Friday, July 08, 2011

HEALTH BENEFITS OF ROSE ಗುಲಾಬಿ ಹೂ


Nischalanand Bilimagga

ಮಲಬದ್ಧತೆಯಿಂದ ಬಳಲುತ್ತಿರುವವರು ಎರಡು ಚಮಚ ಗುಲಾಬಿಹೂವಿನ ರಸಕ್ಕೆ ಒಂದು ಚಮಚೆ ತುಪ್ಪ ಬೆರಸಿ ರಾತ್ರಿ ಮಲಗುವಮುನ್ನ ಸೇವಿಸಿದರೆ ಇದು ಪರಿಣಾಮಕಾರಿಯಾಗಿರುತ್ತದೆ.

* ರಕ್ತಭೇದಿ ಬಾಧೆಗೆ 10 ಗ್ರಾಂ ಗುಲಾಬಿಹೂಗಳನ್ನು ಎರಡು ಗಂಟೆಕಾಲ ನೀರಲ್ಲಿ ನೆನೆಯಿಟ್ಟು, ನುಣ್ಣಗೆ ಅರೆದು, ಅದಕ್ಕೆ ಕಲ್ಲುಸಕ್ಕರೆಪುಡಿ ಬೆರಸಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು. ನೆಗಡಿಗೆ ಗುಲಾಬಿಚಹ ಕುಡಿಯಬೇಕು.

* ಬಾಯಿಯ ದುರ್ಗಂಧ ನಿವಾರಣೆಗೆ ಗು...
ಲಾಬಿ(10 ಗ್ರಾಂ), ಕಲ್ಲುಸಕ್ಕರೆ(5 ಗ್ರಾಂ), ಪಚ್ಚಕರ್ಪೂರ(ಸ್ವಲ್ಪ) ಬೆರೆಸಿದ ಮಾತ್ರೆ ತಯಾರಿಸಿ, ಆಗಾಗ ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸಿದರೆ ದುರ್ಗಂಧ ತೊಲಗುವದು. ಕೆಮ್ಮಿಗೂ ಇದು ಉಪಶಮನಕಾರಿ.

* ನಿದ್ರಾಹೀನತೆಗೆ ದಿಂಬಿನ ಮೇಲೆ ಗುಲಾಬಿ ಪಕಳೆಗಳನ್ನು ಹರಡಬೇಕು, ಇಲ್ಲವೆ ಗುಲಾಬಿ ಎಣ್ಣೆಯ ಕೆಲ ಹನಿ ಸಿಂಪರಿಸಬೇಕು.

* ರಕ್ತಮೂಲವ್ಯಾಧಿ, ದಾಹ, ಉರಿಮೂತ್ರ, ಗಂಟಲನೋವು, ಅಧಿಕ ರಕ್ತಸ್ರಾವ, ಬಾಯಿಹುಣ್ಣಿಗೆ ಗುಲಾಬಿಹೂವಿನ ಗುಲ್ಕಂದ ಸೇವಿಸಬೇಕು.

* ಗುಲಾಬಿ ಎಣ್ಣೆಯ ಅಭ್ಯಂಗ ಸ್ನಾನದಿಂದ ಚರ್ಮ ಕೋಮಲವಾಗುತ್ತದೆ.

* ಈ ಎಣ್ಣೆಯನ್ನು ಕಣ್ಣಿನ ಸುತ್ತಲೂ ಲೇಪಿಸಿದರೆ ಕಣ್ಣಿನ ಸುತ್ತಲೂ ಇದ್ದ ಕಪ್ಪು ತೊಲಗುತ್ತದೆ
.


" VALUABLE SECRETS AND HEALTH BENIFITS OF ROSE WATER "
The qualities, valuable secrets and benefits of rose water were discovered through an ancient .

Rose water is basically a by-product of rose oil through distillation of pure fresh ros...
e petals. To make even a little of this oil, a large number of rose petals are used hence making this delicate extraction very expensive.
Rose water can be found in Vitamin stores and some supermarkets but this processed type usually contains chemicals and artificial preservatives that are less effective and are less beneficial than pure rose water. The benefits of rose water can be enjoyed by simply making it at home. This can be done by storing fresh rose petals in a jar filled with distilled water and placing them under the sunshine for a number of days.

