Tuesday, March 08, 2011

ಮುಖ ಸೌ೦ಧರ್ಯ (Face care)




ಬೇಸಿಗೆಯಲ್ಲಿ ತ್ವಚೆ ಸಂರಕ್ಷಣೆ ಎಲ್ಲರೂ ಅನುಭವಿಸುವ ಕಷ್ಟ. ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದಾದ ವಿಧಾನ ಇಲ್ಲಿದೆ. ಲಭ್ಯವಿರುವ ತರಕಾರಿ, ಹಣ್ಣುಗಳ ಸಹಾಯದಿಂದ ಮುಖದ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಸೈಡ್ ಎಫೆಕ್ಟ್ ಭಯವಿಲ್ಲದೆ ನೈಸರ್ಗಿಕ ವಿಧಾನ ಬಳಕೆಯಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಸಮಯ ವ್ಯಯಿಸಿದರೆ ಸಾಕು.

ದಿನ ನಿತ್ಯ ಬಳಸುವ ತರಕಾರಿ ಹಾಗೂ ಹಣ್ಣುಗಳಾದ ಸೌತೆಕಾಯಿ, ಸೇಬು ಹಣ್ಣು, ಎಲೆಕೋಸು, ಕಿತ್ತಲೆ, ತೆಂಗಿನಕಾಯಿ, ಟೊಮಾಟೋ, ಕಲ್ಲಂಗಡಿ ಹಣ್ಣು, ಕ್ಯಾರೆಟ್, ಆಲೂಗೆಡ್ಡೆ, ದ್ರಾಕ್ಷಿ, ಪಪ್ಪಾಯ ಮುಂತಾದವುಗಳು ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆಯ ಸಾಧನಗಳಾಗಿ ಪರಿವರ್ತನೆಗೊಳಿಸಿ ಬಳಸಬಹುದು.

ಸೌತೆಕಾಯಿ ರಸ: ಚಿಕ್ಕ ಎಳೆ ಸೌತೆಕಾಯಿ ತೆಗೆದುಕೊಂಡು ಸಿಪ್ಪೆ ತೆಗೆದು, ಚೆನ್ನಾಗಿ ಹಿಚುಕಿ ರಸ ತೆಗೆಯಿರಿ. 1/4 ಭಾಗ ರೋಸ್ ವಾಟರ್ ಹಾಗೂ ನಿಂಬೆ ರಸ ಬೆರೆಸಿ. ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಿ. ಇದರಿಂದ ಮಂಕಾದ, ಜಿಡ್ಡು ಜಿಡ್ಡಾದ ಮುಖವು ಹೊಸ ಕಾಂತಿ ಪಡೆಯುತ್ತದೆ.

ಫೇಸ್ ಪ್ಯಾಕ್ ಶುದ್ಧೀಕರಣ: 1/4 ಟೀ ಚಮಚ ನಿಂಬೆ ರಸವನ್ನು 1 ಟೀ ಚಮಚ ಹಾಲು ಹಾಗೂ ಸೌತೆ ರಸದೊಂದಿಗೆ ಸಮವಾಗಿ ಬೆರೆಸಿ ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳಿ. ಸುಮಾರು 14 ನಿಮಿಷದ ನಂತರ ಮುಖ ಮಾರ್ಜನ ಮಾಡಬಹುದು.

ಎಲೆಕೋಸು ಮಾಸ್ಕ್: ಎಲೆಕೋಸಿನ ಕೆಲವು ಎಲೆಗಳನ್ನು ಅರೆದು ರಸ ತೆಗೆದುಕೊಳ್ಳಿ. ಅದಕ್ಕೆ 1/4 ಚಮಚ ಈಸ್ಟ್ ಬೆರೆಸಿ, 1 ಟೀ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿರಿ. ಗಟ್ಟಿಯಾಗಿ ಪೇಸ್ಟ್ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಲೇಪಿಸಿರಿ. 15 ನಿಮಿಷದ ನಂತರ ನೀರಿನಲ್ಲಿ ಹತ್ತಿಯನ್ನು ಅದ್ದಿಕೊಂಡು ಮಾಸ್ಕ್ ಅನ್ನು ನಿಧಾನವಾಗಿ ಒರೆಸಿಕೊಳ್ಳಿ. ಈ ಕ್ರಮದಿಂದ ಮುಖದ ಸುಕ್ಕು, ಒಣ ತ್ವಚೆ ದೂರವಾಗಿ ಹೂವಿನಂತೆ ಅರಳುವುದು.

