Wednesday, May 11, 2011

Home remedies for cold & fever ಶೀತ ಮತ್ತು ಫ್ಲೂ ಜ್ವರBhumika Gk
ಚಳಿಗಾಲ ಷುರುವಾಗುತ್ತಿದ್ದಂತೆ ಹಿಂಬಾಲಿಸಿ ಬರುತ್ತದೆ ಮಾರಕ ಶೀತ ಮತ್ತು ಫ್ಲೂ ಜ್ವರ. ಆದರೆ ಕೆಲವು ಸರಳ ಕ್ರಮಗಳನ್ನು ಕೈಗೊಂಡರೆ ರೋಗ ಆವರಿಸುವ ಸಾಧ್ಯತೆ ಮತ್ತು ನಿಮ್ಮ ಸ್ನೇಹಿತರಿಗೆ, ಕುಟುಂಬಕ್ಕೆ ಮತ್ತು ಸಹೋದ್ಯೋಗಿಗಳಿಗೆ ರೋಗಾಣುಗಳನ್ನು ಹರಡುವುದನ್ನು ತಡೆಯಬಹುದು.

ಇವೆಲ್ಲ ಸಾಮಾನ್ಯ ಜ್ಞಾನದ ಕ್ರಮಗಳಾಗಿವೆ ಎಂದು ಸೇಂಟ್ ಲೂವಿಸ್ ವಿ.ವಿ.ಯ ಕೋಆರ್ಡಿನೇಟರ್ ಲಾಂಗಾನ್ ಹೇಳುತ್ತಾರೆ.1.ಫ್ಲೂ ಚುಚ್ಚುಮದ್ದು ಹಾಕಿಸಿಕೊಳ್ಳುವುದು. ಇದು ಫ್ಲೂ ಬರದಂತೆ ತಡೆಯಲು, ಅದನ್ನು ನಿವಾರಿಸಲು ಸುಲಭೋಪಾಯ. ರೋಗನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳಿಗೆ ಮತ್ತು ಹಿರಿಯರಿಗೆ ಇದು ಅತ್ಯವಶ್ಯಕ.

2.ಆಗಾಗ್ಗೆ ಕೈತೊಳೆಯುತ್ತಿರಿ, ಫ್ಲೂ ಮುಂತಾದ ಉಸಿರಾಟದ ವೈರಸ್ ಹರಡುವುದನ್ನು ತಡೆಯಲು ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ಕೈತೊಳೆಯುವುದು ಪರಿಣಾಮಕಾರಿ. ನೀವು ಕೈಗೆ ಸಾಬೂನು ಬಳಸದಿದ್ದರೆ ಆಲ್ಕೊಹಾಲ್ ಮೂಲದ ಜೆಲ್ ಬಳಸಿ ಅದು ಒಣಗುವವರೆಗೆ ಉಜ್ಜಬೇಕು.3.ನಿಮ್ಮ ಕಣ್ಣುಗಳನ್ನು, ಮೂಗನ್ನು ಮತ್ತು ಬಾಯಿಯನ್ನು ಕೈಯಿಂದ ಮುಟ್ಟಬೇಡಿ. ಇವು ಎಲ್ಲ ಸೂಕ್ಷ್ಮಜೀವಿಗಳ ಪ್ರವೇಶಕ್ಕೆ ಸುಲಭವಾದ ದಾರಿ.

4. ರೋಗಗ್ರಸ್ಥ ವ್ಯಕ್ತಿಗಳ ಸಾಮಿಪ್ಯದಲ್ಲಿ ಇರಬೇಡಿ. 5.ಇನ್ನಿತರ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಶಕ್ತಿಶಾಲಿಯಾಗಿ ಇಡಲು ಸಾಕಷ್ಟು ನಿದ್ರೆ ಮಾಡಿ. ಪೌಷ್ಠಿಕ ಆಹಾರ ಸೇವಿಸಿ, ಯಥೇಚ್ಛ ನೀರು ಕುಡಿಯಿರಿ. ಮಾನಸಿಕ ಒತ್ತಡ ನಿರ್ವಹಣೆ ಕಲಿಯಿರಿ.