# Did you know that rose water has several benefits? The benefits of rose water include:

# Beauty Skin Care:

Generally rose essence, that is rose water and rose oil, is used in various therapeutic preparations especially facial or skin treatment. Pure natural rose water is 100% free from artificial ingredients and perfumes and is used as a facial cleanser. It also prevents aging by reducing wrinkles and tightening skin pores. Dry skin can be hydrated by using rose water as a moisturizer. Rose water cleanses the skin, removing dirt, oil and other pollutants from deep inside the skin pores. Amazingly, it can be used on any skin type without causing much irritation. It acts as a cleansing agent as well as a skin toner. For that reason, ancient Romans preferred baths of rose water. The benefits of rose water can be accessed to various types of face masks can be enhanced by adding rose water to dilute, instead of plain water

# Drinking Rose water:

One of the benefits of rose water is it can be used to make very nutritious drinks since it is rich in flavonoids, anti-oxidants, tannins and essential vitamins like A, C, D, E and B3. A simple delicious drink can be made by mixing rose water syrup in a cup of cold creamy milk. Rose water is a mild sedative and anti-depressant. It enhances moods, helps relieve nervous tension and improves skin texture. In Malaysia, it is used for its distinct sweet flavor in making a milky sweet drink like Bandung.A simple Persian rose water infused iced tea will help you soothe and calm your mind.

# Medicinal uses:

Rose water is a well-known for its natural healing properties as a good anti-septic, anti-bacterial and anti-inflammatory product.

Benefits of Rose Water for Skin infections:

Rose water is used to treat skin infections including dry scaly skin, oily skin, skin inflammation, dermatitis and eczema. Rose water is also a healing agent, and can be used in treating wounds. For sunburns, rose water can be gently rubbed over the affected area or when taking a bath, add a few drops and relax while the magic takes effect.

Insect bites:

When going on a safari or camping in a tropical area, it's sure to be infested with mosquitoes. Rose water can be applied over insect bites like mosquito bites that easily stop the itchy feeling, reduce the inflammation and cool the area.

Acne:

Rose water is also an astringent which reduces redness or inflammation of skin. Swollen inflamed pimples can be reduced by gently dabbing rose water on the affected area. What's more - acne scars can be diminished and gotten rid of by making and applying a mixture of sandalwood, lemon juice and rose water on them.
As a disinfectant:

Since it has anti-viral and anti-bacterial properties, rose water can be used as a disinfectant to keep your home or workplace free from bacteria and germs. Use a rose water spritzer which can be made by adding a measureable amount of epsom salt to pure rose water and filling it in a clean and empty spritzer. This mixture can be sprayed on kitchen and bathroom counter tops, shelves, and table tops. Wipe clean with a dry cloth and this will leave a scented and fresh feel. The best part about this is that it is all natural, less expensive and eco-friendly.

Perfume:

Known for its beautiful and unique scent, rose water is accordingly used as an ingredient for shampoos, soaps and air fresheners. Rose water fragrance perfume can be used to keep your body smelling fresh and clean after a bath and prevents bad odors from accumulating due to excessive sweating. One of the eco-friendly benefits of rosewater is it It can also be creatively used to make a room freshener.

Hair Care:

Hair care products and shampoos may use rose water as a key ingredient. It is soothing as well as nourishing to the scalp. Rose water strengthens the root hairs, promotes hair growth and revitalizes the scalp thereby enabling smooth blood flow to the scalp. Keeping the scalp cool and fresh, it also rejuvenates the scalp preventing inflammations. It can be used as a natural hair spray - containing no artificial ingredients, and preventing excessive hair loss. Rose water can act as a wonderful hair conditioner, keeping your hair free from split ends and dry, frizzy hair

HEALTH BENEFITS OF ONIONS


ಈರುಳ್ಳಿಯು ಪಿತ್ತಹರ ಕಫ‌ಹರ. ಈರುಳ್ಳಿಯ ಬೀಜ ವಾತಹರ. ಇದು ರಜಸ್‌ ಮತ್ತು ತಮೋಗುಣವನ್ನು ವೃದ್ಧಿಸುತ್ತದೆ.
ಈರುಳ್ಳಿಯಲ್ಲಿ ಶರ್ಕರಪಿಷ್ಟ , ಪ್ರೊಟೀನ್‌, ಕ್ಯಾಲಿÏಯಂ, ಕಬ್ಬಿಣ ಸಣ್ತೀ , ಜೀವಸತ್ವ ಎಬಿಸಿಗಳನ್ನು ಹೊಂದಿದೆ.