ಕಿತ್ತಲೆ ರಸ ಪ್ರಯೋಗ: ಕೆಲ ಬಾದಾಮಿಗಳನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಅದಕ್ಕೆ 2 ಟೀ ಚಮಚ ಹಾಲು ಮತ್ತು 1 ಟೀ ಚಮಚ ಕ್ಯಾರೆಟ್ ಹಾಗೂ ಕಿತ್ತಲೆ ರಸ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ನಂತರ ಮುಖಕ್ಕೆ ಲೇಪಿಸಿಕೊಂಡು ಸುಮಾರು ಅರ್ಧ ಗಂಟೆ ಕಾಲ ವಿಶ್ರಮಿಸಿ. ಇದರಿಂದ ಮುಖದಲ್ಲಿರುವ ಕಲೆಗಳು ದೂರವಾಗಿ, ತ್ವಚೆ ಮೃದುವಾಗಿ ಗೋಚರಿಸುತ್ತದೆ.

ಟೊಮಾಟೋ ಲೋಷನ್: 1 ಟೀ ಚಮಚ ಟೊಮಾಟೋ ರಸಕ್ಕೆ ಕೆಲ ಹನಿ ನಿಂಬೆ ರಸ ಬೆರೆಸಿ, 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡರೆ ಮುಖದಲ್ಲಿ ಉಂಟಾದ ಸೂಕ್ಷ್ಮರಂಧ್ರಗಳು ಕೂಡಾ ಮುಚ್ಚಲ್ಪಡುತ್ತವೆ. ಮೃದುವಾದ ಆಲೂಗೆಡ್ಡೆ ತುಂಡುಗಳನ್ನು ಹೆಚ್ಚಿಕೊಂಡಿ ನೇರವಾಗಿ ಮುಖಕ್ಕೆ ಬಳಿದುಕೊಳ್ಳಬಹುದು. ಅಥವಾ ಆಲೂಗೆಡ್ಡೆ ರಸವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು ದಿನವಿಡೀ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಬಹುದು.

ಕಲ್ಲಂಗಡಿ ಹಣ್ಣು : ಸಣ್ಣ ಕಲ್ಲಂಗಡಿ ಹಣ್ಣು ತೆಗೆದುಕೊಂಡು, ಬೀಜಗಳನ್ನು ಎಸೆದು ರಸ ತೆಗೆದುಕೊಳ್ಳಿ. ಕುತ್ತಿಗೆ ಹಾಗೂ ಮುಖದ ಚರ್ಮಕ್ಕೆ 15 ನಿಮಿಷ ಲೇಪಿಸಿ, ನಂತರ ಮುಖ ತೊಳೆದುಕೊಳ್ಳಿ. ಈ ಲೋಷನ್ ನಿಂದ ಮುಖದ ಕಾಂತಿ ಹೆಚ್ಚುತ್ತದೆ.

ಕ್ಯಾರೆಟ್ ಲೋಷನ್ : 1/4 ಟೀ ಚಮಚ ಕ್ಯಾರೆಟ್ ರಸಕ್ಕೆ 1 ಟೀ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಸೋಡಾ ಬೈಕಾರ್ಬೊನೇಟ್ ಬೆರೆಸಿದ ನೀರಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿಕೊಳ್ಳಿ. ಇದರಿಂದ ತ್ವಚೆ ಮೃದುವಾಗಿ ನಳನಳಿಸುತ್ತದೆ.

ಟೊಮಾಟೋ ರಸ : 2 ಟೀ ಚಮಚ ಟೊಮಾಟೊ ರಸಕ್ಕೆ 4 ಟೇಬಲ್ ಚಮಚ ಮಜ್ಜಿಗೆ ಬೆರೆಸಿ ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆಗಳ ಕಾಲ ವಿರಾಮಿಸಿ. ಇದು ಸನ್ ಬರ್ನ್ ನಿಂದ ಉಂಟಾಗುವ ಕಿರಿಕಿರಿಯನು ತಪ್ಪಿಸುತ್ತದೆ.

ಸೇಬು ಹಣ್ಣು ಟಾನಿಕ್: 1 ಟೇಬಲ್ ಚಮಚ ಸೇಬು ಹಣ್ಣಿನ ರಸಕ್ಕೆ 1/4 ಟೀ ಚಮಚ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡು ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮುಖ ಹೊಳೆಯುತ್ತದೆ.

ಇದೇ ಕ್ರಮದಲ್ಲಿ ದ್ರಾಕ್ಷಿ ರಸವನ್ನು 15 ನಿಮಿಷಗಳ ಕಾಲ ಹಚ್ಚಿಕೊಳ್ಳುವುದರಿಂದ ತ್ವಚೆ ಮೃದುವಾಗುತ್ತದೆ. 1 ಟೇಬಲ್ ಚಮಚ ಪಪ್ಪಾಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ದೂರಾಗುತ್ತವೆ. ತೆಂಗಿನ ಕಾಯಿ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇನ್ನೂ ಅನೇಕ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು


ಸಾಮಾನ್ಯ ತ್ವಚೆಗೆ:

