Sunday, August 12, 2012

ದೊಡ್ಡ ಪತ್ರೆ





ದೊಡ್ಡ ಪತ್ರೆ 

•ದೊಡ್ಡ ಪತ್ರೆ ಎಲೆ, ತುಳಸಿ ಎಲೆ & ವಿಳೆದೆಲೆಯನ್ನು ಜಜ್ಜಿ ಹಿಂಡಿ ರಸತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಮಗುವಿಗೆ ಕುಡಿಸಿದರೆ ಕೆಮ್ಮು &  ನೆಗಡಿ ಗುಣವಾಗುವುದು.

• ೧ ವಾರದ ವರೆಗೆ ದೊಡ್ಡ ಪತ್ರೆಯ ಎಲೆಗಳನ್ನು ತಿಂದರೆ ಅರಿಶಿನಕಾಮಾಲೆ  ವಾಸಿಯಾಗುವುದು.

• ದೊಡ್ಡ ಪತ್ರೆ  & ಅರಿಶಿನವನ್ನು ಅರೆದು ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ,  ದೊಡ್ಡ ಪತ್ರೆಯ ಚಟ್ನಿಯನ್ನು ಸೇವಿಸಿದರೆ ಪಿತ್ತದ ಗಂಧೆಗಳು ಮಾಯವಾಗುತ್ತವೆ & ತಲೆ ಕೂದಲಿನ ಆರೈಕೆಗೆ  ಒಳ್ಳೆಯದು. 

• ದೊಡ್ಡ ಪತ್ರೆಯ ತಂಬುಳಿಯನ್ನು  ಆಗಾಗ್ಗೆ ಸೇವಿಸುತ್ತಿದ್ದರೆ ಪಿತ್ತ ದಿಂದ  ತಲೆದೋರುವ ಖಾಯಿಲೆಗಳು ದೂರವಾಗುತ್ತವೆ. 

• ದೊಡ್ಡ ಪತ್ರೆಯ ಎಲೆಯನ್ನು ಉಪ್ಪು ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ.

• ಕೆಮ್ಮು, ದಮ್ಮು, ಉಬ್ಬಸ , ಹೊಟ್ಟೆ ನುಲಿಯುವುದು ಮುಂತಾದ ರೋಗಗಳಿಗೆ ದೊಡ್ಡ ಪತ್ರೆ ಒಳ್ಳೆಯ ಔಷದಿ.

• ದೊಡ್ಡ ಪತ್ರೆಯ ಚಟ್ನಿಯನ್ನು ಸೇವಿಸಿದರೆ ತಲೆಸುತ್ತು ನಿಲ್ಲುತ್ತದೆ.

• ದೊಡ್ಡ ಪತ್ರೆ ಎಲೆ, ಕಾಳು ಮೆಣಸು & ಉಪ್ಪನ್ನು ಅಗಿದು ರಸ ಕುಡಿದರೆ ಬಾಯಿಯ ದುರ್ನಾತ ದೂರವಾಗಿ ಪಿತ್ತ ಶಮನವಾಗುತ್ತದೆ.

• ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತ್ತಿದ್ದರೆ ಹುಳುಕಡ್ಡಿ ನಿವಾರಣೆಯಾಗುತ್ತದೆ.

• ದೊಡ್ಡ ಪತ್ರೆ ಎಲೆಯನ್ನು ತಿಕ್ಕಿಕೊಂದರೆ  ಚರ್ಮವ್ಯಾಧಿಗಳು ಗುಣವಾಗುವುವು.

* ಶೀತ ನಿವಾರಣೆಯಲ್ಲಿ ಸಾಂಬ್ರಾಣಿ ಪ್ರಮುಖ ಪಾತ್ರ ವಹಿಸುತ್ತದೆ. ಎಳೆಯ ಮಕ್ಕಳಿಗಂತೂ ಇದೊಂದು ದಿವ್ಯೌಷಧ.  ಮೂಗಿನಿಂದ ಶೀತದಿಂದ ನೀರಿಳಿಯುತ್ತಿದ್ದರೆ ಇದರ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ರಸವನ್ನು ನೆತ್ತಿಗೆ ಹಿಂಡುವುದು ಪರಿಣಾಮಕಾರಿ. ಹಸಿ ಎಲೆಯ ರಸ ತೆಗೆದು ಜೇನು ತುಪ್ಪ ಸೇರಿಸಿ ಕುಡಿಯುವ ಮೂಲಕ ಕಫವನ್ನೂ ತಡೆಯಬಹುದು. ವೈರಾಣು ನಾಶಕ ಶಕ್ತಿ ಸಾಂಬ್ರಾಣಿ ಗಿಡಕ್ಕಿದೆ. ಹೊಟ್ಟೆ ನೋವಿಗೂ ಇದೊಂದು ಪರಿಣಾಮಕಾರಿ ಔಷಧ.

* ಶೀತ, ಕೆಮ್ಮು, ಜ್ವರದಂಥ ಕಾಯಿಲೆಗೆ ಮನೆಮದ್ದು. 

* ಎಲೆಗಳನ್ನು ಜಜ್ಜಿ ಮಾಡಿದ ಪೇಸ್ಟ್‌ಅನ್ನು ದೇಹದ ಮೇಲಿನ ಗಾಯ ಮತ್ತು ಚೇಳು ಕಡಿತದ ಜಾಗಕ್ಕೆ ಹಚ್ಚುವುದರಿಂದ ನೋವು ಶಮನ.

 *ದೊಡ್ಡ ಪತ್ರೆಯ ಸೇವನೆಯಿಂದ ಅಜೀರ್ಣದಿಂದಾಗುವ ಹೊಟ್ಟೆನೋವು, ಭೇದಿ, ಹೊಟ್ಟೆಯುಬ್ಬರ ಮುಂತಾದ ಉದರ ಸಂಬಂಧಿ ರೋಗಗಳಿಗೂ ಉತ್ತಮ ಔಷಧಿ.

