚಪಾತಿ ಜೊತೆ ಮೆಲ್ಲಬಹುದು.


* ಸೈಂಧವ ಲವಣ ಮಿಶ್ರಿತ ಬೆಳ್ಳುಳ್ಳಿ ರಸವನ್ನು ಸಿದ್ಧಪಡಿಸಿ, ಏಳೆಂಟು ಚಮಚ ಬಿಸಿ ನೀರಿಗೆ ಅರ್ಧ ಚಮಚದಷ್ಟು ಬೆಳ್ಳುಳ್ಳಿ ರಸ ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಸೇವಿಸಿ.

* ಒಂದು ದೊಡ್ಡ ಚಮಚದಷ್ಟು ಕೊತ್ತಂಬರಿ ಬೀಜ ಮತ್ತು ಅವರೆಕಾಳಿನಷ್ಟು ಗಾತ್ರದ ಒಣಶುಂಠಿ ಸ್ವಲ್ಪ ಜಜ್ಜಿ ಎರಡು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಕಷಾಯ ಶೋಧಿಸಿ, ಜೇನುತುಪ್ಪ ಸೇರಿಸಿ ಸೇವಿಸಿ.

* ಮೇಲಿನ ಕಷಾಯಕ್ಕೆ ಜೇನುತುಪ್ಪ ಬದಲು ಕಲ್ಲು ಸಕ್ಕರೆ ಬಳಸಬಹುದು, ಸಕ್ಕರೆ ಬಳಕೆ ಬೇಡ. ಕೊತ್ತಂಬರಿ ಬೀಜ ಪುಡಿಮಾಡಿಟ್ಟುಕೊಂಡರೆ ತಕ್ಷಣಕ್ಕೆ ಕಷಾಯ ತಯಾರಿಸಲು ಅನುಕೂಲವಾಗುತ್ತದೆ.

* ತುಳಸಿ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪ ಸಮಭಾಗ ತೆಗೆದುಕೊಂಡು ಮಿಶ್ರಣ ತಯಾರಿಸಿ. ಮೂರು ದಿನಗಳಿಗೊಮ್ಮೆ ಒಂದು ಟೀ ಚಮಚದಷ್ಟು ಸೇವಿಸುತ್ತಿದ್ದರೆ ಹೊಟ್ಟೆ ಉರಿ ಕಮ್ಮಿಯಾಗುತ್ತದೆ.

* ಪ್ರತಿದಿನವೂ ಒಂದು ಎಳನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಇತರೆ ತಂಪು ಪಾನೀಯಗಳನ್ನು ವರ್ಜಿಸಿ.

* ಅಡುಗೆ ಉಪ್ಪು, ಒಣಶುಂಠಿ ಚೂರ್ಣ, ಜೀರಿಗೆ ಮತ್ತು ಸಕ್ಕರೆ ಪ್ರತಿಯೊಂದನ್ನೂ ಒಂದು ಟೀ ಚಮಚದಷ್ಟು ತೆಗೆದುಕೊಂಡು ಒಂದು ಹೋಳು ನಿಂಬೆರಸದೊಂದಿಗೆ ಮಿಶ್ರಮಾಡಿ. ಈ ಮಿಶ್ರಣಕ್ಕೆ ಒಂದು ಬಟ್ಟಲು ಬಿಸಿ ನೀರು ಸೇರಿಸಿ, ಚೆನ್ನಾಗಿ ಕಲಕಿ ಕುಡಿಯಿರಿ.

* ಬಿಸಿ ನೀರಿಗೆ ಜೇನು ತುಪ್ಪ ಬೆರೆಸಿ ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

* ಒಂದು ಬಟ್ಟಲು ನೀರಿಗೆ ಒಂದು ನಿಂಬೆ ಹಣ್ಣಿನ ರಸ ಹಿಂಡಿ, ಅರ್ಧ ಟೀ ಚಮಚ ಅಡಿಗೆ ಸೋಡ ಸೇರಿಸಿ. ಈ ಷರಬತ್ತನ್ನು ಸೇವಿಸಿದಲ್ಲಿ ಅಜೀರ್ಣದ ಹೊಟ್ಟೆನೋವು ನಿವಾರಣೆಯಾಗುವುದು.

