Wednesday, February 12, 2014

Home Remedies for Burn wound (ಸುಟ್ಟ ಗಾಯಕ್ಕೆ ಮನೆ ಮದ್ದು)


 ಸುಟ್ಟ ಗಾಯಕ್ಕೆ ತಕ್ಷಣ ಮಾಡುವಂತದ್ದು :
  • ಹರಿಯುವ ನೀರು: ಸುಟ್ಟುಕೊಂಡ ತಕ್ಷಣ ನಲ್ಲಿಯಲ್ಲಿ ನೀರನ್ನು ಹರೆಯ ಬಿಟ್ಟು ಅದರಲ್ಲಿ ಸುಟ್ಟುಕೊಂಡ ಭಾಗವನ್ನು ಹಿಡಿಯಬೇಕು. ಈ ರೀತಿ 10 ನಿಮಿಷ ಹಿಡಿದು ನಂತರ ಐಸ್ ನಿಂದ ಮೆಲ್ಲನೆ ಉಜ್ಜಬೇಕು. ಗಾಯ ಒಣಗುವವರೆಗೆ 8-10 ಗ್ಲಾಸ್ ನೀರನ್ನು ಕಡ್ಡಾಯವಾಗಿ ಸೇವಿಸಬೇಕು.
  • ಜೇನು: ತಣ್ಣೀರಿನಲ್ಲಿ ಗಾಯವನ್ನು ಹಿಡಿದ ನಂತರ ಆ ಭಾಗಕ್ಕೆ ಸ್ವಲ್ಪ ಜೇನು ಹಾಕಿ. ಇದರಿಂದ ಗಾಯಕ್ಕೆ ಸೋಂಕು ಆಗುವುದಿಲ್ಲ. 
  • ಹಣ್ಣುಗಳು: ಟೊಮೆಟೊ, ಚೆರ್ರಿ, ದ್ರಾಕ್ಷಿ ಹೀಗೆ antioxidants ಜಾಸ್ತಿ ಇರುವ ಹಣ್ಣುಗಳನ್ನು  ಸೇವಿಸಿದರೆ ಗಾಯ ಬೇಗನೆ ಗುಣಮುಖವಾಗುವುದು. 
  • ಅರಿಶಿಣ: ರಾತ್ರಿ ಮಲಗುವಾಗ ಹಾಲನ್ನು ಬಿಸಿ ಮಡಿ ಅದರಲ್ಲಿ ಅರಿಶಿಣವನ್ನು ಕರಗಿಸಿ ಅದನ್ನು ಹಚ್ಚಿದರೆ ಗಾಯ ಗುಣವಾಗುತ್ತೆ. ಉಪ್ಪು: ಬಿಸಿಯಾದ ಆಹಾರವನ್ನು ಬಾಯಿಗೆ ಹಾಕಿದರೆ ಬಾಯಿ ನಾಲಗೆ ಸುಟ್ಟು ಹೋಗುತ್ತದೆ. ಆಗ ಉಪ್ಪನ್ನು ಸ್ವಲ್ಪ ಬಿಸಿ ನೀರಿಗೆ ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು.
  • ಲ್ಯಾವೆಂಡರ್ ಎಣ್ಣೆ: ಸುಟ್ಟ ಗಾಯ ಒಣಗಿದ ಮೇಲೆ ಕಲೆಗಳು ಹೋಗಲು ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿ. 
  • ಆಲೂಗೆಡ್ಡೆ: ಗಾಯವಾದ ತಕ್ಷಣ ಬೇಯಿಸಿದ ಆಲೂಗೆಡ್ಡೆಯನ್ನು ಪೇಸ್ಟ್ ಮಾಡಿ ಸುಟ್ಟ ಭಾಗಕ್ಕೆ ಹಚ್ಚಿದರೆ ಸೋಂಕು ಆಗುವುದನ್ನು ತಡೆಯುತ್ತದೆ.
  • ಲೋಳೆಸರ:ಸುಟ್ಟ ಜಾಗದಲ್ಲಿ ದಿನಕ್ಕೆ 2-3 ಬಾರಿ ಲೋಳೆಸರ ಹಚ್ಚಿಕೊಂಡರೆ ಗಾಯ ಬೇಗನೆ ಗುಣಮುಖವಾಗುತ್ತದೆ. ಅಲ್ಲದೆ ಕಲೆ ಕೂಡ ಕಡಿಮೆಯಾಗುವುದು. 
  • ವಿನಿಗರ್: ನೀರಿನಲ್ಲಿ ವಿನಿಗರ್ ಮಿಶ್ರ ಮಾಡಿ ಸುಟ್ಟಕೊಂಡ ಜಾಗಕ್ಕೆ ಹಚ್ಚಿದರೆ ಗಾಯ ಬೇಗನೆ ಗುಣಮುಖವಾಗುತ್ತದೆ. 
  • ಟೀ: ಟೀ ಗಿಡದಿಂದ ದೊರೆಯುವ ಎಣ್ಣೆಯನ್ನು ಸುಟ್ಟ ಗಾಯದ ಮೇಲೆ ಹಚ್ಚುವುದರಿಂದ ಗಾಯ ಗುಣಮುಖವಾಗುವುದು.
  • ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ.
  • ಸುಟ್ಟ ಗಾಯ ಉಂಟಾದಾಗ ಬಾಳೆಹಣ್ಣಿನ ಲೇಪ ಹಚ್ಚಿದರೆ ಹಿತಕರ. ಅಂತೆಯೇ ಸುಟ್ಟ ಗಾಯಕ್ಕೆ ಶುದ್ಧ ಜೇನಿನ ಲೇಪ ಹಚ್ಚುವುದೂ ಹಿತಕರ.