Health benefits of Banana leaves ( ಬಾಳೆ ಎಲೆ)





ಬಾಳೆ ಎಲೆಯಿಂದ ತ್ವಚೆ ರಕ್ಷಣೆ:

1. ಚಿಕ್ಕ ಗಾಯವಾಗಿದ್ದರೆ ಬಾಳೆ ಎಲೆಯ ರಸ ಹಾಕಿದರೆ ಗುಣಮುಖವಾಗುತ್ತದೆ.
2. ಬಿಸಿಲಿನಿಂದ ತ್ವಚೆ ಕಪ್ಪಾದರೆ, ತಲೆ ಹೊಟ್ಟಿನ ಸಮಸ್ಯೆ ಇದ್ದರೆ ಇದನ್ನು ಗುಣ ಪಡಿಸುವಲ್ಲಿ ಬಾಳೆ ಎಲೆ ತುಂಬಾ ಸಹಕಾರಿಯಾಗಿದೆ. ಕುಡಿ ಬಾಳೆ ಎಲೆಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ತಲೆಗೆ ಹಚ್ಚಿ ನಂತರ ತಣ್ಣೀರಿನಿಂದ ತಲೆ ತೊಳೆದರೆ ಹೊಟ್ಟು ನಿವಾರಣೆಯಾಗುತ್ತದೆ.
3. ಈ ಬಾಳೆ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಯಾವುದಾದರೂ ಕೀಟ , ಜೇನು ನೊಣ ಅಥವಾ ಚೇಳು ಕಚ್ಚಿದಾಗ ಅಥವಾ ತ್ವಚೆಯಲ್ಲಿ ಅಲರ್ಜಿ ಉಂಟಾದರೆ ಬಾಳೆ ಎಲೆ ರಸ ಹಾಕಿದರೆ ಗುಣಮುಖವಾಗುವುದು.
4. ಬೆಲೆ ಬಾಳುವ ಸೌಂದರ್ಯವರ್ಧಕ ಕ್ರೀಮ್ ಗಳಲ್ಲಿ Allantoin ಎಂಬ ಅಂಶವಿರುತ್ತದೆ. ಇದು ತ್ವಚೆ ಸಂರಕ್ಷಣೆಗೆ ಸಹಕಾರಿಯಾಗಿದೆ. ಬಾಳೆ ಎಲೆಯಲ್ಲಿ ಕೂಡ ಈ ಅಂಶವಿರುವುದರಿಂದ ಬ್ಯಾಕ್ಟೀರಿಯಾಗಳಿಂದ ತ್ವಚೆಯನ್ನು ರಕ್ಷಿಸುವುದು.
5. ಹಸಿ ಮೆಣಸಿನ ಕಾಯಿ ಗಿಡದ ಕುಡಿ ಎಲೆ, ದೊಡ್ಡ ಪತ್ರೆ ಎಲೆ ಮತ್ತು ಬಾಳೆ ಎಲೆ ಇವುಗಳ ರಸವನ್ನು ಮಿಶ್ರ ಮಾಡಿ ಹಚ್ಚಿದರೆ ತ್ವಚೆಯಲ್ಲಿರುವ ಕಲೆ, ತುರಿಕೆ ಈ ಸಮಸ್ಯೆಗಳನ್ನು ನಿವಾರಿಸಬಹುದು.
6. ಡಯಾಫರ್ ಅಥವಾ ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.
7. ಒಂದು ಕ್ಯೂಬ್ ಐಸ್ ತೆಗೆದಕೊಂಡು ಅದನ್ನು ಬಾಳೆಯಲ್ಲಿ ಸುತ್ತಿ, ಅದರಿಂದ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.
8. ಬಾಳೆ ಎಲೆಯಿಂದ ತಯಾರಿಸಿದ ಔಷಧಿ ದೊರೆಯುತ್ತದೆ, ಇದನ್ನು ಪ್ರತಿ ದಿನ ಸೇವಿಸಿದರೆ ತ್ವಚೆ ಕಾಂತಿ ಹೆಚ್ಚುವುದು.

Friday, August 10, 2012

Home remedies for cold & cough (ನೆಗಡಿ, ಕಫ ಮತ್ತು ಕೆಮ್ಮು )



ಕೆಮ್ಮು ಮತ್ತು ನೆಗಡಿ
ಆಹಾರದಲ್ಲಿ ಹೆಚ್ಚು ಶುಂಠಿ ಹಾಗೂ ಮೆಣಸು ಬಳಸಿ. ನಿತ್ಯ ಕುಡಿಯುವ ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಒಂದು ಚಿಟಿಕಿ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ನೈಸರ್ಗಿಕವಾಗಿ ದೇಹದ ಉಷ್ಣತೆ ಪ್ರಮಾಣ ಹೆಚ್ಚಿಸುವ ಕಷಾಯ, ಸೂಪ್ ಕುಡಿಯಿರಿ. ಸ್ನಾನ ಮಾಡುವಾಗ ಕೂಡ ಒಂದೆರಡು ಹನಿ ನೀಲಗಿರಿ ತೈಲವನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ.


ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು ೧ ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ ೧ ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ಇಲ್ಲವಾಗುತ್ತದೆ.

ಬಿಸಿಯಾದ ಹಸುವಿನ ಹಾಲಿಗೆ ಕಾಳುಮೆಣಸಿನಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.

ತುಪ್ಪದಲ್ಲಿ ಹುರಿದ ಮೆಣಸನ್ನು ಸಮಭಾಗ ಸಕ್ಕರೆಯೊಂದಿಗೆ ಸೇರಿಸಿ ಚೆನ್ನಾಗಿ ಪುಡಿಮಾಡಿ ದಿನಕ್ಕೆ ೩ ಸಲ ಅರ್ಧ ಟೀ ಚಮಚ ತಿಂದರೆ ನೆಗಡಿ ಮತ್ತು ಕೆಮ್ಮು  ಕಡಿಮೆಯಾಗುತ್ತದೆ.