* ಅಗತ್ಯವಾದಷ್ಟು ಹುರುಳಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಕಟ್ಟು ಬಸಿಯಿರಿ. ಒಂದು ಬಟ್ಟಲು ಬಿಸಿ ಕಟ್ಟಿಗೆ ಸ್ವಲ್ಪ ತುಪ್ಪ ಸೇರಿಸಿ, ಸೇವಿಸಿ. ದಿನದಲ್ಲಿ ಎರಡು ಬಾರಿ ಸೇವಿಸಿದರೆ ಹೊಟ್ಟೆ ನೋವು ಪರಿಹಾರವಾಗುವುದು.

* ನಡಿಗೆ, ಜಾಕಿಂಗ್ ಗೆ ಹೋಗುವ ಪದ್ಧತಿ ಇಟ್ಟುಕೊಳ್ಳಿ. ಆದರೆ, ಹೊಟ್ಟೆ ನೋವಿದ್ದಾಗ ಕಷ್ಟಕರ ದೈಹಿಕ ಕಸರತ್ತು ಮಾಡಲು ಯತ್ನಿಸಬೇಡಿ.

* ಹೊಟ್ಟೆಗೆ ಆಗಾಗ ಏನಾದರೂ ಪೋಷಣೆ ಮಾಡುತ್ತಿರಿ. ಖಾಲಿ ಇದ್ದಷ್ಟೂ ಹೆಚ್ಚು ಶಬ್ದ ಮಾಡುತ್ತದೆ.

* ಸೇಬು, ಕ್ಯಾರೆಟ್, ಬೀಟ್ ರೂಟ್ ಜ್ಯೂಸ್, ಹುರುಳಿಕಾಯಿ, ನಾರು ಬೇರಿನ ತರಕಾರಿ ಉತ್ತಮ.

* ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಎಚ್ ಸಿಎಲ್ ಒದಗಿಸುವ ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ.

* ಹೊಟ್ಟೆ ನೋವು, ಉರಿ ಇದ್ದಾಗ ಕಾಫಿ, ಟೀ, ಆಲ್ಕೋಹಾಲ್, ಕೋಕ್, ಧೂಮಪಾನ ಬಿಟ್ಟು ಬಿಡಿ.

* ಕೊಬ್ಬಿನ ಪದಾರ್ಥಗಳು ಕೆನೆ ಮೊಸರು, ಪೇಡಾ, ಮಾಂಸ ಕೂಡಾ ಸೇವನೆಗೆ ಯೋಗ್ಯವಲ್ಲ.

* ಹೆಚ್ಚು ಬಿಗಿ ಉಡುಪುಗಳನ್ನು ಧರಿಸಬೇಡಿ. ರಾತ್ರಿ ಮಲಗುವುದಕ್ಕೂ ಎರಡು ಮೂರು ಗಂಟೆಗಳಿಗೆ ಮುನ್ನ ಆಹಾರ ಸೇವಿಸಿ. ರಾತ್ರಿ ಹೊತ್ತು ಕಾಫಿ, ಚಹಾ ಬೇಡ.

* ಎದೆ ಉರಿ ಇದ್ದಾಗ ಮಲಗುವುದಕ್ಕಿಂತ ಎದ್ದು ಓಡಾಡಿದರೆ ಉತ್ತಮ. ಹೊಚ್ಚು ಹೊತ್ತಿನಿಂದ ತೊಂದರೆ ಅನುಭವಿಸುತ್ತಿದ್ದರೆ ವೈದ್ಯರನ್ನು ಅವಶ್ಯವಾಗಿ ಕಾಣಿರಿ.

ಎಲೆಕೋಸು, ಈರುಳ್ಳಿ, ಹಾಲು, ಬೀನ್ಸ್, ಕಡಲೆ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಕಡಿಮೆ ಮಾಡುವುದು ಒಳ್ಳೆಯದು.

1.ಶುಂಠಿ: ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ನೀರು ತಣ್ಣಗಾದ ಮೇಲೆ ಕುಡಿದರೆ ಗ್ಯಾಸ್ ಸಮಸ್ಯೆ ಕಡಿಮೆಯಾಗುವುದು. ಟೀಗೆ ಶುಂಠಿ ಹಾಕಿ ಕುಡಿದರೂ ಈ ಸಮಸ್ಯೆ ಪರಿಹಾರವಾಗುವುದು.