 ಸುಟ್ಟ ಗಾಯದ ಕಲೆ ನಿವಾರಣೆಗೆ :
  • ಮುಲ್ತಾನಿ ಮಿಟ್ಟಿ, ರೋಸ್ ವಾಟರ್ ಮತ್ತು ನಿಂಬೆ ರಸ ಮಿಶ್ರಣ ತೆಳ್ಳಗೆ ಮಾಡಿಕೊಂಡು ಸುಟ್ಟ ಗಾಯದ ಕಲೆ ಮೇಲೆ 5-7 ನಿಮಿಷ ಹಾಗೇ ಒಣಗಲು ಬಿಡಬೇಕು. ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು. ಅದನ್ನು ಉಜ್ಜಲು ಹೋಗಬಾರದು.
  • ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ ಬಟ್ಟೆಗೆ ಹಾಕಿ ಸುಟ್ಟ ಗಾಯದ ಮೇಲೆ ಹಿಂಡಬೇಕು. ಸುಟ್ಟುಕೊಂಡ ತಕ್ಷಣವೇ ಇದನ್ನು ಪಾಲಿಸಿದರೆ ಉರಿಯೂ ಕಡಿಮೆಯಾಗುವುದಲ್ಲದೆ ಬೊಬ್ಬೆ ಏಳುವುದೂ ನಿಲ್ಲುತ್ತದೆ. ಕಲೆಯೂ ಉಳಿಯುವುದಿಲ್ಲ. 
  • ಸುಟ್ಟ ಗಾಯಕ್ಕೆ ಕೊಬ್ಬರಿ ಎಣ್ಣೆ ಲೇಪಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿದೆ. ದಿನಕ್ಕೆ ನಾಲ್ಕು ಬಾರಿಯಾದರೂ ಸುಟ್ಟ ಗಾಯಕ್ಕೆ ಎಣ್ಣೆ ಹಚ್ಚುತ್ತಾ ಬಂದರೆ ಕೆಲವೇ ವಾರಗಳಲ್ಲಿ ಚರ್ಮದ ಬಣ್ಣ ಮೊದಲಿನಂತಾಗುತ್ತದೆ. 
  • ಲೋಳೆರಸ ಎಲ್ಲ ರೀತಿಯ ಚರ್ಮ ರೋಗಗಳಿಗೂ ಪರಿಹಾರ ನೀಡುತ್ತೆ. ಆದ್ದರಿಂದ ಸುಟ್ಟ ಗಾಯದ ಮೇಲೆ ಲೋಳೆರಸ ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ ಮೊದಲಿನ ಬಣ್ಣ ತಂದುಕೊಡುತ್ತದೆ.
  • ಸುಟ್ಟು ಕೊಂಡ ಕೆಲವೇ ಕ್ಷಣಗಳಲ್ಲಿ ಅಡುಗೆ ಸೋಡವನ್ನು ಹಚ್ಚುವುದರಿಂದ ಬೊಬ್ಬೆ ಇಲ್ಲದಂತಾಗಿ ಗಾಯ ಬೇಗ ವಾಸಿಯಾಗುತ್ತದೆ. 
  • ಎಲ್ಲ ರೀತಿಯ ಚರ್ಮ ರೋಗಗಳನ್ನು ವಾಸಿ ಮಾಡುವ ಗುಣವಿರುವ ವಿಟಮಿನ್ ಕೆ ಇರುವ ತರಕಾರಿಗಳನ್ನು ಉಪಯೋಗಿಸುವುದರಿಂದ ಸುಟ್ಟ ಗಾಯ ಬೇಗ ಮಾಯವಾಗಿ ಕಲೆಯೂ ಉಳಿಯದಂತೆ ಮಾಡುತ್ತದೆ. ತರಕಾರಿಯ ರಸವನ್ನು ಇದರ ಮೇಲೆ ಲೇಪಿಸಿದರೆ ಅಥವಾ ಹಸಿರು ತರಕಾರಿಗಳ ಸೇವನೆಯಿಂದಲೂ ಸುಟ್ಟ ಗಾಯದ ಕಲೆ ಇಲ್ಲದಂತೆ ಮಾಡಬಹುದು.


