ಸೀತಾಫಲ
ಸೀತಾಫಲದಲ್ಲಿ ಅನ್ನಾಂಗಗಳು ಸಮೃದ್ಧಿಯಾಗಿದ್ದು ಸ್ವಲ್ಪ ಪ್ರಮಾಣದಲ್ಲಿ ಕೊಬ್ಬಿನ ಅಂಶವೂ ಅಡಕವಾಗಿದೆ. ಅನ್ನಾಂಗಗಳಾದ ಸಿ, ಬಿ6, ಮೆಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಶರ್ಕರ ಪಿಷ್ಠಗಳು ದಂಡಿಯಾಗಿವೆ.
*ದಿನಕ್ಕೊಂದು ಸೀತಾಫಲ ಸೇವಿಸುವುದರಿಂದ ಆ ದಿನಕ್ಕಾಗುವ ಅನ್ನಾಂಗ 'ಸಿ' ದೇಹಕ್ಕೆ ಲಭಿಸುತ್ತದೆ.
*ದಿನವೊಂದಕ್ಕೆ ನಮ್ಮ ದೇಹಕ್ಕೆ ಅವಶ್ಯಕವಾದ ಮೆಗ್ನೀಷಿಯಂ ಸಹ ಪಡೆಯಬಹುದು. ಮೆಗ್ನೀಷಿಯಂಗೆ ಹೃದ್ರೋಗಗಳು ಬಾರದಂತೆ ಕಾಪಾಡುವ ಶಕ್ತಿ ಇದೆ. ಮೆಗ್ನೀಷಿಯಂ ನೊಂದಿಗೆ ರಾಗಿಯ ಅಂಶ ಸಹ ಸೀತಾಫಲದಲ್ಲಿ ಸಮೃದ್ಧಿಯಾಗಿದೆ. ಒತ್ತಡಕ್ಕೆ ಒಳಗಾದಾಗ, ಸೋಂಕು ರೋಗಗಳಿಂದ ರಕ್ಷಣೆ ಪಡೆಯಲು, ಫ್ರೀ ರಾಡಿಕಲ್ಸ್ ನ್ನ್ನು ನಿವಾರಿಸಿ ಕ್ಯಾನ್ಸರ್ ಬಾರದಂತೆ ತಡೆಯುವ ಶಕ್ತಿಯು ಇದೆ. ಚಿಕಿತ್ಸೆಯ ಬಳಿಕ ಗಾಯ ವಾಸಿಯಾಗಲು ಸೀತಾಫಲ ಎಷ್ಟೋ ಸಹಾಯಕಾರಿ.