ಚೆನ್ನಾಗಿ ಮಾಗಿದ ರಸಬಾಳೆ ಹಣ್ಣಿನೊಂದಿಗೆ ಅರ್ಧ ಟೀ ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಸೆದು ದಿನಕ್ಕೆ ಮೂರು  ಬಾರಿ ಸೇವಿಸಿದರೆ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.

ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನಪುಡಿ ಮತ್ತು ಎರಡು ಚಿಟಿಕೆ ಕಾಳು ಮೆಣಸಿನಪುಡಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕದಡಿ ಕುಡಿದರೆ ನೆಗಡಿ, ಕೆಮ್ಮು, ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ.

ಒಂದು ಚಿಟಕೆ ಅರಿಶಿನಪುಡಿ ಮತ್ತು ಎರಡು ಚಿಟಕೆ ಕಾಳು ಮೆಣಸಿನಪುಡಿಯನ್ನು ಒಂದು ಬಟ್ಟಲು ಹಾಲಿಗೆ ಹಾಕ್ಕಿ ಚೆನ್ನಾಗಿ ಕುದಿಸಿ ಊಟವಾದ ನಂತರ ರಾತ್ರಿ ಮೂರು ದಿನ ಸೇವಿಸಿದರೆ ಜಾಡ್ಯ ಪರಿಹಾರವಾಗುವದರ ಜೊತೆಗೆ ನೆಗಡಿ, ಕೆಮ್ಮು ದೂರವಾಗುತ್ತದೆ.

ಮೆಣಸನ್ನು ಹುರಿದು ನುಣ್ಣಗೆ ಪುಡಿಮಾಡಿ ಕಾಲು ಚಮಚ ಪುಡಿಯನ್ನು ಜೇನುತುಪ್ಪ ದಲ್ಲಿ ಕಲಸಿ ದಿನಕ್ಕೆ ೨ ಸಲ ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ಗುಣವಾಗುತ್ತದೆ.

ಒಡೆದ ಮೆಣಸು ಸ್ವಲ್ಪ ಓಮು ಮತ್ತು ಒಂದೆರಡು ಉಪ್ಪಿನ ಹರಳುಗಳನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸಿ ನುಂಗುತ್ತಿದ್ದರೆ ಕೆಮ್ಮು ದೂರವಾಗುತ್ತದೆ.

ಒಂದು ಬಟ್ಟಲು ನೀರಿಗೆ ಅರ್ಧ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು ಒಂದು ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಕುದಿಸಿ ಈ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ  ಸೇರಿಸಿ ದಿನಕ್ಕೆ ಮೂರು ಸಾರಿ ಕುಡಿದರೆ ಗಂಟಲು ಕೆರೆತ ಕಡಿಮೆಯಾಗುತ್ತದೆ.

ಒಂದು ವೀಲ್ಯದೆಲೆಯೊಂದಿಗೆ ನಾಲ್ಕೈದು ಕಾಳು ಮೆಣಸು ಮತ್ತು ಒಂದೆರಡು ಹರಳು ಉಪ್ಪು ಹಾಕಿಕೊಂಡು ಜಗಿದು ತಿನ್ನುವುದರಿಂದ ಕಫಾ ಹೋಗುತ್ತದೆ.

ಓಮು ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರೂ ಸಾರಿ ಕುಡಿದರೆ ಕಫಾ ನಿವಾರಣೆಯಗುತದೆ.

ಒಂದು ಬಟ್ಟಲು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿಶುಂಟಿ ಕಷಾಯ ಬೆರೆಸಿ ಜೇನುತುಪ್ಪದೊಂದಿಗೆ ಕುಡಿದರೆ ಕಫಾ ಬಿಡುಗಡೆಯಾಗುತ್ತದೆ. ಕೆಮ್ಮು, ಕ್ಷಯ ರೋಗಗಳಿಗೆಲ್ಲ ಈ ಉಪಚಾರದಿಂದ ಉತ್ತಮ ಪರಿಹಾರ ದೊರೆಯುವದು.

ಹಸಿ ಶುಂಟಿಯ ಕಷಾಯಕ್ಕೆ ಮೆಂತ್ಯದ ಸೊಪ್ಪಿನ ಕಷಾಯವನ್ನು ಬೆರೆಸಿ ಜೇನುತುಪ್ಪದೊಂದಿಗೆ ಕುಡಿಯುವದರಿಂದ ಕಫಾ ನಿವಾರಣೆಯಾಗುವುದು.

ಹಸಿ ಶುಂಟಿಯ ಕಷಾಯ ತಯಾರಿಸಿ ದಿನಕ್ಕೆ ಎರಡುಬಾರಿ ಕುಡಿಯುವದರಿಂದ ನೆಗಡಿ ಮತ್ತು ದೇಹಾಲಸ್ಯ  ದೂರವಾಗುತ್ತದೆ.

ಹಸಿ ಶುಂಟಿ, ಲವಂಗ ಮತ್ತು ಉಪ್ಪನು ಬಾಯಿಗೆ ಹಾಕಿಕೊಂಡು ಅಗಿದು ಬರುವ ನೀರನ್ನು ಕುಡಿಯುವದರಿಂದ ಗಂಟಲು ಕೆರೆತ ಹಾಗು ನೆಗಡಿ ನಿವಾರಣೆಯಾಗುವುದು. ಹಾಗೆ  ಬಾಯಿಯ ದುರ್ಗಂಧ ದೂರವಾಗುತ್ತದೆ.

ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿಣದ ಅಪ್ಪಟ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಕದಡಿ ಕುಡಿದರೆ ಕೆಮ್ಮು, ನೆಗಡಿ ಮತ್ತು ಗಂಟಲು ನೋವು ನಿವಾರಣೆಯಾಗುವುದು.

ಅಪ್ಪಟ ಅರಿಶಿಣದ ಪುಡಿ ಮತ್ತು ಬೆಲ್ಲವನ್ನು ಹಾಲಿನೊಂದಿಗೆ ಕಲಸಿ ಗಂಟಲಿನ ಮೇಲ್ಭಾಗಕ್ಕೆ ಹಚ್ಹುವದರಿಂದ ಶೀತದ ಗಂಟಲು ನೋವು  ನಿವಾರಣೆಯಾಗುವುದು.

ಕತ್ತೆಯ  ಹಾಲನ್ನು ದಿನಕ್ಕೆ ಒಂದು ಬಾರಿ ಎಳೆ ಮಕ್ಕಳಿಗೆ ಕುಡಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ಕುಡಿಯುವದರಿಂದ ನೆಗಡಿ ವಾಸಿಯಾಗುತ್ತದೆ.
ಬೆಣ್ಣೆಯನ್ನು ತಿಂದರೆ ಆಯಾಸ ಪರಿಹಾರವಾಗಿ ಕೆಮ್ಮು ಬಾಯಾರಿಕೆ ಹೋಗುವುದು.

44 ದಿನಗಳವರೆಗೆ ತಪ್ಪದೆ ಒಂದು ಸೇಬನ್ನು  ತಿನ್ನಿರಿ, ಕಫಾ ನಿವಾರಣೆಯಾಗುವುದು.

ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಬಾಳೆ ಹಣ್ಣನ್ನು ಸೇವಿಸಿದರೆ ಎದೆನೋವು ಮತ್ತು ಕೆಮ್ಮು ಕಡಿಮೆಯಾಗುವದು.

ತೆಂಗಿನ ಹಾಲು ಮತ್ತು ಗಸಗಸೆ ಹಾಲನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಪ್ರತಿರಾತ್ರಿ ಊಟವಾದ ನಂತರ ಸೇವಿಸಿದರೆ ಧೂಮಾಪಾನದಿಂದ ಆಗುವ ಗೂರಲು ಕೆಮ್ಮು ಮತ್ತು ಎದೆನೋವಿನಲ್ಲಿ ಸುಧಾರಣೆಯಾಗುವುದು.

ಜೇನುತುಪ್ಪವನ್ನು ನಿಯಮಿತವಾಗಿ ಪ್ರತಿ ನಿತ್ಯವೂ ಬಳಸುವುದರಿಂದ ಕಫಾ ನಿವಾರಣೆಯಾಗುತ್ತದೆ.

ತುಳಸಿ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಮೂರು ದಿನಗಳ ಕಾಲ ಮಕ್ಕಳಿಗೆ ಕುಡಿಸುವುದರಿಂದ ಕೆಮ್ಮು ಮತ್ತು ಜ್ವರ ನಿವಾರಣೆಯಾಗುತ್ತದೆ.

ನಿರಂತರವಾಗಿ ಬೆಳ್ಳುಳ್ಳಿಯನ್ನು ಅರೆದ ರಸ ಸೇವನೆಯಿಂದ ದೀರ್ಘಕಾಲದಿಂದ ವಾಸಿಯಾಗದ ಕೆಮ್ಮು, ನೆಗಡಿ ಗುಣವಾಗುತ್ತದೆ.

ನುಗ್ಗೆಯ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ಆರಿಸಿ ರಸ ತೆಗೆದು, ಆ ರಸಕ್ಕೆ ಕಾಳು ಮೆಣಸಿನ ಪುಡಿ, ನಿಂಬೆರಸ ಮತ್ತು ಅಡಿಗೆ ಉಪ್ಪನ್ನು ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಉಬ್ಬಸ, ನೆಗಡಿ ನಿವಾರಣೆಯಾಗುತ್ತದೆ.

*೫೦ ಗ್ರಾಂ ಶುಂಟಿ , ೪ ಚಮಚ ಸಕ್ಕರೆ ನ ೨ ಲೋಟ ನೀರಿನಲ್ಲಿ ಹಾಕಿ ೩೦ ನಿಮಿಷ  ಕುದಿಸಿ. ದಿನಕ್ಕೆ ೨ ಬಾರಿ ಬಿಸಿ ಇರುವಾಗಲೇ ಕುಡಿಯಿರಿ ಕಫ ಕಡಿಮೆಯಾಗುತ್ತದೆ .

ದೊಡ್ಡ ಪತ್ರೆ ಎಲೆ, ತುಳಸಿ ಎಲೆ & ವಿಳೆದೆಲೆಯನ್ನು ಜಜ್ಜಿ ಹಿಂಡಿ ರಸತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಮಗುವಿಗೆ ಕುಡಿಸಿದರೆ ಕೆಮ್ಮು &  ನೆಗಡಿ ಗುಣವಾಗುವುದು.

* ಹಸಿ ಶುಂಟಿಯ ರಸ ಮತ್ತು ವೀಲ್ಯದೆಲೆಯ ರಸದ ಜೊತೆ ಜೇನುತುಪ್ಪವನ್ನು ಬೆರೆಸಿ ತಿಂದರೆ ಕಫ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. 

* ಕಫ ಬಹಳವಾಗಿದ್ದರೆ ಬಿಸಿನೀರಿನೊಂದಿಗೆ ಸ್ವಲ್ಪ ಉಪ್ಪನ್ನು ಬೆರಸಿ ಕುಡಿಯುತ್ತಿದ್ದರೆ ಕಫ ಬರುವುದು ನಿಲ್ಲುತ್ತದೆ.