 • ಈರುಳ್ಳಿ 2 ಚಮಚಕ್ಕೆ 2 ಚಮಚ ಜೇನು ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅಧಿಕ ರಕ್ತದೊತ್ತಡ ಶಮನವಾಗುತ್ತದೆ.
 • ನೆಗಡಿ, ಕೆಮ್ಮು ಕಫ‌ಕ್ಕೆ ಈರುಳ್ಳಿಯ ರಸಕ್ಕೆ (2 ಚಮಚ), ಜೇನು ತುಪ್ಪ (2 ಚಮಚ), 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ನೀಡಿದರೆ ಮಕ್ಕಳಲ್ಲಿ  ನೆಗಡಿ, ಕೆಮ್ಮು ಕಫ‌ ಶಮನವಾಗುತ್ತದೆ.
 • ಪುಟ್ಟ ಮಕ್ಕಳಿಗೆ ಇಡೀ ಬಿಳಿ ಈರುಳ್ಳಿ /ಕೆಂಪು ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ಸೇವಿಸಲು ನೀಡಿದರೆ ಕೆಮ್ಮು ಕಫ‌ ನಿವಾರಣೆಯಾಗುತ್ತದೆ. ಇದು ರಕ್ತವರ್ಧಕವೂ ಹೌದು.
 • ಈರುಳ್ಳಿಯನ್ನು ಕತ್ತರಿಸಿ ಬೆಲ್ಲ , ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
 • ಈರುಳ್ಳಿಯ ಬೀಜಗಳಿಂದ ಚಹಾ ಮಾಡಿ ಸೇವಿಸಿದರೆ ನಿದ್ರಾಜನಕವಾಗಿದೆ.
 • ಈರುಳ್ಳಿಯ ರಸವನ್ನು ಕಣ್ಣಿಗೆ ಕಾಡಿಗೆಯಂತೆ ಲೇಪಿಸಿದರೆ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ.
 • ಈರುಳ್ಳಿಯನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ ಆರಿದ ಬಳಿಕ ಕಾಳುಮೆಣಸಿನ ಹುಡಿ, ಜೇನು ಬೆರೆಸಿ ಸೇವಿಸಿದರೆ ಕೆಮ್ಮು ದಮ್ಮು ಶಮನವಾಗುತ್ತದೆ.
 • ಈರುಳ್ಳಿಯನ್ನು ಕತ್ತರಿಸಿ ಹಸಿಯಾಗಿ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣಶಕ್ತಿ ಮತ್ತು ಪಚನಶಕ್ತಿ ವೃದ್ಧಿಯಾಗುತ್ತದೆ.
 • 4 ಚಮಚ ಈರುಳ್ಳಿ ರಸಕ್ಕೆ 4 ಚಿಟಿಕೆ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆ ಉಬ್ಬರ, ಹೊಟ್ಟೆನೋವು ಶಮನವಾಗುತ್ತದೆ.
 • ಕಿವಿಯಲ್ಲಿ ನೋವಿರುವಾಗ ಈರುಳ್ಳಿ ರಸವನ್ನು ಕುದಿಸಿ 2 ಹುಂಡು ದಿನಕ್ಕೆ 3-4 ಬಾರಿ ಹಾಕಿದರೆ ಕಿವಿಯ ನೋವು ಉರಿಯೂತ ಶಮನವಾಗುತ್ತದೆ.
 • ಈರುಳ್ಳಿ ಹೂವುಗಳನ್ನು ಸೇವಿಸಿದರೆ ರುಚಿ ಮತ್ತು ಜೀರ್ಣಶಕ್ತಿ ವೃದ್ಧಿಯಾಗುತ್ತದೆ.
 • ಬಲಹೀನತೆ, ಅಶಕ್ತಿ ಇರುವಾಗ ಈರುಳ್ಳಿ ರಸ 3 ಚಮಚ, ತುಪ್ಪ 3 ಚಮಚ ಬೆರೆಸಿ ನಿತ್ಯ ಸೇವಿಸಿದರೆ ಬಲ್ಯ ಮತ್ತು ಶಕ್ತಿಕಾರಕ.
 • ಪುಟ್ಟ ಈರುಳ್ಳಿಯನ್ನು ಸೇವಿಸಿದರೆ ಋತುಚಕ್ರ ಕ್ರಮಯುತವಾಗಿ ಉಂಟಾಗುತ್ತದೆ.
 • ಸುಣ್ಣದ ತಿಳಿನೀರು ಮತ್ತು ಈರುಳ್ಳಿ ರಸ ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ಕಾಲರಾ ರೋಗದಲ್ಲಿ ಗುಣಕಾರಿ.
 • ಮೂತ್ರದಲ್ಲಿ ಸೋಂಕು ಇರುವಾಗ ಈರುಳ್ಳಿ ಜ್ಯೂಸ್‌ ನಿತ್ಯ ಸೇವಿಸಿದರೆ  ಮೂತ್ರದ ಸೋಂಕು, ಮೂತ್ರದಲ್ಲಿ ಉರಿ, ಮೂತ್ರದಲ್ಲಿನ ಕಲ್ಲು ನಿವಾರಣೆಯಾಗುತ್ತದೆ.
 • ಅರ್ಧ ಕಪ್‌ ಈರುಳ್ಳಿ ಜ್ಯೂಸ್‌ಗೆ 4 ಚಮಚ ಕಲ್ಲುಸಕ್ಕರೆ ಪುಡಿ ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತಸ್ರಾವಯುಕ್ತ ಮೂಲವ್ಯಾಧಿ ಶಮನವಾಗುತ್ತದೆ.
 • ದಾಳಿಂಬೆ ಸಿಪ್ಪೆಯ ಕಷಾಯದಲ್ಲಿ ಈರುಳ್ಳಿ ರಸ ಬೆರೆಸಿ ನೀಡಿದರೆ ಅತಿಸಾರ, ಆಮಶಂಕೆ ಶಮನವಾಗುತ್ತದೆ.
 • ಹೊಟ್ಟೆನೋವು ಇರುವಾಗ 2 ಚಮಚ ಈರುಳ್ಳಿ ರಸ, 2 ಚಮಚ ಲಿಂಬೆರಸ, 2 ಚಿಟಿಕೆ ಉಪ್ಪು ಬೆರೆಸಿ ಸೇವಿಸಿದರೆ ಹೊಟ್ಟೆನೋವು ಶಮನವಾಗುತ್ತದೆ.
 • ಕಪ್ಪು ಜೀರಿಗೆ ಮತ್ತು ಈರುಳ್ಳಿಯನ್ನು ಜಜ್ಜಿ ಅದರ ಹೊಗೆ ಸೇವಿಸಿದರೆ ಹಲ್ಲುನೋವು, ಒಸಡು ಊತ ಶಮನವಾಗುತ್ತದೆ.
 • ಸಾಸಿವೆ ಎಣ್ಣೆ ಮತ್ತು ಈರುಳ್ಳಿ ರಸ ಬೆರೆಸಿ ಬೆಚ್ಚಗೆ ಮಾಡಿ ಗಂಟುನೋವಿಗೆ ಲೇಪಿಸಿದರೆ, ಗಂಟುನೋವು, ಊತ ಶಮನವಾಗುತ್ತದೆ. ದಿನಕ್ಕೆ 3-4 ಬಾರಿ ಲೇಪಿಸಬೇಕು.
 • ಚಳಿಯಲ್ಲಿ ಕಾಲು ಒಡೆದರೆ ಈರುಳ್ಳಿಯ ಬಿಲ್ಲೆಯಿಂದ ಕಾಲಿನ ಹಿಮ್ಮಡಿಯನ್ನು ತಿಕ್ಕಿ , ತದನಂತರ ಕೊಬ್ಬರಿ ಎಣ್ಣೆ ಲೇಪಿಸಿದರೆ. ಕಾಲಿನ ಒಡಕು ಶಮನವಾಗುತ್ತದೆ.
 • ಶಿಲೀಂಧ್ರದ ಸೋಂಕು ಹಾಗೂ ತುರಿಕೆ, ಕಜ್ಜಿ ಮುಂತಾದ ಚರ್ಮದ ತೊಂದರೆಗಳಲ್ಲಿ ಲಿಂಬೆರಸ, ತುಳಸೀರಸಕ್ಕೆ ಅಷ್ಟೇ ಪ್ರಮಾಣದ ಈರುಳ್ಳಿ ರಸ ಬೆರೆಸಿ ಲೇಪಿಸಿದರೆ ಶಮನಕಾರಿ.
