ಕ್ಯಾರೆಟ್
ಡಯಟ್ ಎಂದರೆ ಕೇವಲ ರುಚಿಯಿಲ್ಲದ ಆಹಾರದ ಸೇವನೆ ಎಂದು ಹಲವರು ತಪ್ಪು ತಿಳಿಯುತ್ತಾರೆ. ಆದರೆ ರುಚಿಯೊಂದಿಗೆ ತೂಕ ಇಳಿಸಿಕೊಳ್ಳುವ ವಿಧಾನವೊಂದು ಇಲ್ಲಿದೆ. ಕ್ಯಾರೆಟ್ ಡಯಟ್ ಪಾಲಿಸಿದರೆ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ.
ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು, ಇಲ್ಲವೆಂದರೆ ಸೂಪ್, ಸಲಾಡ್ ಮತ್ತು ಜ್ಯೂಸ್ ನಂತೆಯೂ ಸೇವಿಸಬಹುದು. ಕ್ಯಾರೆಟ್ ನಲ್ಲಿನ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತೆ.
ಕ್ಯಾರೆಟ್ ಡಯಟ್- ನೈಸರ್ಗಿಕವಾಗಿ ತೂಕ ಇಳಿಸುವ ಮಾರ್ಗ
1. ಬೆಳಗ್ಗೆ: ಬ್ರೇಕ್ ಫಾಸ್ಟ್ ಗೆ ಕ್ಯಾರೆಟ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಸೇವಿಸಬಹುದು. ಜೊತೆಗೆ ಒಂದು ಮೊಟ್ಟೆಯನ್ನೂ ಸೇವಿಸಬಹುದು.
2. ಮಧ್ಯಾಹ್ನ: ಟೋಸ್ಟೆಡ್ ಬ್ರೆಡ್ ಜೊತೆ ತುರಿದ ಕ್ಯಾರೆಟ್, ಟೊಮೆಟೊ, ಉಪ್ಪು ಮತ್ತು ಮೆಣಸನ್ನು ಬೆರೆಸಿ ತಿನ್ನಬೇಕು.
3. ರಾತ್ರಿ: ರಾತ್ರಿ ಊಟಕ್ಕೆ ಕ್ಯಾರೆಟ್ ಮತ್ತು ಬೇಳೆ ಬೆರೆಸಿ ತಯಾರಿಸಿದ ಸೂಪನ್ನು ಸೇವಿಸಬೇಕು ಮತ್ತು ಒಂದು ಕಪ್ ಕೆಂಪಕ್ಕಿ ಅನ್ನವನ್ನು ಮೊಸರಿನ ಜೊತೆ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ.
ಕ್ಯಾರೆಟ್ ಬಗ್ಗೆ ಇನ್ನೂ ತಿಳಿಯಿರಿ:
1. ಕ್ಯಾರೆಟ್ ನಲ್ಲಿನ ಕಾರೊಟಿನ್ ಅಂಶ ದೇಹವನ್ನು ಶುದ್ಧವಿರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
2. ಕ್ಯಾರೆಟ್ ನಲ್ಲಿ 10 % ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ. ಇವೆಲ್ಲವೂ ಆರೋಗ್ಯಕ್ಕೆ ಹಿತವನ್ನುಂಟುಮಾಡುತ್ತದೆ.
3. ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆಗು ಇದು ಸಹಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.
ಮಧ್ಯಾಹ್ನ ಮತ್ತು ರಾತ್ರಿ ಲಘು ಊಟದ ನಂತರ ಕ್ಯಾರೆಟ್ ತಿಂದರೆ 3-4 ಕೆ.ಜಿ ತೂಕ ಇಳಿಸಿಕೊಳ್ಳುವುದು ಸಾಧ್ಯವಿದೆ.
ಹಾಲಿನಿಂದ ಮುಖದ ಅಂದ ಈ ರೀತಿಯಲ್ಲಿ ಹೆಚ್ಚಿಸಿಕೊಳ್ಳಿ!