Friday, February 07, 2014

Home Remedies for Constipation (ಮಲಬದ್ಧತೆ)






ಮಲಬದ್ಧತೆಯು ವ್ಯಕ್ತಿಯಿಂದ (ಅಥವಾ ಪ್ರಾಣಿ) ಹೊರಹಾಕಲು ತ್ರಾಸದಾಯಕವಾದ ಗಟ್ಟಿ ಮಲವನ್ನು ಅನುಭವಿಸಲ್ಪಡುವ ಜೀರ್ಣ ವ್ಯವಸ್ಥೆಯ ಒಂದು ಪರಿಸ್ಥಿತಿ. ಇದು ಸಾಮಾನ್ಯವಾಗಿ ದೊಡ್ಡ ಕರುಳು ಆಹಾರದಿಂದ ಬಹಳ ಹೆಚ್ಚು ನೀರನ್ನು ಹೀರಿಕೊಳ್ಳುವ ಕಾರಣ ಉಂಟಾಗುತ್ತದೆ. ಆಹಾರವು ಜಠರ ಮತ್ತು ಕರುಳಿನ ಪ್ರದೇಶದ ಮೂಲಕ ಅತಿ ನಿಧಾನವಾಗಿ ಚಲಿಸಿದರೆ, ದೊಡ್ಡ ಕರುಳು ಅತಿ ಹೆಚ್ಚು ನೀರನ್ನು ಹೀರಿಕೊಳ್ಳಬಹುದು, ಪರಿಣಾಮವಾಗಿ ಮಲವು ಶುಷ್ಕ ಮತ್ತು ಗಟ್ಟಿಯಾಗುತ್ತದೆ.

ಮಲಬದ್ಧತೆ ನವ್ಯ ನಾಗರಿಕತೆಯ ವ್ಯಾಧಿ. ರೊಟ್ಟಿ ಪಲ್ಯ, ನುಚ್ಚು, ಬೀಸಿದ ಆಹಾರ ಧಾನ್ಯಗಳನ್ನು ತಿಂದು, ದುಡಿದು ಸುಖವಾಗಿ ನಿದ್ರಿಸುವ ಬಡವರಿಗೆ ಇದು ಬರುವುದಿಲ್ಲ. ಸದಾ ಪಿಜ್ಜಾ, ಬರ್ಗರ್, ಚಾಕೊಲೆಟ್, ಕರಿದ ತಿಂಡಿಗಳನ್ನು ತಿಂದು ಕುಳಿತು ಕೆಲಸ ಮಾಡುವ ವರ್ಗಕ್ಕೆ ಇದು ಅಂಟಿಕೊಳ್ಳುತ್ತದೆ