 • ಹಿಮ್ಮಡಿಯ ಸೀಲಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟಬಹುದು. 
 • ತೂಕ ಹೆಚ್ಚಾಗಬೇಕೆಂದಾಗ ಬೆಲ್ಲದೊಂದಿಗೆ ದಿನವೂ ಈರುಳ್ಳಿಯ ಒಂದು ಗಡ್ಡೆಯನ್ನು ಸೇವಿಸುತ್ತಾ ಬರಬಹುದು.
 • ತುರಿಕಜ್ಜಿ ಇತ್ಯಾದಿ ಚರ್ಮರೋಗವಿದ್ದಾಗ ಬಿಳೀ ಈರುಳ್ಳಿ ರಸಕ್ಕೆ ಅರಸಿನಪುಡಿ ಕಲಸಿ ಬಾಹ್ಯಲೇಪನವಾಗಿ ಹಚ್ಚುವುದರಿಂದ ಅನುಕೂಲ ದೊರೆಯುವುದು. 
 • ಜೇನುನೊಣ ಇಲ್ಲವೇ ಚೇಳು ಕಚ್ಚಿದಾಗ ಆ ಭಾಗದ ಮೇಲೆ ಈರುಳ್ಳಿ ಹೋಳನ್ನು ತಿಕ್ಕುವುದರಿಂದ ಉಪಶಮನ ದೊರೆಯುವುದು. ಅಲ್ಲದೆ ಕಿವಿಶೂಲೆಯಲ್ಲಿ ಇದರ ರಸವನ್ನು ಸ್ವಲ್ಪ ಬಿಸಿಮಾಡಿ ಒಂದೆರಡು ಹನಿ ಬಿಟ್ಟರೆ ನೋವು ಬಿಟ್ಟುಹೋಗುವುದು. ಸೋರುತ್ತಿದ್ದರೂ ಕೂಡಾ ಅದನ್ನು ನಿಲ್ಲಿಸುವುದು. 
 • ಪ್ರತಿ ದಿನ ಈರುಳ್ಳಿ ಸೇವನೆಯಿಂದ ರಕ್ತ ವೃದ್ಧಿಸುತ್ತದೆ. 
 • ಒಂದು ಈರುಳ್ಳಿಯನ್ನು ಸಣ್ಣ ಹೆಚ್ಚಿ ತುಪ್ಪದಲ್ಲಿ ಹುರಿದು ಕೊಟ್ಟಣದ ಅನ್ನದೊಂದಿಗೆ ಕಲಸಿ ತಿಂದರೆ ರಕ್ತಬೇದಿ ಶಮನ. 
 • ಒಂದು ಈರುಳ್ಳಿ ಗಡ್ಡೆಯನ್ನು ಕೆಂಡದಲ್ಲಿ  ಸುಟ್ಟು ತಿನ್ನುವುದು ಆಮಶಂಕೆ ರೋಗಕ್ಕೆ ಉತ್ತಮ. 
 • ಎರಡು ಟೀ ಚಮಚ ಈರುಳ್ಳಿ ರಸ, ತುಪ್ಪದಲ್ಲಿ ಹುರಿದ ಕಡಲೇಕಾಳು ಗಾತ್ರದ ಇಂಗು, ಎರಡು ಟೀ ಚಮಚ ಬಡೇಸೊಪ್ಪಿನ ಪುಡಿ-ಒಟ್ಟಿಗೆ ಕಲಸಿ ಸೇವಿಸುತ್ತ ಬಂದರೆ ವಾಂತಿ ಭೇದಿಗೆ ಒಳ್ಳೆಯದು.Onions
Onions are a very good source of vitamin C, B6, biotin, chromium, calcium and dietary fibre.
In addition, onions contain good amounts of folic acid and vitamin B1 and K.
A 100 gram serving provides 44 calories, mostly as complex carbohydrate, with 1.4 grams of fibre.
Like garlic, onions also have the enzyme alliinase, which is r...
eleased when an onion is cut or crushed and it causes your eyes to water.
They also contain flavonoids, which are pigments that give vegetables their colour. These compounds act as antioxidants, have a direct antitumor effect and have immune-enhancing properties.
Rich Source of Quercitin
The onion is the richest dietary source of quercitin, a potent antioxidant (also in shallots, yellow and red onions only but not in white onions), which is specifically linked to inhibiting human stomach cancer.
Quercitin in onions also thins the blood, lowers cholesterol, raises good-type HDL cholesterol (preferred dose: half a raw onion a day), wards off blood clots, fight asthma, chronic bronchitis, hay fever, diabetes, atherosclerosis and infections.
It's also an anti-inflammatory, antibiotic, antiviral, thought to have diverse anti-cancer powers. Quercitin is also a sedative. So far, there is no better food source of quercitin than onion skins.
Detoxify our Body with Onions
Onions contain a variety of organic sulphur compounds that provide health benefits.
Sulphur-containing amino acids are found as the proteins in onions as well as garlic and eggs.
