Thursday, January 19, 2012

HOME REMEDIES FOR HAIR LOSS & DANDRUFFಕೂದಲು ಉದುರುವಿಕೆ




ಕೂದಲು ಉದುರುವುದಕ್ಕೆ ಶಕ್ತಿಹೀನತೆಯೇ ಮುಖ್ಯ ಕಾರಣ. ಪೋಷಕಾಂಶಗಳ ಅಭಾವದಿಂದ ಶಕ್ತಿಯ ಕೊರತೆಯುಂಟಾಗುವುದರಿಂದ ಇಳಿ ವಯಸ್ಸಿನಲ್ಲಿ ಹೆಚ್ಚು ಹೆಚ್ಚಾಗಿ ಕೂದಲು ಉದುರುವುದು. ಆದುದರಿಂದ ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೂದಲು ಉದುರುವಿಕೆ ಅಷ್ಟಾಗಿ ಕಂಡುಬರುವುದಿಲ್ಲ. ಕೂದಲು ಉದುರುವುದನ್ನು ತಡೆಗಟ್ಟಬೇಕಾದರೆ ಮಾಂಸ, ಮೀನು, ಹಾಲು, ಬೆಣ್ಣೆ, ತುಪ್ಪ, ಮೊಳೆತ ಕಡಲೆಕಾಳು, ಮೊಳೆತ ಹೆಸರುಕಾಳು ಕ್ರಮವಾಗಿ ಸೇವಿಸಬೇಕು. ಕರಿದ ತಿಂಡಿ, ತಿನಸುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕೋಪ, ವ್ಯಥೆ, ನಿರೀಕ್ಷೆ, ಕುತೂಹಲ, ಭಯ, ಚಿಂತೆ ಮತ್ತಿತರ ಕಾರಣಗಳಿಂದ ಮನಸ್ಸು ಕೆರಳದಂತೆ ಎಚ್ಚರಿಕೆ ವಹಿಸಬೇಕು. ನಿದ್ದೆ ಕೆಡುವುದು, ಪ್ರತಿದಿನವೂ ತಲೆಗೆ ತಣ್ಣೀರಿನ ತುಂತುರು ಸ್ನಾನ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ಇದಿಷ್ಟೂ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದೇ ಅಲ್ಲದೆ, ಪ್ರತಿದಿನ ತಲೆಕೂದಲಿಗೆ ಎಳ್ಳೆಣ್ಣೆ ಅಥವಾ ಅಪ್ಪಟ ಕೊಬ್ಬರಿ ಎಣ್ಣೆ ಹಚ್ಚಿ ಬಾಚುತ್ತಿರಬೇಕು. ವಾರಕ್ಕೊಮ್ಮೆ ಅಭ್ಯಂಜನ ಸ್ನಾನ ಮಾಡಲು ಮರೆಯಬಾರದು. ಈ ಕ್ರಮ ಅನುಸರಿಸುವುದರಿಂದ ಕೂದಲು ಉದುರುವುದನ್ನು ಹಾಗೂ ತಲೆಯಲ್ಲಿ ಹೊಟ್ಟು ಏಳುವುದನ್ನು ಬಹುಮಟ್ಟಿಗೆ ನಿವಾರಿಸಬಹುದು.
ಮನೆ ಮದ್ದು:
೧)-ಸುಮಾರು ೧೦೦ ಗ್ರಾಂ ಕೊಬ್ಬರಿ ಎಣ್ಣೆಗೆ ಒಂದು ಟೀ ಚಮಚ ನಿಂಬೆರಸ ಹಿಂಡಿ. ನಂತರ, ಆ ಎಣ್ಣೆಯೊಂದಿಗೆ ಅಷ್ಟೇ ಪ್ರಮಾಣ ಸುಣ್ಣದ ತಿಳಿ ಮಿಶ್ರ ಮಾಡಿ ಚೆನ್ನಾಗಿ ಕುಲುಕಿ. ಈ ಮಿಶ್ರಣವನ್ನು ಪ್ರತಿದಿನವೂ ಕೂದಲಿಗೆ ಹಚ್ಚುವ ಅಭ್ಯಾಸವಿಟ್ಟುಕೊಳ್ಳಿ.
೨)-ರಾತ್ರಿ ಮಲಗುವುದಕ್ಕಿಂತ ಮುಂಚೆ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ತಲೆಬುರುಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ, ಮರುದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಈ ಕ್ರಮ ಅನುಸರಿಸಿ.
೩)-ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.
೪)-ಮೆಂತ್ಯವನ್ನು ತಂಗಿನ ಹಾಲಿನೊಂದಿಗೆ ನುಣ್ಣಗೆ ಅರೆಯಿರಿ. ಈ ಸರಿಯನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.
೫)-ವಾರಕ್ಕೊಮ್ಮೆ ಬೇವಿನ ಎಲೆಗಳ ಕಷಾಯದಿಂದ ತಲೆ ತೊಳೆಯಿರಿ.

1.ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲುದುರುವುದೂ ಕೂಡಾ ಕಡಿಮೆಯಾಗುತ್ತದೆ.
 2. ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.
 3. ತಲೆಯಲ್ಲಿ ಹೊಟ್ಟು ಏಳುತ್ತಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ಹೊಟ್ಟನ್ನು ಕಡಿಮೆ ಮಾಡುತ್ತದೆ.
 4. ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.
 5. ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.
6. ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.
 7. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರತಿನಿತ್ಯ ಬಳಸಬಹುದು.
 8. ತಿಂಗಳಿಗೊಮ್ಮೆಯಾದರೂ ಹೇರ್ ಪ್ಯಾಕ್ ಹಚ್ಚಿ. ಮೆಹೆಂದಿ ಸೊಪ್ಪು, ಮೊಸರು ಅಥವಾ ಮೊಟ್ಟೆ ಯಾವುದನ್ನೂ ಹೇರ್ ಪ್ಯಾಕ್ ಆಗಿ ಬಳಸಬಹುದು.
 9. ಕೂದಲನ್ನು ಸ್ಟೈಲಿಶ್ ಆಗಿ ಕಾಣಿಸಲಿಕ್ಕಾಗಿ ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.
10. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತ್ಯವನ್ನು ಹಾಕಿ ಕುದಿಸಿ. ನಂತರ ಸೋಸಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಿ. 

11. ಯಾವಾಗಲೂ ನೈಸರ್ಗಿಕ ಶಾಂಪೂವನ್ನೇ ತಲೆ ತೊಳೆಯಲು ಬಳಸಿ. ಆದರೂ ಬಹಳಷ್ಟು ಶಾಂಪೂಗಳು ರಾಸಾಯನಿಕವನ್ನೇ ಹೊಂದಿರುತ್ತದೆ. ಇದು ನಿಮ್ಮ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರಲೂ ಬಹುದು. ರಾಸಾಯನಿಕಗಳು ತಲೆಯ ಉಷ್ಣವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವೇ ಪಿತ್ತ. ಹಾಗಾಗಿ ಸೀಗೆಕಾಯಿ, ನೆಲ್ಲಿಕಾಯಿ ಪುಡಿಯನ್ನು ತಲೆ ತೊಳೆಯಲು ಬಳಸುವುದು ಉತ್ತಮ.
12. ತಲೆಗೆ ಎಣ್ಣೆ ಹಚ್ಚುವುದು ತುಂಬ ಅಗತ್ಯ. ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ. ಇದಲ್ಲದೆ ಕೆಲವು ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಿದರೆ ಉತ್ತಮ. ಎಣ್ಣೆ ತಲೆಕೂದಲ ಬೇರುಗಳಿಗೆ ಇಳಿಯುವಂತೆ ಬುಡಕ್ಕೆ ಹಚ್ಚಬೇಕು.
13. ಮಲಬದ್ಧತೆ ಅಥವಾ ಅಜೀರ್ಣ ಆಗದಂತೆ ಯಾವಾಗಲೂ ನೋಡಿಕೊಳ್ಳಬೇಕು. ಮಲಬದ್ಧತೆ ಇದ್ದರೆ ಸುಮ್ಮನೆ ಕೂರದೆ ಯಾವುದಾದರೂ ಮೆದು ಮನೆ ಔಷಧಿಯ ಮೂಲಕ ಸರಿಪಡಿಸಿಕೊಳ್ಳಿ. ಇದಕ್ಕೆ ಆಯುರ್ವೇದದ ತ್ರಿಫಲಾ ಪುಡಿ ಕೂಡಾ ಬಳಸಬಹುದು.
14. , ವಿಟಮಿನ್ ಎ ಇರುವ ಆಹಾರಗಳನ್ನು ತಿನ್ನಿ.
15. , ಕಪ್ಪು ಎಳ್ಳು ಮತ್ತಿತರ ವಸ್ತುಗಳನ್ನು ಸೇರಿಸಿ ಮನೆಯಲ್ಲೇ ಎಣ್ಣೆ ಮಾಡಿ ನಿತ್ಯ ತಲೆಗೆ ಹಚ್ಚುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದು.

16. ತಲೆಗೆ ಸ್ನಾನ ಮಾಡಿದ ಮೇಲೆ ತಲೆ ಬುಡವನ್ನು ಚೆನ್ನಾಗಿ ಮಸಾಜ್ ಮಾಡುವಂತೆ ಉಜ್ಜಿ. ಇದು ನಿಮ್ಮ ತಲೆಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗೂ ಕೂದಲನ್ನು ದೃಢವಾಗಿಸುತ್ತದೆ.
17. ಬಸಳೆ ಸೊಪ್ಪಿನ ಹಸಿಯಾದ ಜ್ಯೂಸ್ ಮಾಡಿ ಕುಡಿಯಿರಿ. ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಕೂಡಾ ಉತ್ತಮ.

18. ಪ್ರತಿದಿನವೂ ತೆಂಗಿನೆಣ್ಣೆ ಹಾಗೂ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಉತ್ತಮ ಫಲ ಕಾಣುತ್ತದೆ.
19. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಉತ್ತಮ ಫಲ ಕಾಣುತ್ತದೆ. ಬೋಳಾದ ತಲೆಗೂ ಇದು ಉತ್ತಮ.
20. ಬೇಯಿಸಿದ ಉದ್ದಿನ ಬೇಳೆಯ ಪೇಸ್ಟ್ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು.

21. ಮೆಂತೆ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಧಾನವಾಗಿ ಕಡಿಮೆಯಾಗುತ್ತದೆ. ಮೆಂತೆ ಸೊಪ್ಪಿನ ಬದಲಾಗಿ ಮೆಂತ್ಯವನ್ನೂ ಬಳಸಬಹುದು.
22. ಯಷ್ಟಿಮಧುವನ್ನು ಹಾಲಿನಲ್ಲಿ ಅರೆದು ಬೋಳಾದ ಭಾಗಕ್ಕೆ ಹಚ್ಚಿದರೆ ಅಲ್ಲಿ ಕೂದಲು ಹುಟ್ಟಲು ಆರಂಭವಾಗುತ್ತದೆ.
23. ನಿಂಬೆಹಣ್ಣಿನ ಬೀಜ ಹಾಗೂ ಕರಿಮೆಣಸನ್ನು ಚೆನ್ನಾಗಿ ಅರೆದು ಬೋಳಾದ ಜಾಗಕ್ಕೆ ಹಚ್ಚಿದರೆ ಹೊಸ ಕೂದಲು ಹುಟ್ಟಿ ಬೆಳೆಯಲು ಆರಂಭವಾಗುತ್ತದೆ.
24. ನೆಲ್ಲಿಕಾಯಿಯನ್ನು ತಿನ್ನುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