ವ್ಯಕ್ತಿಯಿಂದ ಹೊರಹಾಕಲು ತ್ರಾಸದಾಯಕವಾದ ಗಟ್ಟಿ ಮಲ ಸೃಷ್ಟಿಸುವ ಸಂಕಟವೇ ಮಲಬದ್ಧತೆ (constipation). ದೊಡ್ಡ ಕರುಳು ಆಹಾರದಿಂದ ಹೆಚ್ಚು ನೀರನ್ನು ಹೀರಿಕೊಳ್ಳುವ ಕಾರಣ ಈ ಸ್ಥಿತಿ ಉಂಟಾಗುತ್ತದೆ. ಆಹಾರವು ಜಠರ ಮತ್ತು ಕರುಳಿನ ಪ್ರದೇಶದ ಮೂಲಕ ಅತಿ ನಿಧಾನವಾಗಿ ಚಲಿಸಿದರೆ, ದೊಡ್ಡ ಕರುಳು ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. ಪರಿಣಾಮ, ಮಲವು ಶುಷ್ಕ ಮತ್ತು ಗಟ್ಟಿಯಾಗುತ್ತದೆ. ದೇಹ ಮತ್ತು ಮನಸ್ಸು ಹೇಳಿಕೊಳ್ಳಲಾಗದ ವೇದನೆಯನ್ನು ಈ ಮಲಬದ್ಧತೆ ಸೃಷ್ಟಿಸುತ್ತದೆ.


  •     ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನ ಅಂಶವಿಲ್ಲದಿರುವುದು.
  •     ದೈಹಿಕ ವ್ಯಾಯಾಮ ಮಾಡದಿರುವುದು.
  •     ನೀರು, ಎಳನೀರು ಮುಂತಾದ ದ್ರವ ಪದಾರ್ಥಗಳನ್ನು ಕಡಿಮೆ ಸೇವಿಸುವುದು.
  •     ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವನೆ.
  •     ತಡ ರಾತ್ರಿ ಮಲಗುವುದು.

ಮಲಬದ್ಧತೆ ಸೃಷ್ಟಿಸುವ ಆಹಾರ


  •     ಚಿಪ್ ಮತ್ತು ಕರಿದ ತಿಂಡಿಗಳು
  •     ಹಾಲಿನ ಉತ್ಪನ್ನಗಳು
  •     ಕುಕ್ಕೀಸ್, ಪೇಸ್ಟ್ರಿ ಮತ್ತು ಕೇಕ್‌ಗಳು
  •     ಕೆಂಪು ಮಾಂಸ (ರೆಡ್‌ಮೀಟ್)
  •     ನೋವು ನಿವಾರಕ ಮಾತ್ರೆಗಳು

ನಿವಾರಣೆ ಹೇಗೆ?

  •     ಶುಚಿ ಆಹಾರ ಮತ್ತು ನೀರಿನ ಸೇವನೆ.
  •     ನಿಯಮಿತ ಸಮಯದಲ್ಲಿ ಮಿತ ಆಹಾರ ಸೇವನೆ.
  •     ಖಾರ, ಮಸಾಲೆ, ಮಾಂಸಾಹಾರ ಮಿತವಾಗಿರಬೇಕು.
  •     ನೀರು, ಜ್ಯೂಸ್‌ನಂಥ ಪಾನೀಯ ಸೇವನೆ.
  •     ತಾಜಾ ತರಕಾರಿ, ಹಣ್ಣು ಮತ್ತು ಹಸಿರು ಸೊಪ್ಪುಗಳು ನಿಮ್ಮ ಪ್ರತಿ ಹೊತ್ತಿನ ಊಟದ ಭಾಗವಾಗಿರಲಿ.
  •     ಕಾಫಿ, ಟೀ ಸೇವನೆ ಕಡಿಮೆ ಮಾಡಿ.
  •     ಧೂಮಪಾನ, ಮದ್ಯಪಾನದಿದ ಮತ್ತು ಮಾದಕ ದ್ರವ್ಯಗಳಿಂದ ದೂರವಿರಿ.
  •     ಕರಿದ ತಿಂಡಿಗಳು, ಸೋಡಾ ಬಳಸಿರುವಂಥ, ಮೈದಾ ಹೆಚ್ಚಿರುವ ಆಹಾರಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.
  •     ಅವಸರದ ಊಟ ಸಲ್ಲದು. ಆಹಾರವನ್ನು ಹಲ್ಲುಗಳಿಂದ ಜಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
  •     ನಿತ್ಯ ವ್ಯಾಯಾಮ ಅಥವಾ ವಾಕ್ ಕಡ್ಡಾಯವಾಗಿಸುವುದು.
  •     ಮಾನಸಿಕವಾಗಿ ಸದಾ ಪ್ರಸನ್ನತೆಯನ್ನು ರೂಢಿಸಿಕೊಳ್ಳುವುದು.
  •     ಸರಿಯಾದ ಸಮಯಕ್ಕೆ ನಿದ್ರೆ.
  •     ಯಾವುದೇ ಕಾರಣಕ್ಕೂ ಭೇದಿಯಾಗುವ ಮಾತ್ರೆಗಳನ್ನು ತೆಗೆದುಕೊಂಡು ಸ್ವತಃ ವೈದ್ಯರಾಗಲು ಪ್ರಯತ್ನಿಸ ಬೇಡಿ.
  •     ವಾರದಲ್ಲಿ ಒಂದು ದಿವಸ ಬರೀ ಹಣ್ಣು, ಸೌತೆಕಾಯಿ ಮತ್ತು ಮೊಳಕೆ ಕಾಳುಗಳ ಸೇವನೆಯ ಪಥ್ಯದ ಉಪವಾಸ ಮಾಡುವುದು.