ಕ್ಲೆನ್ಸಿಂಗ್, ಮಾಯಿಶ್ಚರೈಸರ್ ಇವೆಲ್ಲಾ ತ್ವಚೆ ಸೌಂದರ್ಯ ಕಾಪಾಡಲು ಮಾಡಬೇಕಾದ ಮುಖ್ಯವಾದ ಆರೈಕೆಗಳು. ಕ್ಲೆನ್ಸಿಂಗ್ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು, ಅಲ್ಲದೆ ಮೇಕಪ್ ನಿಂದ ತ್ವಚೆ ಹಾಳಾಗುವದನ್ನು ತಡೆಯಬಹುದು. ಕ್ಲೆನ್ಸ್ ಮಾಡಲು ಕ್ಲೆನ್ಸರ್ ಫ್ಯಾನ್ಸಿ ಸ್ಟೋರ್ ಗಳಲ್ಲಿ ದೊರೆಯುವುದಾದೂ ಅದನ್ನು ನೈಸರ್ಗಿಕವಾಗಿ ತಯಾರಿಸಿ ಮುಖಕ್ಕೆ ಬಳಸಿದರೆ ತ್ವಚೆಗೆ ತುಂಬಾ ಒಳ್ಳೆಯದು.
ಪಪ್ಪಾಯಿಂದ ಕ್ಲೆನ್ಸರ್ ತಯಾರಿಸಬಹುದು, ಹಾಲನ್ನು ಕೂಡ ಕ್ಲೆನ್ಸ್ ಮಾಡಲು ಬಳಸಬಹುದು. ಕ್ಲೆನ್ಸ್ ಮಾಡುವುದು ಹತ್ತಿಯ ಉಂಡೆಯನ್ನು ಕ್ಲೆನ್ಸರ್ ನಲ್ಲಿ ಅದ್ದಿ ಅದರಿಂದ ಮುಖವನ್ನು ಉಜ್ಜುವುದು. ಬರೀ ಹಾಲಿನಿಂದ ಮುಖ ಕ್ಲೆನ್ಸ್ ಮಾಡುವುದಕ್ಕಿಂತ ಈ ಕೆಳಗಿನ ವಸ್ತುಗಳನ್ನು ಸೇರಿಸಿ ಕ್ಲೆನ್ಸ್ ಮಾಡಿದರೆ ಕಲೆರಹಿತ ತ್ವಚೆ ನಿಮ್ಮದಾಗುವುದು:
ಹಾಲು ಮತ್ತು ರೋಸ್ ವಾಟರ್: 3-4 ಚಮಚ ಹಾಲಿಗೆ ಒಂದು ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ಅದರಲ್ಲಿ ಚಿಕ್ಕ ಹತ್ತಿ ಉಂಡೆಯನ್ನು ಅದ್ದಿ ಅದರಿಂದ ಮುಖವನ್ನು ಉಜ್ಜಿ 15 ನಿಮಿಷ ಬಿಟ್ಟು ತಣ್ಣೀರು ಅಥವಾ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.
ಓಟ್ ಮೀಲ್ಸ್ ಮತ್ತು ಹಾಲಿನ ಸ್ಕ್ರಬ್: ಓಟ್ ಮೀಲ್ಸ್ ಅನ್ನು ಪುಡಿ ಅದನ್ನು ಹಾಲಿನಲ್ಲಿ ನೆನೆಸಿ ಅದನ್ನು ಮುಖಕ್ಕೆ ಉಜ್ಜಬೇಕು. ಈ ರೀತಿ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುವುದು.
ಹಾಲು ಮತ್ತು ಜೇನು: 4-5 ಚಮಚ ಹಾಲಿಗೆ ಅರ್ಧ ಚಮಚ ಜೇನು ಹಾಕಿ ಮಿಶ್ರಣ ಮಾಡಬೇಕು. ಇದನ್ನು ಮುಖಕ್ಕೆ ಹಚ್ಚಿದರೆ ತ್ವಚೆಯ ಹೊಳಪು ಹೆಚ್ಚುವುದು.
ಹಾಲು ಮತ್ತು ಪಪ್ಪಾಯಿಯ ಕ್ಲೆನ್ಸರ್:ಇವೆರಡನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಎರಡು ದಿನಕ್ಕೆ ಒಮ್ಮೆ ಮಾಡುತ್ತಾ ಬಂದರೆ ತ್ವಚೆಯ ಹೊಳಪು ಹೆಚ್ಚುವುದು.