2. ನೀರು ಕುಡಿಯುವುದು: ನೀರು ಕುಡಿದರೆ ಈ ರೀತಿಯ ಗ್ಯಾಸ್ ಸಮಸ್ಯೆ ನಿವಾರಣೆಯಗುವುದು.

3. ಸೋಂಪು: ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಸೋಂಪು ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಊಟದ ಮುಂಚೆ ಮತ್ತು ನಂತರ ಸೋಂಪು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ.

4.ಆಪಲ್ ಸೈಡರ್ ವಿನಿಗರ್: ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.

5. ಅಡುಗೆ ಸೋಡಾ: 1/4 ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.


6. ಪಲಾವ್ ಎಲೆ: ಪಲಾವ್ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಆ ನೀರನ್ನು ಕುಡಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.


Home Remedies for Acidity:

* Take a cup of warm water and add lemon juice to it. Have it in the morning empty stomach. Eat anything else after 15 to 20 minutes. It will balance the acid levels of your body. It will also improve the digestion system.

* Drink 2 ounces of unprocessed aloe vera juice daily.

* Take a half cup of water and add 1 tbsp. of baking soda. Now have it. This will sooth your acid reflux.

* If you have taken acid producing food, then eat a red apple. It will solve your problem.

* Almonds are alkaline-producing food which balance the pH as they are a good source of calcium. Consuming these will ease you acid reflux and heartburn.

* Soak a tsp. of fenugreek seed overnight and have it first in the morning. Don’t leave the seeds. Take both seeds as well as water.

* Take 1 to 2 teaspoons of apple cider vinegar daily.

* You can chew a stick of gum after meal. It will increase the saliva production which helps in reducing the acid levels in the esophagus.


* You may enjoy chamomile or mint tea to get relief from acid reflux and heartburn.

1. Gently sucking a piece of jaggery until acidity subsides is a perfect home remedy for acidity.

2. A glass of cold milk gives instant relief from this problem.

3. Chewing of few basil leaves keeps acidity, gas and nausea at bay.

4. Eating plenty of cucumber, water melon and banana keeps away acidity.

5. Drinking coconut water relieves acidity.

6. Every meal should be followed by a drink of fresh mint juice. This is the best acidity remedy.

7. Consumption of yoghurt gives instant relief from this problem.

8. Soda water effectively treats acidity problems.

9. Chewing ginger helps to subside acidity.

10. One may take a mixture of 1 tablespoon honey and 2 tablespoon natural apple cider vinegar before meals to avoid this problem.

11. Sucking clove relieves acidity.

12. Intake of 2 teaspoons of white vinegar along with meals prevents acidity.

13. Intake of tea and coffee should be replaced by the intake of herbal tea consisting of spearmint or licorice.

14. One may drink a mixture of 1 teaspoon chebulic myrobalan juice and one teaspoon Indian gooseberry juice to get relief from acidity.

15. One may boil cumin seeds in a glass of water, strain and drink the water after each meal. This effectively treats acidity.

16. Drinking half a glass of butter milk with one tablespoon coriander leaf juice mixed in to it is an effective home remedy for acidity.