1.ಕಿತ್ತಳೆ ಹಾಗೂ ಟೊಮ್ಯಾಟೋ ಹಣ್ಣಿನ ಸ್ವಲ್ಪ ರಸ ತೆಗೆದು ಅದಕ್ಕೆ ಒಂದು ಚಮಚದಷ್ಟು ಮೊಸರು ಸೇರಿಸಿ. ಈ ಮಿಶ್ರಣದಿಂದ ಮೆತ್ತಗೆ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಮುಖದಲ್ಲೇ ಒಣಗಲು ಬಿಡಿ. ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
2. ಪಪ್ಪಾಯಿ ಹಣ್ಣನ್ನು ಕಿವುಚಿ ಮುಖಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದು ಮುಖಕ್ಕೆ ಹೊಸ ಹೊಳಪನ್ನು ನೀಡುತ್ತದೆ.
3. ಕ್ಯಾಬೇಜನ್ನು ಅರೆದು ಅದರ ರಸವನ್ನು ಮುಖಕ್ಕೆ ಹಚ್ಚಿ. ಇದು ಸಡಿಲವಾದ ಚರ್ಮವನ್ನು ಟೈಟ್ ಮಾಡುವುದಲ್ಲದೆ, ಸುಕ್ಕುಗಳಿಂದಲೂ ಮುಕ್ತಿ ನೀಡುತ್ತದೆ.
4. ಸ್ವಲ್ಪ ಕ್ಯಾರೇಟನ್ನು ತುರಿದು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದು ಮತ್ತೆ ಚರ್ಮಕ್ಕೆ ತಾಜಾತನವನ್ನು ನೀಡಿ ಸುಂದರವಾಗಿಸುತ್ತದೆ. ಇದು ಚರ್ಮಕ್ಕೆ ಟಾನಿಕ್ ಇದ್ದಂತೆ.
5. ಪ್ರತಿ ಬಾರಿಯೂ ಆಪಲ್ ತಿನ್ನುವಾಗ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಸಿಪ್ಪೆಯ ಒಳಭಾಗವನ್ನು ಮುಖಕ್ಕೆ ಉಜ್ಜಿ. ಇದು ಚರ್ಮವನ್ನು ಟೈಟ್ ಮಾಡುವುದಲ್ಲದೆ, ಪರಿಶುದ್ಧಗೊಳಿಸುತ್ತದೆ.
6. ಪ್ರತಿದಿನವೂ ಮುಖ ತೊಳೆದ ನಂತರ ಐಸ್ ತುಂಡನ್ನು ಮುಖಕ್ಕೆ ವರ್ತುಲಾಕಾರದಲ್ಲಿ ಒತ್ತಿ ಉಜ್ಜಿ. ಇದು ಮುಖದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುವ ಮೂಲಕ ಮುಖಕ್ಕೆ ತಾಜಾ ರಕ್ತದ ಪೂರಣವಾಗುತ್ತದೆ. ಹಾಗಾಗಿ ಮುಖದ ಹೊಳಪು ಹೆಚ್ಚುತ್ತದೆ.
7. ಸ್ವಲ್ಪ ನಿಂಬೆ ಹುಲ್ಲನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಆ ನೀರನ್ನು ಒಂದು ಟ್ರೇನಲ್ಲಿ ಹಾಕಿ ಫ್ರೀಜರ್‌ನಲ್ಲಿಟ್ಟು ಗಟ್ಟಿ ಮಾಡಿ. ಹೀಗೆ ಗಟ್ಟಿಯಾದ ಐಸ್ ತುಂಡನ್ನೂ ಮುಖಕ್ಕೆ ಉಜ್ಜಬಹುದು.
8. ಮೊಟ್ಟೆಯ ಬಿಳಿ ಲೋಳೆಯನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದ ಚರ್ಮವನ್ನು ಟೈಟ್ ಮಾಡುತ್ತದೆ. ಅಲ್ಲದೆ ಸುಕ್ಕನ್ನೂ ತಡೆಗಟ್ಟುತ್ತದೆ.
ಒಣ ತ್ವಚೆಗೆ :

1. ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ.
2. ಗಸಗಸೆಯನ್ನು ರಾತ್ರಿಯಿಡೀ ನೆನೆ ಹಾಕಿ ಬೆಳಿಗ್ಗೆ ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಗಸಗಸೆಯಲ್ಲಿರುವ ನೈಸರ್ಗಿಕ ತೈಲ ಮುಖಕ್ಕೆ ಬೇಕಾಗಿರುವ ತೈಲಾಂಶ ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
3. ಹಾಲು ಕುದಿಯುತ್ತಿರುವಾಗಲೇ ಎರಡು ಚಮಚ ತೆಗೆದುಕೊಂಡು ಅದು ತುಸು ಬೆಚ್ಚಗಿರುವಾಗಲೇ ಮುಖಕ್ಕೆ ಹಚ್ಚಿ ಮೇಲ್ಮುಖವಾಗಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಒಣ ತ್ವಚೆಯನ್ನು ತೊಡೆಹಾಕುತ್ತದೆ. ನಿಮ್ಮ ಮುಖದಲ್ಲಿ ಮೊಡವೆಯಿದ್ದರೆ, ಹಾಲಿಗೆ ಸ್ವಲ್ಪ ಉಪ್ಪು ಸೇರಿಸಿ ಮಸಾಜ್ ಮಾಡಬಹುದು.
4. ಮೂರ್ನಾಲ್ಕು ಹಸಿ ನೆಲಗಡಲೆಯನ್ನು ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ತೊಳೆದರೆ ಇದು ಕೂಡಾ ಮುಖಕ್ಕೆ ಬೇಕಾದ ತೈಲಾಂಶವನ್ನು ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
5. ಹಾಲಿನ ದಪ್ಪ ಕೆನೆಗೆ ಸ್ವಲ್ಪ ಅರಿಶಿನ ಪುಡಿ ಹಾಗೂ ಆಲಿವ್ ಎಣ್ಣೆ ಸೇರಿಸಿ ಮುಖಕ್ಕೆ ಹಚ್ಚಿ. ಇದೂ ಕೂಡಾ ಮುಖಕ್ಕೆ ಬೇಕಾದ ಎಣ್ಣೆಯಂಶ ನೀಡಿ ಮುಖವನ್ನು ತಾಜಾ ಆಗಿಸುತ್ತದೆ.


* ಅರಿಶಿನವನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ, ವಾರಕ್ಕೊಮ್ಮೆ ದೇಹಕ್ಕೆಲ್ಲಾ ಹಚ್ಚಿ, ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ಚರ್ಮ ಹೊಳಪಾಗಿ, ಮದುವಾಗುತ್ತದೆ.

* ಕಡಲೆಹಿಟ್ಟಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು, ಚಿಟಿಕೆ ಅರಿಶಿನವನ್ನು ಸೇರಿಸಿ, ಅಂಗಾಂಗಗಳಿಗೆ ಮಸಾಜು ಮಾಡಿ, ಅರ್ಧಗಂಟೆಯ ನಂತರ, ಸ್ನಾನ ಮಾಡಿದರೆ ಚರ್ಮ ಮದುವಾಗುತ್ತದೆ.

* ನಿಂಬೆ ಎಲೆ, ಬೇವಿನ ಎಲೆಗಳನ್ನು ಜಜ್ಜಿ ಹಾಕಿ, ಕುದಿಸಿದ ನೀರಿನಿಂದ ಸ್ನಾನ ಮಾಡಿದರೆ, ದೇಹದ ದುರ್ಗಂಧ ದೂರವಾಗುತ್ತದೆ.

* ಕಿತ್ತಳೆ ಹಣ್ಣಿನ ಸಿಪ್ಪೆಯ ರಸವನ್ನು ಮುಖಕ್ಕೆ ಅಗಾಗ ಲೇಪಿಸುತ್ತಾ ಬಂದರೆ, ಮುಖ ಕಾಂತಿಯುಕ್ತವಾಗುತ್ತದೆ.

* ಟೊಮೆಟೋ ಹಣ್ಣಿನ ತಿರುಳನ್ನು ಮುಖಕ್ಕೆ ಲೇಪಿಸುವುದರಿಂದಲೂ ಮುಖ ಸೌಂದರ್ಯ ವದ್ದಿಸುತ್ತದೆ.

* ಬಟಾಣಿಯನ್ನು ನುಣ್ಣಗೆ ಪುಡಿ ಮಾಡಿ, ಹಾಲಿನೊಂದಿಗೆ ಲೇಪಿಸುವುದರಿಂದ ದೇಹದಲ್ಲಿನ ಕಲೆಗಳು ಮಾಯವಾಗುತ್ತವೆ.

* ತುಳಸಿಯ ಒಣಗಿದ ಎಲೆಗಳನ್ನು ಕುಟ್ಟಿ ಪುಡಿ ಮಾಡಿ, ಇದಕ್ಕೆ ಸ್ವಲ್ಪ ಶ್ರೀಗಂಧವನ್ನು ಲೇಪಿಸುವುದರಿಂದ, ಮುಖ ಕಾಂತಿಯುಕ್ತವಾಗಿರುತ್ತದೆ.

* ಅನಾನಸ್ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು, ಇದನ್ನು ನುಣ್ಣಗೆ ರುಬ್ಬಿ, ಮೈಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡಿದರೆ, ದೇಹ ಶುದ್ದವಾಗಿ, ಹೊಳಪಿನಿಂದ ಕೂಡಿರುತ್ತದೆ.

ಮೊಡವೆ ಮಾಯವಾಗಲು

* ಹಸುವಿನ ಹಾಲಿನೊಂದಿಗೆ ಬಾದಾಮಿಯನ್ನು ತೇಯ್ದು ಮುಖಕ್ಕೆ ಹಚ್ಚುತ್ತಿದ್ದರೆ, ಮೊಡವೆಗಳು ಮಾಯವಾಗುತ್ತವೆ. ಇದೇ ರೀತಿಯಾಗಿ ಸೇಬಿನ ತಿರುಳನ್ನು ಅರೆದು ಮುಖಕ್ಕೆ ಹಚ್ಚುತ್ತಿದ್ದರೆ, ಮೊಡವೆಗಳು ಮಾಯವಾಗುತ್ತವೆ.

