Saturday, March 29, 2014

ಅಳಲೆ ಕಾಯಿ ಯ ಉಪಯೋಗಗಳು (Health benefitsof CHEBULA)



ನೆಗಡಿ, ಕೆಮ್ಮು, ಜ್ವರ ಮುಂತಾದ ಸಾಮಾನ್ಯ ಜಡ್ಡುಗಳಿಂದ ಹಿಡಿದು, ಕಾಮಾಲೆ, ಅಸ್ತಮಾ, ಮೂಲವ್ಯಾಧಿ, ಮತ್ತು ಹೃದ್ರೋಗದಂತಹ ಗಂಭೀರ ಬೇನೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯೆಂದು ಬಳಕೆಯಲ್ಲಿತ್ತು. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಗಳಾದ, ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು ಅಳಲೆ ಕಾಯಿ ಹೇಳಿಮಾಡಿಸಿದ ವೈದ್ಯ ಪದ್ಧತಿಯಾಗಿತ್ತು.

ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ.

ಜೀರ್ಣಶಕ್ತಿಯನ್ನು ವರ್ಧಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ.

ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ.

ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.

ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು.

ಕಾಲಿನ ಉಗುರು ಒಳಗೆ ಸುತ್ತಿಕೊಳ್ಳುವ ಸಮಸ್ಯೆಗೆ ದಾಳಿಂಬೆ ಹೂ & ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಅರೆದು ಅದಕ್ಕೆ ಅಳಲೆ ಚೂರ್ಣವನ್ನು ಬೆರೆಸಿ ಹಚ್ಚಬೇಕು.

ಅಳಲೆ ಕಾಯಿ, ಲೋಧ್ರ, ಬೇವಿನೆಲೆ, ದಾಳಿಂಬೆ ಸಿಪ್ಪೆ, ಮಾವಿನ ಚಕ್ಕೆ ಇವುಗಳನ್ನು ಸಮಪ್ರಮಾಣದಲ್ಲಿ ನೀರಿದಲ್ಲಿ ಅರೆದು, ಅದಕ್ಕೆ ನಿಂಬೆರಸ ಮಿಶ್ರ ಮಾಡಿ ದೇಹಕ್ಕೆ ಲೇಪಿಸಿ, ಸ್ವಲ್ಪ ಸಮಯದ ನಂತರ ಸ್ನಾನ ಮಾಡಬೇಕು. ಇದರಿಂದ ಚರ್ಮರೋಗಗಳು ನಿವಾರಣೆಯಾಗಿ ಚರ್ಮಕ್ಕೆ ಕಾಂತಿ ಬರುತ್ತದೆ. 

ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.

No comments:

Post a Comment