ಹಾಲು ಮತ್ತು ಕ್ಯಾರೆಟ್ ಜ್ಯೂಸ್: ಕ್ಯಾರೆಟ್ ನಲ್ಲಿ ಕ್ಯಾರೋಟಿನ್ ಇರುವುದರಿಂದ ತ್ವಚೆಯನ್ನು ಸಡಿಲವಾಗಲು ಬಿಡುವುದಿಲ್ಲ. ಕ್ಯಾರೆಟ್ ನ ರಸ ತೆಗೆದು ಅದನ್ನು ಹಾಲಿನ ಜೊತೆ ಮಿಶ್ರಣ ಮಾಡಿ, ಈ ಮಿಶ್ರಣದಿಂದ ಮುಖವನ್ನು ಕ್ಲೆನ್ಸ್ ಮಾಡುತ್ತಾ ಬನ್ನಿ ಆಕರ್ಷಕ ತ್ವಚೆ ನಿಮ್ಮದಾಗುವುದು.
ಶಂಖ ಪುಷ್ಪ ಔಷಧೀಯ ಗುಣ
ಶಂಖಪುಷ್ಪ ನೋಡಲು ಸುಂದರ. ಅಷ್ಟೆ ಅಲ್ಲ ಆರೋಗ್ಯ ವರ್ಧಕವೂ ಹೌದು.
ಬೀನ್ಸ್ ಬಳ್ಳಿಯಂತಿರುವ ಈ ಸಸ್ಯವು ಬೇರೆ ಗಿಡವನ್ನು ಆಧಾರವಾಗಿರಿಸಿಕೊಂಡು ಹರಡಿ ಬೆಳೆಯುತ್ತದೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣ ಈ ಹೆಸರು ಬಂದಿದೆ. ಅದರಲ್ಲೂ ತೆಳ್ಳಗಿನ ಮತ್ತು ದಪ್ಪದ ದಳಗಳಿರುವ ಎರಡು ಜಾತಿಗಳಿವೆ. ಪರಿಮಳದ ಸೋಂಕಿಲ್ಲದ ಈ ಹೂವು ದೇವರ ಪೂಜೆಗೆ ವಿನಹ ಹೆಣ್ಣಿನ ಮುಡಿಗೇರುವುದಿಲ್ಲ. ಆದರೆ ಬಳ್ಳಿಯಾಗಿ ಹರಡಿ ವರ್ಷದುದ್ದಕ್ಕೂ ಬಿಳಿ ಅಥವಾ ನೀಲವರ್ಣದ ಹೂಗಳನ್ನು ಕೊಡುವ ಗಿಡ ಮನೆಯ0ಗಳಕ್ಕೆ ಅಲಂಕಾರಿಕ.
ಇಂಗ್ಲಿಷಿನಲ್ಲಿ ಬಟರ್ ಫ್ಲೆಪಿಯೆ ಎಂಬ ಹೆಸರಿರುವ ಶಂಖಪುಷ್ಪ ಕ್ಲಿಟೋರಿಯ ಟಿರ್ನೆಟಿಯ ಎಂದು ಸಸ್ಯಶಾಸ್ತ್ರದಲ್ಲಿ ಕರೆಯುತ್ತಾರೆ. ಬಿಳಿವರ್ಣದ ಹೂ ಬಿಡುವ ಶಂಖಪುಷ್ಪ ವೈದ್ಯ ದಷ್ಟಿಯಿ0ದ ಹೆಚ್ಚು ಪ್ರಭಾವಶಾಲಿಯೆಂದು ಹೇಳಲಾಗಿದೆ. ಹೊಟ್ಟೆ ಸೆಳೆತ, ಪಚನದ ತೊಂದರೆ, ಪಿತ್ತಜನಕಾಂಗ, ಮೂತ್ರಪಿಂಡ, ಅನ್ನನಾಳ, ಪಿತ್ತಕೋಶಗಳ ಕಾಯಿಲೆ ಹಾಗೂ ಹೊಟ್ಟೆ ಉಬ್ಬರದ ತೊಂದರೆಗಳನ್ನು ಇವುಗಳ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ.
* ಅರೆತಲೆನೋವು ನಿವಾರಿಸಲು ಶಂಖಪುಷ್ಪದ ಬೇರನ್ನು ತೇದು ಅಂಜನದ ಹಾಗೆ ಕಣ್ಣಿಗೆ ಸವರಬೇಕು.
* ಎಲೆಗಳ ರಸವನ್ನು ಬಿಸಿ ಮಾಡಿ ಲೇಪಿಸಿದರೆ ಬಾವು ನೋವು ಗುಣವಾಗುತ್ತದೆ.