 12. ತಲೆಗೆ ಎಣ್ಣೆ ಹಚ್ಚುವುದು ತುಂಬ ಅಗತ್ಯ. ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ. ಇದಲ್ಲದೆ ಕೆಲವು ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಿದರೆ ಉತ್ತಮ. ಎಣ್ಣೆ ತಲೆಕೂದಲ ಬೇರುಗಳಿಗೆ ಇಳಿಯುವಂತೆ ಬುಡಕ್ಕೆ ಹಚ್ಚಬೇಕು.
 13. ಮಲಬದ್ಧತೆ ಅಥವಾ ಅಜೀರ್ಣ ಆಗದಂತೆ ಯಾವಾಗಲೂ ನೋಡಿಕೊಳ್ಳಬೇಕು. ಮಲಬದ್ಧತೆ ಇದ್ದರೆ ಸುಮ್ಮನೆ ಕೂರದೆ ಯಾವುದಾದರೂ ಮೆದು ಮನೆ ಔಷಧಿಯ ಮೂಲಕ ಸರಿಪಡಿಸಿಕೊಳ್ಳಿ. ಇದಕ್ಕೆ ಆಯುರ್ವೇದದ ತ್ರಿಫಲಾ ಪುಡಿ ಕೂಡಾ ಬಳಸಬಹುದು.
 4. ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿ ಹೇರಳವಾಗಿರಲಿ. ಸಲಾಡ್, ಹಾಲು, ಹಣ್ಣು, ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಿ. ಹೆಚ್ಚು ಪ್ರೋಟೀನ್, ವಿಟಮಿನ್ ಎ ಇರುವ ಆಹಾರಗಳನ್ನು ತಿನ್ನಿ.
 15. ಭೃಂಗರಾಜ ಎಲೆ, ನೆಲ್ಲಿಕಾಯಿ, ಕಪ್ಪು ಎಳ್ಳು ಮತ್ತಿತರ ವಸ್ತುಗಳನ್ನು ಸೇರಿಸಿ ಮನೆಯಲ್ಲೇ ಎಣ್ಣೆ ಮಾಡಿ ನಿತ್ಯ ತಲೆಗೆ ಹಚ್ಚುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದು.
 16. ತಲೆಗೆ ಸ್ನಾನ ಮಾಡಿದ ಮೇಲೆ ತಲೆ ಬುಡವನ್ನು ಚೆನ್ನಾಗಿ ಮಸಾಜ್ ಮಾಡುವಂತೆ ಉಜ್ಜಿ. ಇದು ನಿಮ್ಮ ತಲೆಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗೂ ಕೂದಲನ್ನು ದೃಢವಾಗಿಸುತ್ತದೆ.
 17. ಬಸಳೆ ಸೊಪ್ಪಿನ ಹಸಿಯಾದ ಜ್ಯೂಸ್ ಮಾಡಿ ಕುಡಿಯಿರಿ. ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಕೂಡಾ ಉತ್ತಮ.
  18. ಪ್ರತಿದಿನವೂ ತೆಂಗಿನೆಣ್ಣೆ ಹಾಗೂ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಉತ್ತಮ ಫಲ ಕಾಣುತ್ತದೆ.
 19. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಉತ್ತಮ ಫಲ ಕಾಣುತ್ತದೆ. ಬೋಳಾದ ತಲೆಗೂ ಇದು ಉತ್ತಮ.
 20. ಬೇಯಿಸಿದ ಉದ್ದಿನ ಬೇಳೆಯ ಪೇಸ್ಟ್ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು.
21. ಮೆಂತೆ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಧಾನವಾಗಿ ಕಡಿಮೆಯಾಗುತ್ತದೆ. ಮೆಂತೆ ಸೊಪ್ಪಿನ ಬದಲಾಗಿ ಮೆಂತ್ಯವನ್ನೂ ಬಳಸಬಹುದು.
 22. ಯಷ್ಟಿಮಧುವನ್ನು ಹಾಲಿನಲ್ಲಿ ಅರೆದು ಬೋಳಾದ ಭಾಗಕ್ಕೆ ಹಚ್ಚಿದರೆ ಅಲ್ಲಿ ಕೂದಲು ಹುಟ್ಟಲು ಆರಂಭವಾಗುತ್ತದೆ.
 23. ನಿಂಬೆಹಣ್ಣಿನ ಬೀಜ ಹಾಗೂ ಕರಿಮೆಣಸನ್ನು ಚೆನ್ನಾಗಿ ಅರೆದು ಬೋಳಾದ ಜಾಗಕ್ಕೆ ಹಚ್ಚಿದರೆ ಹೊಸ ಕೂದಲು ಹುಟ್ಟಿ ಬೆಳೆಯಲು ಆರಂಭವಾಗುತ್ತದೆ.
  24. ನೆಲ್ಲಿಕಾಯಿಯನ್ನು ತಿನ್ನುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.
 25. ಒಂದು ಕಪ್ ಸಾಸಿವೆ ಎಣ್ಣೆಯನ್ನು ನಾಲ್ಕು ಚಮಚ ಮೆಹೆಂದಿ ಸೊಪ್ಪಿನ ಜತೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿಟ್ಟು ದಿನವೂ ಬೋಳಾದ ತಲೆಯ ಭಾಗಕ್ಕೆ ಲೇಪಿಸಿ. ಇದು ಕೂದಲು ಮತ್ತೆ ಹುಟ್ಟಲು ಸಹಾಯ ಮಾಡುತ್ತದೆ.
26. ಜೇನಿನೊಂದಿಗೆ ಮೊಟ್ಟೆಯ ಹಳದಿ ಭಾಗವನ್ನು ಕಲಸಿ ಚೆನ್ನಾಗಿ ತಲೆಬುಡಕ್ಕೆ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ತಲೆ ತೊಳೆಯಿರಿ.
 27. ಪ್ರತಿ ದಿನವೂ ಮೆಹೆಂದಿ ಎಲೆಯನ್ನು ಎರೆದು ತಲೆಗೆ ಹಚ್ಚುತ್ತಾ ಬಂದಂಲ್ಲಿ ಕೂದಲು ಉದುರುವುದು ನಿಲ್ಲುತ್ತದೆ. ಹಾಗೂ ಹೊಸ ಕೂದಲು ಮೊಳೆಯಲು ಶುರುವಾಗುತ್ತದೆ.
 28. ರಾತ್ರಿ ಮಲಗುವ ಮೊದಲು ಹರಳೆಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಕೂದಲಿಗೆ ಹಚ್ಚಬೇಡಿ. ನಂತರ ತಲೆಯನ್ನು ಬಟ್ಟೆಯಲ್ಲಿ ಸುತ್ತಿ ಮಲಗಿ ಬೆಳಗ್ಗೆ ಎದ್ದು ತಲೆಗೆ ಸ್ನಾನ ಮಾಡಿ. ಕನಿಷ್ಟ 15 ದಿನವಾದರೂ ಹೀಗೆ ಮಾಡಿ.
 29. ಒಂದು ಚಮಚ ಸಾಸಿವೆಯನ್ನು ಒಂದು ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ತಣಿದ ಮೇಲೆ ಇದನ್ನು ಸೋಸಿ, ಕೇವಲ ನೀರನ್ನು ಮಾತ್ರ ಕುಡಿಯಿರಿ.
30. ಎರಡು ಚಮಚಗಳಷ್ಟು ಆಲಿವ್ ಎಣ್ಣೆ, ರೋಸ್‌ಮೆರಿ, ಒಂದು ನಿಂಬೆಹಣ್ಣಿನ ರಸ, ಹಾಗೂ ಒಂದು ಮೊಟ್ಟೆಯ ಹಳದಿ ಲೋಳೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಇದು ತಲೆಕೂದಲಿಗೆ ಉತ್ತಮ ಟಾನಿಕ್.

31. ಅರ್ಧ ಕಪ್ ಆಲಿವ್ ಎಣ್ಣೆಗೆ ಒಂದು ಚಮಚ ಜೀರಿಗೆ ಪುಡಿಯನ್ನು ಮಿಕ್ಸ್ ಮಾಡಿ ಚೆನ್ನಾಗಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ.
 32. ಅರ್ಧ ಕಪ್ ತೆಂಗಿನ ಎಣ್ಣೆಗೆ ಸ್ವಲ್ಪ ಒಣಗಿದ ನೆಲ್ಲಿಕಾಯಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ತಲೆಯ ಬುಡಕ್ಕೆ ಹಚ್ಚಿ. ಇದು ಕೂದಲುದುರುವುದನ್ನು ತಡೆಯಲು ಸೂಕ್ತ.
  33. ತೆಂಗಿನ ಕಾಯಿಯನ್ನು ತುರಿದು ಅದರ ಹಾಲನ್ನು ತೆಗೆದು ತಲೆಗೆ ಹಚ್ಚಿ ಮಸಾಜ್ ಮಾಡಿ ನಂತರ ಒಂದು ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
 34. ತೆಂಗಿನ ಕಾಯಿಯ ನೀರನ್ನು ಕುಡಿಯುವುದರಿಂದಲೂ ತಲೆಕೂದಲು ಉದುರುವುದನ್ನು ಕಡಿಮೆ ಮಾಡಬಹುದು.


• ಮೆಂತೆಯನ್ನು ರಾತ್ರಿ ನೀರು ಅಥವಾ ಮೊಸರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ರುಬ್ಬಿ ತಲೆಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ನಿವಾರಣೆಯಾಗುತ್ತದೆ.
• ಹುಳಿ ಮೊಸರಿಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ನಿವಾರಣೆಯಾಗುತ್ತದೆ.
• ಮೆಂತೆ ಸೊಪ್ಪು ಹಾಗೂ ಕರಿಬೇವಿನ ಎಲೆಗಳನ್ನು ಅರೆದು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ನಿವಾರಣೆಯಾಗುತ್ತದೆ.
• ದಾಸವಾಳದ ಎಲೆಗಳನ್ನು ಮೋಸರಿನಲ್ಲಿ ಮಿಶ್ರಮಾಡಿ ಅರೆದು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ನಿವಾರಣೆಯಾಗುತ್ತದೆ.
• ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.

*ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲುದುರುವುದೂ ಕೂಡಾ ಕಡಿಮೆಯಾಗುತ್ತದೆ.
* ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.

*ತಲೆಯಲ್ಲಿ ಹೊಟ್ಟು ಏಳುತ್ತಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ಹೊಟ್ಟನ್ನು ಕಡಿಮೆ ಮಾಡುತ್ತದೆ.

 * ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.
* ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.

 * ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.
* ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರತಿನಿತ್ಯ ಬಳಸಬಹುದು.
* ತಿಂಗಳಿಗೊಮ್ಮೆಯಾದರೂ ಹೇರ್ ಪ್ಯಾಕ್ ಹಚ್ಚಿ. ಮೆಹೆಂದಿ ಸೊಪ್ಪು, ಮೊಸರು ಅಥವಾ ಮೊಟ್ಟೆ ಯಾವುದನ್ನೂ ಹೇರ್ ಪ್ಯಾಕ್ ಆಗಿ ಬಳಸಬಹುದು.
* ಕೂದಲನ್ನು ಸ್ಟೈಲಿಶ್ ಆಗಿ ಕಾಣಿಸಲಿಕ್ಕಾಗಿ ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.
* ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತ್ಯವನ್ನು ಹಾಕಿ ಕುದಿಸಿ. ನಂತರ ಸೋಸಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಿ.

ಸೂಪರ್ ಕೂದಲಿಗಾಗಿ 12 ಸೂಪರ್ ಫುಡ್:

1.ವಾಲ್ ನೆಟ್:
ವಾಲ್ ನೆಟ್ ನಲ್ಲಿ ವಿಟಮಿನ್ ಇ ಅಧಿಕವಿರುತ್ತದೆ. ಇದು ತಲೆ ಬುಡದಲ್ಲಿ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ ಹಾಗೂ ಇದರಲ್ಲಿ ಸತುವಿಂಶ ಅಧಿಕವಾಗಿ ಇದೆ. ಇದರಿಂದಾಗಿ ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

2.ಬಾದಾಮಿ:
ಬಾದಾಮಿಲ್ಲೂ ವಿಟಮಿನ್ ಇ ಇರುವುದರಿಂದ ಇದನ್ನು ಪ್ರತಿದಿನ ತಿನ್ನುವುದು ಕೂದಲಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

3.ಸೂರ್ಯಕಾಂತಿ ಬೀಜ:
ಸೂರ್ಯಕಾಂತಿ ಹೂವಿನ ಬೀಜದಲ್ಲಿ ಅಧಿಕ ಪ್ರೊಟೀನ್, ಪೊಟಾಷ್ಯಿಯಂ, ವಿಟಮಿನ್ ಇ, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಇರುತ್ತದೆ. ಈ ಬೀಜ ತಿನ್ನಲೂ ರುಚಿಕರವಾಗಿರುತ್ತದೆ. ಈ ಬೀಜವನ್ನು ಕೊಳ್ಳುವಾಗ ಅದರಲ್ಲಿ ಸೋಡಿಯಂ ಅಥವಾ ಇತರ ರುಚಿಯ ರುಚಿಯನ್ನು ಸೇರಿಸಿದ್ದರೆ ಅಂತಹ ಬೀಜಗಳನ್ನು ಕೊಳ್ಳಬೇಡಿ.

4.ಅಂಜೂರ:
ಅಂಜೂರದಲ್ಲಿ ಎ,ಬಿ ಮತ್ತು ಸಿ, ಫಾಲಿಕ್ ಆಸಿಡ್, ಸತು, ಸೋಡಿಯಂ ಮತ್ತು ಪೊಟಾಷ್ಯಿಯಂ ಇರುತ್ತದೆ. ಅಂಜೂರದಲ್ಲಿ ಬಾಳೆ ಹಣ್ಣಿನಲ್ಲಿ ಇರುವುದಕ್ಕಿಂತ 80% ಅಧಿಕ ಪೊಟಾಷ್ಯಿಯಂ ಅಂಶವಿರುತ್ತದೆ.