* ಅರಿಷಿಣ ಕೊಂಬನ್ನು ಹುರಿದು ಪುಡಿ ಮಾಡಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ದಿನದಲ್ಲಿ ಮೂರು ಬಾರಿ ಸೇವಿಸಿ. ಕುದಿಯುವ ನೀರಿಗೆ ಅರಿಷಿಣ ಹಾಕಿ ಆವಿ ತೆಗೆದುಕೊಳ್ಳುವುದರಿಂದ ಕೆಮ್ಮ ಹಾಗೂ ಶೀತ ನಿವಾರಣೆ ಆಗುತ್ತದೆ.

* 5ಎಂಎಲ್ ಈರುಳ್ಳಿ ರಸಕ್ಕೆ 10ಎಂಎಲ್ ಜೇನುತುಪ್ಪ ಸೇರಿಸಿ ಸೇವಿಸಿ. ಕೆಮ್ಮು ಮಾಯ.

* ಕೆಲವು ಬೆಳ್ಳುಳ್ಳಿ ಎಸಳುಗಳನ್ನು ನೀರಿನಲ್ಲಿ ಕುದಿಸಿ. ಅದಕ್ಕೆ ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು ನಿವಾರಣೆ ಆಗುತ್ತದೆ.

* ಒಣದ್ರಾಕ್ಷಿಯನ್ನು ತೊಳೆದು ರುಬ್ಬಿ ಅದಕ್ಕೆ ನೀರು ಹಾಗೂ ಸಕ್ಕರೆ ಸೇರಿಸಿ ಬಿಸಿ ಮಾಡಿ ಕುಡಿಯಿರಿ. ಕೆಮ್ಮು ಕಡಿಮೆಯಾಗುತ್ತದೆ.

* 1/4 ಕಪ್ ನೀರಿಗೆ ಎರಡು ಚಮಚ ಜೇನು, ಲಿಂಬೆ ರಸ, ದಾಲ್ಚಿನಿ ಚಕ್ಕೆ ಹಾಗೂ ಒಂದು ನೀಲಗಿರಿ ಎಲೆ ಸೇರಿಸಿ ಸೇವಿಸಿ ಕೆಮ್ಮು ನಿವಾರಣೆ ಆಗುತ್ತದೆ.

* ಮಕ್ಕಳಲ್ಲಿ ಕಾಣಿಸುವ ಕೆಮ್ಮಿಗೆ ಸಾಸಿವೆ ಎಣ್ಣೆ ಹೆಚ್ಚು ಪರಿಣಾಮಕಾರಿ. ಎಣ್ಣೆಯನ್ನು ಮಕ್ಕಳ ಎದೆಗೆ ಹಚ್ಚಿ ತಿಕ್ಕಿ.


* ಕಷ್ಣತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ತೊಟ್ಟು ಜೇನುತುಪ್ಪು ಬೆರೆಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ.

* ಒಂದಿಷ್ಟು ದಾಲ್ಚಿನ್ನಿ ಚಕ್ಕೆ ಪುಡಿ ಮಾಡಿ, ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಕಾಳುಮೆಣಸಿನ ಪುಡಿ ಬೆರೆಸಿ ಬಿಸಿಯಿರುವಾಗಲೇ ಕುಡಿಯಬೇಕು ನೆಗಡಿ ಮಾಯ.


ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ:

* ಬೇಕಾದ ಪದಾರ್ಥಗಳು : 

ಒಣ ಶುಂಠಿ - ಕಿರುಬೆರಳಿನಷ್ಟು
ಕರಿ ಮೆಣಸು, ಜೀರಿಗೆ,
 ಕೊತ್ತಂಬರಿ ಬೀಜ (ಹವೀಜ) ಒಂದೊಂದು ಚಮಚ
 ಒಂದು ನಿಂಬೆ ಹಣ್ಣು  
 ಉಪ್ಪು ಮತ್ತು ತುಣುಕು ಬೆಲ್ಲ 
 ಕೆಂಪು ಕಲ್ಲುಸಕ್ಕರೆ. 

ತಯಾರಿಸುವ ವಿಧಾನ :
ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪತ್ಯೇಕವಾಗಿ ಹುರಿದಿಟ್ಟುಕೊಂಡು ಅದಕ್ಕೆ ಒಣ ಶುಂಠಿ ಹಾಕಿ ಒರಳು ಕಲ್ಲಿನಲ್ಲಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ.  ಈ ಪುಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಬಾಟಲಲ್ಲಿ ತೆಗೆದಿಟ್ಟುಕೊಂಡು ಯಾವಾಗ ಬೇಕೆಂದಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.
ಸ್ಟೌ ಮೇಲೆ ನಾಲ್ಕು ಕಪ್ಪಿನಷ್ಟು ನೀರಿಟ್ಟು ಕುದಿಸಿ. ನೀರು ಕುದಿಯುತ್ತಿರುವಾಗಲೇ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ ಮತ್ತು ಹತ್ತು ನಿಮಿಷ ಕುದಿಸಿ. ಶುಂಠಿ ಕಷಾಯ ಸಿಹಿಯಾಗಿರಬೇಕಿದ್ದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಕುದಿಸಿ ಇಳಿಸಿದ ನಂತರ ಸೋಸಿಕೊಂಡು ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.

ಈ ಒಣ ಶುಂಠಿ ಕಷಾಯ ನೆಗಡಿಗೆ ರಾಮಬಾಣ. ಬಿಸಿಯಿರುವಾಗಲೇ ದಿನಕ್ಕೆರಡು ಬಾರಿ ಹೀರಿದರೆ ನೆಗಡಿ ಗಡಿಬಿಡಿಯಿಂದ ಮಾಯವಾಗಿರುತ್ತದೆ. ಇದಕ್ಕೆ ಒಂದು ಕಡ್ಡಿಯಷ್ಟು ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕೂಡ ಕಡಿಮೆಯಾಗುತ್ತದೆ.