* ಬೇರಿನ ರಸವನ್ನು ಹಾಲಿನಲ್ಲಿ ಬೆರೆಸಿ ಶ್ವಾಸನಾಳಗಳ ಬಾಧೆ ನಿವಾರಣೆಗೆ ಬಳಸುವುದುಂಟು.
* ಮುಖದಲ್ಲಿ ಬಿಳಿಕಲೆಗಳಿದ್ದರೆ ಬೇರನ್ನು ಕ್ಷಾರ ಮಾಡಿ ಎಳ್ಳೆಣ್ಣೆಯಲ್ಲಿ ಕಲಸಿ ಲೇಪಿಸಬಹುದು.
* ಬೇರಿನ ತೊಗಟೆಯಿಂದ ತಯಾರಿಸಿದ ಚೂರ್ಣವನ್ನು ಜೀರಿಗೆ ಕಷಾಯದಲ್ಲಿ ಕದಡಿ ಜೇನುತುಪ್ಪ ಬೆರೆಸಿ ಸೇವಿಸಿದರೆ ದೇಹಬಾಧೆ ನಿವಾರಣೆ.
* ಬೀಜವನ್ನು ಹುರಿದು ಹುಡಿ ಮಾಡಿ ಬೆಂಕಿ ಗುಳ್ಳೆಗಳ ನೋವು ಶಮನದ ಔಷಧಕ್ಕೆ ಬಳಸುತ್ತಾರೆ. ವೈದ್ಯಗ್ರಂಥಗಳಲ್ಲಿ ಇದರ ಹೂವಿನಿಂದ ಉನ್ಮಾದ; ಅಪಸ್ಮಾರ ಇತ್ಯಾದಿ ಬಾಧೆ ಶಮನಕ್ಕೆ ತಯಾರಿಸುವ ಪಾನಕದ ವಿಧಿಗಳಿವೆ.
ಸೋರೆಕಾಯಿ
ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ. ಇದು ದೇಹದ ತೂಕ ಇಳಿಸುವಲ್ಲಿ ಹೇಗೆ ಸಹಾಯಕವಾಗಿದೆ ಎಂದು ನೋಡೋಣ ಬನ್ನಿ.
1. ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯವಾಗಿದೆ.
2. ಬೆಳಗ್ಗೆ ತಿಂಡಿಯನ್ನು ಹೊಟ್ಟೆ ತುಂಬಾ ತಿನ್ನಬಾರದು.
3. ಕುರುಕಲು ತಿಂಡಿ ತಿನ್ನುವ ಬದಲು ಒಂದು ಲೋಟ ಸೋರೆಕಾಯಿ ಜ್ಯೂಸ್ ಮತ್ತು ಸ್ವಲ್ಪ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಮಧ್ಯೆದಲ್ಲಿ ಹೊಟ್ಟೆ ಹಸಿದಾಗ ಎಣ್ಣೆ ತಿಂಡಿ ಬದಲು ಹಣ್ಣುಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದು.
4. ಬರೀ ಸೋರೆಕಾಯಿ ಜ್ಯೂಸ್ ಕುಡಿದರಷ್ಟೆ ದೇಹದ ತೂಕ ಕಡಿಮೆಯಾಗುವುದಿಲ್ಲ. ಇದರ ಜೊತೆ ಕಟ್ಟುನಿಟ್ಟಿನ ವ್ಯಾಯಾಮ ಮಾಡಬೇಕು.
ಬರಿ ತೂಕ ಇಳಿಸುವಲ್ಲಿ ಮಾತ್ರವಲ್ಲ ಈ ಕೆಳಗಿನ ಗುಣಗಳಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
1. ಸೋರೆಕಾಯಿಯನ್ನು ಬೇಯಿಸಿ ಜ್ಯೂಸ್ ಮಾಡಿ ಕುಡಿದರೆ ದೇಹ ತಂಪಾಗುವುದು.
2. ಮೂತ್ರ ಉರಿ ಸಮಸ್ಯೆ ಇರುವವರು ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ನಿಂಬೆರಸ ಸೇರಿಸಿ ದಿನಕ್ಕೆ ಒಂದು ಬಾರಿ ಕುಡಿದರೆ ತುಂಬಾ ಒಳ್ಳೆಯದು.