17. A daily drink of cabbage juice checks acidity.

18. Maintaining a standing posture after meals, checks acidity.

19. Drinking one or two glasses of water in empty stomach early in the morning keeps acidity away.

20. Arozyme capsule is a herbal remedy that will provide you a natural and safe solution to get rid of acidity problem.
Long pepper powder- half a gram with one spoon of honey – two times a day is one of the effective home remedies for gastritis.
Lemon juice helps to relieve vomiting sensation and bloating.
Boiled Ash gourd with jaggery relieves bloating and burning sensation in stomach associated with acidity and gastritis.
One table-spoon of Triphala powder added with one glass of water, boiled and reduced to half a glass, filtered. This water decoction in hot condition, along with one table-spoon of honey or ghee relieves gastritis.
Regular chewing of half a teaspoon of fennel seeds after food is good for digestion and gastritis.
Half glass of buttermilk, added with a pinch of asa foetida, turmeric, half tea-spoon of fenugreek drunk at night, is good for effective treatment of gastritis.
Crush cumin seeds into fine powder. add half tea-spoon of cumin seeds to one liter of water. boil the water for two minutes and filter. Drink this water, in place of normal water. But new water needs to be made everyday. This is a natural remedy for gastritis.
Things that are included in gastritis diet aid in gastritis cure. (Click to read)
Ginger – 5 grams.
Milk – 100 ml
water – 100 ml.
Boil this till there is only 80 – 100 ml remaining. (meaning water is emptied)
Filter and drink. This is a good gastritis remedy.
In the same way, garlic – drink is also a good home remedy for gastritis.
The causes of acidity may be listed as follows
1. Eating rich, spicy food
2. Insufficient chewing of food
3. Over-eating
4. Skipping meals or remaining in empty stomach for long.
5. Stress
6. Lack of physical activity
7. Inadequate sleep
8. Obesity that puts much pressure on the digestive tract.
9. Intake of alcohol
10. Intake of caffeine
11. Intake of tobacco
12. Pregnancy
13. Diseases like hernia.

Tuesday, February 01, 2011

ಕಿತ್ತಳೆ ಹಣ್ಣು (orange)

ಇದರಲ್ಲಿ ವಿಟಮಿನ್ "ಸಿ" ಇದ್ದು ಜೊತೆಗೆ A, B,B1 , Calcium & potassium ನ್ನು ಒಳಗೊ೦ಡಿದೆ.  ಇದನ್ನು ಸೇವಿಸುವುದರಿ೦ದ ಕ್ಯಾನ್ಸರ್ ಮತ್ತು ಹೃದಯ ಖಾಯಿಲೆಗಳು ಬರುವುದನ್ನು ಕಡಿಮೆ ಮಾಡುತ್ತದೆ.ಅದರ ಸಿಪ್ಪೆಯನ್ನು ಅರೆದು ಮುಖಕ್ಕೆ ಹಚ್ಚುವುದರಿ೦ದ ಕಾ೦ತಿಯುಕ್ತವಾಗುತ್ತದೆ.


ತುಳಸಿ ( BASIL )
ತುಳಸಿ : 

ಬಹುಪಯೋಗಿ ಔಷಧಗಳ ಸಂಜೀವಿನಿ 'ತುಳಸಿ'

ಮೂರು ಬಗೆಯ ತುಳಸಿ ಗಿಡಗಳಿವೆ. 

--> ಕೃಷ್ಣ ತುಳಸಿ ಅಥವಾ ಕಪ್ಪು ತುಳಸಿ
--> ರಾಮ ತುಳಸಿ ಅಥವಾ ಶ್ರೀ ತುಳಸಿ
--> ವನ ತುಳಸಿ ಅಥವಾ ಕಾಡು ತುಳಸಿ

೧. ಹಸಿವು - ನಿದ್ದೆ ಹೆಚ್ಚಾಗಲೀ ಕಡಿಮೆಯಾಗಲೀ ಆದರೆ ತುಳಸಿಯ ಕಷಾಯವನ್ನು ಸೇವಿಸಿದರೆ ಸಾಕು - ಸಮವಾಗುತ್ತೆ.

೨. ಹೊಟ್ಟೆ ತೊಳೆಸು, ವಾಂತಿ, ಬೇಧಿ, ಕ್ಷಯ - ಇವುಗಳನ್ನು ಗುಣಪಡಿಸುವ ಸಾಮರ್ಥ್ಯವುಳ್ಳದ್ದು ತುಳಸಿ. ಬ್ಯಾಕ್ಟೀರಿಯಾ, ಫಂಗಸ್, ಮತ್ತು ವೈರಸ್ - ಮೂರನ್ನೂ ಸರ್ವನಾಶಮಾಡಬಲ್ಲುದು!

೩. ಮನೆಯಲ್ಲಿ ಸೊಳ್ಳೆ ಹೆಚ್ಚಾಗಿದ್ದರೆ, ನೀರಿನಲ್ಲಿ ತುಳಸಿ ಎಲೆಗಳನ್ನು ಕುದಿಸಿ ಸಿಂಪಡಿಸಬೇಕು. ಡಿ.ಡಿ.ಟಿ. ಸಿಂಪಡಿಸಿ ಬಯೋ-ಮ್ಯಾಗ್ನಿಫಿಕೇಷನ್ಗೆ ಗುರಿಯಾಗುವುದು ಅನುಚಿತ.