5.ಆಪ್ರಿಕಾಟ್ ಮತ್ತು ಪೀಚ್:
ಇದರಲ್ಲಿ ಹಿಮೋಗ್ಲೋಬಿನ್ ಗೆ ಅವಶ್ಯಕವಾದ ಕಬ್ಬಿಣದಂಶ ಅಧಿಕವಿರುತ್ತದೆ. ಕಬ್ಬಿಣದಂದ ಕೊರತೆ ಉಂಟಾದರೆ ಮುಖ ಬಿಳುಚಿಕೊಳ್ಳುವುದು, ಕೂದಲು ತೆಳ್ಳಗಾಗುವುದು.

6.ಬಾಳೆಹಣ್ಣು:
ಇದರಲ್ಲಿ ಅಮೈನೊ ಆಸಿಡ್ ಅಧಿಕವಿರುತ್ತದೆ. ಅಮೈನೊ ಆಸಿಡ್ ದೇಹಕ್ಕೆ ಅವಶ್ಯಕವಾಗಿ ಬೇಕು. ಆದರೆ ಅದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ಅಮೈನೊ ಆಸಿಡ್ ಇರುವ ಆಹಾರ ಸೇವಿಸುವುದು ಅವಶ್ಯಕ.

7.ರಾಸ್ ಬರಿ ಹಾಗೂ ಸ್ಟ್ರಾಬರಿ:
ಇವುಗಳಲ್ಲಿ ವಿಟಮಿನ್ ಎ ಮತ್ತು ಇ ಇದ್ದು ತಲೆ ಬುಡದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳುವಲ್ಲಿ ಸಹಕಾರಿಯಾಗಿದೆ.

8.ಸಿಟ್ರಸ್ ಆಹಾರ:
ಕಿತ್ತಳೆ, ನಿಂಬೆ ರಸ, ನೆಲ್ಲಿಕಾಯಿ ಹೀಗೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

9.ಒಣದ್ರಾಕ್ಷಿ:
ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದು ಕೂದಲಿಗೂ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ತಿಂದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

10.ಹಾಲು, ಸೋಯಾ:
ಹಾಲು, ಸೋಯಾ ಇ, ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಎ ಹಾಗೂ ಬಿ12 ಅಧಿಕವಿದ್ದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

11.ದವಸದಾನ್ಯಗಳು:

ದವಸ ಧಾನ್ಯಗಳಲ್ಲಿ ವಿಟಮಿನ್ ಬಿ5 ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು.

12.ಸೊಪ್ಪು:
ಸೊಪ್ಪಿನಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಅಧಿಕ ಪೋಷಕಾಂಶವಿರುವುದರಿಂದ ದೇಹದ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಮೊಸರಿನಿಂದ ಕೂದಲ ಆರೈಕೆ:

1. ಚಳಿಗಾಲದಲ್ಲಿ ತಲೆ ಹೊಟ್ಟು ಒಂದು ಸಾಮಾನ್ಯ ಸಮಸ್ಯೆ. ಮೊಸರನ್ನು ತಲೆಗೆ ಹಚ್ಚಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

2. ಮೊಸರಿನಿಂದ ತಲೆಗೆ ಮಸಾಜ್ ಮಾಡಿ 30-40 ನಿಮಿಷ ಬಿಟ್ಟು ನಂತರ ಸ್ನಾನ ಮಾಡಬೇಕು. ಈ ರೀತಿ ಮಾಡಿದರೆ ಒಣ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.

3. ಮೊಸರನ್ನು ಹಚ್ಚಿ ಸ್ವಲ್ಪ ಹೊತ್ತಿನ ನಂತರ ನಂತರ ತಲೆಯನ್ನು ತೊಳೆಯಬೇಕು. ಇದರಿಂದ ಕೂದಲು ಮೃದುವಾಗುವುದು.

4. ಆಲೀವ್ ಎಣ್ಣೆ ಜೊತೆ ಮೊಸರನ್ನು ಮಿಶ್ರ ಮಾಡಿ ಹಚ್ಚುವುದರಿಂದ ಕೂಡ ಕೂದಲಿನ ಪೋಷಣೆ ಮಾಡಬಹುದು.

5. ಮೊಟ್ಟೆ ಮತ್ತು ಮೊಸರನ್ನು ಮಿಶ್ರ ಮಾಡಿ ಹಚ್ಚುವುದರಿಂದ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.

6. ಮೊಸರಿನೊಂದಿಗೆ ಬಾಳೆಹಣ್ಣು ಮಿಶ್ರ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟ ನಂತರ ಹದ ಬಿಸಿ ನೀರಿನಿಂದ ತಲೆಯನ್ನು ತೊಳೆಯಬೇಕು.

ಮೊಸರನ್ನು ಕೂದಲಿಗೆ ಹಚ್ಚುವ ಮೊದಲು ಎಣ್ಣೆಯನ್ನು ಕೂದಲಿಗೆ ಹಚ್ಚಿರಬೇಕು, ಈ ರೀತಿ ಮಾಡಿದರೆ ಕೂದಲು ಸಿಕ್ಕಾಗುವುದಿಲ್ಲ, ಕೂದಲಿನ ಪೋಷಣೆ ಕೂಡ ಸರಿಯಾದ ರೀತಿಯಲ್ಲಿ ಆಗುವುದು.


ಒರಟು  ಕೂದಲು  ಮೃದುವಾಗಿಸಬೇಕೆ?

1. ಲೋಳೆಸರ: ಲೋಳೆಸರ ಕೂದಲಿಗೆ ತುಂಬಾ ಒಳ್ಳೆಯದು. ಇದನ್ನು ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡಬೇಕು ಅಥವಾ ಶ್ಯಾಂಪೂ ಜೊತೆ ಸ್ವಲ್ಪ ಲೋಳೆಸರ ಸೇರಿಸಿ ತಲೆ ತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಕೂದಲು ಹೊಳಪನ್ನು ಪಡೆಯುತ್ತದೆ.

2. ಸೇಬಿನ ರಸ: ಒಂದು ಸೇಬನ್ನು ಸ್ವಲ್ಪ ಗಟ್ಟಿಯಾಗಿ ನುಣ್ಣನೆ ಮಿಕ್ಸಿಯಲ್ಲಿ ಆಡಿಸಬೇಕು. ನಂತರ ಆ ರಸವನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಬೇಕು. ಈ ರೀತಿ ವಾರದಲ್ಲಿ 2-3 ಬಾರಿ ಮಾಡಬೇಕು. ಈ ರೀತಿ ಕೂದಲಿನ ಆರೈಕೆ ಮಾಡುತ್ತಾ ಬಂದರೆ ಕೂದಲು ಮೃದುವಾಗುವುದು ಮತ್ತು ಹೊಳಪನ್ನು ಪಡೆಯುತ್ತದೆ.

3. ಎಣ್ಣೆ, ನಿಂಬೆರಸ, ಮೊಸರು: ಸಾಸಿವೆ ಎಣ್ಣೆಗೆ ಸ್ವಲ್ಪ ನಿಂಬೆರಸ ಮತ್ತು ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣವನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮೃದುವಾದ ಸೋಪು ಹಾಕಿ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು ಮೃದುವಾಗುವುದರ ಜೊತೆ ಬೇಗನೆ ಉದ್ದ ಬೆಳೆಯುತ್ತದೆ.

4. ಎಣ್ಣೆ ಮತ್ತು ಮೊಟ್ಟೆ: ಒಂದು ಅಥವಾ ಎರಡು ಮೊಟ್ಟೆಯ ಬಿಳಿ ಹಾಕಿ ಅದಕ್ಕೆ 2 ಚಮಚ ಆಲೀವ್ ಎಣ್ಣೆ ಹಾಕಿ ಮಿಶ್ರಣ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆಸ್ನಾನ ಮಾಡಬೇಕು. ನಂತರ ಮೃದುವಾದ ಶ್ಯಾಂಪೂ ಹಚ್ಚಿ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲಿಗೆ ಅಗತ್ಯದ ಪ್ರೊಟೀನ್ ದೊರೆಯುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುವುದು.

5. ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಿಂದ ಪ್ರತಿನಿತ್ಯ ಮಸಾಜ್ ಮಾಡಿದರೆ ಕೂದಲು ತನ್ನ ಒರಟುತನವನ್ನು ಕಳೆದುಕೊಳ್ಳುತ್ತದೆ.

ಈ ವಿಧಾನಗಳಲ್ಲಿ ಯಾವುದಾದರೂ ಒಂದು ವಿಧಾನವನ್ನು ಪಾಲಿಸುತ್ತಾ ಬಂದರೆ ಸಾಕು ಕೂದಲು ಆಕರ್ಷಕವಾಗಿ ಕಾಣುವುದು. 


ಕೂದಲು ಉದುರುವುದನ್ನು ತಡೆಗಟ್ಟುವ ಟ್ರಿಕ್ಸ್


ತಲೆಗೆ ಸರಿಯಾಗಿ ಎಣ್ಣೆ ಹಚ್ಚಿ. ಅದರಲ್ಲೂ ತಲೆಗೆ ಎಣ್ಣೆಯನ್ನು ಬಿಸಿ ಮಾಡಿ ಹಚ್ಚಿದರೆ ಕೂದಲಿನ ಬುಡದ ರಂಧ್ರಗಳು ತೆರೆದುಕೊಂಡು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಆರೋಗ್ಯ ಹೆಚ್ಚಾಗುವುದು.


ಈರುಳ್ಳಿ ರಸವನ್ನು ಎಣ್ಣೆಯ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿದರೆ ತಲೆ ಹೊಟ್ಟು ಮಾಯವಾಗುವುದು, ಕೂದಲು ಕೂಡ ದಪ್ಪವಾಗಿ ಬೆಳೆಯುತ್ತದೆ.

ವಾರದಲ್ಲಿ ಎರಡು ಸಲ ತಲೆಗೆ ಎಣ್ಣೆ ಮಸಾಜ್ ಮಾಡಿಕೊಳ್ಳಿ. ನಂತರ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ತಲೆಗೆ ಸುತ್ತಿಕೊಳ್ಳಿ. ಈ ರೀತಿ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗಿ ಹೊಸ ಕೂದಲು ಹುಟ್ಟಲಾರಂಭಿಸುತ್ತದೆ.

ಗ್ರೀನ್ ಟೀಯನ್ನು ತಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಕೂದಲು ಮಂದವಾಗಿ ಕಾಣುವುದು.

ಮಾನಸಿಕ ಒತ್ತಡವಿದ್ದರೆ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ದಿನದಲ್ಲಿ ಸ್ವಲ್ಪ ಸಮಯ ಧ್ಯಾನಕ್ಕಾಗಿ ಮೀಸಲಿಡಿ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕೂದಲಿನ  ಹಾಗೂ ದೇಹದ ಆರೋಗ್ಯ ಹೆಚ್ಚುತ್ತದೆ.



Home Remedy For Dandruff

The best way to cure dandruff naturally is to have a hot steam bath. First, massage your head with hot oil and then wrap a hot damp towel. Keep this for a few minutes after which wash your hair.
Take a small bowl of coconut oil and soak in it a few peels of lemon. Keep this for a span of 8-10 days. Strain the oil and apply this mixture on the hair.
Combine two tablespoons of vinegar and six tablespoons of hot water. Take a cotton ball and apply the above made combination with it on the scalp. Keep this overnight and wash off your hair next morning.
Take some beetroot juice and add a few drops of vinegar. Dab this on the scalp. Another combination would be to add a few drops of ginger juice in the beetroot juice.
Another effective method to treat dandruff would be to combine 2 tablespoons of fresh apple juice with 2 tablespoons of warm water. Dab this on the hair and keep it for 10-15 minutes before rinsing. Do this for once or twice a week to cure dandruff.
Mix olive oil and almond oil in equal proportions. Leave it for about 5 minutes. Once a burning sensation is felt, wash the hair.
Immerse two tablespoons of fenugreek seeds in water overnight. Grind them the next morning to form a paste. Keep it for half an hour before washing it with a ritha solution or shikakai.
Conditioning the hair using cider vinegar after shampooing also acts beneficial in removing dandruff.
Heat 300 grams of coconut oil with 3 grams of black pepper. Strain this decoction. Once cooled, apply this decoct on the hair and the scalp overnight.
Use a teaspoon of fresh lime juice as a conditioner. Apart from removing the dandruff, it also gives a glowing effect to the hair.
For a person who applies henna, mash beetroot leaves in it. Apply this mixture on the head to prevent dandruff and hair fall.
Washing the hair with green gram powder in curd twice a week would also cure a person from dandruff.
Add two tablespoons of water to two beaten eggs and mix it properly. Apply this combination to the moist hair and leave it for 10-15 minutes. Rinse the hair with lukewarm water. this will be effective in treating dandruff.
Addressing the root cause of dandruff , my uncle who was a senior and reputed Ayurvedic doctor would advise as follows : maintain cleanliness of hair/ scalp, manage stress and kick start the liver.