* ನೀರಿನಲ್ಲಿ ಇಂಗನ್ನು ತೇದು, ಮೊಡವೆಗಳಿಗೆ ಹಚ್ಚಿದರೆ, ಮೊಡವೆ ಮಾಯವಾಗುತ್ತದೆ.

ಸುಂದರ ಅಧರಕ್ಕಾಗಿ

* ತುಟಿಗೆ ಬೀಟ್ ರೂಟ್/ಕ್ಯಾರೆಟ್ ರಸವನ್ನು ಆಗಾಗ ಲೇಪಿಸುತ್ತಿದ್ದರೆ, ತುಟಿ ಸದಾ ಸುಂದರವಾಗಿರುತ್ತದೆ.

* ಸೀತಾಫಲ ಹಣ್ಣಿನ ಒಣಗಿದ ಎಲೆಗಳನ್ನು ಪುಡಿಮಾಡಿ, ಸ್ವಲ್ಪ ಕೊಬ್ಬರಿಎಣ್ಣೆಯೊಂದಿಗೆ ಮಿಶ್ರ ಮಾಡಿ, ದೇಹಕ್ಕೆ ಹಚ್ಚುವುದರಿಂದ, ಚರ್ಮ ಮದುವಾಗುವುದಲ್ಲದೆ, ಕಾಂತಿಯುಕ್ತವಾಗುತ್ತದೆ.

* ಮೇಣವನ್ನು ಕರಗಿಸಿ, ಜತೆಗೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ, ಪ್ರತಿದಿನ ರಾತ್ರಿ ಮಲಗುವ ಮುನ್ನ ತುಟಿಗೆ ಹಚ್ಚುತ್ತಾ ಬಂದರೆ, ತುಟಿ ಸದಾ ತೇವಯುಕ್ತವಾಗಿರುತ್ತದೆ. ತುಟಿಯಲ್ಲಿ ಬಿರುಕು ಮೂಡುವುದಿಲ್ಲ.

ಕಂಗಳ ಸೌಂದರ್ಯ

* ಎಳೆ ಸೌತೆಕಾಯಿಯ ಬಿಲ್ಲೆಯನ್ನು ಕಣ್ಣಿನ ಮೇಲಿಟ್ಟು, ಕಣ್ಣನ್ನು ಮುಚ್ಚಿ ಅರ್ಧಗಂಟೆ ಮಲಗಿದರೆ, ಕಣ್ಣು ಕಾಂತಿಯುಕ್ತವಾಗುತ್ತದೆ.

* ಕಣ್ಣಿನ ಕೆಳಭಾಗ ಕಪ್ಪಾಗಿದ್ದರೆ, ಲೋಳೆರಸವನ್ನು ಲೇಪಿಸಿದರೆ, ಕಪ್ಪು ಕಲೆ ಮಾಯವಾಗುತ್ತದೆ.

ಕೂದಲ ಆರೈಕೆ

* ಕೆಸುವಿನ ಗಡ್ಡೆಯನ್ನು ಸಣ್ಣಗೆ ಅರೆದು ಕೂದಲಿನ ಕೆಳಭಾಗದಲ್ಲಿ ಹಚ್ಚಿ, ಆನಂತರ ಸ್ನಾನ ಮಾಡಿದರೆ, ಕೂದಲು ಉದುರುವುದು ನಿಲ್ಲುತ್ತದೆ.

* ಬೆಂಡೆಕಾಯಿಯ ಲೋಳೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗಿರುತ್ತದೆ.

ಫಿಟ್‌ನೆಸ್‌ಗೆ

* ಗೋಧಿ, ರಾಗಿ, ಸಮಪ್ರಮಾಣದಲ್ಲಿ ಮತ್ತು ಗಸಗಸೆ ಒಂದೆರೆಡು ಚಮಚ ಸೇರಿಸಿ, ಪುಡಿ ಮಾಡಿಕೊಂಡು ಬೇುಸಿ, ಇದನ್ನು ಬಿಸಿಹಾಲು, ಬೆಲ್ಲ ಮತ್ತು ತುಪ್ಪವನ್ನು ಸೇರಿಸಿ ಸೇವಿಸುತ್ತಾ ಬಂದರೆ, ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಿ, ರಕ್ತಸಂಚಾರ ಸರಾಗವಾಗಿರುತ್ತದೆ.