 ಮನೆ ಮದ್ದು:


  •     ದಿನದಲ್ಲಿ ಕೆಲವು ಬಾರಿ ಒಂದು ಚಮಚದಂತೆ ಜೇನುತುಪ್ಪ ಸೇವಿಸುತ್ತಿರಿ.
  •     ಊಟವಾದ ಅರ್ಧಗಂಟೆ ನಂತರ ಬಾಳೆಹಣ್ಣು ಸೇವಿಸುವುದನ್ನು ರೂಢಿಸಿಕೊಳ್ಳಿ.
  •     ಮಾವಿನಹಣ್ಣು ಮಲಬದ್ಧತೆಗೆ ಪರಿಣಾಮಕಾರಿ.
  •     ಅರ್ಧ ಕಪ್ ಕ್ಯಾಬೇಜ್ ಅಥವಾ ಮೂಲಂಗಿ ಜೂಸ್ ಅನ್ನು ದಿನಕ್ಕೆರಡು ಬಾರಿ ಸೇವಿಸಿ.
  •     ಹಾಲಿನ ಜತೆ ಖರ್ಜೂರ ಸೇರಿಸಿ ಕುಡಿಯಿರಿ.
  •     ಮಲವಿಸರ್ಜನೆ ಕಸರತ್ತಾಗಬಾರದು. ಆಗ ಮಾತ್ರ ನಿಮ್ಮ ಆರೋಗ್ಯದ ಬಾಗಿಲು ತೆರೆಯುತ್ತದೆ.
  •     ಖಾಲಿ  ಹೊಟ್ಟೆಯಲ್ಲಿ ಸೇಬು  ತಿನ್ನುವುದರಿಂದ  ಮಲಬದ್ಧತೆ  ದೂರವಾಗುತ್ತದೆ. ಊಟದ  ನಂತರ  ಸೇಬನ್ನು             ತಿನ್ನುವುದರಿಂದ  ಮಲಬದ್ಧತೆ  ಉಂಟಾಗುತ್ತದೆ.
  •     ಯಕೃತ್ತಿನ  ಶುದ್ಧಿಯಲ್ಲಿ  ನಿಂಬೆಹಣ್ಣು  ಉಪಯೋಗಿಸಲ್ಪಡುತ್ತದೆ. ಅಮಾಶಯದಲ್ಲಿ   ವಾಯು  ಉತ್ಪಾದಿಸಿ ತೊಂದರೆ  ಕೊಡುವ  ಕ್ರಿಮಿಗಳನ್ನು  ಇದು  ನಾಶ  ಮಾಡುತ್ತದೆ. ನಂತರ  ಯಕೃತ್ ನ್ನು  ಪ್ರವೇಶಿಸಿ  ಅಲ್ಲಿ  ಸಂಗ್ರಹವಾದ  ಧೂಶಿತ  ದ್ರವ್ಯಗಳನ್ನು  ಹೊರಹಾಕುತ್ತದೆ. ಇದರಿಂದ  ಸಂಧಿವಾತ  ಮುಂತಾದ  ತೊಂದರೆಗಳಾಗುವುದು  ತಪ್ಪುತ್ತದೆ.  ಇದರಿನದ  ಪಚನ  ಕಾರ್ಯವು  ಸರಾಗವಾಗಿ  ಆಗುತ್ತದೆ.
  •     ನಿಂಬೆಹಣ್ಣಿನ  ತಾಜಾರಸದಲ್ಲಿ  ಸ್ವಲ್ಪ  ಕರಿಮೆಣಸಿನ  ಪುಡಿ  & ಚಿಟಿಕೆ  ಉಪ್ಪು  ಹಾಕಿ  ಸೇವಿಸುವುದರಿಂದ  ಅಜೀರ್ಣತೆ  & ಮಲಬದ್ಧತೆ  ದೂರವಾಗುತ್ತದೆ.
  •     ರಾತ್ರಿ  10-15 ಒಣದ್ರಾಕ್ಷಿಗಳನ್ನು  ತಿಂದು  ಬಿಸಿಯಾದ  ಹಾಲು  ಕುಡಿದರೆ  ಮಲಬದ್ದತೆ  ನಿವಾರಣೆಯಾಗುತ್ತದೆ.
  •     15gm ನಿಂಬೆರಸ  & 15gm ಸಕ್ಕರೆಯನ್ನು  1 ಕಪ್  ನೀರಿನಲ್ಲಿ  ಪ್ರತಿರಾತ್ರಿ  ಸೇವಿಸುವುದರಿಂದ  ಕಠಿಣ  ಮಲಬದ್ಧತೆ  ಕೂಡ  ಕೆಲವೇ  ದಿನಗಳಲ್ಲಿ  ಗುಣವಾಗುತ್ತದೆ.
  •     ರಾತ್ರಿ  1 ಚಮಚ  ಚನ್ನಾಗಿ  ಅರೆದ  ನೆಲ್ಲಿಕಾಯಿಯ  ಚಟ್ನಿ  ಜೊತೆ  ನೀರು / ಹಾಲಿನೊಂದಿಗೆ  ಸೇವಿಸಿದರೆ  ಮರುದಿನ  ಮಲವಿಸರ್ಜನೆ  ಸರಿಯಾಗಿ  ಆಗುತ್ತದೆ.
  •    ನೇರಳೆ  ಹಣ್ಣನ್ನು  ಹೆಚ್ಚಾಗಿ  ಸೇವಿಸುವುದರಿಂದ  ಮಲಬದ್ಧತೆ  ಉಂಟಾಗುತ್ತದೆ.\
  •    ಸೀಬೆ ಹಣ್ಣನ್ನು  ಊಟದ  ಮೊದಲು  ಕೆಲವು  ದಿನಗಳವರೆಗೆ  ಸೇವಿಸಿದರೆ  ಮಲಬದ್ಧತೆ  ದೂರವಾಗುತ್ತದೆ.
  •    2-3 ಅಂಜೂರದ  ಹಣ್ಣುಗಳನ್ನು  ದಿನನಿತ್ಯವೂ  ಖಾಲಿಹೊಟ್ಟೆಯಲ್ಲಿ  ಸೇವಿಸುವುದರಿಂದ  ಕೆಲದಿನಗಳಲ್ಲಿ  ಮಲಬದ್ಧತೆ  ದೂರವಾಗುತ್ತದೆ.
  •   ಮಲಬದ್ಧತೆ ಇರುವವರು  ರಾತ್ರಿ  ಊಟದ  ನಂತರ  ಕಲ್ಲಂಗಡಿಯ  ರಸವನ್ನು  ಸೇವಿಸುವುದರಿಂದ  ಮಲವಿಷರ್ಜನೆ  ಸುಲಭವಾಗಿ  ಆಗುವುದು.
  •   ಪ್ರತಿದಿನ ಉಟಕ್ಕೆ  ಮೊದಲು  ಪರಂಗಿ  ಹಣ್ಣನ್ನು  ಸೇವಿಸುವುದರಿಂದ  ಮಲಬದ್ಧತೆ  ದೂರವಾಗುತ್ತದೆ.
  •   ದಿನವು  ಊಟದ  ನಂತರ  ಬಾಳೆಹಣ್ಣು  ಸೇವಿಸುವ  ಅಭ್ಯಾಸ  ಇಟ್ಟುಕೊಂಡರೆ  ಮಲಬದ್ಧತೆ  ಉಂಟಾಗುವುದಿಲ್ಲ.