These specific amino acids are called methionine and cystine and, amongst other things, they are very good at detoxifying your body from heavy metals.
In fact, they are able to latch on to mercury, cadmium and lead and escort them out of the body.
Vitamin C, also contained in onions, is excellent at detoxifying the body and is effective in removing lead, arsenic and cadmium. So increasing consumption of onions can help the body to get rid of these harmful metals.
Onions and the Heart
To help keep your blood free of clots, and make the most of the health benefits of onions, eat them both raw and cooked.
Prescribing onions for heart patients is hardly routine among cardiologists. But Harvard's Dr. Victor Gurewich advises all his patients with coronary heart disease to eat onions daily.
Here are some of the things that onions can do for your heart:
•Boost beneficial HDL cholesterol
•Thin the blood
•Retard blood clotting
•Lower total blood cholesterol
•Lower triglycerides
•Lower blood pressure
Cancer Prevention
One way the antioxidants in onions can protect you against cancer is by reducing the DNA damage in cells caused by free radicals, studies reveal.
All onions and onion relatives (garlic, leeks, chives and scallions, or spring onions) are rich in organosulfur compounds shown to help prevent cancer in lab animals.
In fact, an onion extract was found to destroy tumor cells in test tubes and to arrest tumor growth when tumor cells were implanted in rats.
The onion extract was shown to be unusually nontoxic, since a dose as high as forty times that of the dose required to kill the tumor cells had no adverse effect on the host.
In addition, shallots have been shown to exhibit significant activity against leukemia in mice.
Other Health Benefits of Onions
Onions have also been shown to have a significant blood sugar-lowering action, even comparable to some prescription drugs.
The active compound that seems to be responsible for lowering glucose works by competing with insulin for breakdown sites in the liver, thereby increasing the life span of insulin.
Onions have historically been used to treat asthma, too. Its action in asthma is due to its ability to inhibit the production of compounds that cause the bronchial muscle to spasm and to relax bronchial muscle.
Onions have potent antibacterial activity, destroying many disease-causing pathogens, including E. coli and salmonella