* ಬಾಣಂತಿಯರು ನಾಚಿಕೆ ಮುಳ್ಳಿನ ಸೊಪ್ಪಿನ ರಸವನ್ನು ಕೈಗೆ ಲೇಪಿಸಿಕೊಂಡು ಪ್ರತಿನಿತ್ಯ ಹೊಟ್ಟೆಯ ಮೇಲೆ ಲೇಪಿಸುತ್ತಿದ್ದರೆ, ದಪ್ಪಗಿರುವ ಹೊಟ್ಟೆ ಕರಗುತ್ತಾ ಬರುತ್ತದೆ.* ಅರಿಶಿನವನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ, ವಾರಕ್ಕೊಮ್ಮೆ ದೇಹಕ್ಕೆಲ್ಲಾ ಹಚ್ಚಿ, ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ಚರ್ಮ ಹೊಳಪಾಗಿ, ಮದುವಾಗುತ್ತದೆ.

* ಕಡಲೆಹಿಟ್ಟಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು, ಚಿಟಿಕೆ ಅರಿಶಿನವನ್ನು ಸೇರಿಸಿ, ಅಂಗಾಂಗಗಳಿಗೆ ಮಸಾಜು ಮಾಡಿ, ಅರ್ಧಗಂಟೆಯ ನಂತರ, ಸ್ನಾನ ಮಾಡಿದರೆ ಚರ್ಮ ಮದುವಾಗುತ್ತದೆ.

* ನಿಂಬೆ ಎಲೆ, ಬೇವಿನ ಎಲೆಗಳನ್ನು ಜಜ್ಜಿ ಹಾಕಿ, ಕುದಿಸಿದ ನೀರಿನಿಂದ ಸ್ನಾನ ಮಾಡಿದರೆ, ದೇಹದ ದುರ್ಗಂಧ ದೂರವಾಗುತ್ತದೆ.

* ಕಿತ್ತಳೆ ಹಣ್ಣಿನ ಸಿಪ್ಪೆಯ ರಸವನ್ನು ಮುಖಕ್ಕೆ ಅಗಾಗ ಲೇಪಿಸುತ್ತಾ ಬಂದರೆ, ಮುಖ ಕಾಂತಿಯುಕ್ತವಾಗುತ್ತದೆ.

* ಟೊಮೆಟೋ ಹಣ್ಣಿನ ತಿರುಳನ್ನು ಮುಖಕ್ಕೆ ಲೇಪಿಸುವುದರಿಂದಲೂ ಮುಖ ಸೌಂದರ್ಯ ವದ್ದಿಸುತ್ತದೆ.

* ಬಟಾಣಿಯನ್ನು ನುಣ್ಣಗೆ ಪುಡಿ ಮಾಡಿ, ಹಾಲಿನೊಂದಿಗೆ ಲೇಪಿಸುವುದರಿಂದ ದೇಹದಲ್ಲಿನ ಕಲೆಗಳು ಮಾಯವಾಗುತ್ತವೆ.

* ತುಳಸಿಯ ಒಣಗಿದ ಎಲೆಗಳನ್ನು ಕುಟ್ಟಿ ಪುಡಿ ಮಾಡಿ, ಇದಕ್ಕೆ ಸ್ವಲ್ಪ ಶ್ರೀಗಂಧವನ್ನು ಲೇಪಿಸುವುದರಿಂದ, ಮುಖ ಕಾಂತಿಯುಕ್ತವಾಗಿರುತ್ತದೆ.

* ಅನಾನಸ್ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು, ಇದನ್ನು ನುಣ್ಣಗೆ ರುಬ್ಬಿ, ಮೈಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡಿದರೆ, ದೇಹ ಶುದ್ದವಾಗಿ, ಹೊಳಪಿನಿಂದ ಕೂಡಿರುತ್ತದೆ.

ಮೊಡವೆ ಮಾಯವಾಗಲು

* ಹಸುವಿನ ಹಾಲಿನೊಂದಿಗೆ ಬಾದಾಮಿಯನ್ನು ತೇಯ್ದು ಮುಖಕ್ಕೆ ಹಚ್ಚುತ್ತಿದ್ದರೆ, ಮೊಡವೆಗಳು ಮಾಯವಾಗುತ್ತವೆ. ಇದೇ ರೀತಿಯಾಗಿ ಸೇಬಿನ ತಿರುಳನ್ನು ಅರೆದು ಮುಖಕ್ಕೆ ಹಚ್ಚುತ್ತಿದ್ದರೆ, ಮೊಡವೆಗಳು ಮಾಯವಾಗುತ್ತವೆ.

* ನೀರಿನಲ್ಲಿ ಇಂಗನ್ನು ತೇದು, ಮೊಡವೆಗಳಿಗೆ ಹಚ್ಚಿದರೆ, ಮೊಡವೆ ಮಾಯವಾಗುತ್ತದೆ.

ಸುಂದರ ಅಧರಕ್ಕಾಗಿ

* ತುಟಿಗೆ ಬೀಟ್ ರೂಟ್/ಕ್ಯಾರೆಟ್ ರಸವನ್ನು ಆಗಾಗ ಲೇಪಿಸುತ್ತಿದ್ದರೆ, ತುಟಿ ಸದಾ ಸುಂದರವಾಗಿರುತ್ತದೆ.

* ಸೀತಾಫಲ ಹಣ್ಣಿನ ಒಣಗಿದ ಎಲೆಗಳನ್ನು ಪುಡಿಮಾಡಿ, ಸ್ವಲ್ಪ ಕೊಬ್ಬರಿಎಣ್ಣೆಯೊಂದಿಗೆ ಮಿಶ್ರ ಮಾಡಿ, ದೇಹಕ್ಕೆ ಹಚ್ಚುವುದರಿಂದ, ಚರ್ಮ ಮದುವಾಗುವುದಲ್ಲದೆ, ಕಾಂತಿಯುಕ್ತವಾಗುತ್ತದೆ.

* ಮೇಣವನ್ನು ಕರಗಿಸಿ, ಜತೆಗೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ, ಪ್ರತಿದಿನ ರಾತ್ರಿ ಮಲಗುವ ಮುನ್ನ ತುಟಿಗೆ ಹಚ್ಚುತ್ತಾ ಬಂದರೆ, ತುಟಿ ಸದಾ ತೇವಯುಕ್ತವಾಗಿರುತ್ತದೆ. ತುಟಿಯಲ್ಲಿ ಬಿರುಕು ಮೂಡುವುದಿಲ್ಲ.

ಕಂಗಳ ಸೌಂದರ್ಯ

* ಎಳೆ ಸೌತೆಕಾಯಿಯ ಬಿಲ್ಲೆಯನ್ನು ಕಣ್ಣಿನ ಮೇಲಿಟ್ಟು, ಕಣ್ಣನ್ನು ಮುಚ್ಚಿ ಅರ್ಧಗಂಟೆ ಮಲಗಿದರೆ, ಕಣ್ಣು ಕಾಂತಿಯುಕ್ತವಾಗುತ್ತದೆ.

* ಕಣ್ಣಿನ ಕೆಳಭಾಗ ಕಪ್ಪಾಗಿದ್ದರೆ, ಲೋಳೆರಸವನ್ನು ಲೇಪಿಸಿದರೆ, ಕಪ್ಪು ಕಲೆ ಮಾಯವಾಗುತ್ತದೆ.

ಕೂದಲ ಆರೈಕೆ

* ಕೆಸುವಿನ ಗಡ್ಡೆಯನ್ನು ಸಣ್ಣಗೆ ಅರೆದು ಕೂದಲಿನ ಕೆಳಭಾಗದಲ್ಲಿ ಹಚ್ಚಿ, ಆನಂತರ ಸ್ನಾನ ಮಾಡಿದರೆ, ಕೂದಲು ಉದುರುವುದು ನಿಲ್ಲುತ್ತದೆ.

* ಬೆಂಡೆಕಾಯಿಯ ಲೋಳೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗಿರುತ್ತದೆ.

ಫಿಟ್‌ನೆಸ್‌ಗೆ

* ಗೋಧಿ, ರಾಗಿ, ಸಮಪ್ರಮಾಣದಲ್ಲಿ ಮತ್ತು ಗಸಗಸೆ ಒಂದೆರೆಡು ಚಮಚ ಸೇರಿಸಿ, ಪುಡಿ ಮಾಡಿಕೊಂಡು ಬೇುಸಿ, ಇದನ್ನು ಬಿಸಿಹಾಲು, ಬೆಲ್ಲ ಮತ್ತು ತುಪ್ಪವನ್ನು ಸೇರಿಸಿ ಸೇವಿಸುತ್ತಾ ಬಂದರೆ, ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಿ, ರಕ್ತಸಂಚಾರ ಸರಾಗವಾಗಿರುತ್ತದೆ.

* ಬಾಣಂತಿಯರು ನಾಚಿಕೆ ಮುಳ್ಳಿನ ಸೊಪ್ಪಿನ ರಸವನ್ನು ಕೈಗೆ ಲೇಪಿಸಿಕೊಂಡು ಪ್ರತಿನಿತ್ಯ ಹೊಟ್ಟೆಯ ಮೇಲೆ ಲೇಪಿಸುತ್ತಿದ್ದರೆ, ದಪ್ಪಗಿರುವ ಹೊಟ್ಟೆ ಕರಗುತ್ತಾ ಬರುತ್ತದೆ.



akki hitti ge swalpa haalu bresi pste maadikolli adannu mukha haagu kuttigege samanaagi hachchikolli. hatthu nimishada nantara mellane mukhada massage prarmbhisi, kadime biddalli swalpa hittannu serisuttaa iri. heege hatthu nimisha maadi nantara mukhavannu toledukolli haalu hakirodrinda moisturiser na avashyakate illa.

Tomato matthu adakke hidiyuvashtu akki hudiyannu serisi paste maadikolli. adannu mukha haagu kuttigege mellane savari swalpa hotthu chenagi neevikolli andare massage maadikolli. ardha ghanteya nantara mukha chennaagi toledukolli

 dinaaaloo eradu hani thengina ennneyannu nimma mukhakke chennaagi massage maadi. idannu intahade veleyalli maadabekendilla. raatre malaguvaagalu maadabahudu. anantara nimma purusottinallli chennagi mukha toledukolli. oduvaarada nantara nodi. nimage tiliyade iddalli ondu vaara nodalikke sikkada mitrarige yaaradaru bhetiyagi avarannu kelabedi. . idannu dinaloo maadabahudu. madhye onderadu dina bittu hodau addiyilla. nenapaadagalella maadi.

Egg Yolk & Honey Mask: Take 1 tablespoon honey, 1 egg yolk, 1/2 teaspoon almond oil and 1 tablespoon yogurt. Mix together and apply on face. Honey smoothes the skin, egg and almond oil moisturize, and yogurt refines and tightens pores. Leave for 20 mins to half an hour.
Banana Face Mask: Mash 1/4 ripe banana and mix with half a cup natural yogurt and 1 tablespoon of honey. Apply this pack on face and neck and leave for 20 minutes and then rinse off.
Olive oil and Egg Mask: Mix 1 egg yolk with 1 tbsp. olive oil & 1 tbsp. plain yogurt. Apply on face and leave for 20 minutes.

Face Masks for Oily Skin

Egg Yolk, Avocado & Mud Facial Mask: Buy fuller’s earth mud / clay from any health store. Mix 1 tablespoon dry clay, 1 egg yolk, 1/4 of a mashed avocado and enough witch hazel to create a smooth mixture. Mud dries excess sebum while Witch hazel tones the skin.
Lemon Face Mask: Mix 1 tbsp. lemon juice with 1/4 cup ground oatmeal and 1 tbsp. yogurt. Apply on face and leave for 20 minutes, then wash off with warm water.

Face Mask for Normal Skin

Turmeric Mask: Take some turmeric powder, and mix with gram flour and rose water. Apply on face for 20 minutes and then wash off with water.
Homemade Clay Mask: Clay masks hydrate and tone your skin. Take some fuller’s earth clay (if your skin is sensitive, try green clay), 1 tsp honey, water. Mix together and apply on face. Wah off after 20 minutes.

Face Mask for Combination Skin

Rose Water Mask: Take some natural rose water or crushed rose petals, mix with natural yoghurt, honey and some water. Apply on face and wash off after 15 minutes.

Face Mask for Sensitive Skin

Oatmeal Face Mask: This soothing mask is great for chapped, sunburned or irritated. Take 1 cup natural yogurt, honey and ½ cup oatmeal. Mix the ingredients together & apply on face for 15 minutes.

Face Masks for Aging Skin

Sugar mask: This mask works well for ageing and maturing skin that uses sugar, since it is a natural exfoliant and will help soften the lines and wrinkles on your face. Take 2 spoons powdered sugar, 4 tbsp warm water and dissolve. Apply to the face and leave for 10 minutes. Gently massage and wash off.
Banana Mask for wrinkles: Mash 1/4 banana until it is very smooth. Apply on face and leave for 15-20 minutes. Rinse with warm water. Then use cold water to close the pores.
Egg White Mask: Simply apply eggwhite on your face covering all your wrinkles and fine lines. Wash off after half an hour.


To prepare an easy facial mask with oatmeal, take 5 – 6 tablespoons of ground oatmeal in a bowl and add water to make a thick and smooth paste. Spread the mixture on the face evenly and let it dry. Rinse it with cold water. You can also add milk instead of water to make your facial skin more nourished. This is the best oatmeal mask recipe for oily skin people.

Apply fresh cucumber slices or cucumber juice on your face to refresh it. Wash off after half an hour.
To make your wrinkles lighter and less visible, apply the white of an egg on your face and let it dry. Then wash off gently with warm water.
Take a teaspoon each of glycerine and rose water. Put a few drops of lime juice in it, mix well and apply on the face. Wash off after 20-25 miutes.
Take one egg white and mix it with a tablespoon of honey. Apply on the skin, let it dry and then wipe off with a warm washcloth.
Take 1 tbsp. gram flour, 1/4 tsp. orange peel powder, 1 tbsp. beaten yogurt and 1 tsp. olive oil. Mix together and apply on your face and neck. When it has dried, rinse off with warm water, and then with cold water.
Add a few drops of lemon juice to a tablespoon of honey. Mix it properly and apply on your face and neck. Wash off after 20-30 minutes. Your face will glow with health.
Mix a few drops of lemon juice to raw milk and apply on the face. Wash off after 20 minutes with warm water.
Mix some yoghurt with gram flour and apply on the skin. Wash off when it dries.
Mash a banana and mix it with honey. Apply on the face and wash after 20-25 minutes.
Mix equal quantities of potato juice and cucumber juice. And apply on the skin. Wash off after some time.

No comments:

Post a Comment