HOME REMEDIES FOR PILES ಮೂಲವ್ಯಾಧಿ (bleeding haemorrhoids)


ಮೂಲವ್ಯಾಧಿ ಮುಜುಗರವನ್ನು ಉಂಟು ಮಾಡುವಂತಹ ಕಾಯಿಲೆ. ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ಮೂಲವ್ಯಾಧಿ ಮನುಷ್ಯಕುಲದಲ್ಲಿ ಮಾತ್ರ ಕಂಡುಬರುವ ಕಾಯಿಲೆ. ಯಾವುದೇ ಪ್ರಾಣಿಗಳಲ್ಲಿ ಈ ಕಾಯಿಲೆ ಕಂಡುಬರುವುದಿಲ್ಲ. ಇದು ಮನುಷ್ಯನ ನೆಟ್ಟಗೆ ನಿಲ್ಲುವ ಸಾಮರ್ಥ್ಯಕ್ಕೆ ತೆರುವ ಬೆಲೆ ಎಂದು ಹೇಳಬಹುದು.

ಚಕ್ರವರ್ತಿ ನೆಪೋಲಿಯ್ ಬೊನಾಪಾರ್ಟ್ ಮೂಲವ್ಯಾಧಿಯಿಂದ ಬಳಲುತ್ತಿದ್ದು ಆತ ಈ ಕಾರಣಕ್ಕಾಗಿಯೇ ವಾಟರ್ಲೂ ಯುದ್ಧದಲ್ಲಿ ಸೋಲನ್ನು ಅನುಭವಿಸಬೇಕಾಗಿ ಬಂದದ್ದು ಆಶ್ಚರ್ಯವೆನಿಸುತ್ತದಲ್ಲವೇ ?

ಅನೇಕರು ಮೂಲವ್ಯಾಧಿ (Piles) ಫಿಶ್ (ಚರ್ಮದ ಸೀಳಿಕೆ) ಒಂದೇ ಎಂದು ಭಾವಿಸುತ್ತಾರೆ. ಗುದದ್ವಾರದಲ್ಲಿ ರಕ್ತನಾಳಗಳು ಉಬ್ಬಿಕೊಳ್ಳುವುದರಿಂದ ಮೂಲವ್ಯಾಧಿ ಉಂಟಾಗುತ್ತದೆ. ಗುದದ ಅಂಚಿನಲ್ಲಿನ ಚರ್ಮ ಸೀಳಿ ಹೋಗುವುದರಿಂದ ಫಿಶ್ ಉಂಟಾಗುತ್ತದೆ. ನಮ್ಮ ಆಹಾರ ಪದ್ಧತಿ, ಜೀವನ ಶೈಲಿಗಳ ಬದಲಾವಣೆಗಳಿಂದಲೇ ಈ ಎರಡೂ ಹೆಚ್ಚಾಗುತ್ತಿವೆ. ಎರಡರಲ್ಲಿಯೂ ಪ್ರಮುಖ ಕಾರಣ ಮಲಬದ್ಧತೆಯೇ ಅನ್ನುವುದು ಸ್ಪಷ್ಟ.

ಮೂಲವ್ಯಾಧಿಯಲ್ಲಿ ರಕ್ತನಾಳಗಳು ಉಬ್ಬಿರುತ್ತವೆ. ಅವು ಚರ್ಮದ ಹೊದಿಕೆಯಡಿ ಇರುತ್ತವೆ. ಮಲವಿಸರ್ಜನೆಯ ಕಾಲದಲ್ಲಿ ಸ್ನಾಯುಗಳ ಸಂಕುಚನದಲ್ಲಿ ರಕ್ತನಾಳಗಳು ಸಿಕ್ಕಿಬೀಳುತ್ತವೆ. ಗುರುತ್ವಾಕರ್ಷಣೆಯ ಫಲವಾಗಿ ರಕ್ತವು ರಕ್ತನಾಳಗಳಲ್ಲಿ ಸಂಚಯಿಸಲ್ಪಡುತ್ತವೆ. ರಕ್ತನಾಳಗಳ ಈ ಗುಂಪು ಮೂಲವ್ಯಾಧಿಯಾಗುತ್ತದೆ. ಈ ಸಂದರ್ಭದಲ್ಲಿ ರಕ್ತಸ್ರಾವ ಮುಖ್ಯ ಲಕ್ಷಣವಾಗಿ ಕಂಡುಬರುತ್ತದೆ. ಆರಂಭದಲ್ಲಿ ರಕ್ತಸ್ರಾವ ಸ್ವಲ್ಪ. ಅದು ಮಲವಿಸರ್ಜನೆಯ ಸಮಯದಲ್ಲಿ ಮಾತ್ರ ಗೋಚರಿಸುತ್ತದೆ. ಕೆಂಪಗೆ ಹೊಳೆಯುವ ರಕ್ತ ಮಲದ ಹೊರಮೈಗೆ ಅಂಟಿಕೊಂಡಿರುತ್ತದೆ. ಈ ತರಹದ ಸ್ಥಿತಿ ಬಹುಕಾಲ ಹಾಗೆಯೇ ಮುಂದುವರಿಯಬಹುದು. ಕೆಲಕಾಲದ ನಂತರ ಉಬ್ಬಿದ ರಕ್ತನಾಳಗಳು ಮಲವಿಸರ್ಜನೆಯ ಕಾಲದಲ್ಲಿ ಹೊರಚಾಚಲ್ಪಡುತ್ತವೆ. ಅನಂತರ ಒಳಸೇರಿಕೊಳ್ಳುತ್ತವೆ. ಕಾಯಿಲೆ ಮುಂದುವರೆದಂತೆ ರಕ್ತನಾಳಗಳು ಗುಂಪಿನ ಗಾತ್ರ ಕುಗ್ಗುವುದಿಲ್ಲ ಮತ್ತು ಅವು ತಂತಾನೇ ಒಳಸೇರಿಕೊಳ್ಳುವುದಿಲ್ಲ.

ಗುದದ ಸೀಳಿಕೆ ಹೇಗೆ ಉಂಟಾಗುತ್ತದೆಂದು ನೋಡೋಣ. ಬಹುಕಾಲದಿಂದ ಮಲಬದ್ಧತೆಯಿಂದ ನರಳುವವರಲ್ಲಿ ಗಟ್ಟಿಯಾದ ಮಲ ಗುದದ್ವಾರದ ಮೂಲಕ ಹೊರಬರುವಾಗ ಅದು ಯಾವ ಸ್ನಾಯುವಿನ ಆಧಾರವನ್ನು ಪಡೆಯದೇ ಗುದನಾಳದ ಅಂತ್ಯ ಭಾಗವನ್ನು ಗೀಚುವಂತೆ ಅಂದರೆ ಸೀಳುವಂತೆ ಮಾಡುತ್ತದೆ. ಆಗ ಅಲ್ಲಿನ ಚರ್ಮ ಬಿರುಕುಗೊಳ್ಳುವುದು. ಚರ್ಮ ಮತ್ತು ಮ್ಯುಕಸ್‌ಮೆಂಬ್ರೇನ್ ತಾಗುವ ಸ್ಥಳದಲ್ಲಿ ಈ ಸೀಳುವಿಕೆ ಉಂಟಾಗುತ್ತದೆ. ಫಿಶ್ ಇರುವವರಿಗೆಲ್ಲ ನಮ್ಮ ಜೀವನವನ್ನು ಚಿಕ್ಕದೊಂದು ಸೀಳು ಅದೆಷ್ಟು ದುರ್ಭರ ಮಾಡುತ್ತವೆಂಬ ಅನುಭವವಿದ್ದೇ ಇರುತ್ತದೆ. ಫಿಶ್ನಲ್ಲಿ ನೋವು ಪ್ರಮುಖ ಲಕ್ಷಣವಾಗಿರುತ್ತದೆ. ತೀವ್ರತರವಾದ ವೇದನೆಯನ್ನು ವ್ಯಕ್ತಿ ಅನುಭವಿಸುತ್ತಾನೆ. ಮಲವಿಸರ್ಜನೆಗೆ ಹೋದಾಗಲೆಲ್ಲ ನೋವು ಹಾಗೆಯೇ ಉಳಿಯಬಹುದು. ಅದ್ದರಿಂದ ನೋವಿನ ಬಾಧೆ ತಪ್ಪಿಸಿಕೊಳ್ಳಲು ವ್ಯಕ್ತಿ ಮಲವಿಸರ್ಜನೆಯನ್ನು ಹತ್ತಿಕ್ಕಲಾರಂಭಿಸುತ್ತಾನೆ. ಇದರಿಂದ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚುತ್ತದೆ ಮತ್ತು ಮತ್ತೊಂದು ಫಿಶ್ ಉಂಟಾಗಬಹುದು.

ಮೂಲವ್ಯಾಧಿ ಮತ್ತು ಫಿಶ್‌ಗೆ ಪ್ರಮುಖ ಕಾರಣ ಮಲಬದ್ಧತೆ. ಮಲಬದ್ಧತೆಯನ್ನು ಸರಿಪಡಿಸಿಕೊಂಡಲ್ಲಿ ಅರ್ಧ ಚಿಕಿತ್ಸೆ ಮುಗಿದಂತೆಯೇ ಸೈ. ಮಲಬದ್ಧತೆಯ ಬಗ್ಗೆ ಕೆಲವರು ಇದೇನು ಮಹಾ ಎಂದುಬಿಡಬಹುದು. ಅದನ್ನು ಅಲಕ್ಷಿಸುವುದರಿಂದಲೇ ಇತರ ಕಾಯಿಲೆಗಳು ಉಂಟಾಗುತ್ತವೆ. ಕರುಳಿನ ಚಲನೆ (bowel movements) ಸರಿಯಾಗಿದ್ದಲ್ಲಿ ಮಲವಿಸರ್ಜನೆ ಸರಿಯಾಗಿ ಆಗುತ್ತದೆ.

ನಾವು ಆಹಾರದಲ್ಲಿ ಈಗ ಹೆಚ್ಚು ಮೃದು (Soft Food) ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತೇವೆ. ನಾರಿನಂಶ ಹೆಚ್ಚು ಇರುವುದಿಲ್ಲ. ಈಗ ನಾವು ಮಾಡುವ ಕೆಲಸದಲ್ಲಿ ನಮಗೆ ದೈಹಿಕ ಶ್ರಮ ಅತ್ಯಂತ ಕಡಿಮೆ. ಮಾನಸಿಕವಾಗಿ ಒತ್ತಡ ಹೆಚ್ಚು. ನಮ್ಮ ದೈಹಿಕ ಶ್ರಮಕ್ಕೆ ನಾವು ತೆಗೆದುಕೊಳ್ಳುತ್ತಿರುವ ಆಹಾರವೇ ಹೆಚ್ಚು. 8 ಗಂಟೆ ಒಂದೇ ಕಡೆ ಕುಳಿತು ಕೆಲಸ ಮಾಡುತ್ತೇವೆ. ಎರಡು ಗಂಟೆಗೊಮ್ಮೆ 5-10 ನಿಮಿಷ ಓಡಾಡಿ ಕುಳಿತುಕೊಳ್ಳುವುದು ಒಳ್ಳೆಯದು. ಪ್ರತಿದಿನ ನಿಯಮಿತವಾಗಿ ಅರ್ಧಗಂಟೆ ವ್ಯಾಯಾಮ ಇಲ್ಲವೇ ಒಂದು ಗಂಟೆ ನಡಿಗೆ ರೂಢಿಸಿಕೊಳ್ಳಬೇಕು. ಇದರಿಂದ ಉದರದ ಮಾಂಸಖಂಡಗಳಿಗೆ ವ್ಯಾಯಾಮ ಆಗುತ್ತದೆ. ಕರುಳಿನ ಚಲನೆ ಹೆಚ್ಚುತ್ತದೆ.