6. ನೀವು ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಗೆ ಅಡ್ಡವಾಗಿ ಕರವಸ್ತ್ರ ಅಥವಾ ಕೈಯನ್ನು ಹಿಡಿಯಿರಿ. ಇದರಿಂದ ಇತರರಿಗೆ ಕಾಯಿಲೆ ಹರಡದಂತೆ ತಡೆಯಬಹುದು. 7. ಕಾಯಿಲೆ ಬಂದಿದ್ದರೆ ಮನೆಯಲ್ಲೇ ಉಳಿಯಿರಿ. ಜ್ವರ ಅಥವಾ ಕೆಮ್ಮು ಬಂದಿದ್ದರೆ ಮನೆಯಲ್ಲಿ ಉಳಿಯಲು ಪ್ರಯತ್ನಿಸಿ. ಇದರಿಂದ ಇತರರಿಗೆ ಸೋಂಕು ಹರಡುವುದನ್ನು ತಡೆಯಬಹುದು.


ಪಾನೀಯ ಸೇವನೆ:ಜ್ವರವಿರುವಾಗ ಗಟ್ಟಿ ಆಹಾರ ಕ್ಕಿಂತ ದ್ರವಾಹಾರ ಸೇವನೆ ಒಳ್ಳೆಯದು. ಹಣ್ಣಿನ ರಸಗಳು. ಮೂಸಂಬಿ, ಕಿತ್ತಳೆ ರಸ ಮತ್ತು ತರಕಾರಿಗಳ ಸೇವನೆ ಒಳ್ಳೆಯದು. ಕ್ಯಾರೆಟ್ ಮತ್ತು ಬೀರ್‌ರೂಟ್ ರಸಗಳನ್ನು ಕುಡಿಯಬೇಕು.

ಕಷಾಯ ಸೇವನೆ: ಕರಿಮೆಣಸು, ಜೀರಿಗೆ, ಶುಂಠಿ, ಧನಿಯಾಗಳನ್ನು ಕುಟ್ಟಿಪುಡಿ ಮಾಡಿ ಕಷಾಯ ತಯಾರಿಸಿ ಕುಡಿಯಬೇಕು. ಜ್ವರವಿದ್ದಾಗ ಇದನ್ನು ಕುಡಿಯುವುದ ರಿಂದ ಬೆವರು ಬಂದು ದೇಹ ತಂಪಾಗುತ್ತದೆ. ತುಳಸಿ ಬೀಜ, ಮಜ್ಜಿಗೆ ಹುಲ್ಲು, ನಿಂಬೆಹುಲ್ಲನ್ನು ಹಾಕಿ ತಯಾರಿ ಸಿದ ಟೀ ಕುಡಿಯಬೇಕು.

ತಣ್ಣನೆಯ ಪಟ್ಟಿ: ಹಣೆಯ ಮೇಲೆ ತಣ್ಣೀರಿನಲ್ಲಿ ಅದ್ದಿದ ದಪ್ಪನೆಯ ಬಟ್ಟೆಯ ಪಟ್ಟಿಯನ್ನು ಹಾಕಬೇಕು. ಹೆಚ್ಚು ಜ್ವರವಿದ್ದಲ್ಲಿ ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿ ಮೈಯನ್ನೆಲ್ಲ ಒರೆಸಬೇಕು.


ಮನೆ ಔಷಧಿ:
*ಒಂದು ಹಿಡಿ ಅಮೃತಬಳ್ಳಿಯನ್ನು ಜಜ್ಜಿ 4 ಲೋಟ ನೀರಿನಲ್ಲಿ ಹಾಕಿ ಕುದಿಸಿ ಒಂದು ಲೋಟಕ್ಕೆ ಇಳಿದ ಮೇಲೆ ಕಷಾಯವನ್ನು ಶೋಧಿಸಿ, ದಿನಕ್ಕೆ ಮೂರ್ನಾಲ್ಕು ಬಾರಿ 50 ಮಿಲಿ ಕುಡಿಯಬೇಕು. ಮಕ್ಕಳಿಗೆ 25 ಮಿಲಿ ಕೊಟ್ಟಲ್ಲಿ ಸಾಕಾಗುತ್ತದೆ.