  •   ಬೇಲದ  ಹಣ್ಣಿನ  ತಿರುಳನ್ನು  ನೀರಿನಲ್ಲಿ  ಕಿವುಚಿ  ಶರಬತ್ತು  ಮಾಡಿ  ಕುಡಿಯುವುದರಿಂದ  ಮಲಬದ್ಧತೆ  ಗುಣವಾಗುತ್ತದೆ ಕರುಳಿನಲ್ಲಿ  ಶೇಖರವಾದ  ಮಲವನ್ನು  ಪೂರ್ತಿಯಾಗಿ  ಇದು  ಹೊರ  ಹಾಕುತ್ತದೆ.
  •  ಮಾವಿನ  ಹಣ್ಣನ್ನು  ದಿನ  ನಿತ್ಯವೂ  ಊಟದ  ನಂತರ  ಸೇವಿಸಿದರೆ  ಮಲಬದ್ಧತೆ  ಗುಣವಾಗುತ್ತದೆ.
  •  ಉಪ್ಪು ಮತ್ತು ಜೇನುತುಪ್ಪವನ್ನು ನಂಚಿಕೊಂಡು ಮಾವಿನಕಾಯಿ ಹೀಚು ತಿಂದರೆ ಮಲಬದ್ಧತೆ ಮತ್ತು ಅಜೀರ್ಣ ನಿವಾರಣೆಯಾಗುವುದು.
  •  ಒಂದು ಚಮದ ಹರಳೆಣ್ಣೆಗೆ ಕೊಂಚ ಹಾಲನ್ನು ಬೆರೆಸಿ ದಿನ ರಾತ್ರಿ ಮಲಗುವ ಮುನ್ನ ತೆಗೆದುಕೊಳ್ಳುವುದ ರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
  • ಮಲಗುವ ಮುನ್ನ ಎರಡು ಅಥವಾ ನಾಲ್ಕು ಟೀ ಚಮಚ ಗುಲ್ಕನ್ನು ತಿಂದು, ದೊಡ್ಡ ಲೋಟದಲ್ಲಿ ಬಿಸಿ ಹಾಲನ್ನು ಕುಡಿಯಬೇಕು.
  •  ಒಂದು ಲೋಟ ಬಿಸಿನೀರಿಗೆ ಕೊಂಚ ಉಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನು ಸೇರಿಸಿ ದಿನವೂ ಬೆಳಗಿನ ಹೊತ್ತು ತೆಗೆದುಕೊಳ್ಳುವುದು ಉತ್ತಮ.
  •  ಪಪ್ಪಾಯ ಹಣ್ಣನ್ನು ಊಟಕ್ಕೆ ಮುನ್ನ ಮತ್ತು ಊಟವಾದ ನಂತರ ಸೇವಿಸುವುದರಿಂದ, ಅದು ಮಲಬದ್ಧತೆಯನ್ನು ದೂರ ಮಾಡುತ್ತದೆ.
  •  ಒಣ ಹಣ್ಣುಗಳಾದ ಒಣ ಖರ್ಜೂರ ಮತ್ತು ಒಣ ದ್ರಾಕ್ಷಿಗಳಂತಹ ಹಣ್ಣುಗಳನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಅದನ್ನು ಸೇವಿಸಿ.