೪. ಚರ್ಮರೋಗಗಳಿಗೆ, ಅದರಲ್ಲೂ ಅಲರ್ಜಿಗಳ ವಿರುದ್ಧ ಹೋರಾಡಬೇಕೆಂದರೆ ತುಳಸಿಗಿಂತ ಒಳ್ಳೆಯ ಔಷಧ ಸಿಗದು.

೫. ತುಳಸಿ ಕಷಾಯವನ್ನು ನಿತ್ಯವೂ ಕುಡಿಯುವುದರಿಂದ ಮಾನಸಿಕ ಒತ್ತಡಗಳನ್ನು ತಡೆಗಟ್ಟಬಹುದು.

೬. ಸಕ್ಕರೆ ಕಾಯಿಲೆಯನ್ನು ಗುಣ ಪಡಿಸಲು ತುಳಸಿಯನ್ನು ಬಳಸುತ್ತಾರೆ. ರಕ್ತ - ಸಕ್ಕರೆ ಪ್ರಮಾಣವು ಹತೋಟೆಗೆ ಬರಲು ತುಳಸಿಯು ಬಹಳ ಉಪಯುಕ್ತ.

೭. ರಕ್ತದೊತ್ತಡವನ್ನು (BP) ಸಮವಾಗಿಸಲೂ ಹೃದ್ರೋಗಗಳನ್ನು ತಡೆಗಟ್ಟಲೂ ಸಹ ತುಳಸಿಯನ್ನು ಬಳಸಬಹುದು. 

೮. ಕೆಮ್ಮು ನೆಗಡಿ ಮುಂತಾದ ಶೀತಪ್ರವೃತ್ತ ಕಾಯಿಲೆಗಳಿಗೆ ತುಳಸಿಯೇ ಮೊದಲ ಮದ್ದು.

೯. ತುಳಸಿ ಕಷಾಯವು ಉತ್ತೇಜಕಕಾರಿ ಪೇಯ ಕೂಡ!

೧೦. ಹಲ್ಲು ನೋವಿದ್ದು, ಹಲ್ಲು ಹುಳುಕಿದ್ದಾಗ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದನ್ನು ವೈದ್ಯರು ಸೂಚಿಸುತ್ತಾರೆ.
ಇದರಲ್ಲಿ ರೋಗನಿರೋಧಕ ಶಕ್ತಿ ಇದ್ದು ದಿನಾ ಬೆಳಗ್ಗೆ ಎದ್ದು ಅದರ 4-5 ಎಲೆಗಳನ್ನು ತೊಳೆದು ಅಗಿದು ತಿನ್ನುವುದರಿ೦ದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.


ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಪಾತ್ರ ಮಹತ್ವದ್ದು. ತುಳಸಿಕಟ್ಟೆಯನ್ನು ಹೊಂದಿರದ ಹಿಂದೂಗಳ ಮನೆಯೇ ಇಲ್ಲ. ಅಂತಹ ತುಳಸಿ ಪವಿತ್ರವಾದದ್ದು ಮಾತ್ರವಲ್ಲ, ರೋಗ ನಿರೋಧಕ ಶಕ್ತಿ ಸೇರಿದಂತೆ ಆರೋಗ್ಯಕ್ಕೆ ಅನುಗುಣವಾದದ್ದು ಎಂದು ಹಲವು ಸಂಶೋಧನೆಗಳು ಹೇಳಿವೆ.

ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಮುಖ ಅಂಗವಾಗಿರುವ ತುಳಸಿ (Ocimum tenuiflorum) ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಹಿಂದೂಗಳು ಇದನ್ನು ಅತ್ಯಂತ ಪವಿತ್ರವಾಗಿ ಕಾಣುತ್ತಾ ಪೂಜೆ ಮಾಡುವುದು ಸಾಮಾನ್ಯ. ತುಳಸಿಯನ್ನು ಸ್ಪರ್ಶಿಸುವುದರಿಂದ ಪಾಪಗಳು ಪರಿಹಾರವಾಗುತ್ತವೆಯೆಂಬ ನಂಬಿಕೆ ಮಾತ್ರವಲ್ಲ, ಹಲವು ರೋಗಗಳು ಶಮನವಾಗುತ್ತದೆ ನಾಶವಾಗುತ್ತಯೆಂಬ ನಂಬಿಕೆಯೂ ಬೆಳೆದು ಬಂದಿದೆ.