* ಬೇಕಾಗುವ ಸಾಮಾಗ್ರಿಗಳು:

ಜೀರಿಗೆ 2 ಚಮಚ
ಅಂಗೈಯ ಅರ್ಧದಷ್ಟು ಅಗಲವಿರುವ ಹಸಿ ಶುಂಠಿ
ಕರಿ ಮೆಣಸು ಅರ್ಧ ಚಮಚ
ಚಕ್ಕೆ 2 ಪೀಸ್
ಲವಂಗ 3-4
ಪುದೀನಾ ಅರ್ಧ ಕಟ್ಟು
ತುಳಸಿಜೀರಿಗೆ 2 ಚಮಚ
ಅಂಗೈಯ ಅರ್ಧದಷ್ಟು ಅಗಲವಿರುವ ಹಸಿ ಶುಂಠಿ
ಕರಿ ಮೆಣಸು ಅರ್ಧ ಚಮಚ
ಚಕ್ಕೆ 2 ಪೀಸ್
ಲವಂಗ 3-4
ಪುದೀನಾ ಅರ್ಧ ಕಟ್ಟು
ತುಳಸಿ
* ಒಂದು ಪಾತ್ರೆಗೆ ಶುಂಠಿಯನ್ನು ಜಜ್ಜಿ ಹಾಕಿ, ಕರಿ ಮೆಣಸು ಮತ್ತು ಜೀರಿಗೆಯನ್ನು ಸ್ವಲ್ಪ ಪುಡಿ ಮಾಡಿ ಹಾಕಿ, ನಂತರ ಉಳಿದ ಪದಾರ್ಥಗಳನ್ನು ಹಾಗೇ ಹಾಕಿ, ಅರ್ಧ ಚಮಚ ಉಪ್ಪು ಸೇರಿಸಿ, ಒಂದು ಲೀಟರ್ ನೀರು ಹಾಕಿ ಚೆನ್ನಾಗಿ ಕುದಿಸಿ. ಒಂದು ಲೀಟರ್ ನೀರು ಅರ್ಧ ಲೀಟರ್ ಆಗುವಷ್ಟು ಹೊತ್ತು ಕುದಿಸಿ, ನಂತರ ಉರಿಯಿಂದ ಇಳಿಸಿ, ಬಿಸಿ-ಬಿಸಿಯಾದ ಕಷಾಯವನ್ನು ಸ್ವಲ್ಪ ತಣ್ಣಗೆ ಮಾಡಿ ಒಂದು ಗ್ಲಾಸ್ ಕುಡಿಯಿರಿ .

  ಒಂದು ತುಂಡು ಬೆಲ್ಲವನ್ನು ಕೈಯಲ್ಲಿ ಹಿಡಿದು ತಿನ್ನುತ್ತಾ  ಈ ಕಷಾಯ ಕುಡಿದರೆ ಕಷಾಯವನ್ನು ಕುಡಿಯಲು  ಕಷ್ಟವೆನಿಸುವುದಿಲ್ಲ. 


ಜೇನುತುಪ್ಪ, ತೆ೦ಗಿನೆಣ್ಣೆ, ಹಾಗೂ ಲಿ೦ಬೆರಸ:
 ಬಟ್ಟಲೊ೦ದರಲ್ಲಿ ತೆ೦ಗಿನೆಣ್ಣೆಯನ್ನು ಬಿಸಿಮಾಡಿರಿ. ಬೆಚ್ಚಗಾದ ಬಳಿಕ, ಹುರಿಯನ್ನು ನ೦ದಿಸಿರಿ. ಈಗ ಈ ಬೆಚ್ಚಗಿನ ತೈಲಕ್ಕೆ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಿರಿ. ಈಗ ಈ ದ್ರಾವಣವನ್ನು ನಿಮ್ಮ ಚಹಾಕ್ಕೆ ಬೆರೆಸಿರಿ. ಒ೦ದಿಷ್ಟು ಲಿ೦ಬೆರಸವನ್ನೂ ಸಹ ಈ ಚಹಾಕ್ಕೆ ಸೇರಿಸಿ ನೀವೇ ತಯಾರಿಸಿದ ಈ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ:
 ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.

ಕ೦ದು ಸಕ್ಕರೆ ಹಾಗೂ ಬಿಸಿನೀರು :

 ಒ೦ದು ಲೋಟದಷ್ಟು ನೀರನ್ನು ಕುದಿಸಿರಿ. ನೀರು ಬಿಸಿಯಾಗಿರುವಾಗ, ಅದಕ್ಕೆ ಎರಡು ಚಮಚದಷ್ಟು ಕ೦ದು ಸಕ್ಕರೆಯನ್ನು ಸೇರಿಸಿರಿ. ಸಕ್ಕರೆಯು ನೀರಿನಲ್ಲಿ ಕರಗಲಿ. ನೀರು ಕೊಠಡಿಯ ಉಷ್ಣತೆಯನ್ನು ತಲುಪಿದಾಗ, ಕ೦ದು ಸಕ್ಕರೆಯುಕ್ತ ಈ ನೀರನ್ನು ನಿಧಾನವಾಗಿ ಕುಡಿಯಿರಿ.

ಶು೦ಠಿ, ಬೆಳ್ಳುಳ್ಳಿ, ಹಾಗೂ ಕಾಳುಮೆಣಸು :
 ಮನೆಯಲ್ಲಿ ತಯಾರಿಸಬಹುದಾದ ಕೆಮ್ಮಿನ ಸಿರಪ್ ಗಳ ಪೈಕಿ ಅತ್ಯ೦ತ ಪರಿಣಾಮಕಾರಿಯಾದುದು ಇದಾಗಿದೆ. ಜಜ್ಜಿದ ಶು೦ಠಿ, ಬೆಳ್ಳುಳ್ಳಿಯ ದಳಗಳು, ಹಾಗೂ ಸ್ವಲ್ಪ ಕಾಳುಮೆಣಸು - ಇವೆಲ್ಲವನ್ನೂ ಒ೦ದು ಲೋಟದಷ್ಟು ಕುದಿಯುತ್ತಿರುವ ನೀರಿನಲ್ಲಿ ಸೇರಿಸಬೇಕು. ಕೆಮ್ಮನ್ನು ನಿವಾರಿಸಿಕೊಳ್ಳುವ೦ತಾಗಲು ಈ ಸಿರಪ್ ಅನ್ನು ದಿನಕ್ಕೆರಡು ಬಾರಿ ಸೇವಿಸಿರಿ.