3. ಡಯಾರಿಯಾ ಉಂಟಾಗಿದ್ದರೆ ಅಥವಾ ಅಧಿಕ ಕರಿದ ಪದಾರ್ಥಗಳನ್ನು ತಿಂದಾಗ ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ಉಪ್ಪು ಹಾಕಿ ಕುಡಿಯುವುದು ಒಳ್ಳೆಯದು. ಮಧುಮೇಹಿಗಳು ಈ ಜ್ಯೂಸ್ ಕುಡಿಯುವುದು ಒಳ್ಳೆಯದು.
4. ಬೇಸಿಗೆಯಲ್ಲಿ ವಿಪರೀತ ಬೆವರು ಬರುವವರು ಈ ಜ್ಯೂಸ್ ಕುಡಿದರೆ ಒಳ್ಳೆಯದು.
ಕರಿಬೇವಿನ ಎಲೆಯನ್ನು ಅಡುಗೆಯಲ್ಲಿ ಬಳಸಿದರೆ ಅಡುಗೆ ಘಮ್ಮೆನ್ನುವುದು. ಕೂದಲಿನ ಆರೈಕೆಯಲ್ಲಿ ಕೂಡ ಕರಿಬೇವಿನ ಎಲೆಯನ್ನು ಬಳಸಲಾಗುವದು. ರುಚಿ, ಸೌಂದರ್ಯ, ಆರೋಗ್ಯಕ್ಕೆ ಹೀಗೆ ಅನೇಕ ಗುಣಗಳನ್ನು ಈ ಕರಿಬೇವು ಹೊಂದಿದೆ. ಬನ್ನಿ ಕರಿಬೇವಿನ ನಾನಾ ರೀತಿಯ ಉಪಕಾರಗಳ ಬಗ್ಗೆ ತಿಳಿಯೋಣ:
1. ಹೊಟ್ಟೆ ಸಮಸ್ಯೆ ಮತ್ತು ಅಜೀರ್ಣ ನಿವಾರಿಸಲು ಕರಿಬೇವು ಒಳ್ಳೆಯದು. ಕರಿಬೇವಿನ ಎಲೆಯಿಂದ ರಸ ಹಿಂಡಿ ಸ್ವಲ್ಪ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ತಿಂದರೆ ಹೊಟ್ಟೆ ಮತ್ತು ಅಜೀರ್ಣ ಸಮಸ್ಯೆ ನಿವಾರಣೆಯಾಗುವುದು.
2. ದಿನವೂ ಕರಿಬೇವಿನ ಎಲೆ ತಿಂದರೆ ದೇಹದ ತೂಕ ಕಡಿಮೆಯಾಗುವುದು.
3. ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.
4. ತಲೆಗೆ ಹಚ್ಚುವ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ತಲೆಗೆ ಹಚ್ಚುವುದು ಒಳ್ಳೆಯದು.
5. ಜ್ವರದಿಂದ ಬಳಲುವಾಗ ಕರಿಬೇವಿನ ಕಷಾಯ ಸೇವಿಸಿದರೆ ದಾಹ, ಉಷ್ಣತೆ ಕಡಿಮೆಯಾಗುತ್ತದೆ.
6.ಬೊಜ್ಜು ಕರಗಿಸಬೇಕೆನ್ನುವವರಿಗೆ ಸುಲಭೋಪಾಯ- ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕರಿಬೇವಿನ ಎಲೆ(10ರಿಂದ 20) ತಿನ್ನಬೇಕು.
7. ಮಧುಮೇಹದಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ 10 ಎಲೆ ತಿನ್ನಬೇಕು.
8. ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನಬೇಕು.
9. ಆಮ್ಲಪಿತ್ತದಿಂದ ('ಎಸಿಡಿಟಿ"ಯಿಂದ) ಬಳಲುವವರು ಕರಿಬೇವಿನ ಮರದ ತೊಗಟೆಯ ಒಂದು ಚಮಚೆ ಪುಡಿಯನ್ನು ನೀರಲ್ಲಿ ಬೆರೆಸಿ ಸೇವಿಸಬೇಕು.
10. ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆಬರುವುದನ್ನು ತಡೆಯಬಹುದು.(ರಸ ತಯಾರಿಸುವಾಗ ಎಚ್ಚರ ಅವಶ್ಯ, ಸ್ವಚ್ಛತೆ ಬಹುಮುಖ್ಯ.)
11. ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ. * ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು.
12. ಕರಿಬೇವಿನ ಎಣ್ಣೆ ಬಳಸಿದರೆ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.