ಮುಖ್ಯವಾಗಿ ತುಳಸಿಯಲ್ಲಿ ಎರಡು ವಿಧಗಳಿವೆ. ಕರಿ ಅಥವಾ ಶ್ಯಾಮ ವರ್ಣದ ಕೃಷ್ಣ ತುಳಸಿ ಮತ್ತು ತಿಳಿಬಣ್ಣದ ರಾಮ ತುಳಸಿ. ಸಾಮಾನ್ಯವಾಗಿ ಪೂಜೆಗೆ ಬಳಸುವ ಕೃಷ್ಣ ತುಳಸಿಯು ಹಲವು ವೈದ್ಯಕೀಯ ಗುಣಗಳನ್ನು ಹೊಂದಿವೆ.

ಈ ಗಿಡಮೂಲಕೆಯು ಶೀತ, ತಲೆನೋವು, ಅಜೀರ್ಣ, ಮಲೇರಿಯಾ ಮತ್ತು ಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಶರೀರದಲ್ಲಿರುವ ಹಲವು ವಿಷಕ್ರಿಮಿಗಳನ್ನು ಇವು ನಾಶ ಮಾಡುತ್ತದೆ.

ದೇವಸ್ಥಾನ, ಯಾತ್ರಾಸ್ಥಳ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಇವುಗಳು ಹೆಚ್ಚಾಗಿ ಕಾಣ ಸಿಗುತ್ತದೆ. ಇವುಗಳಿಗೆ ಒತ್ತಡ ನಿವಾರಿಸುವ ಶಕ್ತಿಯು ಇದೆ. ತುಳಸಿಯ ಎಲೆಗಳನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಯ ರೂಪದಲ್ಲಿ ಅಥವಾ ಪಾನೀಯ ರೂಪದಲ್ಲಿ ಕುಡಿಯಲಾಗುತ್ತಿದೆ.

ಹಂದಿಜ್ವರಕ್ಕೂ ರಾಮಬಾಣ...
ಆಯುರ್ವೇದ ಪ್ರಕಾರ ಹಂದಿಜ್ವರ ನಿವಾರಣೆಗೆ ತುಳಸಿ ರಾಮಬಾಣವಂತೆ. ಇದರಲ್ಲಿರುವ ಔಷಧೀಯ ಗುಣಗಳು ಎಚ್‌1ಎನ್1 ರೋಗಾಣುಗಳು ಶರೀರಕ್ಕೆ ಪ್ರವೇಶಿಸದಂತೆ ರಕ್ಷಿಸುತ್ತದೆಯಂತೆ.

ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಪಡಿಸುತ್ತದೆ. ಅಲ್ಲದೆ ಹಂದಿಜ್ವರ ರೋಗಾಣುಗಳನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಡುತ್ತಾರೆ.

ತುಳಸಿ ಎಲೆಗಳು ಹಂದಿಜ್ವರ ಬರದಂತೆ ತಡೆಗಟ್ಟುತ್ತದೆ. ಹಾಗೆಯೇ ರೋಗ ಪೀಡಿತರಾದವರು ಶೀಘ್ರದಲ್ಲೇ ಗುಣಮುಖವಾಗಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಆರೋಗ್ಯದ ದೃಷ್ಟಿಕೋನದಿಂದ ಪ್ರತಿದಿನ 7ರಿಂದ 8 ತುಲಸಿ ಎಲೆಗಳನ್ನು ತಿನ್ನುವುದು ಉತ್ತಮ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗುವುದಲ್ಲದೆ ಬಾಯಿಯ ದುರ್ಗಂಧವು ಕೂಡಾ ನಿವಾರಣೆಯಾಗುತ್ತದೆ.