ಆಹಾರದಲ್ಲಿ ಅಧಿಕ ನಾರಿನಂಶವಿರುವ ಆಹಾರ ಸೇವಿಸಬೇಕು. ಪ್ರತಿದಿನ 30 ಗ್ರಾಂ ನಾರಿನ ಆಹಾರ ಮಲಬದ್ಧತೆಯ ತೊಂದರೆಯಿರುವವರಿಗೆ ಬೇಕೇ ಬೇಕು. ಎಲ್ಲ ಬಗೆಯ ಸೊಪ್ಪುಗಳು, ತರಕಾರಿ, ಹಣ್ಣುಗಳು, ಸೌತೆಕಾಯಿ, ಮೂಲಂಗಿ, ಕ್ಯಾರೆಟ್ ಹೆಚ್ಚು ತಿನ್ನಬೇಕು. ಗೋಧಿ, ರಾಗಿ, ಜೋಳದ ಹಿಟ್ಟನ್ನು ಜರಡಿಯಾಡದೆ ಬಳಸಬೇಕು. ಮೊದಲೇ ತೊಳೆದು ಒಣಗಿಸಬೇಕು. ಪಾಲಿಶ್ ಮಾಡದಿರುವ ಅಕ್ಕಿಯನ್ನು ಬಳಸುವುದು ಉತ್ತಮ.

ಉಪ್ಪಿನ ಸೇವನೆಯಲ್ಲಿ ಮಿತಿ – ಅತಿಯಾಗಿ ಉಪ್ಪು ತಿನ್ನುವುದರಿಂದ ದೇಹದ ರಕ್ತಪರಿಚಲನೆಯಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಇದರಿಂದ ಗುದದ್ವಾರದಲ್ಲಿ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ.

ಅತಿಯಾದ ಕಾಫಿ ಸೇವನೆ, ಅತಿಯಾದ ಮಸಾಲೆ ಪದಾರ್ಥಗಳು, ಆಲ್ಕೊಹಾಲ್, ತಂಪು ಪಾನೀಯಗಳು, ಸಿಗರೇಟು ಸೇವನೆ, ಪಾನ್ ಪರಾಗ್, ತಂಬಾಕು ಜಗಿಯುವುದು ಇವೆಲ್ಲವು ಕೂಡ ಮೂಲವ್ಯಾಧಿಯನ್ನು ಹೆಚ್ಚು ಮಾಡುತ್ತವೆ.

ತೂಕ ತಗ್ಗಿಸಿಕೊಳ್ಳಿ – ದೇಹದ ಭಾರ ಸೊಂಟ ಮತ್ತು ಕಾಲುಗಳ ಮೇಲೆ ಬೀಳುವುದರಿಂದ ತೊಂದರೆ ಹೆಚ್ಚಾಗುತ್ತದೆಯಾದ್ದರಿಂದ ಆಹಾರ ಸೇವನೆಯಲ್ಲಿ ಮಿತಿ ಹಾಗೂ ವ್ಯಾಯಾಮ ಮಾಡಿ ತೂಕ ತಗ್ಗಿಸಿಕೊಳ್ಳಬೇಕು.

ಮಲಮೂತ್ರಗಳನ್ನು ತಡೆಯುವುದು – ಮಲಮೂತ್ರಗಳನ್ನು ತಡೆಯ ಬಾರದು. ತಡೆಯುವುದರಿಂದ ಮೂಲವ್ಯಾಧಿ ಉಂಟಾಗುತ್ತದೆ. ಅನೇಕ ಮಹಿಳೆಯರು ಬೆಳಗಿನ ಸಮಯ ಮಲವಿಸರ್ಜನೆ ಮಾಡಬೇಕೆನಿಸಿದಾಗ ಮಾಡದೇ ಮನೆಗೆಲಸದ ಮಧ್ಯೆ ತಡೆದು ನಂತರ ವಿಸರ್ಜಿಸಲು ಹೋಗುವುದರಿಂದ ಮೂಲವ್ಯಾಧಿ ಉಂಟಾಗುತ್ತದೆ.

ಗರ್ಭಿಣಿಯರಲ್ಲಿ – ಗರ್ಭಿಣಿಯರು ಮೂಲವ್ಯಾಧಿ ತೊಂದರೆಗೊಳಗಾಗು ವುದು ಅತ್ಯಂತ ಸಾಮಾನ್ಯ ಸಂಗತಿ. ಗರ್ಭ ಧರಿಸಿದಾಗ ಉದರದ ಮಾಂಸಖಂಡಗಳು ಹಿಗ್ಗುವುದರಿಂದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆಯಾದ್ದರಿಂದ ಮಲಬದ್ಧತೆ ಉಂಟಾಗುತ್ತದೆ. ಆಗ ಸೇವನೆ ಮಾಡುವ ಕಬ್ಬಿಣಾಂಶದ ಮಾತ್ರೆಗಳೂ ಮಲಬದ್ಧತೆ ಯನ್ನುಂಟುಮಾಡುತ್ತವೆ.
ಪದೇ ಪದೇ ಗರ್ಭಪಾತವಾಗುತ್ತಿದ್ದರೂ ಮೂಲವ್ಯಾಧಿಯ ತೊಂದರೆ ಕಾಣಿಸಿಕೊಳ್ಳಬಹುದು.

ಹೆರಿಗೆಯ ಸಮಯದಲ್ಲಿ – ಹೆರಿಗೆ ನೋವು ಬರುವಾಗ ಗುದದ್ವಾರದ ಮೇಲೆ ಒತ್ತಡ ಬೀಳುವುದರಿಂದ ಫಿಶ್ ಉಂಟಾಗಬಹುದು.
ಅತಿಯಾದ ಶ್ರಮ – ಅತಿಯಾದ ಭಾರ ಹೊರುವವರಲ್ಲಿಯೂ ಇದು ಸಾಮಾನ್ಯ.

ಮಾನಸಿಕ ಒತ್ತಡ – ಅಧಿಕವಾಗಿದ್ದಲ್ಲಿಯೂ ಮಲಬದ್ಧತೆಯ ಸಮಸ್ಯೆ ಕಾಡಬಹುದು. ನಾವು ಟೆನ್ಶನ್ ಮಾಡಿಕೊಂಡಾಗ ಮತ್ತು ಹೆದರಿಕೊಂಡಾಗ ನಮ್ಮ ಬಾಯಿ ಒಣಗುತ್ತದೆ ಮತ್ತು ಎದೆಬಡಿತ ಹೆಚ್ಚುತ್ತದೆ. ಆಗ ಮಲವಿಸರ್ಜನೆ ಕಷ್ಟವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯೋಗ, ಪ್ರಾಣಾಯಾಮ ಸಹಾಯ ಮಾಡುತ್ತದೆ.

ನಗುವಿನಿಂದ ಮಲಬದ್ಧತೆ ದೂರವಾಗುತ್ತದೆ – ಇದು ಆಶ್ಚರ್ಯವೆನಿಸಿದರೂ ಸತ್ಯ. ನಾವು ನಗುವುದರಿಂದ ಉದರದ ಮಾಂಸಖಂಡಗಳು ಚಲನಶೀಲವಾಗುತ್ತವೆ. ಹೆಚ್ಚು ಹೊತ್ತು ನಕ್ಕಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕುಬಿಟ್ಟೆವು ಅನ್ನುತ್ತೇವೆ. ಅದು ಒಂದು ಕಡೆ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತೊಂದು ಬಗೆಯಲ್ಲಿ ಆಹಾರ ಜೀರ್ಣಿಸಲು ಸಹಾಯ ಮಾಡುತ್ತದೆ. ಕರುಳಿಗೆ ಒಂದು ರೀತಿಯ ಮಸಾಜ್ ಆದ ಹಾಗಾಗುತ್ತದೆ.

ಕುಡಿಯುವ ನೀರು – ದಿನಕ್ಕೆ 2 ರಿಂದ 3 ಲೀಟ್ ನೀರು ಕುಡಿಯಬೇಕು. ಆಹಾರ ಸುಲಭವಾಗಿ ಜೀರ್ಣವಾಗುವುದು. ಕಾಯಿಸಿ ಆರಿಸಿದ ನೀರು ಕುಡಿಯುವುದು ಒಳ್ಳೆಯದು. ಮಲಗುವ ಮುಂಚೆ ಒಂದು ಲೋಟ ಬಿಸಿ ನೀರು ಕುಡಿಯಬೇಕು.

ಮೂಲವ್ಯಾಧಿ ಮತ್ತು ಫಿಶ್ ಇರುವವರಲ್ಲಿ ಆಗಾಗ ನವೆ ಆಗುತ್ತಿರುತ್ತದೆ. ನವೆಯಾಗುತ್ತದೆಯೆಂದು ಕೆರೆದುಕೊಳ್ಳಬಾರದು. ಉಗುರು ತಾಗುವುದರಿಂದ ಅಲ್ಲಿನ ಮೃದು ಚರ್ಮ ಬಿರುಕುಬಿಡಬಹುದು. ಗುದದ್ವಾರದ ಸ್ವಚ್ಛತೆ ಬಹಳ ಮುಖ್ಯ. ನವೆಯೆನಿಸಿದಾಗ ಬಿಸಿನೀರನ್ನು ಹಾಕಿಕೊಳ್ಳುವುದರಿಂದ ನವೆ ಕಡಿಮೆಯಾಗುತ್ತದೆ.

ಮೂಲವ್ಯಾಧಿ ಮತ್ತು ಫಿಶ್ ಇರುವವರಿಗೆಲ್ಲ ಸಿಟ್ಜಬಾತ್ ತುಂಬ ಒಳ್ಳೆಯದು. ಒಂದು ಅಗಲವಾದ ಟಬ್‌ನಲ್ಲಿ ಬಿಸಿನೀರು ಹಾಕಿ ಕುಳಿತುಕೊಳ್ಳಬೇಕು. ಹೀಗೆ ಕುಳಿತುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ. ರಕ್ತನಾಳಗಳಲ್ಲಿ ರಕ್ತ ಹರಿಯುವಿಕೆ ಹೆಚ್ಚಾಗಿ ಸಲೀಸಾಗುತ್ತದೆ.

ಮಹಿಳೆಯರು ಗಮನಿಸಬೇಕಾದ ಅಂಶ – ಮಹಿಳೆಯರಲ್ಲಿ ಮೂತ್ರದ್ವಾರ, ಜನನಾಂಗ ಮತ್ತು ಗುದದ್ವಾರ ಮೂರು ಒಂದೇ ಕಡೆ ಇರುವುದರಿಂದ ಸ್ವಚ್ಛತೆ ಮತ್ತು ಎಚ್ಚರಿಕೆ ಬಹಳ ಮುಖ್ಯ. ಪ್ರತಿಬಾರಿ ಮೂತ್ರ ಮತ್ತು ಮಲವಿಸರ್ಜನೆ ಸಮಯದಲ್ಲಿ ಮೂತ್ರದ್ವಾರ, ಜನನಾಂಗ ಸ್ವಚ್ಛಗೊಳಿಸಿಕೊಂಡು ನಂತರ ಗುದದ್ವಾರ ಸ್ವಚ್ಛಗೊಳಿಸಿಕೊಳ್ಳಬೇಕು. ಚಿಕ್ಕಮಕ್ಕಳಿರುವಾಗಲೇ ತಾಯಂದಿರು ಈ ರೂಢಿ ಕಲಿಸಬೇಕು. ಅನೇಕರು ತಪ್ಪು ಮಾಡುತ್ತಾರೆ. ಗುದದ್ವಾರ ಸ್ವಚ್ಛಗೊಳಿಸಿಕೊಂಡ ನಂತರವೇ ಜನನಾಂಗ, ಮೂತ್ರದ್ವಾರ ಸ್ವಚ್ಛಗೊಳಿಸುತ್ತಾರೆ. ಒಳ ಉಡುಪುಗಳನ್ನು ಬಿಸಿ ನೀರಿನಲ್ಲಿ ತೊಳೆದು ಬಿಸಿಲಿಗೆ ಒಣಗಿಸಬೇಕು. ಬಿಸಿಲಿಲ್ಲದಿದ್ದಾಗ ಇಸ್ತ್ರಿ ಮಾಡಬೇಕು.

ಮನೆ ಮದ್ದು :

* ಲೋಳೆರಸದ ತಿರುಳನ್ನು ಒಂದು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು.

* ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಇಡೀ ಸಸ್ಯವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚೆ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು.

* ಹಾಲಿನಲ್ಲಿ ಒಣ ಖರ್ಜೂರ / ಉತ್ತುತ್ತಿ ರಾತ್ರಿ ಹೊತ್ತು ನೆನೆಯಿಸಿಟ್ಟು ಬೆಳಿಗ್ಗೆ ತಿನ್ನಬೇಕು ಮತ್ತು ಆ ಹಾಲನ್ನು ಕುಡಿಯಬೇಕು.

* 50 ಮಿಲಿ ಈರುಳ್ಳಿ ರಸವನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.

* ಹೊನಗೊನೆ ಸೊಪ್ಪಿನ ರಸ 20 ಮಿಲಿ, ಮೂಲಂಗಿ ಸೊಪ್ಪಿನ ರಸ 20 ಮಿಲಿ ಮತ್ತು ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಹೊತ್ತು ಎರಡು- ಮೂರು ವಾರ ಕುಡಿಯಬೇಕು.