ಆಲಿವ್ ಎಣ್ಣೆ, ಕಾಳುಮೆಣಸು, ಹಾಗೂ ಜೇನುತುಪ್ಪ:
 ಒ೦ದು ಚಮಚದಷ್ಟು ಆಲಿವ್ ಎಣ್ಣೆಯನ್ನು ಬಿಸಿಮಾಡಿರಿ. ಅದು ಬಿಸಿಯಾಗಿರುವಾಗ ಅದಕ್ಕೆ ಕಾಳುಮೆಣಸನ್ನು ಸೇರಿಸಿ ಕಲಕಿರಿ. ಮಿಶ್ರಣವು ತಣ್ಣಗಾದಾಗ, ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಆ ಅಸಹನೀಯವಾದ ಕೆಮ್ಮನ್ನು ಒದ್ದೋಡಿಸಲು ನೀವೇ ತಯಾರಿಸಿದ ಈ ಕೆಮ್ಮಿನ ಸಿರಪ್ ಅನ್ನು ಸೇವಿಸಿರಿ.

ಜೇನುತುಪ್ಪ ಹಾಗೂ ಗಿಡಮೂಲಿಕೆಯ ಚಹಾ :
ದಿನಕ್ಕೆರಡು ಬಾರಿ ಎರಡು ಕಪ್ ಗಳಷ್ಟು ಜೇನುತುಪ್ಪ ಮಿಶ್ರಿತ ಗಿಡಮೂಲಿಕೆಯ ಚಹಾದ ಸೇವನೆಯು ಕೆಮ್ಮನ್ನು ಹೋಗಲಾಡಿಸಲು ನೆರವಾಗುತ್ತದೆ. ಚಹಾ ಸೇವನೆಯ ಬಳಿಕ ಗ೦ಟಲಲ್ಲು೦ಟಾಗಬಹುದಾದ ತುರಿಕೆಯ ಅನುಭವವನ್ನು ಹೋಗಲಾಡಿಸಿಕೊಳ್ಳಲು ಬಿಸಿನೀರನ್ನು ಕುಡಿಯಿರಿ.

ಬಿಸಿಬಿಸಿಯಾದ ಲಿ೦ಬೆಹಣ್ಣಿನ ಪಾನಕ :

 ಗ೦ಟಲು ಬೇನೆಯ ಅನುಭವವಾಗತೊಡಗುತ್ತಿದ್ದ೦ತೆಯೇ ಲಿ೦ಬೆಯ ರಸವನ್ನು ಸೇವಿಸಿಬಿಡಬೇಕು. ಏನೇ ಆಗಲಿ, ಲಿ೦ಬೆಯ ರಸವು ಬೆಚ್ಚಗಿರಬೇಕು. ರುಚಿಗಾಗಿ ಸ್ವಲ್ಪ ಸಕ್ಕರೆಯನ್ನೋ ಅಥವಾ ಉಪ್ಪನ್ನೋ ಸೇರಿಸಿಕೊಳ್ಳಬಹುದು.

ಹಸಿರು ಚಹಾ ಮತ್ತು ಜೇನುತುಪ್ಪ:
 ಇದು ಕೆಮ್ಮನ್ನು ನಿವಾರಿಸಿಕೊಳ್ಳುವುದರ ಜೊತೆಗೆ ದೇಹದ ಹೆಚ್ಚುವರಿ ತೂಕವನ್ನೂ ಸಹ ನಿವಾರಿಸಿಕೊಳ್ಳುವ೦ತಾಗಲು ಹಸಿರು ಚಹಾ ಹಾಗೂ ಜೇನುತುಪ್ಪದ ಮಿಶ್ರಣವು ಒ೦ದು ಅತ್ಯುತ್ತಮವಾದ ಮನೆಮದ್ದಾಗಿರುತ್ತದೆ.

ಉಪ್ಪುನೀರು ಹಾಗೂ ಲಿ೦ಬೆಯ ರಸ :
ಮನೆಯಲ್ಲಿಯೇ ತಯಾರಿಸಬಹುದಾದ ಮತ್ತೊ೦ದು ನೈಸರ್ಗಿಕವಾದ ಕೆಮ್ಮಿನ ಸಿರಪ್ ಯಾವುದೆ೦ದರೆ ಉಪ್ಪು ನೀರು ಹಾಗೂ ಲಿ೦ಬೆಯ ರಸದ ರೆಸಿಪಿ. ಇಲ್ಲಿ ಮತ್ತೊಮ್ಮೆ, ಲಿ೦ಬೆಯ ರಸವು ಬೆಚ್ಚಗಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಶು೦ಠಿ, ಬೆಳ್ಳುಳ್ಳಿ, ಹಾಗೂ ಜೇನುತುಪ್ಪ:
 ಶು೦ಠಿ, ಬೆಳ್ಳುಳ್ಳಿ, ಹಾಗೂ ಜೇನುತುಪ್ಪಗಳನ್ನು ಬಳಸಿಕೊ೦ಡು ಕೆಮ್ಮಿನ ಸಿರಪ್ ನ ಮಿಶ್ರಣವೊ೦ದನ್ನು ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಿರಿ. ಶು೦ಠಿ ಹಾಗೂ ಬೆಳ್ಳುಳ್ಳಿಗಳನ್ನು ಜೊತೆಯಾಗಿ ಪೇಸ್ಟ್ ನ ರೂಪದಲ್ಲಿ ಬಳಸಿಕೊಳ್ಳಬಹುದು ಇಲ್ಲವೇ ಇವೆರಡನ್ನೂ ಜಜ್ಜಿ ಉಪಯೋಗಿಸಬಹುದು. ಅಸಹನೀಯ ಕೆಮ್ಮಿನಿ೦ದ ಮುಕ್ತಿ ಪಡೆಯಲು ಈ ಮೂರು ಸಾಮಗ್ರಿಗಳನ್ನು ನಿಮ್ಮ ಚಹಾಕ್ಕೆ ಬೆರೆಸಿಕೊ೦ಡು ಸೇವಿಸಿರಿ.