* ದೊಡ್ಡಪತ್ರೆಯ 6 ಎಲೆಗಳನ್ನು ಕೆಂಡದ ಮೇಲೆ ಬಾಡಿಸಿ ರಸ ತೆಗೆದು ಕುಡಿಯಬೇಕು. ಇದನ್ನು ನಾಲ್ಕೈದು ಗಂಟೆಗಳಿಗೊಮ್ಮೆ ಜ್ವರ ಕಡಿಮೆಯಾಗುವವರೆಗೂ ಕುಡಿಯಬೇಕು. ಮಕ್ಕಳಿಗೆ ಒಂದು ಚಮಚ ರಸವನ್ನು ಜೇನುತುಪ್ಪ ಬೆರೆಸಿ ಕುಡಿಸಬೇಕು.

* ಆಡು ಸೋಗೆಯ ಎಲೆಗಳನ್ನು ತೊಳೆದು ಸ್ವಚ್ಛ ಗೊಳಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಅರ್ಧಲೋಟ ಆಗುವವರೆಗೂ ಸಣ್ಣಗಿನ ಉರಿಯಲ್ಲಿ ಕುದಿಸಿ ಬೆಲ್ಲ ಹಾಕಿ ನಾಲ್ಕು ಚಮಚೆಯಷ್ಟು ದಿನಕ್ಕೆ ನಾಲ್ಕು ಬಾರಿ ಕುಡಿಯ ಬೇಕು. ಚಿಕ್ಕಮಕ್ಕಳಿಗೆ ಎರಡು ಚಮಚೆ ಕುಡಿಸಬೇಕು.

ವೈರಸ್ (ಫ್ಲೂ) ಜ್ವರ: ವೈರಸ್‌ನಿಂದ ಉಂಟಾಗುವ ಫ್ಲೂ ಜ್ವರದಲ್ಲಿ ಸಾಮಾನ್ಯವಾಗಿ ಗಂಟಲು ನೋವು, ಕೆಮ್ಮು, ನೆಗಡಿ, ತಲೆನೋವು, ತಲೆಭಾರ ಮತ್ತು ಮೈಕೈ ನೋವು ಇರುತ್ತದೆ. ವಿಶ್ರಾಂತಿಯೇ ಈ ಜ್ವರಕ್ಕೆ ಅತ್ಯುತ್ತಮ ಮದ್ದು.

* ಹಿಪ್ಪಲಿ ಮತ್ತು ಶುಂಠಿಯನ್ನು ಸಮಪ್ರಮಾಣ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಕಷಾಯ ತಯಾರಿಸಿ ಎರಡು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಮೂರು ದಿನ ಕುಡಿಯಬೇಕು.

* ನುಗ್ಗೆ ಸೊಪ್ಪಿನಿಂದ ಸಾರು ತಯಾರಿಸಿ ಅದಕ್ಕೆ ಸ್ವಲ್ಪ ಬೆಳ್ಳುಳ್ಳಿರಸ ಬೆರೆಸಿ ಕುಡಿಯಬೇಕು.

* ಅಮೃತಬಳ್ಳಿ, ಶುಂಠಿ, ನೆಲಗುಳ್ಳದ ಸಮಪ್ರಮಾಣ ಕುಟ್ಟಿ ಕಷಾಯ ತಯಾರಿಸಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ 5ರಿಂದ 6ದಿನಗಳ ಕಾಲ ದುಡಿಯಬೇಕು.

* 100 ಗ್ರಾಂ ಲಕ್ಕಿಸೊಪ್ಪು, 10 ಗ್ರಾಂ ಕಾಳುಮೆಣಸು, 10 ಗ್ರಾಂ ಬೆಲ್ಲ ಇವುಗಳನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ 1/4 ಲೀಟರ್ ನೀರಿಗೆ ಇಳಿಸಬೇಕು. ಕಷಾಯವನ್ನು ಶೋಧಿಸಿ ಹೊತ್ತಿಗೆ ಒಂದು ಲೋಟದಂತೆ ದಿನಕ್ಕೆರಡು ಬಾರಿ ಕುಡಿಯಬೇಕು.


* ಒಂದು ಲೋಟ ಬಿಸಿನೀರಿಗೆ ಅರ್ಧ ಚಮಚೆ ಅರಿಶಿನ, 5 ಕಾಳುಮೆಣಸು ಪುಡಿ ಸೇರಿಸಿ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಗೆ ಕುಡಿಯಬೇಕು.

No comments:

Post a Comment