* ಸುವರ್ಣ ಗೆಡ್ಡೆಯನ್ನು ಹೋಳು ಮಾಡಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಈ ಪುಡಿಯನ್ನು 5 ಗ್ರಾಂನಷ್ಟನ್ನು ತುಪ್ಪ, ಜೇನುತುಪ್ಪ, ಬೆಲ್ಲ ಯಾವುದಾದರೊಂದರಲ್ಲಿ ಬೆರೆಸಿ ತಿನ್ನಬೇಕು.

* ತುಳಸೀ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

* ಅಳಲೆಕಾಯಿ ಪುಡಿಯನ್ನು ಬೆಲ್ಲ ಸೇರಿಸಿ ತಿನ್ನಬೇಕು.

* 25 ಮಿಲಿ ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.

* ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.

* ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು.

* ಸೌತೆಕಾಯಿ ರಸ ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.

* 20 ಗ್ರಾಂ ಕೊತ್ತಂಬರಿ ಬೀಜ (ಧನಿಯ)ವನ್ನು ಪುಡಿ ಮಾಡಿ 4 ಲೋಟ ನೀರು ಹಾಕಿ ಕಷಾಯಕ್ಕಿಟ್ಟು ಒಂದು ಲೋಟಕ್ಕಿಳಿಸಿ ಶೋಧಿಸಿ ಹಾಲು, ಸಕ್ಕರೆ ಸೇರಿಸಿ ಪ್ರತಿದಿನ ಎರಡು ಹೊತ್ತು ಸೇವಿಸಬೇಕು.

*ಆಗ ತಾನೇ ಕರೆದ ಹಾಲಿಗೆ ಒಂದು ನಿಂಬೆ ಹಣ್ಣಿನ ರಸ ಸೇರಿಸಿ ದಿನವೂ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.

* ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ.


*ಲೋಳೆಸರದ ರಸವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸಿ. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. 

*ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪೌಡರ ದಿನಕ್ಕೆ ಎರಡು ಚಮಚೆ ಮುಂಜಾನೆ ಸಂಜೆ ಜೇನಿನೊಡನೆ ಸೇವಿಸಿ.


*ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೀರಲ ಹಣ್ಣು ಬಹಳ ಒಳ್ಳೆಯದು.


* ಮೂಲಂಗಿಯನ್ನು ಹೆರೆದು ಮೊಸರಲ್ಲಿ ಕಲಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟರೆ ಬಹಳ ರುಚಿಕರವಾಗಿರುತ್ತದೆ. ಅದು ಮೂಲವ್ಯಾಧಿಗೆ ಬಹಳ ಒಳ್ಳೆಯದು.


*ಹಾಲಿನಲ್ಲಿ ಬೆರಸಿ ಮೂಲಂಗಿಯನ್ನು ಅರೆದು ಪೇಸ್ಟ ಮಾಡಿ ಗುದದ್ವಾರದ ಸುತ್ತಲೂ ಹಚ್ಚಿದರೆ ಬಾವು ಕಡಿಮೆ ಆಗುತ್ತದೆ.


*ಎಂಟು ಗ್ಲಾಸು ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ.


*ಎರಡು ತೊಲೆಯಷ್ಟು ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು.


*ಪ್ರತಿದಿನ ಬೆಳಗ್ಗೆ ಎರಡೂವರೆ ತೊಲೆಯಷ್ಟು ಮೂಲಂಗಿ ರಸವನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದು. ರಕ್ತಸ್ರಾವ ಬರಿಸುವ ಮೊಳಕೆಗಳ ನಿವಾರಣೆಗೆ  ಡೋಣಿ ಸ್ನಾನ (ಟಬ್-ಬಾಥ್), ಖರ್ಜೂರದ ಬೀಜಗಳನ್ನು ಕುಟ್ಟಿ ಒಣಗಿಸಿ ಕೆಂಡದ ಮೇಲೆಹಾಕಿ ಅದರ ಹೊಗೆಯನ್ನು ಮೂಲವ್ಯಾಧಿಯ ಮೊಳಕೆಗಳಿಗೆ ತಾಗುವಂತೆ ಮಾಡಬೇಕು.

*ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು. 


*ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು.


*ಸುವರ್ಣ ಗೆಡ್ಡೆಯನ್ನು ಸಣ್ಣದಾಗಿ ಕತ್ತರಿಸಿ ಒಣಗಿಸಿ ಪುಡಿಮಾಡಬೇಕು . ಎರಡು ಚಮಚ ಪುಡಿಗೆ ಎರಡು ಚಮಚ ಸಕ್ಕರೆ ಬೆರೆಸಿ ಬೆಳಗ್ಗೆ - ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

*ಬಿಲ್ವ ಪತ್ರೆಯ ರಸವನ್ನು ನಿತ್ಯ ಬೆಳಗ್ಗೆ ೫-೬ ಚಮಚ ಸೇವಿಸಬೇಕು.

*ಚನ್ನಾಗಿ ಹಣ್ಣಾದ ಬಾಳೆಹಣ್ಣಿಗೆ ಏಲಕ್ಕಿಯನ್ನು ಹುದುಗಿಸಿಟ್ಟು ತಿನ್ನಬೇಕು.


*ಎಳೆ ಮೂಲಂಗಿಯನ್ನು ನಿತ್ಯ ಸೇವಿಸಿದರೆ ಒಳ್ಳೆಯದು. ೬ ಚಮಚ ಮೂಲಂಗಿ ರಸವನ್ನು ೬ ಚಮಚ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.

*೨ ಚಮಚ ಬಿಳಿ ಎಳ್ಳು , ೨ ಚಮಚ ಕಲ್ಲು ಸಕ್ಕರೆ , ೨ ಚಮಚ ಹಸುವಿನ ಬೆಣ್ಣೆಯನ್ನು ಅರೆದು ನಿತ್ಯ ಬೆಳಗ್ಗೆ ಸೇವಿಸಬೇಕು.

*ರಾತ್ರಿ ೧ ಲೋಟ ನೀರಿಗೆ ೬ ಚಮಚ ಗರಿಕೆಯ ರಸ ಹಾಕಿ ಇಡಬೇಕು. ಮರುದಿನ ಬೆಳಗ್ಗೆ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ರಕ್ತ ಬೀಳುವುದು ನಿಲ್ಲುತ್ತದೆ. ಇದನ್ನು ೧೫ ರಿಂದ ೩೦ ದಿನಗಳ ಕಾಲ ಕುಡಿಯಬೇಕು. ಹೀಗೆ ಮಾಡಿದರೆ ದೇಹ ತಂಪಾಗುತ್ತದೆ.

*ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ಶಮನವಾಗುತ್ತದೆ.

*ಎಕ್ಕದ ಎಲೆ ಹಾಗೂ ನುಗ್ಗೆ ಸೊಪ್ಪನ್ನು ಅರೆದು ಮೊಳಕೆಗೆ ಹಚ್ಚಿದರೆ ಗುಣವಾಗುತ್ತದೆ.

*ನುಗ್ಗೆ ಸೊಪ್ಪು ಮತ್ತು ಮೂಲಂಗಿ ಸೊಪ್ಪನ್ನು ಅರೆದು ಹಚ್ಚಿದರೆ ಮೊಳಕೆಯ ನೋವ್ವು ಗುಣವಾಗುತ್ತದೆ.

*೪-೫ ಚಮಚ ಈಸಬ್ಗೋಲನ್ನು (ತಂಪಿನ ಬೀಜ) ಹುಡಿಮಾಡಬೇಕು. ಇದನ್ನು ತಣ್ಣೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಸಿಟ್ಟು ಊಟದ ೧ ಗಂಟೆ ಮೊದಲು ಕುಡಿದರೆ ಮೊಳಕೆ ಯುಳ್ಳ  ಮೂಲವ್ಯಾಧಿ ಹಾಗೂ ರಕ್ತ ಮೂಲವ್ಯಾದಿ ಎರಡೂ ಶಮನವಾಗುತ್ತವೆ. 

* ಲೋಳೆರಸದ ತಿರುಳನ್ನು ಒಂದು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. ನಂತರ ಮಲುಗುವ ಮುನ್ನ ಒಂದು ಚಮಚ ಏಲಕ್ಕಿ ಮತ್ತು ಬಾಳೆ ಹಣ್ಣು ತಿನ್ನಬೇಕು. ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಹಚ್ಚಿದರೆ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ. ಇದರಿಂದ ನೋವು ಉಂಟಾಗುವುದಿಲ್ಲ.

* ಹಾಲಿನಲ್ಲಿ ಒಣ ಖರ್ಜೂರ ಅಥವಾ ಉತ್ತುತ್ತೆಯನ್ನು ರಾತ್ರಿಯಲ್ಲಿ ನೆನೆಯಿಟ್ಟು ಬೆಳಗ್ಗೆ ತಿನ್ನಬೇಕು.

* ಒಂದು ಈರುಳ್ಳಿಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.

* ಮೂಲಂಗಿ ಸೊಪ್ಪಿನ ರಸಕ್ಕೆ ಚಿಟಿಕೆಯಷ್ಟು ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಬಾರಿಯಂತೆ ಎರಡರಿಂದ ಮೂರು ವಾರ ಕುಡಿದರೆ ಮೂಲವ್ಯಾಧಿ ಗುಣವಾಗುವುದು. ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು ಕೂಡ ಒಳ್ಳೆಯದು.

* ಸುವರ್ಣ ಗೆಡ್ಡೆಯನ್ನು ಸಿಪ್ಪೆ ತೆಗೆದು ಒಣಗಿಸಿ ಕುಟ್ಟಿ ಪುಡಿ ಮಾಡಿ, ಆ ಪುಡಿಯನ್ನು ಪ್ರತಿ ದಿನ ಒಂದು ಚಮಚದಂತೆ ಜೇನುತುಪ್ಪಬೆರೆಸಿ ತಿನ್ನುವುದು ಒಳ್ಳೆಯದು. 

* ಹುಣಸೆ ಹಣ್ಣಿನ ಮರದ ಚಿಗುರು ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು.

* ತುಳಸಿ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

* ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.

* ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು. 

* ಸೌತೆಕಾಯಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು. 

* 4 ಚಮಚ ಕೊತ್ತಂಬರಿಯನ್ನು 4 ಲೋಟ ನೀರು ಹಾಕಿ ಕುದಿಸಿ ಹಾಲು ಮತ್ತು ಸಕ್ಕರೆ ಹಾಕಿ ಟೀ ಬದಲು ಕುಡಿಯುವುದು ಒಳ್ಳೆಯದು. ಆಗ ತಾನೇ ಕರೆದ ಹಾಲಿಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿ ಕುಡಿದರೆ ಮೂಲವ್ಯಾಧಿ ಗುಣಮುಖವಾಗುವುದು. 

* ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ. 

* ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪುಡಿಯನ್ನು ದಿನಕ್ಕೆ ಎರಡು ಚಮಚದಂತೆ ಮುಂಜಾನೆ ಮತ್ತು ಸಂಜೆ ಜೇನಿನೊಡನೆ ಸೇವಿಸಿ. 

* ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೇರಳೆ ಹಣ್ಣು ಬಹಳ ಒಳ್ಳೆಯದು. ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಮೂಲವ್ಯಾಧಿ ಗುಣವಾಗುವುದು. 

* ಮೂಲಂಗಿಯನ್ನು ತುರಿದು ಮೊಸರಿನಲ್ಲಿ ಕಲೆಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟು, ಈ ಪದಾರ್ಥವನ್ನು ಅನ್ನದ ಜೊತೆ ತಿನ್ನುವುದು ಒಳ್ಳೆಯದು. ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಅದನ್ನು ಗುದದ್ವಾರದ ಸುತ್ತಲೂ ಹಚ್ಚಿದರೆ ಊತ ಕಡಿಮೆ ಆಗುತ್ತದೆ. 

* ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು. 

* ತ್ರಿಫಲಾ ಕಷಾಯ ಮೂಲವ್ಯಾಧಿ ಗುಣಪಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ. 

* ಎಂಟು ಲೋಟ ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ. 

* ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು ಕೂಡ ಮೂಲವ್ಯಾಧಿಗೆ ಪರಿಣಾಮಕಾರಿಯಾದ ಔಷಧಿಯಾಗಿದೆ.





