Saturday, February 26, 2011

Apamarga (Achyranthes Aspera)ಉತ್ತರಾಣಿ



ಇದರ ಎಲೆಗಳನ್ನು ಜಜ್ಜಿ ಗಾಯದ ಮೇಲೆ ಲೇಪಿಸಿದರೆ ಬಾವು ,ನೋವು ,ಕಿವು,ತ್ವರಿತಗತಿಯಲ್ಲಿ ಕಡಿಮೆ ಆಗುವುದು.
ಇದರ ಕಷಾಯದಿಂದ ನಿಯಮಿತವಾಗಿ ಸ್ನಾನ ಮಾಡುತ್ತ ಬಂದರೆ ಹುರುಪು ಅಥವಾ ತುರಿಕೆಯಿಂದ ಕೂಡಿದ ಚರ್ಮ ರೋಗಗಳು ಗುಣ ಹೊಂದುವವು..
ಇದು ಒಂದು ಒಳ್ಳೆಯ ದಂತ ಮಂಜನ,
ಇದರ ಬೀಜದ ಪುಡಿಯನ್ನು ನಸ್ಯದಂತೆ ಬಳಸಿದರೆ ಅರೆತಲೆಶೂಲೆ ಗುಣ ಹೊಂದುತ್ತದೆ.
ಕೀಟ.ಹುಳುಗಳ ಕಡಿತದಿಂದ ಅಗಿರಿವ ಗಾಯ ಅಥವಾ ಉರಿಯ ಶಮನಕ್ಕು ಇದರ ಕಲ್ಕವನ್ನು ಬಳಸುತ್ತಾರೆ.
ಆದರೆ ಇದನ್ನು ಬೇಲಿ ಬದಿಯ ಸಸ್ಯ ಎಂದು ಕಿತ್ತೊಗೆಯುವುದೇ ಹೆಚ್ಹು ..ಈ ಹಿತ್ತಲ ಮದ್ದನ್ನು ಗುರುತಿಸಿ ನಿಮ್ಮ ಮನೆಯಲ್ಲಿ ಬೆಳೆಸಿ ಮತ್ತು ಉಳಿಸಿ.


1 comment:

  1. ಉತ್ತರಾಣಿ ಗಿಡದ ಬೇರನ್ನು ಮೊಡವೆಗಳಿಗೆ ಔಷಧಿಯಾಗಿ ಬಳಸಬಹುದೆಂದು ಕೇಳಿದ್ದೆ. ಆದರೆ ಹೇಗೆ ಬಳಸಬೇಕೆಂಬುದು ತಿಳಿದಿಲ್ಲ. ದಯವಿಟ್ಟು ತಿಳಿಸಿ, ನಾನು ಮೊಡವೆಯ ಕಲೆಗಳಿಂದ ಸಾಕಾಗಿದ್ದೇನೆ.

    ReplyDelete