HEALTH BENEFITS OF WHITE RADISH ಮೂಲಂಗಿ:ಮೂಲಂಗಿ:

ಮೂಲಂಗಿಯಿಂದ ತುಂಬಾ ಉಪಯೋಗಗಳಿವೆ, ಇದನ್ನು ನಾನಾ ರೀತಿಯಾಗಿ ಆಹಾರದಲ್ಲಿ ಬಳಸಬಹುದು. ಬೇಳೆಯೊಂದಿಗೆ ಸೇರಿಸಿ ಸಾಂಬಾರ್ ತಯಾರಿಸಬಹುದು, ಚಟ್ನಿಯೊಂದಿಗೆ ಜಜ್ಜಿ ಸೇರಿಸಿವುದರಿಂದ ಮೂಲಂಗಿ ಚಟ್ನಿ ತಯಾರಿ ಆಗುತ್ತದೆ. ಚಪಾತಿ ಹಿಟ್ಟಿಗೆ ಸೇರಿಸಿ ಪರೋಟ ಮಾಡಬಹುದು. ಸಲಾಡ್ ತರಹ ಉಪಯೋಗಿಸಿ ಹಸಿಯಾಗಿ ತಿನ್ನಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉ...
ಪಯೋಗಗಳು ಹೆಚ್ಚು.

- ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.

- ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.

- ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.

- ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.

- ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.

- ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.

- ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.

- ದಿನನಿತ್ಯ ಸಲಾಡ್ ರೀತಿಯಲ್ಲಿ ಮೂಲಂಗಿಯನ್ನು ಸೇವಿಸಿ, ಇದರಿಂದ ತುಂಬಾ ಅನುಕೂಲಗಳಾಗುತ್ತವೆ. ಒಂದೇ ತರಹ ತಿನ್ನಲು ಬೇಸರ ಎನಿಸಿದರೆ, ಚಟ್ನಿಯೊಂದಿಗೆ ಬೆರೆಸಿ, ಮೂಲಂಗಿ ಚಟ್ನಿ ಅಥವ ಮೂಲಂಗಿ ಪರೋಟ ತಯಾರಿಸಿ ತಿನ್ನಬಹುದು.
ಮೂಲಂಗಿ ಪರೋಟ ಮತ್ತು ಚಟ್ನಿ ರೆಸಿಪಿಯನ್ನು ಅಡಿಗೆ ರೆಸಿಪಿಯಲ್ಲಿ ನೋಡಬಹುದು
.


* ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದಲ್ಲದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು.

* ಕೆಂಪು ರಕ್ತಕಣಗಳ ಬೆಳವಣಿಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.

* ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವವನ್ನೇ ನೀಡುತ್ತದೆ. ಅಂದರೆ ಅದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ತೆಳ್ಳಗಾಗಬೇಕು ಎನ್ನುವವರು, ತಮ್ಮ ತಿನ್ನುವ ಚಟವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುವವರು ಮೂಲಂಗಿ ಸಹಕಾರಿಯಾಗತ್ತದೆ.

* ಇನ್ನು, ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡುತ್ತಾರೆ.

* ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.

* ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ.

* ಅಸ್ತಮ ಮುಂತಾದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಸೇವನೆ ಒಳ್ಳೆಯದು.

*ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.

*** ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.

* ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.


***ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.

HEALTH BENEFITS OF PALAK ಪಾಲಕ್ :

ಪಾಲಕ್ :
ಪಾಲಕ್ ಅಂದ್ರೆ ತರಕಾರಿ ಸೊಪ್ಪುಗಳ ರಾಣಿ. ಅದರಲ್ಲಿರುವಷ್ಟು ಪೌಷ್ಟಿಕಾಂಶ, ಸತ್ವ, ಖನಿಜಾಂಶ ಬೇರೆ ಯಾವುದರಲ್ಲೂ ಇಲ್ಲ ಅಂತ ನನ್ನ ತಿಳುವಳಿಕೆ. ಪ್ರೋಟಿನ್, ವಿಟಮಿನ್, ಫ್ಯಾಟ್, ಕಾರ್ಬೊಹೈಡ್ರೆಟ್, ಲವಣಾಂಶ ಹೀಗೆ ಸಾಕಷ್ಟು ನ್ಯೂಟ್ರಿನ್ ಗಣಿ ನಮ್ಮ ಪಾಲಕ್ ರಾಣಿ.

ಪಾಲಕ್ ಬಗ್ಗೆ ಒಂದು ಪುಸ್ತಕನೇ ಬರೀಬಹುದು. ಯಾಕೆಂದರೆ ಪಾಲಕ್ ಮಹಾತ್ಮೆ ಇಷ್ಟಕ್ಕೆ ಮುಗಿಯೋದಿಲ್ಲ. ಹೃದಯದ ಆರೋಗ್ಯಕ್ಕೆ, ಕಣ್ಣಿನ ಆರೋಗ್ಯಕ್ಕೆ ಇದು ಒಳ್ಳೆಯದಂತೆ. ದೃಷ್ಟಿಯು ಹೆಚ್ಚು ತೀಕ್ಷ್ಣವಾಗುವುದರಿಂದ ಇದನ್ನು ವಾರಕ್ಕೊಮೆಯಾದರೂ ಏನಾದರೂ ಅಡುಗೆ ಮಾಡಲೇ ಬೇಕು ಅಂತ ನನ್ನ ಕೋರಿಕೆ. ಮಿದುಳು, ಎಲುಬಿನ ಆರೋಗ್ಯಕ್ಕೆ ಸಹಕರಿಸುವುದರಿಂದ ಮಕ್ಕಳಿರುವ ಮನೆಯವರೆಲ್ಲ ಇದನ್ನು ದಿನನಿತ್ಯದ ಅಡುಗೆಗೆ ಉಪಯೋಗಿಸಬಹುದು.

ಸರಿ ಪಾಲಕ್ ನಿಂದ ಸಾಕಷ್ಟು ಬಗೆಯ ಆಹಾರ ತಯಾರಿಸಬಹುದು. ಪಾಲಕ್ ಮುರ್ಗಿ, ಪಾಲಕ್ ದಾಲ್, ತಿಳಿಸಾರು, ಪಾಲಕ್ ಚಟ್ನಿ, ಪಾಲಕ್ ಕರಿ ಮಾಡಬಹುದು. ಇದರಲ್ಲಿ ನನಗೆ ಇಷ್ಟವಾಗೋದು ಪಾಲಕ್ ಕರಿ. ಅದನ್ನು ಮಾಡೋದು ಸಹ ಸುಲಭವೇ. ಅರೇ ನೀವು ಪಾಲಕ್ ಕರಿ ಹೇಗೆ ಮಾಡ್ತಿರಿ ನಮಗೂ ಹೇಳಿಕೊಡಿ ಅಕ್ಕ ಅಂತ ಕೇಳ್ತಿರಿ ಅಂತ ನನಗೊತ್ತು. ಸರಿ ಇನ್ಯಾಕೆ ತಡ ನಿಮ್ಮ ಮನೆಯಲ್ಲಿ ನಾಲ್ಕೈದು ಜನರಿದ್ದಾರೆ ಅಂದುಕೊಳ್ಳೋಣ. ಅಷ್ಟು ಜನರಿಗೆ ಬೇಕಾಗುವಷ್ಟು ಪಾಲಕ್ ಕರಿ ತಯಾರಿಸಿರಿ.