ಲೇಪನ – ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಲೇಪಿಸಬೇಕು. ತ್ರಿಫಲಾ ಕಷಾಯದಿಂದ ತೊಳೆದುಕೊಳ್ಳಬೇಕು.
ಕ್ಷಾರಸೂತ್ರ – ಔಷಧೀಯ ದ್ರವ್ಯದಲ್ಲಿ ದಾರಗಳನ್ನು ಅದ್ದಿ ತೆಗೆದು ಒಣಗಿಸಿರುತ್ತಾರೆ. ಅದನ್ನು ಕಟ್ಟಿ ನಂತರ ಕತ್ತರಿಸಿ ತೆಗೆಯುತ್ತಾರೆ. ಪರಿಣಿತ ತಜ್ಞ ವೈದ್ಯರ ಬಳಿ ಈ ಚಿಕಿತ್ಸೆ ತೆಗೆದುಕೊಳ್ಳಬೇಕು. ಔಷಧಿ ಚಿಕಿತ್ಸೆಯಿಂದ ಕಡಿಮೆಯಾಗದಿದ್ದಲ್ಲಿ ಕ್ಷಾರಸೂತ್ರ ಚಿಕಿತ್ಸೆ ಉತ್ತಮವಾದುದು.

ಯಾವ ಬಗೆಯ ಆಹಾರ ಒಳ್ಳೆಯದು ?
ಪಥ್ಯ – ಹಳೆಯ ಅಕ್ಕಿಯ ಅನ್ನ, ಹೆಸರು ಬೇಳೆ, ತೊಗರಿಬೇಳೆ ಕಟ್ಟು, ಮಜ್ಜಿಗೆ, ಹಾಲು, ತುಪ್ಪ, ಬೆಣ್ಣೆ ಸೇವಿಸಬಹುದು. ಮೂಲಂಗಿ, ಪಡವಲಕಾಯಿ, ಬಸಳೆ, ಹೊನಗೊನ್ನೆ ಸೊಪ್ಪು, ಜೀರಿಗೆ, ಹಿಂಗು, ಬಾಳೆಹಣ್ಣು ಸೇವನೆ ಒಳ್ಳೆಯದು. ಬಾಳೆಹಣ್ಣನ್ನು ಬೆಲ್ಲ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು. ಬಾಳೆಯ ಹೂವನ್ನು ಅರೆದು ರಸ ತೆಗೆದು ಮಜ್ಜಿಗೆ ಬೆರೆಸಿ ಕುಡಿಯಬೇಕು. ಬಾಳೆದಿಂಡನ್ನು ರಸ ತೆಗೆದು ಕುಡಿಯಬೇಕು.

ನೆಲ್ಲಿಕಾಯಿ ಸಂಡಿಗೆ – ನೆಲ್ಲಿಕಾಯಿ ಸಿಗುವ ಕಾಲದಲ್ಲಿ ಸಂಗ್ರಹಿಸಿಟ್ಟು ಕೊಳ್ಳಬೇಕು. ನೆಲ್ಲಿಕಾಯಿಗಳನ್ನು ಕುಟ್ಟಿ ಅದರ ಬೀಜ ತೆಗೆಯಬೇಕು. ಇದನ್ನು ನೆನೆಸಿದ ಉದ್ದಿನಬೇಳೆಯೊಂದಿಗೆ ತರಿತರಿಯಾಗಿ ರುಬ್ಬಿ ಉಪ್ಪು, ಖಾರ, ಶುಂಠಿ ಬೆರೆಸಿ ಬಟ್ಟೆಯ ಮೇಲೆ ಸಂಡಿಗೆ ಹಾಕಬೇಕು. ಪ್ರತಿದಿನ ಇದನ್ನು ಊಟದೊಂದಿಗೆ ಎಣ್ಣೆಯಲ್ಲಿ ಕರಿಯದೇ ಒಣಸಂಡಿಗೆಯನ್ನೇ ಸೇವಿಸಬೇಕು. ಊಟದಲ್ಲಿ ನಂಚಿಕೊಂಡು ತಿಂದರೆ ಚೆನ್ನಾಗಿರುತ್ತದೆ.
ಇದನ್ನು ಪ್ರತಿದಿನ ತಿನ್ನುವುದರಿಂದ ಮಲವಿಸರ್ಜನೆ ಸಲೀಸಾಗಿ ಆಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತಸ್ರಾವ ನಿಂತು ಮೂಲವ್ಯಾಧಿಯ ತೊಂದರೆಯೂ ಕಡಿಮೆಯಾಗುತ್ತದೆ. ಉಷ್ಣತೆ ತಗ್ಗುತ್ತದೆ. ಹೊಟ್ಟೆಯಲ್ಲಿ ಉರಿ, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.

ಕರಿಬೇವಿನ ಚಟ್ನಿಪುಡಿ – 500 ಗ್ರಾಂ ಕರಿಬೇವು, 250 ಗ್ರಾಂ ಹುರಿಗಡಲೆ, 10 ಒಣ ಮೆಣಸಿನಕಾಯಿ, ಚಿಟಿಕೆ ಹಿಂಗು.
ನೆರಳಿನಲ್ಲಿ ಒಣಗಿಸಿದ ಕರಿಬೇವನ್ನು, ಸ್ವಲ್ಪ ಎಣ್ಣೆಯಲ್ಲಿ ಮೆಣಸಿನಕಾಯಿ ಮತ್ತು ಹಿಂಗಿನೊಂದಿಗೆ ಹುರಿದು ಹುರಿಗಡಲೆಯೊಂದಿಗೆ ಸೇರಿಸಿ ಪುಡಿ ಮಾಡಿ ಇಟ್ಟುಕೊಂಡು ಅನ್ನ, ಚಪಾತಿ, ರೊಟ್ಟಿ, ದೋಸೆ ಎಲ್ಲದಕ್ಕೂ ಬಳಸಬಹುದು.

ಕರಿಬೇವಿನ ಚಿತ್ರಾನ್ನ – ಅಕ್ಕಿ 2 ಕ್, ಕರಿಬೇವು 20 ಎಲೆ, ಒಂದು ಚಮಚೆ ಕಾಳು ಮೆಣಸು, ಜೀರಿಗೆ ಒಂದು ಚಮಚೆ, ಒಣಕೊಬ್ಬರಿ ತುರಿ ಒಂದು ಹಿಡಿ, ತುಪ್ಪ 5 ಚಮಚೆ, ಉಪ್ಪು ರುಚಿಕೆ ತಕ್ಕಷ್ಟು.
ಉದುರಾಗಿ ಅನ್ನ ತಯಾರಿಸಿಟ್ಟುಕೊಳ್ಳಬೇಕು. ಕರಿಬೇವನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳಬೇಕು. ಜೀರಿಗೆ, ಮೆಣಸನ್ನು ಹುರಿದು ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ಕರಿಬೇವನ್ನು ಬಾಣಲೆಯಲ್ಲಿ ಬಾಡಿಸಬೇಕು. ಕೈಯಿಂದ ಪುಡಿ ಮಾಡಿಕೊಳ್ಳಬೇಕು. ತುಪ್ಪದ ಒಗ್ಗರಣೆ ಹಾಕಿ ಜೀರಿಗೆ, ಮೆಣಸಿನ ತರಿ, ಕರಿಬೇವಿನ ಪುಡಿ ಹಾಕಿ ಸೌಟಿನಿಂದ ಕೈಯಾಡಿಸಬೇಕು. ನಂತರ ಇದಕ್ಕೆ ಅನ್ನ ಹಾಕಿ ಕೊಬ್ಬರಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹದವಾಗಿ ಕಲೆಸಿ ಮುಚ್ಚಿಡಬೇಕು. ಮೂಲವ್ಯಾಧಿಯವರಿಗೆ ಮಾತ್ರವಲ್ಲ ಅಜೀರ್ಣ ಮತ್ತು ಜ್ವರ ಬಿಟ್ಟ ನಂತರವೂ ಇದು ಉತ್ತಮ ಆಹಾರ.

ಕೊತ್ತಂಬರಿ ಚಟ್ನಿ – ಕೊತ್ತಂಬರಿ ಸೊಪ್ಪು 2 ಕಟ್ಟು, ಒಣ ಮೆಣಸಿನಕಾಯಿ-2, ಕಡಲೆಬೇಳೆ 2 ಚಮಚೆ, ಉದ್ದಿನಬೇಳೆ 2 ಚಮಚೆ, ಜೀರಿಗೆ 2 ಚಮಚೆ, ಹುಣಸೆ ರಸ ಸ್ವಲ್ಪ, ಒಣ ಕೊಬ್ಬರಿ ತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಬೇಕೆನಿಸಿದಲ್ಲಿ ಬೆಲ್ಲ, ಎಣ್ಣೆ ಸ್ವಲ್ಪ.
ಕೊತ್ತಂಬರಿ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಬಿಡಿಸಿಟ್ಟುಕೊಳ್ಳಬೇಕು. ನಂತರ ಬಾಣಲಿಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಳ್ಳಬೇಕು. ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಒಣ ಮೆಣಸಿನಕಾಯಿ ಒಗ್ಗರಣೆಗೆ ಹಾಕಿಕೊಳ್ಳಬೇಕು. ಅದಕ್ಕೆ ಹುಣಸೆ ರಸ, ಉಪ್ಪು, ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ಚಟ್ನಿ ತಯಾರಿಸಿಕೊಳ್ಳಬೇಕು. ಅದಕ್ಕೆ ನೀರು ಹಾಕದೇ ರುಬ್ಬಿಕೊಳ್ಳಬೇಕು. ಈ ಚಟ್ನಿಯನ್ನು ಒಂದು ವಾರ ಕಾಲ ಇಟ್ಟರೂ ಹಾಳಾಗುವುದಿಲ್ಲ. ಅನ್ನ, ರೊಟ್ಟಿ, ಚಪಾತಿ ಜೊತೆಗೆ ತಿನ್ನಲು ರುಚಿ.

ಗುಲ್ಕಂದ್ – ಗುಲಾಬಿ ದಳಗಳು 1 ಭಾಗ, ಜೇನುತುಪ್ಪ ಅರ್ಧ ಭಾಗ, ಕಲ್ಲುಸಕ್ಕರೆ ಪುಡಿ ಅರ್ಧ ಭಾಗ ಅಥವಾ ಜೇನುತುಪ್ಪ, ಗುಲಾಬಿ ಸಮಭಾಗ ತೆಗೆದುಕೊಳ್ಳಬೇಕು. ಉತ್ತಮ ಗುಣಮಟ್ಟದ ಗುಲಾಬಿದಳಗಳನ್ನು ಆಯ್ದು ದಳಗಳನ್ನು ಬಿಡಿಸಿಟ್ಟುಕೊಳ್ಳಬೇಕು. ನಂತರ ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತೊಳೆದ ನಂತರ ಆರಲು ಬಿಡಬೇಕು. ತೇವಾಂಶ ಇಲ್ಲದಂತೆ ಒಣಗಿರಬೇಕು. ಒಂದು ಪಿಂಗಾಣಿ ಜಾಡಿಯಲ್ಲಿ ಕಲ್ಲು ಸಕ್ಕರೆ ಪುಡಿ ಉದುರಿಸಿ ಗುಲಾಬಿ ಹರಡಬೇಕು. ನಂತರ ಜೇನುತುಪ್ಪ ಹಾಕಬೇಕು. ಮತ್ತೆ ಕಲ್ಲು ಸಕ್ಕರೆ ಪುಡಿ, ಗುಲಾಬಿ, ಜೇನುತುಪ್ಪ ಹಾಕಬೇಕು. ಇದೇ ರೀತಿ ಹತ್ತು ಪದರ ಹರಡಬೇಕು. ನಂತರ ಜಾಡಿಯನ್ನು ಸ್ವಚ್ಛವಾದ ಬಿಳಿಯ ಬಟ್ಟೆಯಲ್ಲಿ ಮುಚ್ಚಬೇಕು. ತೇವಾಂಶ ಒಳಹೋಗದಂತೆ ಗಟ್ಟಿಯಾಗಿ ಮುಚ್ಚಬೇಕು. ನಂತರ ಈ ಜಾಡಿಯನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಗಲು ಹೊತ್ತು ಬಿಸಿಲಿನಲ್ಲಿ ಇಟ್ಟು ಸೂರ್ಯಾಸ್ತದ ನಂತರ ಮನೆಯೊಳಗಡೆ ತೆಗೆದಿಡಬೇಕು. ಇದೇ ರೀತಿ 3 ವಾರ ಅಂದರೆ 21 ದಿನಗಳು ಮಾಡಬೇಕು. ನಂತರ ಮೇಲಿನ ಬಟ್ಟೆ ತೆಗೆಯಬೇಕು. ರುಚಿಕರವಾದ ಗುಲ್ಕಂದ್‌ ಸಿದ್ಧವಾಗುತ್ತದೆ. ಗುಲಾಬಿದಳಗಳು ಜೇನು ಮತ್ತು ಕಲ್ಲು ಸಕ್ಕರೆಯಲ್ಲಿ ಬೆರೆತು, ಕಲೆತು ಮೃದುವಾಗಿರುತ್ತವೆ. ಏಲಕ್ಕಿ ಪುಡಿ ಬೆರೆಸಿದಲ್ಲಿ ಘಮ ಘಮ ಪರಿಮಳ ಬರುತ್ತದೆ. ಮೂಲವ್ಯಾಧಿಯಲ್ಲಿ ರಕ್ತ ಬೀಳುತ್ತಿದ್ದಲ್ಲಿ ಇದು ಅತ್ಯುತ್ತಮ ಆಹಾರ ಮತ್ತು ಔಷಧಿಯಾಗಿ ಕೆಲಸ ಮಾಡುತ್ತವೆ. ಒಂದು ಚಮಚೆ ಗುಲ್ಕಂ್ ತಿಂದು ಹಾಲು ಕುಡಿಯಬೇಕು. ಬಾಳೆಹಣ್ಣಿನೊಂದಿಗೆ ಬೆರೆಸಿ ತಿನ್ನಬಹುದು.
ಪಪ್ಪಾಯ ಹಣ್ಣಿನ ಸಲಾಡ್- ಪಪ್ಪಾಯ ಹಣ್ಣನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಹಾಲು, ಜೇನು ಬೆರೆಸಿ ತಿಂದಲ್ಲಿ ಒಳ್ಳೆಯದು. ಪಪ್ಪಾಯದೊಂದಿಗೆ ಬಾಳೆಹಣ್ಣು, ಕರಬೂಜ ಹಣ್ಣುಗಳನ್ನು ಬೆರೆಸಿಕೊಳ್ಳಬಹುದು.