ದಿನನಿತ್ಯ ತುಳಸಿ ಸೇವನೆಯಿಂದ ಅಡ್ಡ ಪರಿಣಾಮಗಳೇನು ಇಲ್ಲ. ಜ್ವರ, ವಿಷಮ ಶೀತ, ಶ್ವಾಸಕೋಶದ ಸೋಂಕು, ಕೆಮ್ಮು ಮತ್ತು ನೆಗಡಿ ಹೋಗಾಡಿಸಲು ಇದರಿಂದ ಸಾಧ್ಯ. ತುಳಸಿ ಕಷಾಯ ಕುಡಿದರೆ ದೇಹ ಸದೃಢವಾಗುವುದರೊಂದಿಗೆ ಹೊಟ್ಟೆ ಸಂಬಂಧಿ ರೋಗಳನ್ನು ದೂರವಿರಿಸಬಹುದು.

ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು, ಹೊಟ್ಟು ಬರುವಿಕೆ ಕೂಡಾ ನಿವಾರಣೆಯಾಗುತ್ತದೆ. ಹಾಗೆಯೇ ಹಲವು ವಿಧದ ಚರ್ಮ ಸಂಬಂಧಿ ರೋಗಗಳಿಂದಲೂ ನಿವಾರಣೆ ಮಾಡುತ್ತದೆ. ಇದರಿಂದ ಚರ್ಮ ಮೃದುವಾಗುವುದಲ್ಲದೆ ಅಂದವಾಗುತ್ತದೆ. ಮನೆ ಪರಿಸರದಲ್ಲಿ ತುಳಸಿ ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ದೂರವಿರಿಸಬಹುದು. ಒಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ತುಳಸಿ ಸೇವನೆ ಉತ್ತಮ.
ಮನೆಯಂಗಳವನ್ನು ಅಲಂಕರಿಸುವ ಶ್ರೀತುಳಸಿ, ಪೂಜೆಯಲ್ಲಿ ಇರಲೇಬೇಕಾದ ತುಳಸಿ, ಧಾರ್ಮಿಕವಾಗಿ ಎಷ್ಟು ಮಹತ್ವದ್ದೋ ಅಷ್ಟೇ ಔಷಧಿಸತ್ವದಿಂದ ಕೂಡಿದ ವನಸ್ಪತಿ. ಸಂಸ್ಕೃತದಲ್ಲಿ ತುಳಸಿಗೆ ಸುರಸಾ, ಗ್ರಾಮ್ಯ, ಸುಲಭಾ, ಗೌರಿ, ಬಹುಮಂಜರಿ, ಶೂಲಘ್ನಿ, ದೇವದುಂದುಭಿ, ಪಾವನಿ, ವಿಷ್ಣುಪ್ರಿಯೆ, ದಿವ್ಯ, ಭಾರತಿ ಮುಂತಾದ ಅನೇಕ ಪರ್ಯಾಯ ನಾಮಗಳಿವೆ.

ತುಳಸಿ ಒಂದು ಉತ್ಕೃಷ್ಟ ರಸಾಯನವಾಗಿದೆ, ಇದು ಉಷ್ನ ಹಾಗು ತ್ರಿದೋಷ ಶಾಮಕವಾಗಿದೆ. ರಕ್ತವಿಕಾರ, ಜ್ವರ, ವಾಯು, ಕೆಮ್ಮು ಹಾಗು ಜಂತುನಾಶಕವಾಗಿದೆ ಅಲ್ಲದೆ ಹೃದಯಕ್ಕೆ ಹಿತಕಾರಿಯಾಗಿದೆ.

* ಕೆಮ್ಮುನೆಗಡಿ ಇರುವಾಗ ತುಳಸಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.


* ಗಂಟಲ ನೋವು ಇದ್ದಾಗ, ಸ್ವರಕಳೆದಾಗ ತುಳಸಿಯ ಎಲೆಹಾಕಿ ನೀರನ್ನು ಕುದಿಸಿ ಬಾಯಿಮುಕ್ಕಳಿಸಬೇಕು.


* ಎಲ್ಲ ಬಗೆಯ ಜ್ವರದ ಪೀಡೆಗೆ ತುಳಸಿಯ ಕಷಾಯ ಪರಿಣಾಮಕಾರಿಯಾಗಿದೆ.