ಏನೆಲ್ಲ ಬೇಕು?

* 200 ಗ್ರಾಂನಷ್ಟು ಪಾಲಕ್ ಸೊಪ್ಪು
* ಹಸಿಮೆಣಸಿನ ಕಾಯಿ ಎರಡು ಮೂರು ಇರಲಿ. ದೊಡ್ಡದಾಗಿದ್ದರೆ ಎರಡೇ ಎರಡು ಸಾಕು.
* ಬೆಳ್ಳುಳ್ಳಿ ಒಂದೆರಡು ಎಸಲು ಇರಲಿ. ಅದನ್ನು ಹಚ್ಚಿಟ್ಟುಕೊಳ್ಳಿರಿ
* ಒಂದು ಈರುಳ್ಳಿ ಮತ್ತು ಒಂದು ಟೊಮೆಟೊವನ್ನು ಕೂಡ ಹಚ್ಚಿಟ್ಟುಕೊಳ್ಳಿ
* ಎರಡು ಚಮಚ ಎಣ್ಣೆ ಮತ್ತು ಒಂದು ಚಮಚ ಸೋಯಾ ಬಿನ್ ಸಾಸ್
* ಅಜಿನೊಮೆಟೊ ಒಂದು ಚಿಟಿಕೆಯಷ್ಟು ಇರಲಿ
* ಚಿಲ್ಲಿ ಸಾಸ್ ಒಂದು ಟೀ ಚಮಚ ಮತ್ತು ಬಿಳಿ ಕಾಳುಮಣಸು ಕಾಲು ಟೀ ಚಮಚದಷ್ಟಿರಲಿ.

ತಯಾರಿಸುವ ವಿಧಾನ

* ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಹಚ್ಚಿಟ್ಟುಕೊಳ್ಳಿ. ಅದನ್ನು ಒಂದೆರಡು ನಿಮಿಷಗಳ ಕಾಲ ಬೆಯಿಸಿ. ಅದರ ನೀರು ತೆಗೆದು ಬೆಂದ ಪಾಲಕ್ ಸೊಪ್ಪನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ರೆಡಿಯಾಗಿಡಿ.
* ಬಾಣಲೆ ಅಥವಾ ಇನ್ಯಾವುದೋ ಪಾತ್ರೆಯನ್ನು ಸ್ಟವ್ ಮೇಲಿಟ್ಟು ಅದಕ್ಕೆ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಎಲ್ಲವನ್ನೂ ಹಾಕಿ ಚೆನ್ನಾಗಿ ಫ್ರೈ ಮಾಡಿರಿ. ನಂತರ ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿರಿ.
* ಮತ್ತೆ ಅದಕ್ಕೆ ಪಾಲಕ್ ಪೇಸ್ಟ್, ಬಿಳಿ ಮೆಣಸಿನಪುಡಿ, ಅಜಿನೊಮೊಟೊ, ಸೊಯಾ ಸಾಸ್ ಮತ್ತು ಸ್ವಲ್ಪ ನೀರು ಹಾಕಿ ಎರಡು ಮೂರು ನಿಮಿಷ ಕುದಿಸಿ ಕೈಯಾಡಿಸುತ್ತಿರಿ. ಅದಕ್ಕೆ ಒಂದಿಷ್ಟು ತರಕಾರಿ ಮತ್ತು ಸ್ವಲ್ಪ ತೆಂಗಿನ ಹಾಲು ಕೂಡ ಹಾಕಿದರೆ ಇನ್ನಷ್ಟು ಸೂಪರ್ ಆಗಿರುತ್ತದೆ. ಪಾಲಕ್ ಕರಿ ರೆಡಿ. ನಿಮ್ಮ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಬಡಿಸಿರಿ. ಪಾಲಕ್ ಇನ್ನು ಮುಂದೆ ನಿಮ್ಮ ಅಡುಗೆ ಮನೆಯ ಬಾಲ್ಯದ ಗೆಳತಿಯಾಗಲಿ