ಪುಂಡಿ ಸೊಪ್ಪಿನ ಚಟ್ನಿ – 2 ರಿಂದ 3 ಕಟ್ಟು ಪುಂಡಿ ಸೊಪ್ಪು, ಒಣಮೆಣಸಿನಕಾಯಿ 6, ಉದ್ದಿನ ಬೇಳೆ 4 ಚಮಚೆ, ಮೆಂತ್ಯ 2 ಚಮಚೆ, ಜೀರಿಗೆ ಒಂದು ಚಮಚೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಸ್ವಲ್ಪ.
ಪುಂಡಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಚೆನ್ನಾಗಿ ಒಣಗಿಸಿದ ಮೇಲೆ ಎಣ್ಣೆ ಹಾಕಿ ಹುರಿಯಬೇಕು. ನಂತರ ಕಾಯಿ, ಉದ್ದಿನಬೇಳೆ ಪುಡಿ, ಮೆಂತ್ಯ, ಜೀರಿಗೆ, ಉಪ್ಪು ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ಕೆಲದಿನಗಳ ಕಾಲ ತೆಗೆದಿಟ್ಟಲ್ಲಿ ಕೆಡುವುದಿಲ್ಲ.

Monday, January 09, 2012

HEALTH BENEFITS OF WATER MELON ಕಲ್ಲಂಗಡಿ ಹಣ್ಣು:



ಕಲ್ಲಂಗಡಿ ಹಣ್ಣು:

ಕಲ್ಲಂಗಡಿ ಹಣ್ಣಿನ ರಸ ದೇಹಕ್ಕೆ ತಂಪು ನೀಡುತ್ತದೆ . ಬಾಯಾರಿಕೆಯನ್ನು ಹೋಗಲಾಡಿಸುತ್ತದೆ, ಕಾಮಾಲೆಯಲ್ಲೂ ಲಾಭಕಾರಿ  ಆಗಿದೆ. ಕಣ್ಣುರಿ, ಕಜ್ಜಿ, ತುರಿಕೆಗಳ ಶಮನಕ್ಕೂ ಇದನ್ನು ಉಪಯೋಗಿಸಬುದು. ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನೂ ಕೂಡಾ ಔಷದಿಯಾಗಿ ಬಳಸುತ್ತಾರೆ. ಮಲಬದ್ಧತೆಯಲ್ಲಿ ಇದರ ಸಿಪ್ಪೆ ಉಪಯೋಗಕ್ಕೆ ಬರುತ್ತದೆ. ಕಲ್ಲಂಗಡಿ ಹಣ್ಣಿನ ಬಳ್ಳಿಯ ಎಲೆಗಳು ಕಹಿಯಾಗಿದ್ದು ರಕ್ತವರ್ಧಕವಾಗಿರುತ್ತವೆ.ಕಾಲಿನ ಊತಕ್ಕೆ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬಳಸುತ್ತಾರೆ. ಇದು ಕ್ಯಾಲ್ಸಿಯಂ, ಮ್ಯಾಂಗನೀಸ್, ಸಸಾರಜನಕ, ಕಬ್ಬಿಣ,ಮೇದಸ್ಸು ಹಾಗೂ ವಿಟಮಿನ್ ‘ಸಿ’ ಮೊದಲಾದ ಜೀವಸತ್ವಗಳಿಂದ ಸಮೃದ್ಧವಾಗಿದೆ.
*ಆಹಾರ ಸೇವಿಸಿದ ನಂತರ ಹೊಟ್ಟೆ ಉರಿಯುವುದು ಮತ್ತು ಹಳದಿಯಾಗಿ ವಾಂತಿ ಆಗುತ್ತಿದ್ದರೆ ಬೆಳಗ್ಗೆ ಬರಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದಿಷ್ಟು ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು.

*ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಶರೀರದಲ್ಲಿಯ ಅತಿ ಉಷ್ಣ ಸಮಸ್ಥಿತಿಗೆ ಬರುತ್ತದೆ. ಅಂಗೈಗಳಲ್ಲಿ, ಅಂಗಾಲುಗಳಲ್ಲಿ  ಉರಿ ಮತ್ತು ಕಣ್ಣುರಿ  ಇದ್ದವರು ದಿನಾ ೨ ಲೋಟ ಕಲ್ಲಂಗಡಿಯ ರಸವನ್ನು ೧೦-೧೫ ದಿನಗಳವರೆಗೆ ಸೇವಿಸಬೇಕು.

*ಕಾಮಾಲೆ ರೋಗದಿಂದ ಪೀಡಿತರಾದವರು ನಿಯಮಿತವಾಗಿ ಕಲ್ಲಂಗಡಿ ರಸವನ್ನು ೧೦-೧೫ ದಿನ ಸೇವಿಸುವುದರಿಂದ ಗುಣವಾಗುತ್ತದೆ. ಕಲ್ಲಂಗಡಿಹಣ್ಣಿನ ರಸ  ಮತ್ತು  ಮಜ್ಜಿಗೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕುಡಿದರೆ ಉರಿಮೂತ್ರ ಕಡಿಮೆ ಆಗುತ್ತದೆ.
*ಮಲಬದ್ದತೆಯಿರುವವರು ರಾತ್ರಿ ಊಟದ ನಂತರ ಕಲ್ಲಂಗಡಿಯ ರಸವನ್ನು ಸೇವಿಸುವುದರಿಂದ ಮಲವಿಸರ್ಜನೆ ಸುಲಭವಾಗಿ ಆಗುವುದು.
*ಯಾವುದಾದರೂ ಭ್ರಮೆಗೆ ಒಳಗಾಗಿ ಹುಚ್ಚನಂತೆ (ಹುಚ್ಚಿಯಂತೆ) ವರ್ತಿಸುತ್ತಿದ್ದರೆ ಒಂದು ಲೋಟ ಕಲ್ಲಂಗಡಿಯ ರಸ, ಒಂದು ಲೋಟ ಹಾಲು, ೩೦ ಗ್ರಾಂ ಕಲ್ಲುಸಕ್ಕರೆ ಎಲ್ಲವನ್ನೂ ಬೆರೆಸಿ ಬಿಳಿ ಬಾಟಲ್ ಒಂದರಲ್ಲಿ ಹಾಕಿ ರಾತ್ರಿ ಮುಕ್ತ ವಾತಾವರಣದಲ್ಲಿ ಒಂದು ಗೂಟಕ್ಕೆ ನೇತುಹಾಕಿ. ಬೆಳಗ್ಗೆ  ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ರೋಗಿಗೆ ಕುಡಿಸಬೇಕು. ಕೆಲವು ದಿನ ಹೀಗೆ ಮಾಡುವುದರಿಂದ ಮತಿಭ್ರಾಂತಿ ಕಡಿಮೆಯಾಗುತ್ತದೆ.
*ಉಷ್ಣದಿಂದ ತಲೆನೋವು ಉಂಟಾದರೆ ಕಲ್ಲಂಗಡಿಯ ರಸವನ್ನು ತೆಗೆದು ಸ್ವಲ್ಪ ಕಲ್ಲುಸಕ್ಕರೆ ಹಾಕಿ ಕುಡಿದರೆ ಗುಣವಾಗುತ್ತದೆ.
*ಉರಿಮೂತ್ರದಿಂದ ಬಳಲುತ್ತಿರುವವರು ಕಲ್ಲಂಗಡಿ ರಸಕ್ಕೆ ಮಜ್ಜಿಗೆ, ಎಳನೀರು, ಜೀರಿಗೆ, ಉಪ್ಪು ಹಾಕಿ ಕುಡಿದಲ್ಲಿ ಶೀಘ್ರವಾಗಿ ಬಾಧೆಯಿಂದ ಗುಣಮುಖರಾಗಬಹುದು.

*ಸೂರ್ಯನ ಝಳದಿಂದಾಗಿ ತಲೆನೋವು ಬಂದಿದ್ದರೆ ಈ ಹಣ್ಣಿನ ರಸಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆ ಬೆರೆಸಿ ಸೇವಿಸಿದರೆ ಉಪಶಮನವಾಗುತ್ತದೆ.

*ಸಿಪ್ಪೆಯನ್ನು ಅಂಗಾಲಿಗೆ ಉಜ್ಜಿದಲ್ಲಿ ಅಂಗಾಲಿನ ಉರಿಯು ಕಡಿಮೆಯಾಗಿ ದೇಹವು ತಂಪಾಗುತ್ತದೆ.

*ಕಲ್ಲಂಗಡಿ ರಸವನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಅರಶಿನ ಕಾಮಾಲೆಯು ವಾಸಿಯಾಗುತ್ತದೆ
*ಕಾಲಿನ ಗಂಟು, ಗುಲ್ಮ  ಮುಂತಾದ ಕಡೆ  ಊತವಿದ್ದರೆ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿಕೊಂಡು  1 ಲೋಟ ಬಿಸಿ ನೀರಿನಲ್ಲಿ ಹಾಕಿ ಆರಲು ಬಿಡಿ. ಆರಿದ ನಂತರ ಕುಡಿಯಬೇಕು. ದಿನಕ್ಕೆ ೪ ಸಲ ಮಾಡಿ. ಹೀಗೆ ಕುಡಿಯುವುದರಿಂದ ಕೆಲವು ದಿನಗಳಲ್ಲಿ ಊತ  ಮಾಯವಾಗುತ್ತದೆ.
ಸೌಂದರ್ಯವರ್ಧಕವಾಗಿ:
*ಮುಖದಲ್ಲಿ ಕಪ್ಪನೆಯ ಕಲೆಗಳಿದ್ದರೆ - ಹಣ್ಣನ್ನು ತೂತು ಮಾಡಿ ಸ್ವಲ್ಪ ತಿರುಳನ್ನು ಹೊರತೆಗೆದು ಬಟಾಣಿ ಮತ್ತು ಅಕ್ಕಿಯನ್ನು 1;2ರ ಅನುಪಾತದಲ್ಲಿ ಒಳಗೆ ತುಂಬಿ ವಾರದವರೆಗೆ ಹಾಗೇ ಇಟ್ಟು ಬಳಿಕ ಹೊರ ತೆಗೆದು ಕಾಳುಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿ. ಬಂದ ಹಿಟ್ಟನ್ನು ಹಾಲಿನೊಂದಿಗೆ ಕಲಸಿ ಕಲೆ ಇರುವ ಜಾಗದಲ್ಲಿ ಕೆಲವು ದಿನಗಳವರೆಗೆ ಹಚ್ಚುತ್ತಾ ಬಂದಲ್ಲಿ ಮೊಡವೆ ಕಲೆಗಳು ಇಲ್ಲವಾಗಿ ಚರ್ಮವು ಕಾಂತಿಯುತವಾಗುತ್ತದೆ. ಅಲ್ಲದೆ ಒಣ ಚರ್ಮದಿಂದಾಗಿ ಬೇಸತ್ತಿರುವವರು ಇದರ ರಸವನ್ನು ಸ್ವಲ್ಪ ಹೊತ್ತು ಹಚ್ಚಿ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಬೇಕು.