Tuesday, March 26, 2013

ಹಾಲು



ಹಾಲಿನಿಂದ ಮುಖದ ಅಂದ ಈ ರೀತಿಯಲ್ಲಿ ಹೆಚ್ಚಿಸಿಕೊಳ್ಳಿ!

ಕ್ಲೆನ್ಸಿಂಗ್, ಮಾಯಿಶ್ಚರೈಸರ್ ಇವೆಲ್ಲಾ ತ್ವಚೆ ಸೌಂದರ್ಯ ಕಾಪಾಡಲು ಮಾಡಬೇಕಾದ ಮುಖ್ಯವಾದ ಆರೈಕೆಗಳು. ಕ್ಲೆನ್ಸಿಂಗ್ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು, ಅಲ್ಲದೆ ಮೇಕಪ್ ನಿಂದ ತ್ವಚೆ ಹಾಳಾಗುವದನ್ನು ತಡೆಯಬಹುದು. ಕ್ಲೆನ್ಸ್ ಮಾಡಲು ಕ್ಲೆನ್ಸರ್ ಫ್ಯಾನ್ಸಿ ಸ್ಟೋರ್ ಗಳಲ್ಲಿ ದೊರೆಯುವುದಾದೂ ಅದನ್ನು ನೈಸರ್ಗಿಕವಾಗಿ ತಯಾರಿಸಿ ಮುಖಕ್ಕೆ ಬಳಸಿದರೆ ತ್ವಚೆಗೆ ತುಂಬಾ ಒಳ್ಳೆಯದು.

ಪಪ್ಪಾಯಿಂದ ಕ್ಲೆನ್ಸರ್ ತಯಾರಿಸಬಹುದು, ಹಾಲನ್ನು ಕೂಡ ಕ್ಲೆನ್ಸ್ ಮಾಡಲು ಬಳಸಬಹುದು. ಕ್ಲೆನ್ಸ್ ಮಾಡುವುದು ಹತ್ತಿಯ ಉಂಡೆಯನ್ನು ಕ್ಲೆನ್ಸರ್ ನಲ್ಲಿ ಅದ್ದಿ ಅದರಿಂದ ಮುಖವನ್ನು ಉಜ್ಜುವುದು. ಬರೀ ಹಾಲಿನಿಂದ ಮುಖ ಕ್ಲೆನ್ಸ್ ಮಾಡುವುದಕ್ಕಿಂತ ಈ ಕೆಳಗಿನ ವಸ್ತುಗಳನ್ನು ಸೇರಿಸಿ ಕ್ಲೆನ್ಸ್ ಮಾಡಿದರೆ ಕಲೆರಹಿತ ತ್ವಚೆ ನಿಮ್ಮದಾಗುವುದು:

ಹಾಲು ಮತ್ತು ರೋಸ್ ವಾಟರ್: 3-4 ಚಮಚ ಹಾಲಿಗೆ ಒಂದು ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ಅದರಲ್ಲಿ ಚಿಕ್ಕ ಹತ್ತಿ ಉಂಡೆಯನ್ನು ಅದ್ದಿ ಅದರಿಂದ ಮುಖವನ್ನು ಉಜ್ಜಿ 15 ನಿಮಿಷ ಬಿಟ್ಟು ತಣ್ಣೀರು ಅಥವಾ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.

ಓಟ್ ಮೀಲ್ಸ್ ಮತ್ತು ಹಾಲಿನ ಸ್ಕ್ರಬ್: ಓಟ್ ಮೀಲ್ಸ್ ಅನ್ನು ಪುಡಿ ಅದನ್ನು ಹಾಲಿನಲ್ಲಿ ನೆನೆಸಿ ಅದನ್ನು ಮುಖಕ್ಕೆ ಉಜ್ಜಬೇಕು. ಈ ರೀತಿ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುವುದು.

ಹಾಲು ಮತ್ತು ಜೇನು: 4-5 ಚಮಚ ಹಾಲಿಗೆ ಅರ್ಧ ಚಮಚ ಜೇನು ಹಾಕಿ ಮಿಶ್ರಣ ಮಾಡಬೇಕು. ಇದನ್ನು ಮುಖಕ್ಕೆ ಹಚ್ಚಿದರೆ ತ್ವಚೆಯ ಹೊಳಪು ಹೆಚ್ಚುವುದು.

ಹಾಲು ಮತ್ತು ಪಪ್ಪಾಯಿಯ ಕ್ಲೆನ್ಸರ್:ಇವೆರಡನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಎರಡು ದಿನಕ್ಕೆ ಒಮ್ಮೆ ಮಾಡುತ್ತಾ ಬಂದರೆ ತ್ವಚೆಯ ಹೊಳಪು ಹೆಚ್ಚುವುದು.

ಹಾಲು ಮತ್ತು ಕ್ಯಾರೆಟ್ ಜ್ಯೂಸ್: ಕ್ಯಾರೆಟ್ ನಲ್ಲಿ ಕ್ಯಾರೋಟಿನ್ ಇರುವುದರಿಂದ ತ್ವಚೆಯನ್ನು ಸಡಿಲವಾಗಲು ಬಿಡುವುದಿಲ್ಲ. ಕ್ಯಾರೆಟ್ ನ ರಸ ತೆಗೆದು ಅದನ್ನು ಹಾಲಿನ ಜೊತೆ ಮಿಶ್ರಣ ಮಾಡಿ, ಈ ಮಿಶ್ರಣದಿಂದ ಮುಖವನ್ನು ಕ್ಲೆನ್ಸ್ ಮಾಡುತ್ತಾ ಬನ್ನಿ ಆಕರ್ಷಕ ತ್ವಚೆ ನಿಮ್ಮದಾಗುವುದು.

No comments:

Post a Comment