* ಚರ್ಮರೋಗಕ್ಕೆ (ಇಸಬು,ಗಜಕರ್ಣಕ್ಕೆ) ತುಳಸಿಯ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಅರೆದು ಲೇಪಿಸಬೇಕು, ತುಳಸಿ ಕಷಾಯ ಕುಡಿಯಬೇಕು.


* ಮಕ್ಕಳಿಗೆ ಕಫಕೂಡಿದ ಕೆಮ್ಮು ಬಂದಾಗ ತುಳಸಿಯ ದಳ ಜೇನಿನಲ್ಲಿ ಅದ್ದಿ ತಿನ್ನಿಸಬೇಕು.


* ಯಕೃತ್ತಿನ(ಲಿವರ್) ತೊಂದರೆಗೆ ತುಳಸಿ ಕಷಾಯ ಉಪಶಮನಕಾರಿ.


* ರೋಗನಿರೋಧಕ ಶಕ್ತಿ ಹೆಚ್ಚಿಸಲು ಖಾಲಿಹೊಟ್ಟೆಯಲ್ಲಿ 5ರಿಂದ 10 ತುಳಸಿಯ ದಳ ತಿನ್ನಬೇಕು.  *ಬಿಳಿ ತುಳಸಿಯ ಸೇವನೆಯಿಂದ ತ್ವಚೆ, ಮಾಂಸ ಹಾಗು ಎಲುಬಿನ ರೋಗಗಳು ದೂರವಾಗುತ್ತವೆ

* ಕಪ್ಪು ತುಳಸಿಯ ಸೇವನೆಯಿಂದ ಬಿಳಿ ಕಲೆಗಳು ದೂರವಾಗುತ್ತವೆ

   *ತುಳಸಿಯ ಬೇರು ಹಾಗು ಎಲೆಗಳು ಜ್ವರದಲ್ಲಿ ಉಪಯೋಗಕಾರಿಯಾಗಿವೆ

*ತುಳಸಿಯ ಚಹಾ ಕುಡಿಯುವದರಿಂದ ಆಲಸ್ಯ, ಸುಸ್ತು ಹಾಗು ವಾತ-ಪಿತ್ತದ ವಿಕಾರಗಳು ದೂರವಾಗುತ್ತವೆ, ಹಸಿವು ಹೆಚ್ಚಾಗುತ್ತದೆ.

*ಮಜ್ಜಿಗೆಯಲ್ಲಿ ತುಳಸಿ ಎಲೆಗಳನ್ನು ಕೂಡಿಸಿಕೊಂಡು ತೆಗೆದುಕೊಳ್ಳುವದರಿಂದ ಬೊಜ್ಜಿನಲ್ಲಿ ಆರಾಮ ಸಿಗುವುದು.

ತುಳಸಿ ಸೇವನೆಯಿಂದ ಶರೀರ ಸ್ವಸ್ಥ ಹಾಗು ಸುಂದರವಾದ ಮೈಕಟ್ಟನ್ನು ಹೊಂದುತ್ತದೆ, ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಲ್ಲಿ ಇದು ರಾಮಬಾಣ ಔಷಧಿ


ಮನೆಹಿತ್ತಲಲ್ಲಿ ಬಿಟ್ಟ ಕೃಷ್ಣತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ತೊಟ್ಟು ಜೇನುತುಪ್ಪು ಬೆರೆಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ. ಈ ಕಾಫ್ ಸಿರಪ್ಪಿನಿಂದ ಕಡಿಮೆಯಾಗುತ್ತಿಲ್ಲ ಎಂದು ಅದು, ಅದರಿಂದ ಕಡಿಮೆಯಾಗುತ್ತಿಲ್ಲ ಎಂದು ಮತ್ತೊಂದು ಕಾಫ್ ಸಿರಪ್ ಸೇವಿಸುವ ಬದಲು ಮನೆಯೌಷಧಿಗೆ ಮೊರೆ ಹೋದರೆ ಹಣವೂ ಉಳಿತಾಯವಾಗುತ್ತದೆ ಮತ್ತು ಮನಸಿಗೂ ನೆಮ್ಮದಿ ಇರುತ್ತದೆ. ಪ್ರಯತ್ನಿಸಿ ನೋಡಿ.