Wednesday, August 08, 2012

Health benefits of Nuts




ಬಾದಾಮಿ, ಕಡಲೆ, ಗೋಡಂಬಿ ಇವುಗಳಲ್ಲಿ ಅಧಿಕ ಪ್ರೊಟೀನ್ ಅಂಶವಿದ್ದು ಒಂದು ಕಪ್ ಬಾದಾಮಿಯಲ್ಲಿ 32 ಗ್ರಾಂ ಪ್ರೊಟೀನ್, ಒಂದು ಕಪ್ ಗೋಡಂಬಿಯಲ್ಲಿ 20 ಗ್ರಾಂ, ಕಡಲೆಯಲ್ಲಿ 36 ಗ್ರಾಂ ಪ್ರೊಟೀನ್ ಇದ್ದು ಇದನ್ನು ದಿನನಿತ್ಯ ಸ್ನ್ಯಾಕ್ಸ್ ರೀತಿ ಅಥವಾ ಅಡುಗೆಯಲ್ಲಿ ಬಳಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿನಿತ್ಯ ನಟ್ಸ್ ತಿಂದರೆ ಸುಸ್ತು, ನಿಶ್ಯಕ್ತಿ ಮುಂತಾದ ಸಮಸ್ಯೆ ಕಂಡುಬರುವುದಿಲ್ಲ.

ನಟ್ಸ್ ನಿಂದ ದೊರೆಯುವ ಪ್ರಯೋಜನಗಳು: 

1. ಬಾದಾಮಿ: ಬಾದಾಮಿಯನ್ನು ದಿನವೂ ಸೇವಿಸುವುದರಿಂದ ಹೃದಯ ಸ
್ವಾಸ್ಥ್ಯವಾಗಿರುತ್ತೆ. ಇದು ಹೃದಯಕ್ಕೆ ರಕ್ತಸಂಚಲನ ಮಾಡುವ ನಾಳಗಳಲ್ಲಿನ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

2. ಗೋಡಂಬಿ: ದಿನವೂ ಒಂದೆರಡು ಗೋಡಂಬಿ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು. ಇದರಲ್ಲಿರುವ ಒಲಿಯಿಕ್ ಆಸಿಡ್ ಹೃದಯಕ್ಕೆ ಉತ್ತಮ.ಇದರಲ್ಲಿ ಬಯಾಟಿನ್ ಎಂಬ ಅಂಶ, ತಾಮ್ರಾಂಶ, ಮ್ಯಾಗ್ನೀಶಿಯಂ ಮತ್ತು ಕಬ್ಬಿಣಾಂಶ ಎಲ್ಲವೂ ರಕ್ತಕಣಗಳನ್ನು ಸರಿದೂಗಿಸಿಕೊಂಡು ಹೋಗುತ್ತದೆ. ಹೃದಯದ ಸ್ನಾಯುಗಳಿಗೂ ಬಲ ನೀಡುತ್ತದೆ.

3. ಪಿಸ್ತಾ: ಪಿಸ್ತಾದಲ್ಲಿರುವ ಫೈಬರ್ ಹೃದಯಕ್ಕೆ ಆರೋಗ್ಯಕರ. ಪಿಸ್ತಾ ತಿನ್ನುವುದರಿಂದ ರಕ್ತನಾಳದಲ್ಲಿ ತುಂಬಿಕೊಂಡ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್ ನಂತರ ಕಾಯಿಲೆಯನ್ನೂ ತಡೆಗಟ್ಟುತ್ತದೆ.

4. ಅಕ್ರೋಡ: ವಾಲ್ ನಟ್ ಪೌಷ್ಟಿಕಾಂಶಗಳ ಗೂಡು ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿ ವಿಟಮಿನ್ ಬಿ 1,2,3,6 ಮತ್ತು ಇ ಇದ್ದು, ತಾಮ್ರಾಂಶ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಕಬ್ಬಿಣಾಂಶ ತುಂಬಿಕೊಂಡಿದೆ. ವಾಲ್ ನಟ್ ರಕ್ತದ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಹೃದಯದ ಆರೋಗ್ಯಕ್ಕೆ ಅತಿ ಅವಶ್ಯಕವಾಗಿರುವ ಒಮೆಗಾ 3 ಆಸಿಡ್ ಅನ್ನು ಸಹ ದೇಹಕ್ಕೆ ಒದಗಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.

5. ಪೆಕಾನ್ ನಟ್ಸ್: ಪೆಕಾನ್ ನಟ್ಸ್ ನಲ್ಲಿ 15 ಕ್ಕೂ ಹೆಚ್ಚು ರೀತಿಯ ವಿಟಮಿನ್ ಗಳು ಲಭ್ಯವಿರುವುದರಿಂದ ಹೃದಯವನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ. ಇದನ್ನು ತಿಂದರೆ ಮೂಳೆ ಮತ್ತು ಸ್ನಾಯುಗಳೂ ಗಟ್ಟಿಗೊಳ್ಳುತ್ತದೆ.