Monday, February 28, 2011

ನೆಲ್ಲಿಕಾಯಿ ತಂಬುಳಿ (AMLA )ಬೇಕಾಗುವ ಸಾಮಗ್ರಿಗಳು

ನೆಲ್ಲಿಕಾಯಿ :ಹತ್ತು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಹಸಿ ಮೆಣಸು :ಒಂದು

ವಿಧಾನ :
೧.ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜವನ್ನು ಬೇರ್ಪಡಿಸಿ.
೨.ಬೀಜರಹಿತ ನೆಲ್ಲಿಕಾಯಿ,ತೆಂಗಿನ ತುರಿ , ಹಸಿ ಮೆಣಸು, ಜೀರಿಗೆ ಇವುಗಳನ್ನು ನುಣ್ಣಗೆ ರುಬ್ಬಿ.
೩.ಇದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಕಲಕಿ.

ವಿ.ಸೂ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ತಂಬುಳಿ ಸಹಕಾರಿ.
ಒಣ ನೆಲ್ಲಿಕಾಯಿಯನ್ನು ಬಳಸುವುದಾದರೆ, ಆದನ್ನು ನೀರಿನಲ್ಲಿ ೨ ಗಂಟೆಗಳ ಕಾಲ ನೆನೆಸಿ, ಬಳಿಕ ತೆಂಗಿನ ತುರಿ ಜತೆ ರುಬ್ಬಬೇಕು

No comments:

Post a Comment