ಮಕ್ಕಳಲ್ಲಿ ಮಲಬದ್ಧತೆ ನಿವಾರಣೆಗೆ ಮನೆಮದ್ದು:

ಒಂದು ಗ್ಲಾಸ್ ಹಾಲಿನಲ್ಲಿ 1 ಚಮಚ ಜೇನು ಮತ್ತು 1 ಚಮಚ ಸಕ್ಕರೆ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಲು ಕೊಡಿ. ಸೂಚನೆ: 2 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಈ ಮನೆ ಮದ್ದು ಕೊಡಬೇಡಿ. ಜೇನನ್ನು ಜೀರ್ಣಿಸಿಕೊಳ್ಳುವ ಶಕ್ತಿ ಮಕ್ಕಳಲ್ಲಿ ಇರುವುದಿಲ್ಲ.

ಕ್ಯಾರೆಟ್, ಕ್ಯಾಬೇಜ್, ಕುಂಬಳಕಾಯಿ, ಪಾಲಾಕ್, ಬೀನ್ಸ್ ಈ ರೀತಿಯ ತರಕಾರಿಗಳನ್ನು ಬೇಯಿಸಿಕೊಡಿ. ಈ ಆಹಾರಗಳಲ್ಲಿ ನೀರಿನಂಶ ಅಧಿಕವಿರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ತಡೆಯುತ್ತದೆ.

ಪ್ಲ್ಯಾಕ್ಸಿ ಸೀಡ್ ಅಥವಾ ಅಗಸೆದ ಬೀಜವನ್ನು ಪುಡಿ ಮಾಡಿ ಹಾಕಿ ಆ ನೀರನ್ನು ಕುಡಿಯಲು ಕೊಟ್ಟರೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಒಂದು ಗ್ಲಾಸ್ ಬಿಸಿ ನೀರಿಗೆ ಸ್ವಲ್ಪ ಹರಳೆಣ್ಣೆ ಹಾಕಿ ಕುಡಿಸಿ, ಸ್ವಲ್ಪ ಹೊತ್ತಿನಲ್ಲಿಯೇ ಮಲವಿಸರ್ಜನೆ ಆಗುವುದು. ಈ ವಿಧಾನವನ್ನು ತುಂಬಾ ಚಿಕ್ಕ ಮಕ್ಕಳಲ್ಲಿಯೂ ಪ್ರಯೋಗ ಮಾಡಬಹುದು.

ಮಕ್ಕಳು ನೀರನ್ನು ಕಮ್ಮಿ ಕುಡಿದರೆ ಮಲವಿಸರ್ಜನೆಗೆ ತೊಂದರೆಯಾಗುವುದು. ಆದ್ದರಿಂದ ಮಕ್ಕಳು ನೀರು ಕುಡಿಯದಿದ್ದರೂ ಕಮ್ಮಿಯೆಂದರೂ ಒಂದು ಲೀಟರ್ ನೀರನ್ನು ದಿನದಲ್ಲಿ ಕುಡಿಸಿ. ಊಟದ ನಂತರ ಸ್ವಲ್ಪ ಹದ ಬಿಸಿ ನೀರು ಕುಡಿಸಿ.

ಬಾಳೆ ಹಣ್ಣು ತಿಂದರೆ ಮಲಬದ್ಧತೆ ಸಮಸ್ಯೆ ತಕ್ಷಣ ನಿವಾರಣೆಯಾಗುವುದು. ಒಂದು ಗ್ಲಾಸ್ ಬಿಸಿ ಹಾಲಿನ ಜೊತೆ ಬಾಳೆ ಹಣ್ಣನ್ನು ತಿನ್ನಲು ಕೊಡಿ.

ಒಂದು ಗ್ಲಾಸ್ ನೀರಿಗೆ 1 ಚಮಚ ಸೋಂಪು ಅನ್ನು ರೋಸ್ಟ್ ಮಾಡಿ, ಪುಡಿ ಮಾಡಿ ಹಾಕಿ, ನೀರನ್ನು ಕುದಿಸಿ, ಸೋಸಿ. ನಂತರ ಆ ನೀರನ್ನು ಕುಡಿಯಲು ಕೊಡಿ. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಹಾಗೇ ತಿನ್ನಲು ಕೂಡ ಕೊಡಬಹುದು.


ಇವೆಲ್ಲಾ ಸೂತ್ರಗಳನ್ನು ಪಾಲಿಸಿದರೂ, ಮಲಬದ್ಧತೆ ನಿವಾರಣೆಯಾಗದೆ ಇನ್ನೂ ನಿಮ್ಮನ್ನು ಕಾಡುತ್ತಿದ್ದರೆ, ತಡಮಾಡದೇ ವೈದ್ಯರನ್ನು ಭೇಟಿ ಮಾಡಿ, ಕಾರಣ ತಿಳಿದು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.